AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Minimum Balance: ಮಿನಿಮಮ್ ಬ್ಯಾಲನ್ಸ್ ಚಿಂತೆ ಬೇಡ; ನಿಶ್ಚಿಂತೆಯಿಂದ ಹಳೇ ಖಾತೆ ರೀಓಪನ್ ಮಾಡಿ; ಆರ್​ಬಿಐ ಸೂಚನೆ ತಿಳಿದಿರಿ…

RBI Instructions: ಮಿನಿಮಮ್ ಬ್ಯಾಲನ್ಸ್ ಉಳಿಸದ ನಿಷ್ಕ್ರಿಯ ಖಾತೆಗಳಿಗೆ ದಂಡ ವಿಧಿಸಬಾರದು ಎಂದು ಬ್ಯಾಂಕುಗಳಿಗೆ ಆರ್​ಬಿಐ ನಿರ್ದೇಶನ ನೀಡಿದೆ. ಸ್ಕಾಲರ್​ಶಿಪ್ ಅಥವಾ ಡಿಬಿಟಿಗೆಂದು ರಚನೆಯಾದ ಬ್ಯಾಂಕ್ ಖಾತೆಗಳನ್ನು ಇನಾಪರೇಟಿವ್ ಎಂದು ವರ್ಗೀಕರಿಸುವಂತಿಲ್ಲ. ಈ ಹಿಂದೆಯೂ ಮಿನಿಮಮ್ ಬ್ಯಾಲನ್ಸ್ ವಿಚಾರದಲ್ಲಿ ಬ್ಯಾಂಕುಗಳಿಗೆ ಆರ್​ಬಿಐ ತಿಳಿಹೇಳಿರುವುದುಂಟು.

Bank Minimum Balance: ಮಿನಿಮಮ್ ಬ್ಯಾಲನ್ಸ್ ಚಿಂತೆ ಬೇಡ; ನಿಶ್ಚಿಂತೆಯಿಂದ ಹಳೇ ಖಾತೆ ರೀಓಪನ್ ಮಾಡಿ; ಆರ್​ಬಿಐ ಸೂಚನೆ ತಿಳಿದಿರಿ...
ಆರ್​ಬಿಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 03, 2024 | 12:17 PM

ನವದೆಹಲಿ, ಜನವರಿ 3: ಎರಡಕ್ಕೂ ಹೆಚ್ಚು ವರ್ಷದಿಂದ ಖಾತೆಯನ್ನು ನಿರ್ವಹಿಸದ (inoperative bank account) ಮತ್ತು ಮಿನಿಮಮ್ ಬ್ಯಾಲನ್ಸ್ ಉಳಿಸದ ಖಾತೆದಾರರಿಗೆ ದಂಡ ವಿಧಿಸಬಾರದು ಎಂದು ಬ್ಯಾಂಕುಗಳಿಗೆ ಆರ್​ಬಿಐ ಸೂಚಿಸಿದೆ. ಕ್ಲೈಮ್ ಆಗದ ಬ್ಯಾಂಕ್ ಹಣದ (unclaimed bank deposits) ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಆರ್​ಬಿಐ ಕೈಗೊಂಡಿರುವ ಹಲವು ಕ್ರಮಗಳಲ್ಲಿ ಮೇಲಿನ ಮಿನಿಮಮ್ ಬ್ಯಾಲನ್ಸ್ ಶುಲ್ಕದ ನಿರ್ಧಾರವೂ ಒಂದಾಗಿದೆ.

ಹಾಗೆಯೇ, ಸ್ಕಾಲರ್​ಶಿಪ್ ಹಣ ಪಡೆಯಲು ಅಥವಾ ಡಿಬಿಟಿ ಹಣಕ್ಕೆಂದು ರಚನೆಯಾಗಿರುವ ಬ್ಯಾಂಕ್ ಖಾತೆಗಳನ್ನು ಇನಾಪರೇಟಿವ್ ಅಥವಾ ನಿಷ್ಕ್ರಿಯ ಬ್ಯಾಂಕ್ ಖಾತೆ ಎಂದು ವರ್ಗಾಯಿಸಬಾರದು ಎಂದೂ ಇನ್ನೊಂದು ಮಹತ್ವದ ಆದೇಶದಲ್ಲಿ ಆರ್​ಬಿಐ ತಿಳಿಸಿದೆ. ಎರಡಕ್ಕೂ ಹೆಚ್ಚು ವರ್ಷ ಯಾವುದೇ ವಹಿವಾಟು ನಡೆಸದ ಇಂತಹ ಖಾತೆಗಳನ್ನು ಬ್ಯಾಂಕುಗಳು ಇನಾಪರೇಟಿವ್ ಅಕೌಂಟ್ ಎಂದು ವರ್ಗೀಕರಿಸುತ್ತವೆ. ಈಗ ಆರ್​ಬಿಐ ಈ ಕ್ರಮವನ್ನು ಬದಲಿಸಿದೆ.

ಇದನ್ನೂ ಓದಿ: Rs 2000 Notes: ಎರಡು ಸಾವಿರ ಮುಖಬೆಲೆಯ ನೋಟು; ಇನ್ನೂ ಮರಳಿಬಂದಿಲ್ಲ 9,330 ಕೋಟಿ ರೂ ಮೊತ್ತದ ನೋಟುಗಳು

ಬ್ಯಾಂಕ್ ಖಾತೆಗಳಲ್ಲಿ ಮಿನಿಮಮ್ ಬ್ಯಾಲನ್ಸ್ ಹೊಂದಿರುವುದು ಅವಶ್ಯಕ. ಕೆಲ ಬ್ಯಾಂಕುಗಳು ಝೀರೋ ಬ್ಯಾಲನ್ಸ್ ಸೌಲಭ್ಯ ಹೊಂದಿರುತ್ತವೆ. ಸ್ಯಾಲರಿ ಅಕೌಂಟ್​ಗಳಿಗೂ ಈ ಸವಲತ್ತು ಇರುತ್ತದೆ. ಎಚ್​ಡಿಎಫ್​ಸಿ, ಎಕ್ಸಿಸ್ ಮೊದಲಾದ ಬ್ಯಾಂಕುಗಳಲ್ಲಿ ಮಿನಿಮಮ್ ಬ್ಯಾಲನ್ಸ್ ಮೊತ್ತ 10,000 ರೂ ಇದೆ. ಕೆಲ ಬ್ಯಾಂಕುಗಳಲ್ಲಿ 1,000 ರೂನಿಂದ 10,000 ರೂವರೆಗೂ ಮಿನಿಮಮ್ ಬ್ಯಾಲನ್ಸ್ ಇರುತ್ತದೆ.

ಒಂದು ವೇಳೆ ಕನಿಷ್ಠ ಮೊತ್ತದ ಬ್ಯಾಲನ್ಸ್ ಉಳಿಸಿಕೊಳ್ಳದೇ ಹೋದರೆ ಬ್ಯಾಂಕುಗಳು ದಂಡ ವಿಧಿಸುತ್ತವೆ. ಮಿನಿಮಮ್ ಬ್ಯಾಲನ್ಸ್ ಇಲ್ಲದೇ ಹಲವು ವರ್ಷಗಳಿಂದ ಇನಾಪರೇಟಿವ್ ಆಗಿರುವ ಖಾತೆಗಳಿಗೆ ಹಲವು ಸಾವಿರ ರೂಗಳಷ್ಟು ದಂಡ ಬೀಳಬಹುದು. ಒಂದು ವೇಳೆ, ಗ್ರಾಹಕ ತಮ್ಮ ಹಳೆಯ ಖಾತೆಗೆ ಮರುಜೀವ ಪಡೆಯಲು ಬಯಸಿದರೂ ದಂಡ ಕಟ್ಟುವ ಭಯದಲ್ಲಿ ದೂರವಾಗಬಹುದು. ಇದನ್ನು ತಪ್ಪಿಸಲು ಆರ್​ಬಿಐ ಮಿನಿಮಮ್ ಬ್ಯಾಲನ್ಸ್ ಶುಲ್ಕ ವಸೂಲಿ ಮಾಡಬಾರದು ಎಂದು ಬ್ಯಾಂಕುಗಳಿಗೆ ಹೇಳಿದೆ.

ಇದನ್ನೂ ಓದಿ: ITR: ಡಿ. 31ರವರೆಗೂ 8.18 ಕೋಟಿ ಐಟಿಆರ್​ಗಳ ಸಲ್ಲಿಕೆ; ಇದು ಹೊಸ ದಾಖಲೆ

ಈ ಹಿಂದೆಯೂ ಮಿನಿಮಮ್ ಬ್ಯಾಲನ್ಸ್ ವಿಚಾರದಲ್ಲಿ ಬ್ಯಾಂಕುಗಳಿಗೆ ಆರ್​ಬಿಐ ತಿಳಿಹೇಳಿರುವುದುಂಟು. ಮಿನಿಮಮ್ ಬ್ಯಾಲನ್ಸ್ ಉಳಿಸದ್ದಕ್ಕೆ ದಂಡವನ್ನು ವಿಧಿಸುವುದರಿಂದ ಖಾತೆಯ ಹಣ ನೆಗಟಿವ್​ಗೆ ಹೋಗುತ್ತದೆ. ಆ ರೀತಿ ದಂಡ ವಿಧಿಸದಂತೆ ಬ್ಯಾಂಕ್ ಎಚ್ಚರ ವಹಿಸಬೇಕು ಎಂದು ಆರ್​ಬಿಐ ಈ ಹಿಂದೆ ಹೇಳಿದ್ದಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಒಳ್ಳೆಯ ಕೆಲಸ ಮಾಡಿದವರನ್ನು ಅಭಿನಂದಿಸಲೇಬೇಕು: ಬಸನಗೌಡ ಯತ್ನಾಳ್
ಒಳ್ಳೆಯ ಕೆಲಸ ಮಾಡಿದವರನ್ನು ಅಭಿನಂದಿಸಲೇಬೇಕು: ಬಸನಗೌಡ ಯತ್ನಾಳ್
ಪ್ರಶಸ್ತಿ ಸ್ವೀಕರಿಸಲು ಕೊಡೆ ಹಿಡಿದು ಬಂದ ಸೂರ್ಯಕುಮಾರ್ ಯಾದವ್
ಪ್ರಶಸ್ತಿ ಸ್ವೀಕರಿಸಲು ಕೊಡೆ ಹಿಡಿದು ಬಂದ ಸೂರ್ಯಕುಮಾರ್ ಯಾದವ್
ಚಾರ್ಮಾಡಿಯಲ್ಲಿ ಕಾಡಾನೆ ಜತೆ ಸೆಲ್ಫೀ ಕ್ಲಿಕ್ಕಿಸಲು ಮುಂದಾದ ಪ್ರಯಾಣಿಕ
ಚಾರ್ಮಾಡಿಯಲ್ಲಿ ಕಾಡಾನೆ ಜತೆ ಸೆಲ್ಫೀ ಕ್ಲಿಕ್ಕಿಸಲು ಮುಂದಾದ ಪ್ರಯಾಣಿಕ
ಮಂಗಳೂರು: ಅಬ್ಬರಿಸುತ್ತಿದೆ ಅರಬ್ಬೀ ಸಮುದ್ರ, ಕಡಲ್ಕೊರೆತ ಭೀತಿ ಹೆಚ್ಚಳ
ಮಂಗಳೂರು: ಅಬ್ಬರಿಸುತ್ತಿದೆ ಅರಬ್ಬೀ ಸಮುದ್ರ, ಕಡಲ್ಕೊರೆತ ಭೀತಿ ಹೆಚ್ಚಳ
VIDEO: ಕ್ಯಾಚ್ ಕೈಬಿಟ್ಟ ಬೆನ್ನಲ್ಲೇ ರೋಹಿತ್ ಶರ್ಮಾನ ಹೊರಗೆ ಕಳಿಸಿದ ಪಾಂಡ್ಯ
VIDEO: ಕ್ಯಾಚ್ ಕೈಬಿಟ್ಟ ಬೆನ್ನಲ್ಲೇ ರೋಹಿತ್ ಶರ್ಮಾನ ಹೊರಗೆ ಕಳಿಸಿದ ಪಾಂಡ್ಯ
‘ಅವನ ನಟನೆ ನೋಡೋದೇ ಆನಂದ’; ರಾಕೇಶ್ ನೆನೆದು ಸೆಲೆಬ್ರಿಟಿಗಳ ಕಣ್ಣೀರು
‘ಅವನ ನಟನೆ ನೋಡೋದೇ ಆನಂದ’; ರಾಕೇಶ್ ನೆನೆದು ಸೆಲೆಬ್ರಿಟಿಗಳ ಕಣ್ಣೀರು
‘ನಾನು ಯಶ್ ಅಭಿಮಾನಿ ಅಲ್ಲ, ಆದರೆ ಆ ಹೀರೋ ನಂಗೆ ಆದರ್ಶ’; ಯಶ್ ತಾಯಿ
‘ನಾನು ಯಶ್ ಅಭಿಮಾನಿ ಅಲ್ಲ, ಆದರೆ ಆ ಹೀರೋ ನಂಗೆ ಆದರ್ಶ’; ಯಶ್ ತಾಯಿ
Daily Devotional: ಪಂಚಮುಖಿ ಹನುಮನ ಉಪಾಸನೆಯ ಹಿಂದಿನ ರಹಸ್ಯ ತಿಳಿಯಿರಿ
Daily Devotional: ಪಂಚಮುಖಿ ಹನುಮನ ಉಪಾಸನೆಯ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಕುಜ ಕರ್ಕಾಟಕ ರಾಶಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
Daily horoscope: ಕುಜ ಕರ್ಕಾಟಕ ರಾಶಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ