ಇನ್​ಫ್ಲೇಷನ್ ವರದಿ ಬಿಡುಗಡೆ; ಅಕ್ಟೋಬರ್​ನಲ್ಲಿ ಹಣದುಬ್ಬರ ಶೇ. 4.87ಕ್ಕೆ ಇಳಿಕೆ; ರಾಯ್ಟರ್ಸ್ ಪೋಲ್ ನಿರೀಕ್ಷೆ ನಿಜ

|

Updated on: Nov 13, 2023 | 7:09 PM

Inflation In October 2023: ಭಾರತದ ರೀಟೇಲ್ ಹಣದುಬ್ಬರ ದರ ಕಡಿಮೆ ಆಗಿದೆ. ನ್ಯಾಷನಲ್ ಸ್ಟಾಟಿಸ್ಟಿಕ್ಸ್ ಆಫೀಸ್ (ಎನ್​ಎಸ್​ಒ) ಇಂದು ಸೋಮವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಅಕ್ಟೋಬರ್ ತಿಂಗಳಲ್ಲಿ ಹಣದುಬ್ಬರ ಶೇ. 4.87ಕ್ಕೆ ಇಳಿದಿದೆ. ಸೆಪ್ಟೆಂಬರ್​ನಲ್ಲಿ ಹಣದುಬ್ಬರ ಶೇ. 5.02ರಷ್ಟಿತ್ತು.

ಇನ್​ಫ್ಲೇಷನ್ ವರದಿ ಬಿಡುಗಡೆ; ಅಕ್ಟೋಬರ್​ನಲ್ಲಿ ಹಣದುಬ್ಬರ ಶೇ. 4.87ಕ್ಕೆ ಇಳಿಕೆ; ರಾಯ್ಟರ್ಸ್ ಪೋಲ್ ನಿರೀಕ್ಷೆ ನಿಜ
ಹಣದುಬ್ಬರ
Follow us on

ನವದೆಹಲಿ, ನವೆಂಬರ್ 13: ಭಾರತದ ರೀಟೇಲ್ ಹಣದುಬ್ಬರ ದರ (Retail inflation) ಕಡಿಮೆ ಆಗಿದೆ. ನ್ಯಾಷನಲ್ ಸ್ಟಾಟಿಸ್ಟಿಕ್ಸ್ ಆಫೀಸ್ (NSO) ಇಂದು ಸೋಮವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಅಕ್ಟೋಬರ್ ತಿಂಗಳಲ್ಲಿ ಹಣದುಬ್ಬರ ಶೇ. 4.87ಕ್ಕೆ ಇಳಿದಿದೆ. ಸೆಪ್ಟೆಂಬರ್​ನಲ್ಲಿ ಹಣದುಬ್ಬರ ಶೇ. 5.02ರಷ್ಟಿತ್ತು. ಕಳೆದ ವಾರ ರಾಯ್ಟರ್ಸ್ ಸಂಸ್ಥೆ ನಡೆಸಿದ 50ಕ್ಕೂ ಹೆಚ್ಚು ಆರ್ಥಿಕ ತಜ್ಞರ ಸಮೀಕ್ಷೆಯಲ್ಲಿ ಅಕ್ಟೋಬರ್​ನಲ್ಲಿ ಹಣದುಬ್ಬರ ಶೇ. 4.80ರಷ್ಟಿರಬಹುದು ಎಂದು ಅಂದಾಜು ಮಾಡಲಾಗಿತ್ತು. ಆ ನಿರೀಕ್ಷೆ ನಿಜವಾಗಿದೆ. ಶೇ. 4.87ರಷ್ಟು ಹಣದುಬ್ಬರವು ಕಳೆದ ಐದು ತಿಂಗಳಲ್ಲೇ ಕನಿಷ್ಠ ಮಟ್ಟವಾಗಿದೆ. ಅದೇ ವೇಳೆ ಆರ್​ಬಿಐನ ಶೇ. 4ರ ಹಣದುಬ್ಬರ ಗುರಿಗೆ ಸಮೀಪ ಇದೆ.

ಗ್ರಾಹಕ ಬೆಲೆ ಅನುಸೂಚಿ ಆಧರಿತ ಹಣದುಬ್ಬರ ಇದಾಗಿದೆ. ಎನ್​ಎಸ್​ಒ ನೀಡಿರುವ ಮಾಹಿತಿ ಪ್ರಕಾರ ಗ್ರಾಮೀಣ ಭಾಗದಲ್ಲಿ ಹಣದುಬ್ಬರ ಅಥವಾ ರೀಟೇಲ್ ಬೆಲೆ ಏರಿಕೆ ಶೇ. 5.12ರಷ್ಟಿದೆ. ನಗರ ಪ್ರದೇಶಗಳಲ್ಲಿ ಈ ದರ ಶೇ. 4.62ರಷ್ಟಿದೆ.

ಹಣದುಬ್ಬರ ನಿರ್ಣಯಿಸುವ ವಿವಿಧ ಅಂಶಗಳ ಪೈಕಿ ಪ್ರಮುಖವಾದುದು ಆಹಾರಗಳ ಗುಂಪು. ಸೆಪ್ಟೆಂಬರ್​ನಲ್ಲಿ ಆಹಾರ ಬೆಲೆಯುಬ್ಬರ ಶೇ. 6.56ರಷ್ಟು ಇದ್ದದ್ದು ಅಕ್ಟೋಬರ್​ನಲ್ಲಿ ಶೇ. 6.61ಕ್ಕೆ ಹೆಚ್ಚಿದೆ. ಅದು ಬಿಟ್ಟರೆ ಉಳಿದಂತೆ ಬೆಲೆ ಏರಿಕೆಯ ಬಿಸಿ ಅಷ್ಟು ತಾಗಿಲ್ಲ.

ಇದನ್ನೂ ಓದಿ: ಅಕ್ಟೋಬರ್​ನಲ್ಲಿ ಭಾರತದ ಹಣದುಬ್ಬರ ಶೇ. 4.80ಕ್ಕೆ ಇಳಿದಿರಬಹುದು: ರಾಯ್ಟರ್ಸ್ ಸಮೀಕ್ಷೆಯಲ್ಲಿ ಅನಿಸಿಕೆ

ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿದ್ದರಿಂದ ಆ ಎರಡು ತಿಂಗಳು ಹಣದುಬ್ಬರ ದರ ಶೇ. 6ಕ್ಕಿಂತಲೂ ಮೇಲೇ ಇತ್ತು. ಸೆಪ್ಟೆಂಬರ್​ನಿಂದೀಚೆ ತರಕಾರಿ ಬೆಲೆಗಳು ತುಸು ಇಳಿಮುಖವಾಗಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:09 pm, Mon, 13 November 23