Infosys: ಇನ್ಫೋಸಿಸ್ ಹೂಡಿಕೆದಾರರ 48,000 ಕೋಟಿ ರೂಪಾಯಿ ಸಂಪತ್ತು ನಿಮಿಷಗಳಲ್ಲಿ ಉಡೀಸ್

2022ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ನಿರಾಶಾದಾಯಕ ಫಲಿತಾಂಶವನ್ನು ಪ್ರಕಟಿಸಿದ ಬೆನ್ನಿಗೆ ಇನ್ಫೋಸಿಸ್​ನ ಷೇರುಗಳ ಬೆಲೆಯಲ್ಲಿ ಇಳಿಕೆಯಾಗಿದ್ದು, ಸೋಮವಾರ ಬೆಳಗ್ಗೆ ಕೆಲವೇ ನಿಮಿಷದಲ್ಲಿ ಹೂಡಿಕೆದಾರರು 48 ಸಾವಿರ ಕೋಟಿ ರೂ. ನಷ್ಟ ಅನುಭವಿಸಿದ್ದಾರೆ.

Infosys: ಇನ್ಫೋಸಿಸ್ ಹೂಡಿಕೆದಾರರ 48,000 ಕೋಟಿ ರೂಪಾಯಿ ಸಂಪತ್ತು ನಿಮಿಷಗಳಲ್ಲಿ ಉಡೀಸ್
ಸಾಂದರ್ಭಿಕ ಚಿತ್ರ
Edited By:

Updated on: Apr 18, 2022 | 3:16 PM

2022ರ ಜನವರಿಯಿಂದ ಮಾರ್ಚ್ ತನಕದ ನಾಲ್ಕನೇ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತ ದುರ್ಬಲವಾದ ಗಳಿಕೆಗಳ ಆಧಾರದ ಮೇಲೆ ಹಲವು ವಿಶ್ಲೇಷಕರು ಅದರ ಮಾರ್ಜಿನ್ ಅಂದಾಜು ಕಡಿತಗೊಳಿಸಿದ ನಂತರ ಇನ್ಫೋಸಿಸ್ ಲಿಮಿಟೆಡ್‌ನ (Infosys) ಷೇರುಗಳು ಸೋಮವಾರ ಶೇಕಡಾ 9ಕ್ಕಿಂತ ಹೆಚ್ಚು ಕುಸಿದಿದ್ದು, ಮಾರುಕಟ್ಟೆ ಬಂಡವಾಳದಲ್ಲಿ ರೂ. 48,000 ಕೋಟಿ ಕೊಚ್ಚಿಹೋಯಿತು. ಶೇ 9ರಷ್ಟು ಇಳಿಕೆ ಕಂಡ ಇನ್ಫೋಸಿಸ್ ಮಾರ್ಚ್ 23, 2020ರ ನಂತರ ಅತಿದೊಡ್ಡ ಕುಸಿತವನ್ನು ಕಂಡಿದೆ. ಸೋಮವಾರ ಷೇರುಗಳ ಬೆಲೆಯು ದಿನದ ಕನಿಷ್ಠ ಮಟ್ಟ 1590 ರೂಪಾಯಿಯನ್ನು ಮುಟ್ಟಿದೆ. ಈ ವರದಿ ಸಿದ್ಧವಾಗುವ ಹೊತ್ತಿಗೆ ಎನ್​ಎಸ್​ಇಯಲ್ಲಿ ಶೇ 7.07ರಷ್ಟು ಕುಸಿತ ಕಂಡು, 1625 ರೂಪಾಯಿಯಲ್ಲಿ ವಹಿವಾಟು ನಡೆಸುತ್ತಿತ್ತು.

ಜೆಫರೀಸ್ ಇಂಡಿಯಾ ತನ್ನ ಮಾರ್ಜಿನ್ ಅಂದಾಜುಗಳನ್ನು 100ರಿಂದ 170 ಬೇಸಿಸ್ ಪಾಯಿಂಟ್‌ಗಳು ಕಡಿತಗೊಳಿಸಿದೆ ಮತ್ತು FY22ರಲ್ಲಿ ಶೇ 21.9ರಷ್ಟು ಮಾರ್ಜಿನ್ ಅನ್ನು ನಿರೀಕ್ಷಿಸಿದೆ. ಬ್ರೋಕರೇಜ್ ಸಂಸ್ಥೆ ನೊಮುರಾ ರೀಸರ್ಚ್, FY23F EBIT ಮಾರ್ಜಿನ್ ವರ್ಷದಿಂದ ವರ್ಷಕ್ಕೆ 100 ಬೇಸಿಸ್​ ಪಾಯಿಂಟ್​ ಇಳಿಸಿ ಶೇ 22ಕ್ಕೆ ಬರುತ್ತದೆ ಎಂದಿದೆ ಮತ್ತು FY22-24 ಗಳಿಕೆಯನ್ನು ಪ್ರತಿ ಷೇರಿಗೆ ಶೇ 5ರಿಂದ 7ರಷ್ಟು ಪ್ರತಿಶತದಷ್ಟು ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸುತ್ತದೆ.

ಬಿ ಅಂಡ್ ಕೆ ಸೆಕ್ಯೂರಿಟೀಸ್ FY23/24ಕ್ಕೆ ಶೇ 22.7/23.7 ಮಾರ್ಜಿನ್‌ಗಳನ್ನು ಅಂದಾಜಿಸುತ್ತದೆ ಮತ್ತು ಆದ್ದರಿಂದ ಪ್ರತಿ ವರ್ಷ ತನ್ನ ಇಪಿಎಸ್ ಅಂದಾಜುಗಳನ್ನು ಶೇ 5ರಿಂದ ಪ್ರತಿ ಷೇರಿಗೆ ಕ್ರಮವಾಗಿ ರೂ. 63/78 ಆಗಬಹುದು ಎಂದಿದೆ. ಒಪ್ಪಂದದ ಗ್ರಾಹಕರ ನಿಬಂಧನೆಗಳ ಪ್ರಭಾವ ಮತ್ತು ಕಡಿಮೆ ಸಂಖ್ಯೆಯ ಕ್ಯಾಲೆಂಡರ್ ಕೆಲಸದ ದಿನಗಳಿಂದ ಇನ್ಫೋಸಿಸ್ ಸ್ಥಿರ ಕರೆನ್ಸಿ ನಿಯಮಗಳಲ್ಲಿ ಶೇ 1.2 ಪ್ರತಿಶತದಷ್ಟು ಆದಾಯದ ಬೆಳವಣಿಗೆಯನ್ನು ವರದಿ ಮಾಡಿದೆ.

ಇದನ್ನೂ ಓದಿ: Infosys: ನಾರಾಯಣ ಮೂರ್ತಿ ಅಳಿಯ ರಿಶಿ ಸುನಕ್​ಗೆ ಮುಜುಗರ ತಪ್ಪಿಸಲು ರಷ್ಯಾದಲ್ಲಿ ಕಾರ್ಯಾಚರಣೆ ನಿಲ್ಲಿಸಲಿದೆ ಇನ್ಫೋಸಿಸ್