Success Story: ಅಂತಿಂಥ ಹೆಣ್ಣು ಇವರಲ್ಲ..! ಬೆಂಗಳೂರಲ್ಲಿ ಗ್ಯಾರೇಜ್​ನಲ್ಲಿ ಕಂಪನಿ ಆರಂಭಿಸಿ, ಇವತ್ತು 30,000 ಕೋಟಿ ಉದ್ಯಮದ ಒಡತಿಯಾದ ಕಿರಣ್ ಮಜುಮ್ದಾರ್ ಶಾ

|

Updated on: Jun 21, 2023 | 3:41 PM

Inspiring Story of Biocon Founder Kiran Mazumdar Shah: ವೈದ್ಯೆಯಾಗುವ ಆಸೆ ಬಿಟ್ಟು ಬೆಂಗಳೂರಲ್ಲಿ ಬಿಎಸ್​ಸಿ ಓದಿ, ಕೇವಲ 10 ಸಾವಿರ ರೂ ಬಂಡವಾಳದಲ್ಲಿ ಒಂದು ಸಣ್ಣ ಗ್ಯಾರೇಜ್​ನಲ್ಲಿ ಕಂಪನಿ ಕಟ್ಟಿ ಬೆಳೆಸಿದವರು ಕಿರಣ್ ಮಜುಮ್ದಾರ್ ಷಾ. ಇವತ್ತು ಇವರ ಬಯೋಕಾನ್ ಕಂಪನಿ 30,000 ಕೋಟಿ ರೂ ಉದ್ಯಮವಾಗಿ ಬೆಳೆದಿದೆ.

Success Story: ಅಂತಿಂಥ ಹೆಣ್ಣು ಇವರಲ್ಲ..! ಬೆಂಗಳೂರಲ್ಲಿ ಗ್ಯಾರೇಜ್​ನಲ್ಲಿ ಕಂಪನಿ ಆರಂಭಿಸಿ, ಇವತ್ತು 30,000 ಕೋಟಿ ಉದ್ಯಮದ ಒಡತಿಯಾದ ಕಿರಣ್ ಮಜುಮ್ದಾರ್ ಶಾ
ಕಿರಣ್ ಮಜುಮ್ದಾರ್ ಶಾ
Follow us on

ಬಯೋಕಾನ್ ಕಂಪನಿಯ ಮುಖ್ಯಸ್ಥ ಕಿರಣ್ ಮಜುಮ್ದಾರ್ ಶಾ (Kiran Mazumdar Shah) ಅವರ ಹೆಸರು ಹೆಚ್ಚಿನ ಮಂದಿಗೆ ಚಿರಪರಿಚಿತ. ಭಾರತದ ಅತ್ಯಂತ ಯಶಸ್ವಿ ಉದ್ಯಮಿಗಳ ಪೈಕಿ ಅವರೂ ಒಬ್ಬರು. ಅದರಲ್ಲೂ ಅಗ್ರಗಣ್ಯ ಮಹಿಳಾ ಉದ್ಯಮಿಗಳಲ್ಲಿ ಅವರೂ ನಿಲ್ಲುತ್ತಾರೆ. ಒಬ್ಬ ಸಾಧಾರಣ ಮಧ್ಯಮ ವರ್ಗದ ಮಹಿಳೆ ಇವತ್ತು ಬಿಲಿಯನೇರ್ ಆಗಿ ನೆಲನಿಂತಿರುವ ಕಥೆ ಎಂಥವರಿಗೂ ಸ್ಫೂರ್ತಿ (Inspiring Story) ತರುವಂಥದ್ದು. ಬೆಂಗಳೂರಿನ ಪ್ರಮುಖ ಆಗುಹೋಗುಗಳಿಗೆ ಸದಾ ಸ್ಪಂದಿಸುವ ಮತ್ತು ಸಲಹೆ ನೀಡುವ ಕಿರಣ್ ಮಜುಮ್ದಾರ್ ಷಾ ಅವರ ಜೀವನಕಥೆ ಬಹಳ ಇಂಟರೆಸ್ಟಿಂಗ್ ಆಗಿದೆ.

ವೈದ್ಯೆಯಾಗಬೇಕೆಂದು ಆಸೆ ಪಟ್ಟಿದ್ದ ಕಿರಣ್ ಮಜುಮ್ದಾರ್ ತನಗೆ ಸ್ಕಾಲರ್​ಶಿಪ್ ಸಿಗದ ಕಾರಣ ಆಸೆ ಅಲ್ಲಿಗೇ ಬಿಟ್ಟು ಬಿಎಸ್​ಸಿ ಓದಿದ್ದರು. ಇವತ್ತು ಬಹಳಷ್ಟು ವೈದ್ಯರು ಬಯೋಕಾನ್​ನಲ್ಲಿ ಕೆಲಸ ಮಾಡುತ್ತಾರೆ.

1953 ಮಾರ್ಚ್ 23ರಂದು ಬೆಂಗಳೂರಿನಲ್ಲಿ ಹುಟ್ಟಿದ ಕಿರಣ್ ಮಜುಮ್ದಾರ್ ಷಾ ಇಲ್ಲಿಯೇ ಶಾಲಾ ಕಾಲೇಜು ದಿನಗಳನ್ನು ಕಳೆದವರು. ಎಂಬಿಬಿಎಸ್​ಗೆ ಹೋಗಲು ಆಗದೆ ಬಿಷಪ್ ಕಾಟನ್ ಗರ್ಲ್ಸ್ ಹೈಸ್ಕೂಲ್​ನಲ್ಲಿ 1973ರಲ್ಲಿ ಜೀವಶಾಸ್ತ್ರದಲ್ಲಿ ಬಿಎಸ್​ಸಿ ಮಾಡಿದರು. ಬಳಿಕ 1975ರಲ್ಲಿ ಅವರು ಆಸ್ಟ್ರೇಲಿಯಾದ ಮೆಲ್ಬೋರ್ನ್ ಯೂನಿವರ್ಸಿಟಿಯಲ್ಲಿ ಮಾಲ್ಟಿಂಗ್ ಮತ್ತು ಬ್ರಿವಿಂಗ್​ನಲ್ಲಿ ಮಾಸ್ಟರ್ಸ್ ಡಿಗ್ರಿ ಪಡೆದರು.

ಇದನ್ನೂ ಓದಿService Charge: ಹೋಟೆಲ್ ಬಿಲ್​ನಲ್ಲಿ ಸರ್ವಿಸ್ ಚಾರ್ಜ್ ಯಾಕೆ? ನೀವು ಕಟ್ಟಲೇಬೇಕಾ? ಇಲ್ಲಿದೆ ನಿಯಮ

ಅದಾದ ಬಳಿಕ ಕಿರಣ್ ಮಜುಮ್ದಾರ್ ಶಾ ಅವರಿಗೆ ಬಯೋಟೆಕ್ನಾಲಜಿ ಕ್ಷೇತ್ರದಲ್ಲಿ ಏನಾದರೂ ಮಾಡಬೇಕೆಂಬ ಆಲೋಚನೆ ಬಂದಿದ್ದು. ಅಂದುಕೊಂಡಿದ್ದನ್ನು ಮಾಡಲು ಅವರು ತಡ ಮಾಡಲಿಲ್ಲ. 1978ರಲ್ಲಿ ಬಯೋಕಾನ್ ಕಂಪನಿ ಆರಂಭಿಸಿದರು. ಅದೂ ಒಂದು ಸಣ್ಣ ಗ್ಯಾರೇಜಿನಲ್ಲಿ ಕೇವಲ 10,000 ರೂ ಬಂಡವಾಳದೊಂದಿಗೆ ಬಯೋಕಾನ್ ಪ್ರಯಾಣ ಶುರುವಾಗಿತ್ತು. ಆಗ 10,000 ರೂ ಎಂದರೆ ಈಗ ಅದರ ಮೌಲ್ಯ 2,00,000 ರೂ ಎನ್ನಬಹುದಾದರೂ ಬಹಳ ಸಣ್ಣ ಬಂಡವಾಳವೇ. ಬಂಡವಾಳ ಕಡಿಮೆ ಆಗಿದ್ದರೂ ಅವರ ಆಲೋಚನೆ ದೊಡ್ಡದಾಗಿತ್ತು. ಅವರ ಲೆಕ್ಕಾಚಾರ ಸರಿಗೂಡಿತ್ತು.

ಬಯೋಕಾನ್ ವ್ಯವಹಾರ ಎಂಥದ್ದು..?

ಪಪ್ಪಾಯ ಹಣ್ಣಿನಿಂದ ಪಪೈನ್ ಎಂಬ ಕಿಣ್ವದ (Enzyme) ಸಾರ ತೆಗೆದು ಅದನ್ನು ಮಾರುವುದು ಬಯೋಕಾನ್​ನ ಮೊದಲ ಬ್ಯುಸಿನೆಸ್ ಆಗಿತ್ತು. ಈ ಪಪೈನ್ (Papain) ಎಂಬುದು ಮಾಂಸವನ್ನು ಮೆದು ಮಾಡಲು ಬಳಕೆ ಆಗುತ್ತದೆ. ಇವರ ಈ ಉತ್ಪನ್ನಕ್ಕೆ ಸಹಜವಾಗಿ ಒಳ್ಳೆಯ ಬೇಡಿಕೆ ಇತ್ತು.

ಇದನ್ನೂ ಓದಿGameStop: ಸಿಎಫ್​ಒ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಲೇ ಆಫ್ ಮಾಡಿದ್ದ ಸಿಇಒಗೇ ಹೋಯ್ತು ಕೆಲಸ

ಬಿಯರ್ ಪರಿಷ್ಕರಣೆಯಲ್ಲಿ (Beer Clarification) ಬಳಸುವ ಐಸಿಂಗ್ಲಾಸ್​ನ (Isinglass) ಸಾರ ತೆಗೆಯುವ ಕೆಲಸ ಕೂಡ ಬಯೋಕಾನ್​ನಲ್ಲಿ ನಡೆದಿತ್ತು. ಪಪೈನ್ ಮತ್ತು ಐಸಿಂಗ್ಲಾಸ್ ಈ ಎರಡೂ ಕಿಣ್ವ ಸಾರಗಳು ಅಮೆರಿಕ ಮತ್ತು ಯೂರೋಪಿಯನ್ ದೇಶಗಳಿಗೆ ರಫ್ತಾಗತೊಡಗಿದವು. ಬಯೋಕಾನ್​ಗೆ ಒಳ್ಳೆಯ ಲಾಭ ಬಂದಿತು. ಸಣ್ಣ ಗ್ಯಾರೇಜಿನಲ್ಲಿ ಇದ್ದ ಇವರ ಕಂಪನಿ ಹೊಸೂರು ರಸ್ತೆಯಲ್ಲಿ 20 ಎಕರೆ ಜಾಗದಲ್ಲಿ ಫ್ಯಾಕ್ಟರಿಗೆ ಸ್ಥಳಾಂತರಗೊಂಡಿತು.

ಇದೀಗ ಬಯೋಟೆಕ್ನಾಲಜಿ ಮತ್ತು ಬಯೋಫಾರ್ಮಸ್ಯೂಟಿಕಲ್ ಕ್ಷೇತ್ರದಲ್ಲಿ ಬಯೋಕಾನ್ ಪ್ರಬಲ ಕಂಪನಿಯಾಗಿ ಬೆಳೆದಿದೆ ಎಂದರೆ ಅದಕ್ಕೆ ಕಿರಣ್ ಮಜುಮ್ದಾರ್ ಶಾ ಅವರೇ ಪ್ರಮುಖ ಕಾರಣ. ಬಯೋಕಾನ್ ಸಂಸ್ಥೆಯ ಷೇರುಬೆಲೆ ಇವತ್ತು 245 ರೂ ಇದೆ. ಒಟ್ಟು ಷೇರು ಸಂಪತ್ತು 30,000 ಕೋಟಿ ರೂ ಸಮೀಪ ಇದೆ. ಇದರಲ್ಲಿ ಕಿರಣ್ ಮಜುಮ್ದಾರ್ ಅವರ ಷೇರುಸಂಪತ್ತಿನ ಪ್ರಮಾಣ 20,000 ಕೋಟಿ ರೂನಷ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ