Inflation: ಈ ಹಣಕಾಸು ವರ್ಷದ  ದ್ವಿತೀಯಾರ್ಧದಲ್ಲಿ ಹಣದುಬ್ಬರ ದರ ಕಡಿಮೆ ಆಗುವ ನಿರೀಕ್ಷೆಯಿದೆ ಎಂದ ಆರ್​ಬಿಐ ಗವರ್ನರ್

| Updated By: Srinivas Mata

Updated on: Jul 09, 2022 | 4:13 PM

2022-23ರ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಹಣದುಬ್ಬರ ದರ ಸುಧಾರಿಸುವ ನಿರೀಕ್ಷೆ ಇದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

Inflation: ಈ ಹಣಕಾಸು ವರ್ಷದ  ದ್ವಿತೀಯಾರ್ಧದಲ್ಲಿ ಹಣದುಬ್ಬರ ದರ ಕಡಿಮೆ ಆಗುವ ನಿರೀಕ್ಷೆಯಿದೆ ಎಂದ ಆರ್​ಬಿಐ ಗವರ್ನರ್
ಶಕ್ತಿಕಾಂತ ದಾಸ್ (ಸಂಗ್ರಹ ಚಿತ್ರ)
Follow us on

ಪ್ರಸಕ್ತ ಹಣಕಾಸು ವರ್ಷ 2022-23ರ  ದ್ವಿತೀಯಾರ್ಧದಲ್ಲಿ ಭಾರತದ ಹಣದುಬ್ಬರ ದರ ಕ್ರಮೇಣ ಕಡಿಮೆ ಆಗುತ್ತಾ ಬರುತ್ತದೆ ಎಂಬ ನಿರೀಕ್ಷೆಯಿದೆ. ಬಿಗುವಾದ ಹಣಕಾಸು ನೀತಿಯ ಹಿನ್ನೆಲೆಯಲ್ಲಿ ಇಂಥದ್ದೊಂದು ಬೆಳವಣಿಗೆ ಆಗಲಿದೆ ಎಂದು ಆರ್​ಬಿಐ (RBI) ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಇನ್​​ಸ್ಟಿಟ್ಯೂಟ್ ಆಫ್ ಎಕನಾಮಿಕ್ ಗ್ರೋಥ್ ಆಯೋಜಿಸಿದ್ದ ಕೌಟಿಲ್ಯ ಎಕನಾಮಿಕ್ ಕಾನ್​ಕ್ಲೇವ್​ನಲ್ಲಿ ದಾಸ್ ಅವರು ಈ ಮಾತನ್ನು ಹೇಳಿದ್ದಾರೆ. ಸದ್ಯಕ್ಕೆ ಚಿಲ್ಲರೆ ಹಣದುಬ್ಬರ ದರವು ಸತತ ಐದನೇ ತಿಂಗಳು ಆರ್​ಬಿಐನ ಮೇಲ್​ಸ್ತರದ ಸಹಿಷ್ಣುತಾ ದರವಾದ ಶೇ 6ಕ್ಕಿಂತ ಹೆಚ್ಚಿದೆ. ಇದರ ಹೊರತಾಗಿ ದೇಶೀಯ ಸಗಟು ದರ ಸೂಚ್ಯಂಕ ಹಣದುಬ್ಬರವು ಒಂದು ವರ್ಷದಿಂದ ಎರಡಂಕಿಯಲ್ಲಿದೆ. ಸದ್ಯಕ್ಕೆ ಆರ್​ಬಿಐಗೆ ಸೂಚನೆ ನೀಡಿರುವಂತೆ ಚಿಲ್ಲರೆ ಹಣದುಬ್ಬರ ದರವನ್ನು 4 ಪರ್ಸೆಂಟ್​ನ ಆಚೀಚೆ ಮೇಲ್​ಸ್ತರದ 2 ಹಾಗೂ ಕೆಳಸ್ತರದ 2 ಪರ್ಸೆಂಟ್ ಅಂದರೆ, ಎರಡೂ ಬದಿಯಲ್ಲಿ 200 ಬೇಸಿಸ್ ಪಾಯಿಂಟ್ಸ್​ನಲ್ಲಿ ನಿರ್ವಹಿಸುವಂತೆ ಸೂಚಿಸಲಾಗಿದೆ.

2021ರ ಏಪ್ರಿಲ್​ನಿಂದ ಜೂನ್ ಮಧ್ಯೆ ಭಾರತವು ಬಹಳ ತೀಕ್ಷ್ಣ ಸ್ವರೂಪದ ಕೊವಿಡ್-19 ಎರಡನೇ ಅಲೆಯನ್ನು ಅನುಭವಿಸಿತು. ಇದರಿಂದಾಗಿ ಸ್ಥಳೀಯ ಲಾಕ್​ಡೌನ್ ಮಾಡಬೇಕಾಯಿತು. ಅದರಿಂದಾಗಿ ಪೂರೈಕೆ ಜಾಲಕ್ಕೆ ಸಮಸ್ಯೆಯಾಯಿತು. ರೀಟೇಲ್ ಮಾರ್ಜಿನ್ಸ್ ಹೆಚ್ಚಳವಾಗಿ, ಅದರ ಪರಿಣಾಮ ಎಂಬಂತೆ 2021ರ ಮೇ- ಜೂನ್ ತಿಂಗಳಲ್ಲಿ ಹಣದುಬ್ಬರ ದರವು ಶೇ 6ಕ್ಕಿಂತ ಮೇಲೇರಿತು. ಇನ್ನು ಈಗಿನ ಜಾಗತಿಕ ಪದಾರ್ಥಗಳ ಬೆಲೆ ಏರಿಕೆ ಸಹ ಹಣದುಬ್ಬರದ ಮೇಲೆ ಒತ್ತಡ ಹೇರಿತು. 2020-21ರ ಮೊದಲ ತ್ರೈಮಾಸಿಕದಲ್ಲಿ ರಿಯಲ್ ಜಿಡಿಪಿ ಶೇ 23.8ರಷ್ಟು ಭಾರೀ ಪ್ರಮಾಣದಲ್ಲಿ ನೆಲ ಕಚ್ಚಿತು. ಒಟ್ಟಾರೆ ನೋಡಿದಾಗ 2020-21ರ ಹಣಕಾಸು ವರ್ಷದಲ್ಲಿ ಪೂರ್ತಿ ವರ್ಷಕ್ಕೆ ಶೇ 6.6ರಷ್ಟು ಇಳಿಕೆಯಾಯಿತು.

ಆಹಾರ ಬೆಲೆಗಳ ಬಗ್ಗೆ ಮಾತನಾಡಿದ ದಾಸ್, ಜಾಗತಿಕ ಮಟ್ಟದಲ್ಲೇ ಮಾರ್ಚ್​ನಲ್ಲಿ ಐತಿಹಾಸಿಕ ಎತ್ತರವನ್ನು ತಲುಪಿತು. ಆ ಪರಿಣಾಮವನ್ನು ಖಾದ್ಯ ತೈಲ, ದೇಶೀ ಗೋಧಿ ಬೆಲೆ ಮತ್ತಿತರದರಲ್ಲಿ ಕಾಣಿಸಿತು ಎಂದು ಹೇಳಿದ್ದಾರೆ. ಹಣದುಬ್ಬರ ಒತ್ತಡ ಸಾಮಾನ್ಯವಾಗಿರುವುದರಿಂದ ಹಣಕಾಸು ನೀತಿ ಸಮಿತಿಯು ಏಪ್ರಿಲ್ ಮತ್ತು ಜೂನ್ ಸಭೆಯಲ್ಲಿ 2022-23ರ ಹಣದುಬ್ಬರ ಪರಿಷ್ಕೃತ ದರವನ್ನು ಶೇ 6.7 ಎಂದಿದೆ. ಇದರ ಜತೆಗೆ ರೆಪೋ ದರವನ್ನು ಮೇ ಹಾಗೂ ಜೂನ್​ನಲ್ಲಿ ಕ್ರಮವಾಗಿ 40 ಮತ್ತು 50 ಬೇಸಿಸ್ ಪಾಯಿಂಟ್ಸ್ ಏರಿಕೆ ಮಾಡಲಾಗಿದೆ.