RBI: ನಿಮ್ಮ ಬ್ಯಾಂಕ್ ಖಾತೆ ಇನಾಪರೇಟಿವ್ ಅಕೌಂಟ್ ಎಂದು ವರ್ಗೀಕರಣವಾಗಿದೆಯಾ? ಹಣ ಹಿಂಪಡೆಯುವುದು ಹೇಗೆ?

Unclaimed Bank Deposits: ಹತ್ತಕ್ಕೂ ಹೆಚ್ಚು ವರ್ಷಗಳಿಂದ ವಹಿವಾಟು ನಡೆಯದ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಮತ್ತು ಟರ್ಮ್ ಡೆಪಾಸಿಟ್ ಹಣವನ್ನು ಅನ್​ಕ್ಲೈಮ್ಡ್ ಡೆಪಾಸಿಟ್ ಎಂದು ವರ್ಗೀಕರಿಸಲಾಗುತ್ತದೆ. ಇಂಥ ಇನಾಪರೇಟಿವ್ ಅಕೌಂಟ್ ಮತ್ತು ಅನ್​ಕ್ಲೈಮ್ಡ್ ಡೆಪಾಸಿಟ್​ಗಳನ್ನು ಆರ್​ಬಿಐನ ಡಿಇಒ ಫಂಡ್​ಗೆ ವರ್ಗಾಯಿಸಲಾಗುತ್ತದೆ. ಈ ಹಣವನ್ನು ಆಯಾ ಖಾತೆದಾರರಿಗೆ ಅಥವಾ ವಾರಸುದಾರರಿಗೆ ತಲುಪಿಸಲು ಆರ್​ಬಿಐ ವಿವಿಧ ಕ್ರಮ ಕೈಗೊಂಡಿದೆ.

RBI: ನಿಮ್ಮ ಬ್ಯಾಂಕ್ ಖಾತೆ ಇನಾಪರೇಟಿವ್ ಅಕೌಂಟ್ ಎಂದು ವರ್ಗೀಕರಣವಾಗಿದೆಯಾ? ಹಣ ಹಿಂಪಡೆಯುವುದು ಹೇಗೆ?
ಬ್ಯಾಂಕ್ ಖಾತೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 03, 2024 | 1:04 PM

ಒಂದು ಬ್ಯಾಂಕ್ ಖಾತೆಯಲ್ಲಿ 10ಕ್ಕೂ ಹೆಚ್ಚು ವರ್ಷಗಳಿಂದ ವಹಿವಾಟು ನಡೆಯದೇ ಹೋದರೆ ಅಂಥವನ್ನು ಇನಾಪರೇಟಿವ್ ಬ್ಯಾಂಕ್ ಅಕೌಂಟ್ (Inoperative bank account) ಎಂದು ವರ್ಗೀಕರಿಸಲಾಗುತ್ತದೆ. ಇದು ನಿಶ್ಚಿತ ಠೇವಣಿಗಳಿಗೂ ಅನ್ವಯ ಆಗುತ್ತದೆ. ಖಾತೆದಾರರು ಮೃತಪಟ್ಟು ಅವರ ಖಾತೆಯ ಹಣಕ್ಕೆ ಯಾರೂ ಕ್ಲೈಮ್ ಮಾಡದೇ ಹೋಗಿ, ನಿಷ್ಕ್ರಿಯಗೊಂಡ ಅಕೌಂಟ್​ಗಳೇ ಹೆಚ್ಚು. ಇಂಥ ಇನಾಪರೇಟಿವ್ ಅಕೌಂಟ್​ನಿಂದ ಕ್ಲೈಮ್ ಆಗದೇ ಇರುವ ಹಣವನ್ನು ಆರ್​ಬಿಐನ ಡಿಇಎ ಫಂಡ್​ಗೆ (Depositor Education and Awareness) ವರ್ಗಾಯಿಸಲಾಗುತ್ತದೆ. ಈಗ ಇಂಥ ಅನ್​ಕ್ಲೈಮ್ಡ್ ಡೆಪಾಸಿಟ್​ಗಳ ಮೊತ್ತ 40,000 ಕೋಟಿ ರೂಗೂ ಹೆಚ್ಚಿದೆ. ಇದನ್ನು ಅದರ ವಾರಸುದಾರರಿಗೆ ತಲುಪಿಸಲು ಆರ್​ಬಿಐ ವಿವಿಧ ಕ್ರಮಗಳನ್ನು ಕೈಗೊಂಡಿದೆ.

ಆರ್​ಬಿಐ ಮಾರ್ಗಸೂಚಿ…

ನಿಷ್ಕ್ರಿಯ ಬ್ಯಾಂಕ್ ಖಾತೆ ಮತ್ತು ಕ್ಲೈಮ್ ಆಗದ ಠೇವಣಿ ಹಣದ ವಿಚಾರದಲ್ಲಿ ಆರ್​ಬಿಐ ಇತ್ತೀಚೆಗೆ ಕೆಲ ಮಾರ್ಗಸೂಚಿಗಳನ್ನು ಬ್ಯಾಂಕುಗಳಿಗೆ ನೀಡಿತ್ತು. ಇತ್ತೀಚಿನ ಕೆಲ ನಿಯಮಗಳಿವು:

  • ಒಂದು ವರ್ಷಕ್ಕಿಂತ ಹೆಚ್ಚು ಕಾಲ ವಹಿವಾಟು ನಡೆಯದ ಖಾತೆಗಳಿವೆಯಾ ಎಂದು ಪ್ರತೀ ವರ್ಷವೂ ಬ್ಯಾಂಕುಗಳು ಪರಿಶೀಲನೆ ನಡೆಸಬೇಕು.
  • ರಿನಿವ್ ಆಗದ ಅವಧಿ ಠೇವಣಿಗಳನ್ನೂ ಪರಿಶೀಲಿಸಬೇಕು.
  • ಎರಡಕ್ಕಿಂತ ಕಡಿಮೆ ಅವಧಿ ನಿಷ್ಕ್ರಿಯವಾಗಿರುವ ಮತ್ತು ಝೀರೋ ಬ್ಯಾಲನ್ಸ್ ಇರುವ ಖಾತೆಗಳನ್ನು ಇನಾಪರೇಟಿವ್ ಅಕೌಂಟ್ ಎಂದು ವರ್ಗೀಕರಿಸಬಾರದು.

ಇದನ್ನೂ ಓದಿ: Bank Minimum Balance: ಮಿನಿಮಮ್ ಬ್ಯಾಲನ್ಸ್ ಚಿಂತೆ ಬೇಡ; ನಿಶ್ಚಿಂತೆಯಿಂದ ಹಳೇ ಖಾತೆ ರೀಓಪನ್ ಮಾಡಿ; ಆರ್​ಬಿಐ ಸೂಚನೆ ತಿಳಿದಿರಿ…

ಒಂದು ಬ್ಯಾಂಕ್ ಖಾತೆ ಇನಾಪರೇಟಿವ್ ಆಗಿಹೋದರೆ ಅದಕ್ಕೆ ಹಣವನ್ನು ಡೆಪಾಸಿಟ್ ಮಾಡಲು ಆಗುವುದಿಲ್ಲ. ಸರ್ಕಾರದ ಡಿಬಿಟಿ ವರ್ಗಾವಣೆ ಮತ್ತು ಸ್ಕಾಲರ್​ಶಿಪ್ ಹಣ ವರ್ಗಾವಣೆಗೆ ಇದರಿಂದ ತೊಂದರೆ ಆಗುತ್ತಿದೆ. ಹೀಗಾಗಿ, ಸರ್ಕಾರಕ್ಕೂ ಈ ಖಾತೆಗಳು ತಲೆನೋವಾಗಿವೆ.

ನಿಷ್ಕ್ರಿಯವಾಗಿರುವ ನಿಮ್ಮ ಹಳೆಯ ಖಾತೆ ಯಾವುದಾದರೂ ಇದ್ದಲ್ಲಿ ಮೊದಲು ಅದರಿಂದ ವಹಿವಾಟು ನಡೆಸಲು ಪ್ರಯತ್ನಿಸಿ. ಬ್ಯಾಂಕಿಗೆ ಹೋಗಿ ಖಾತೆಯನ್ನು ಪರಿಶೀಲಿಸಬಹುದು. ಅಥವಾ ಬ್ಯಾಂಕ್​ನ ಅಧಿಕೃತ ವೆಬ್​ಸೈಟ್​ಗೆ ಹೋದರೆ ಅಲ್ಲಿ ಇನಾಪರೇಟಿವ್ ಅಕೌಂಟ್​ಗಳ ಪಟ್ಟಿಯನ್ನು ಕಾಣಬಹುದು. ಅದರಲ್ಲಿ ನಿಮ್ಮ ಖಾತೆ ಇದೆಯಾ ಪರಿಶೀಲಿಸಿ.

ಒಂದು ವೇಳೆ ಖಾತೆದಾರರು ಮೃತಪಟ್ಟಿದ್ದರೆ ಅವರ ಮರಣ ಪ್ರಮಾಣಪತ್ರ, ವಿಳಾಸ ಪುರಾವೆ ಮತ್ತು ಗುರುತು ಪುರಾವೆ ದಾಖಲೆಗಳನ್ನು ಒದಗಿಸಿ ವಾರಸುದಾರರು ಆ ಹಣವನ್ನು ಸ್ವೀಕರಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್