50 ರೂ ಇಟ್ಟುಕೊಂಡು ದೇಶ ಬಿಟ್ಟು, ಬ್ರೂನೇ ಸುಲ್ತಾನರಿಂದ ಶಭಾಷ್​ಗಿರಿ ಪಡೆಯುವ ಮಟ್ಟಕ್ಕೆ ಬೆಳೆದ ರಿಯಲ್ ಎಸ್ಟೇಟ್ ಕಿಂಗ್

Inspiring Story of Businessman PNC Menon: ಶೋಭಾ ಡೆಲವಪರ್ಸ್ ಕಂಪನಿಯ ಸಂಸ್ಥಾಪಕರಾದ ಪಿಎನ್​ಸಿ ಮೆನನ್ ಅವರ ಜೀವನಕಥೆ ಬಹಳಷ್ಟು ಮಂದಿಗೆ ಸ್ಫೂರ್ತಿ ತರಬಹುದು. ಓದದೇ ಇದ್ದರೂ ಕಸುಬಿನಲ್ಲಿ ಪಳಗಿದರೆ ಎತ್ತರಕ್ಕೆ ಏರಬಹುದು ಎನ್ನುವುದಕ್ಕೆ ಅವರು ಮಾದರಿಯಾಗಿದ್ದಾರೆ. ಓದನ್ನು ಅರ್ಧಕ್ಕೆ ನಿಲ್ಲಿಸಿದರೂ ಇವರು ಕಲಿತ ಇಂಟೀರಿಯರ್ ಡೆಕೋರೇಶನ್ ಕೆಲಸ ಇವರ ಕೈಹಿಡಿದಿದೆ. ದೂರದ ಓಮನ್ ದೇಶಕ್ಕೆ ಹೋಗಿ ಇಂಟೀರಿಯರ್ ಡೆಕೋರೇಟರ್ ಆಗಿ ಆರಂಭಿಸಿದ ಇವರ ಬಿಸಿನೆಸ್ ಇವತ್ತು ಹೆಮ್ಮರವಾಗಿ ಬೆಳೆದಿದೆ. ಇವರ ಶೋಭಾ ಡೆಲವಪರ್ಸ್ ಸಂಸ್ಥೆ ಇವತ್ತು ಭಾರತದ ಅತಿದೊಡ್ಡ ರಿಯಲ್ ಎಸ್ಟೇಟ್ ಕಂಪನಿಯಾಗಿದೆ.

50 ರೂ ಇಟ್ಟುಕೊಂಡು ದೇಶ ಬಿಟ್ಟು, ಬ್ರೂನೇ ಸುಲ್ತಾನರಿಂದ ಶಭಾಷ್​ಗಿರಿ ಪಡೆಯುವ ಮಟ್ಟಕ್ಕೆ ಬೆಳೆದ ರಿಯಲ್ ಎಸ್ಟೇಟ್ ಕಿಂಗ್
ಪಿಎನ್​ಸಿ ಮೆನನ್
Follow us
|

Updated on: Apr 05, 2024 | 4:19 PM

ಇವತ್ತು ಬಹಳಷ್ಟು ಸಾಧಕರನ್ನು ನೋಡಿದಾಗ ಅವರೆಲ್ಲಾ ಅಸಾಮಾನ್ಯ ರೀತಿಯಲ್ಲಿ ಅಡೆತಡೆಗಳನ್ನು ದಾಟಿ ಬಂದವರೇ ಆಗಿದ್ದಾರೆ. ಕೋಟಿ ಕೋಟಿ ಹಣ ಇರುವ ಹಲವು ಕುಬೇರರು ಹುಟ್ಟಿನಿಂದಲೇ ಶ್ರೀಮಂತರಾದವರಲ್ಲ. ಪರಿಶ್ರಮ ಹಾಕಿ ಸ್ವಂತಬಲದಿಂದ ಹಂತ ಹಂತವಾಗಿ ಬೆಳೆದವರೇ ಆಗಿದ್ದಾರೆ. ಅಂಥವರಲ್ಲಿ ಪಿಎನ್​ಸಿ ಮೆನನ್ (PNC Menon) ಒಬ್ಬರು. ಕೇರಳದ ಪಾಲಘಾಟ್​ನವರಾದ ಮೆನನ್ ಬೆಂಗಳೂರಿನಲ್ಲಿ ಕಾರ್ಪೊರೇಟ್ ಕಚೇರಿ ಹೊಂದಿರುವ ಶೋಭಾ ಲಿಮಿಟೆಡ್ (Sobha ltd) ಎಂಬ ರಿಯಲ್ ಎಸ್ಟೇಟ್ ಕಂಪನಿಯ ಸಂಸ್ಥಾಪಕರು. ಇವರು 10ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡವರು. ನಿರಕ್ಷರಸ್ಥ ಅಜ್ಜ, ಅನಾರೋಗ್ಯಪೀಡಿತ ತಾಯಿ. ಮನೆಯಲ್ಲಿ ಕಷ್ಟಕೋಟಲೆ. ಪ್ರಾಥಮಿಕ ಶಾಲೆಯ ಬಳಿಕ ಶಾಲಾ ಓದನ್ನೇ ಬಿಡಬೇಕಾಯಿತು.

ಆದರೂ ಪಟ್ಟು ಬಿಡದೆ ಬಿಕಾಂ ಮಾಡಲು ಇವರ ಯತ್ನ ಸತತವಾಗಿ ವಿಫಲವಾಗಿತ್ತು. ಬದುಕಲು ಇಂಟೀರಿಯರ್ ಡೆಕೋರೇಶನ್ ಕೆಲಸ ಮಾಡತೊಡಗಿದರು. ಈ ವಿದ್ಯೆ ಅವರಿಗೆ ಸುಲಭವಾಗಿ ಹತ್ತಿತು. ಎಂಜಿನಿಯರ್ ಅಲ್ಲದಿದ್ದರೂ ಇಂಟೀರಿಯರ್ ಡೆಕೋರೇಶನ್​ನಲ್ಲಿ ಇವರ ಕ್ರಿಯಾಶೀಲತೆ ಮುಂದೆ ಇವರ ಕೈಹಿಡಿಯುತ್ತದೆ.

1948ರಲ್ಲಿ ಹುಟ್ಟಿದ ಪಿಎನ್​ಸಿ ಮೆನನ್ 26ನೇ ವಯಸ್ಸಿನಲ್ಲಿ ಓಮನ್ ದೇಶಕ್ಕೆ ಕೆಲಸಕ್ಕೆ ಹಾರುತ್ತಾರೆ. ಆಗ ಅವರ ಬಳಿ ಇದ್ದದ್ದು ಕೇವಲ 50 ರುಪಾಯಿ ಮಾತ್ರ. ಅಲ್ಲಿ ಹೋಗಿ ಸಾಲ ಪಡೆದು ಇಂಟೀರಿಯರ್ ಡಿಸೈನ್ ಬಿಸಿನೆಸ್ ಆರಂಭಿಸುತ್ತಾರೆ. ಆ ಕೆಲಸದಲ್ಲಿ ಇವರ ಕೌಶಲ್ಯ, ನಿಪುಣತೆ ಇವರಿಗೆ ದೊಡ್ಡ ದೊಡ್ಡ ಪ್ರಾಜೆಕ್ಟ್​​ಗಳನ್ನು ಸೆಳೆಯಲು ನೆರವಾಗುತ್ತದೆ. ಬ್ರೂನೇ ಸುಲ್ತಾನರ ನಿವಾಸದ ಒಳ ವಿನ್ಯಾಸವನ್ನು ಪಿಎನ್​ಸಿ ಮೆನನ್ ಅವರೇ ಮಾಡಿದ್ದಾರೆ ಎಂದರೆ ನಿಜಕ್ಕೂ ಭೇಷ್ ಎನ್ನಬೇಕು.

ಇದನ್ನೂ ಓದಿ: ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಬಾರಿಗೆ ಮೈಸೂರಿನ ಉದ್ಯಮಿ ರಮೇಶ್​ಗೆ ಸ್ಥಾನ; ಚಂದ್ರಯಾನಕ್ಕೆ ಕೊಡುಗೆ ಕೊಟ್ಟಿದ್ದರ ಫಲಶ್ರುತಿ

ದುಬೈನಲ್ಲಿ ಇವರು ಸ್ಥಾಪಿಸಿದ ಶೋಭಾ ರಿಯಾಲ್ಟಿ ಕಂಪನಿಯ ಬಿಸಿನೆಸ್ ಮಿಡಲ್ ಈಸ್ಟ್​ನ ಹಲವು ದೇಶಗಳಲ್ಲಿ ಹರಡುತ್ತದೆ. ಸುಲ್ತಾನ್ ಖಾಬುಸ್ ಮಸೀದಿ, ಅಲ್ ಬುಸ್ತಾನ್ ಅರಮನೆ ಮೊದಲಾದ ಕಟ್ಟಡಗಳಿಗೆ ಇವರು ವಿನ್ಯಾಸ ಮಾಡಿಕೊಟ್ಟಿದ್ದಾರೆ.

1995ರಲ್ಲಿ ಇವರು ಬೆಂಗಳೂರಿನಲ್ಲಿ ಶೋಭಾ ಡೆವಲಪರ್ಸ್ ಎಂಬ ರಿಯಲ್ ಎಸ್ಟೇಟ್ ಕಂಪನಿ ಸ್ಥಾಪಿಸುತ್ತಾರೆ. 2014ರಲ್ಲಿ ಈ ಕಂಪನಿ ಹೆಸರು ಶೋಭಾ ಲಿಮಿಟೆಡ್ ಆಗಿ ಬದಲಾಗುತ್ತದೆ. ಇವತ್ತು ಶೋಭಾ ಭಾರತದ ಅತಿದೊಡ್ಡ ರಿಯಲ್ ಎಸ್ಟೇಟ್ ಕಂಪನಿ ಎನಿಸಿದೆ. ಇದರ ಪ್ರಮುಖ ಷೇರುಪಾಲುದಾರರಲ್ಲಿ ಡಿಕೆ ಶಿವಕುಮಾರ್ ಕೂಡ ಇದ್ದಾರೆ. ಶೋಭಾ ಸಂಸ್ಥೆಯ ಮಾರುಕಟ್ಟೆ ಮೌಲ್ಯ ಇವತ್ತು 14,000 ಕೋಟಿ ರೂಗೂ ಅಧಿಕವಾಗಿದೆ.

ಇದನ್ನೂ ಓದಿ: 17,545 ಕೋಟಿ ರೂ ಕುಬೇರನ ಆಸ್ತಿ ಒಂದೇ ವರ್ಷದಲ್ಲಿ ಸೊನ್ನೆಗೆ; ಬೈಜು ರವೀಂದ್ರನ್ ಪತನದ ಕಥೆ

ಅಂದಹಾಗೆ ಪಿಎನ್​ಸಿ ಮೆನನ್ ಅವರ ಪತ್ನಿ ಹೆಸರು ಶೋಭಾ. ಅರ್ಧಾಂಗಿಯ ಹೆಸರನ್ನೇ ಮೆನನ್ ತಮ್ಮ ಕಂಪನಿಗಳಿಗೆ ಇಟ್ಟಿದ್ದಾರೆ. ಅವರ ಪತ್ನಿಯೇ ಮೆನನ್ ಪಾಲಿಗೆ ಅದೃಷ್ಟಲಕ್ಷ್ಮಿ ಆಗಿರಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ