AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India IIP: ಏಪ್ರಿಲ್​​ನಲ್ಲಿ ಐಐಪಿ ಶೇ. 2.7 ಹೆಚ್ಚಳ; ನಿರೀಕ್ಷೆಗಿಂತಲೂ ಹೆಚ್ಚು ಏರಿಕೆ ಕಂಡ ಔದ್ಯಮಿಕ ಉತ್ಪಾದನೆ

India's IIP grows by 2.7% in 2025 April: ಮ್ಯಾನುಫ್ಯಾಕ್ಚರಿಂಗ್ ವಲಯದ ಉತ್ತಮ ಬೆಳವಣಿಗೆ ದೆಸೆಯಿಂದ ಭಾರತದ ಇಂಡಸ್ಟ್ರಿಯಲ್ ಪ್ರೊಡಕ್ಷನ್ ಇಂಡೆಕ್ಸ್ ಏಪ್ರಿಲ್​​ನಲ್ಲಿ ಶೇ. 2.7ರಷ್ಟು ಹೆಚ್ಚಿದೆ. ಮಾರ್ಚ್ ತಿಂಗಳಲ್ಲಿ ಇದ್ದ ಶೇ. 3ರ ಐಐಪಿಗೆ ಹೋಲಿಸಿದರೆ ಏಪ್ರಿಲ್​​ನಲ್ಲಿ ಬೆಳವಣಿಗೆ ಸ್ವಲ್ಪ ತಗ್ಗಿದೆ. ಆದರೆ, ತಜ್ಞರು ಮಾಡಿದ ಅಂದಾಜು ಪ್ರಕಾರ ಏಪ್ರಿಲ್​​ನಲ್ಲಿ ಶೇ 1.27 ಮಾತ್ರವೇ ಐಐಪಿ ಹೆಚ್ಚಬಹುದು ಎನ್ನಲಾಗಿತ್ತು. ಆದರೆ, ತಯಾರಿಕಾ ವಲಯವು ನಿರೀಕ್ಷೆ ಮೀರಿದ ವೃದ್ಧಿ ದಾಖಲಿಸಿದೆ.

India IIP: ಏಪ್ರಿಲ್​​ನಲ್ಲಿ ಐಐಪಿ ಶೇ. 2.7 ಹೆಚ್ಚಳ; ನಿರೀಕ್ಷೆಗಿಂತಲೂ ಹೆಚ್ಚು ಏರಿಕೆ ಕಂಡ ಔದ್ಯಮಿಕ ಉತ್ಪಾದನೆ
ಮ್ಯಾನುಫ್ಯಾಕ್ಚರಿಂಗ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 28, 2025 | 5:42 PM

Share

ನವದೆಹಲಿ, ಮೇ 28: ಭಾರತದ ಔದ್ಯಮಿಕ ಉತ್ಪಾದನಾ ಸೂಚ್ಯಂಕವು (IIP- Index of Industrial Production) ಏಪ್ರಿಲ್ ತಿಂಗಳಲ್ಲಿ ಶೇ. 2.7ರಷ್ಟು ಏರಿಕೆ ಆಗಿದೆ. 2025ರ ಮಾರ್ಚ್ ತಿಂಗಳಲ್ಲಿ ಐಐಪಿ ಶೇ. 3ರಷ್ಟಿತ್ತು. ಅದಕ್ಕೆ ಹೋಲಿಸಿದರೆ ಏಪ್ರಿಲ್​​ನಲ್ಲಿ ಏರಿಕೆಯ ಪ್ರಮಾಣ ತುಸು ಕಡಿಮೆ ಆಗಿದೆ. ಆದರೆ, ಕ್ಷೇತ್ರದ ತಜ್ಞರು ಏಪ್ರಿಲ್​​ನಲ್ಲಿ ಐಐಪಿ ಶೇ. 1.27ಕ್ಕೆ ಕುಸಿಯಬಹುದು ಎಂದು ಅಂದಾಜು ಮಾಡಿದ್ದರು. ಅವರ ನಿರೀಕ್ಷೆಗಿಂತ ಹೆಚ್ಚು ಬೆಳವಣಿಗೆ ದಾಖಲಾಗಿದೆ. ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ (Ministry of Statistics and Programme implementation) ಇಂದು ಬುಧವಾರ ಈ ದತ್ತಾಂಶವನ್ನು ಬಿಡುಗಡೆ ಮಾಡಿತು.

ಒಟ್ಟಾರೆ ಔದ್ಯಮಿಕ ಉತ್ಪಾದನೆ ಏರಿಕೆ ಪ್ರಮಾಣ ಕಡಿಮೆ ಆಗಲು ಪ್ರಮುಖ ಕಾರಣವಾಗಿರುವುದು ವಿದ್ಯುತ್ ಉತ್ಪಾದನೆ ಮತ್ತು ಮೈನಿಂಗ್ ಉತ್ಪಾದನೆ ಇಳಿಕೆಗೊಂಡಿರುವುದಾಗಿದೆ. ಮಾರ್ಚ್​ ತಿಂಗಳಲ್ಲಿ ಶೆ. 6.3ರಷ್ಟು ಏರಿಕೆ ಕಂಡಿದ್ದ ವಿದ್ಯುತ್ ಉತ್ಪಾದನೆ ಏಪ್ರಿಲ್​​ನಲ್ಲಿ ಹೆಚ್ಚಳ ಕಂಡಿರುವುದು ಶೇ. 1.1 ಮಾತ್ರ. ಶೇ. 0.4ರಷ್ಟು ಏರಿಕೆ ಕಂಡಿದ್ದ ಮೈನಿಂಗ್ ಕ್ಷೇತ್ರದ ಉತ್ಪಾದನೆ ಏಪ್ರಿಲ್​​ನಲ್ಲಿ ಮೈನಸ್ 0.2 ಪ್ರತಿಶತದಷ್ಟು ಕುಸಿತ ಕಂಡಿದೆ.

ಇದನ್ನೂ ಓದಿ: ಭಾರತಕ್ಕೆ ಎಷ್ಟು ಮಹತ್ವದ್ದು ಕಾವೇರಿ ಜೆಟ್ ಎಂಜಿನ್? ಚೀನಾಗೂ ಕಷ್ಟವಾಗಿರುವ ಈ ಸಿದ್ಧಿ ಪಡೆಯಲು ಸಫಲವಾಗುತ್ತಾ ಭಾರತ?

ಐಐಪಿಯ ಕೈ ಹಿಡಿದ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರ

ಆದರೆ, ಏಪ್ರಿಲ್​​ನಲ್ಲಿ ಐಐಪಿ ಇಂಡೆಕ್ಸ್ ಅನ್ನು ಉಳಿಸಿದ್ದು ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರ. ಮಾರ್ಚ್​​ನಲ್ಲಿ ಶೇ. 3ರಷ್ಟು ಹೆಚ್ಚಿದ್ದ ಈ ಕ್ಷೇತ್ರದ ಉತ್ಪಾದನೆಯು ಏಪ್ರಿಲ್​​ನಲ್ಲಿ ಶೇ. 3.4ರಷ್ಟು ಏರಿಕೆ ಕಂಡಿದೆ.

ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಯಂತ್ರೋಪಕರಣಗಳ ತಯಾರಿಕೆ ಏಪ್ರಿಲ್​​ನಲ್ಲಿ ಬರೋಬ್ಬರಿ ಶೇ. 17ರಷ್ಟು ಹೆಚ್ಚಳ ಕಂಡಿದೆ. ಮೋಟಾರು ವಾಹನಗಳು, ಟ್ರೇಲರ್​​ಗಳ ತಯಾರಿಕೆಯೂ ಶೇ. 15.4ರಷ್ಟು ಹೆಚ್ಚಳ ಆಗಿದೆ. ಇದು ಏಪ್ರಿಲ್ ತಿಂಗಳಲ್ಲಿ ತಯಾರಿಕಾ ಕ್ಷೇತ್ರದ ಬೆಳವಣಿಗೆಗೆ ಪುಷ್ಟಿ ಕೊಟ್ಟಿದೆ.

ಇದನ್ನೂ ಓದಿ: ಬೆಂಗಳೂರಿನಿಂದ ಎಚ್​​ಎಎಲ್ ಯೋಜನೆಗಳನ್ನು ಕಸಿಯಲು ಯತ್ನಿಸುತ್ತಿದ್ದಾರಾ ಚಂದ್ರಬಾಬು ನಾಯ್ಡು?

ಮಾರ್ಚ್​​ನಲ್ಲಿ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದ 23 ಕೈಗಾರಿಕಾ ಗುಂಪುಗಳಲ್ಲಿ 13 ಸಕಾರಾತ್ಮಕ ಬೆಳವಣಿಗೆ ಹೊಂದಿದ್ದುವು. ಏಪ್ರಿಲ್​​ನಲ್ಲಿ 16 ಗುಂಪುಗಳು ಪಾಸಿಟಿವ್ ಆಗಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ