ಫ್ರಾನ್ಸ್ ಕೊಡಲ್ಲವೆಂದಾಗ ಹುಟ್ಟುಕೊಂಡ ಕಿಚ್ಚು; ಡಿಆರ್​ಡಿಒ ವಿಜ್ಞಾನಿಗಳು ಗ್ಯಾನ್ ಚಿಪ್ ಟೆಕ್ನಾಲಜಿ ರಹಸ್ಯ ಭೇದಿಸಿದ ಕಥೆ

Inspiring story of DRDO scientists indigenously developing GaN chip tech: 2023ರಲ್ಲಿ ಗ್ಯಾಲಿಯಂ ನೈಟ್ರೈಡ್ ಚಿಪ್ ಟೆಕ್ನಾಲಜಿಯನ್ನು ಭಾರತ ಸ್ವಂತವಾಗಿ ಅಭಿವೃದ್ಧಿಪಡಿಸಿದೆ. ಡಾ. ಮೀನಾ ಮಿಶ್ರಾ ನೇತೃತ್ವದಲ್ಲಿ ಡಿಆರ್​ಡಿಒ ವಿಜ್ಞಾನಿಗಳು ಈ ಸಾಧನೆ ಮಾಡಿದ್ದಾರೆ. 2016ರಲ್ಲಿ ರಫೇಲ್ ಜೆಟ್ ಡೀಲ್ ಜೊತೆ ಈ ಗ್ಯಾನ್ ಚಿಪ್ ಟೆಕ್ನಾಲಜಿ ವರ್ಗಾಯಿಸಲು ಭಾರತ ಮಾಡಿಕೊಂಡ ಮನವಿಯನ್ನು ಫ್ರಾನ್ಸ್ ತಿರಸ್ಕರಿಸಿತ್ತು. ಅಲ್ಲಿಂದ ಹುಟ್ಟಿದ ಕಿಚ್ಚು 2023ರಲ್ಲಿ ಸ್ವಂತವಾಗಿ ಗ್ಯಾನ್ ಟೆಕ್ನಾಲಜಿ ಅಭಿವೃದ್ಧಿಗೆ ಎಡೆ ಮಾಡಿಕೊಟ್ಟಿದೆ.

ಫ್ರಾನ್ಸ್ ಕೊಡಲ್ಲವೆಂದಾಗ ಹುಟ್ಟುಕೊಂಡ ಕಿಚ್ಚು; ಡಿಆರ್​ಡಿಒ ವಿಜ್ಞಾನಿಗಳು ಗ್ಯಾನ್ ಚಿಪ್ ಟೆಕ್ನಾಲಜಿ ರಹಸ್ಯ ಭೇದಿಸಿದ ಕಥೆ
ಗ್ಯಾನ್ ಚಿಪ್

Updated on: Jan 30, 2026 | 1:41 PM

ದೃಢ ಸಂಕಲ್ಪ ಮತ್ತು ಅವಶ್ಯಕತೆ ಎರಡೂ ಸೇರಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಭಾರತ ಗ್ಯಾನ್ ಸೆಮಿಕಂಡಕ್ಟರ್ ಟೆಕ್ನಾಲಜಿ  (GaN semiconductor technology) ಸಿದ್ಧಿಸಿಕೊಂಡ ಕಥೆ ಸಾಕ್ಷಿಯಾಗಿದೆ. ಗ್ಯಾನ್ ಚಿಪ್​ಗಳನ್ನು ತಯಾರಿಸಬಲ್ಲ ತಂತ್ರಜ್ಞಾನ ಹೊಂದಿದ ಐದಾರು ದೇಶಗಳ ಸಾಲಿಗೆ ಭಾರತ ಸೇರಿಕೊಂಡಿದೆ. 2023ರಲ್ಲಿ ಡಾ. ಮೀನಾ ಮಿಶ್ರಾ (Dr. Meena Mishra) ನೇತೃತ್ವದಲ್ಲಿ ಡಿಆರ್​ಡಿಒ ವಿಜ್ಞಾನಿಗಳ ತಂಡವೊಂದು ಈ ಐತಿಹಾಸಿಕ ಸಾಧನೆ ಮಾಡಿ ವಿಶ್ವದ ಗಮನ ಸೆಳೆದಿತ್ತು. ಭಾರತದ ಸ್ವಾವಲಂಬನೆಯ ಹಾದಿಯಲ್ಲಿ ಅದು ನಿಜಕ್ಕೂ ಮಹತ್ವಪೂರ್ಣವೆನಿಸುವ ಒಂದು ಮೈಲಿಗಲ್ಲು ಎಂದು ಬಣ್ಣಿಲಾಗುತ್ತಿದೆ.

ಏನಿದು ಗ್ಯಾನ್ ಸೆಮಿಕಂಡಕ್ಟರ್ ಟೆಕ್ನಾಲಜಿ?

ಗ್ಯಾನ್ ಎಂದರೆ ಗ್ಯಾಲಿಯಂ ನೈಟ್ರೈಡ್ (Gallium Nitride). ಸಿಲಿಕಾನ್​ಗಿಂತ ಇದು ಹೆಚ್ಚು ಉಷ್ಣ ಮತ್ತು ವಿದ್ಯುತ್ ಗುಣಗಳನ್ನು ಹೊಂದಿರುವ ವಸ್ತು. ರಾಡಾರ್, ಸೆಟಿಲೈಟ್, ಮಿಸೈಲ್, ಸೆನ್ಸರ್ ಇತ್ಯಾದಿ ಡಿಫೆನ್ಸ್ ಟೆಕ್ನಾಲಜಿಗಳಲ್ಲಿ ಗ್ಯಾನ್ ಚಿಪ್​ಗಳನ್ನು ಬಳಸಲಾಗುತ್ತದೆ. ಹೀಗಾಗಿ, ರಕ್ಷಣಾ ಕ್ಷೇತ್ರದಲ್ಲಿ ಗ್ಯಾನ್ ಚಿಪ್​ಗಳಿಗೆ ಬೇಡಿಕೆ ಇದೆ. ಅಮೆರಿಕ, ಚೀನಾ, ರಷ್ಯಾ, ಫ್ರಾನ್ಸ್, ಕೊರಿಯಾ ಮತ್ತು ಜರ್ಮನಿ ದೇಶಗಳು ಮಾತ್ರ ಇಂಥ ಚಿಪ್ ತಯಾರಿಸಬಲ್ಲ ತಂತ್ರಜ್ಞಾನ ಹೊಂದಿವೆ.

ಇದನ್ನೂ ಓದಿ: ಎಐ ಕ್ಷೇತ್ರದ ಭಾರತೀಯ ಕಂಪನಿಗಳ ಸಿಇಒಗಳು, ಪರಿಣಿತರ ಜೊತೆ ಪ್ರಧಾನಿ ಮೋದಿ ಸಭೆ

ಫ್ರಾನ್ಸ್ ಕೊಡಲ್ಲ ಎಂದಾಗ ಹುಟ್ಟಿಕೊಂಡ ಕಿಚ್ಚು…

2016ರಲ್ಲಿ 36 ರಫೇಲ್ ಫೈಟರ್ ಜೆಟ್​ಗಳನ್ನು ಖರೀದಿಸಲು ಫ್ರಾನ್ಸ್ ಜೊತೆ ಭಾರತ ಒಪ್ಪಂದ ಮಾಡಿಕೊಂಡಿತು. ಈ ವೇಳೆ, ಗ್ಯಾನ್ ಚಿಪ್ ಟೆಕ್ನಾಲಜಿಯನ್ನು ತನಗೆ ವರ್ಗಾಯಿಸಬೇಕೆಂದು (Technology transfer) ಭಾರತ ಮನವಿ ಮಾಡಿಕೊಂಡಿತು. ಫ್ರಾನ್ಸ್ ತಾನು ಬೇಕಾದರೆ ಚಿಪ್​ಗಳನ್ನು ತಯಾರಿಸಿ ಕೊಡುತ್ತೇವೆ, ಟೆಕ್ನಾಲಜಿ ವರ್ಗಾವಣೆ ಸಾಧ್ಯ ಇಲ್ಲ ಎಂದು ಹೇಳಿತು.

ರಫೇಲ್ ಕಾರ್ಯಕ್ಷಮತೆಯಲ್ಲಿ ಈ ಗ್ಯಾನ್ ಚಿಪ್​ಗಳ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಹೀಗಾಗಿ, ಇಂಥ ವಿಚಾರದಲ್ಲಿ ಬೇರೆ ದೇಶದ ಮೇಲೆ ಅವಲಂಬನೆ ಆಗುವುದರ ಬದಲು ಸ್ವಂತವಾಗಿ ಚಿಪ್ ತಯಾರಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸುವುದು ಉತ್ತಮ ಎಂದು ಆಲೋಚಿಸಿದ ಪರಿಣಾಮ, ಡಿಆರ್​ಡಿಒ ವಿಜ್ಞಾನಿಗಳಿಂದ ಅವಿರತ ಪ್ರಯತ್ನ ಮೊದಲುಗೊಂಡಿತು.

ಇದನ್ನೂ ಓದಿ: Economic Survey 2026: ಆರ್ಥಿಕ ಸಮೀಕ್ಷೆ ವರದಿ ಮಂಡನೆ; ಜಿಡಿಪಿ ಶೇ. 6.8-7.2 ಬೆಳೆಯುವ ನಿರೀಕ್ಷೆ

ಡಿಆರ್​ಡಿಒ ಡೈರೆಕ್ಟರ್ ಆದ ಡಾ. ಮೀನಾ ಮಿಶ್ರಾ ನೇತೃತ್ವದಲ್ಲಿ ಡಿಆರ್​ಡಿಒ ವಿಜ್ಞಾನಿಗಳ ತಂಡವು 2023ರಲ್ಲಿ ಗ್ಯಾಲಿಯಂ ನೈಟ್ರೈಡ್ ಚಿಪ್ ತಯಾರಿಸುವ ತಂತ್ರಜ್ಞಾನದ ರಹಸ್ಯವನ್ನು ಭೇದಿಸುವಲ್ಲಿ ಯಶಸ್ವಿಯಾಯಿತು. ಡಿಆರ್​ಡಿಒದ ಸಾಲಿಡ್ ಸ್ಟೇಟ್ ಫಿಸಿಕ್ಸ್ ಲ್ಯಾಬ್​ನಲ್ಲಿ ನಿರಂತರ ಪ್ರಯೋಗಗಳ ಮೂಲಕ ಈ ಸಾಧನೆ ಮಾಡಲಾಯಿತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ