AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿ ಟೀಮ್​ನ ಆರ್ಥಿಕ ತಜ್ಞ ರಾಕೇಶ್ ಮೋಹನ್​ಗೆ ವಿಶ್ವಬ್ಯಾಂಕ್ ಆರ್ಥಿಕ ಸಲಹಾ ಸಮಿತಿಗೆ ಆಹ್ವಾನ

World Bank Group's Economic Advisory Committee: ಪ್ರಧಾನಿಗಳ ಆರ್ಥಿಕ ಸಲಹಾ ಮಂಡಳಿಯ ಸದಸ್ಯ ರಾಕೇಶ್ ಮೋಹನ್ ಅವರನ್ನು ವಿಶ್ವಬ್ಯಾಂಕ್ ಗ್ರೂಪ್​ನ ಆರ್ಥಿಕ ಸಲಹಾ ಸಮಿತಿ ಸದಸ್ಯ ಸ್ಥಾನಕ್ಕೆ ಆಹ್ವಾನಿಸಲಾಗಿದೆ. ವರ್ಲ್ಡ್ ಬ್ಯಾಂಕ್ ಛೇರ್ಮನ್ ಅಜಯ್ ಬಾಂಗ ಈ ಆಫರ್ ನೀಡಿದ್ದಾರೆ. ವರ್ಲ್ಡ್ ಬ್ಯಾಂಕ್ ಗ್ರೂಪ್​ನ ಆರ್ಥಿಕ ಸಲಹಾ ಸಮಿತಿಗೆ ಲಾರ್ಡ್ ನಿಕೋಲಾಸ್ ಸ್ಟರ್ನ್ ಅಧ್ಯಕ್ಷರಾಗಿದ್ದಾರೆ. ಮತ್ತು ಇಂದರ್ಮೀತ್ ಗಿಲ್ ಅವರು ಸಹ-ಅಧ್ಯಕ್ಷರಾಗಿದ್ದಾರೆ. ಈ ಸಮಿತಿಯ ಸದಸ್ಯ ಸ್ಥಾನ ಎರಡು ವರ್ಷದ ಅವಧಿಯದ್ದಾಗಿರುತ್ತದೆ.

ಮೋದಿ ಟೀಮ್​ನ ಆರ್ಥಿಕ ತಜ್ಞ ರಾಕೇಶ್ ಮೋಹನ್​ಗೆ ವಿಶ್ವಬ್ಯಾಂಕ್ ಆರ್ಥಿಕ ಸಲಹಾ ಸಮಿತಿಗೆ ಆಹ್ವಾನ
ರಾಕೇಶ್ ಮೋಹನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 05, 2024 | 1:58 PM

ನವದೆಹಲಿ, ಏಪ್ರಿಲ್ 5: ವರ್ಲ್ಡ್ ಬ್ಯಾಂಕ್ ಗ್ರೂಪ್​ನ ಆರ್ಥಿಕ ಸಲಹಾ ಸಮಿತಿಯ (World Bank Group’s Economic Advisory committee) ಸದಸ್ಯ ಸ್ಥಾನಕ್ಕೆ ರಾಕೇಶ್ ಮೋಹನ್ ಅವರಿಗೆ ಆಹ್ವಾನ ಸಿಕ್ಕಿದೆ. ವರ್ಲ್ಡ್ ಬ್ಯಾಂಕ್ ಅಧ್ಯಕ್ಷ ಅಜಯ್ ಬಾಂಗ ಅವರು ಈ ಆಹ್ವಾನ ನೀಡಿದ್ದಾರೆ. ರಾಕೇಶ್ ಮೋಹನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ಸಲಹಾ ಮಂಡಳಿಯ (EAC PM) ಸದಸ್ಯರಾಗಿದ್ದಾರೆ. ವರ್ಲ್ಡ್ ಬ್ಯಾಂಕ್ ಜವಾಬ್ದಾರಿ ಪಡೆಯಲು ಸಿಕ್ಕಿರುವ ಆಹ್ವಾನದ ಬಗ್ಗೆ ರಾಕೇಶ್ ಇನ್ನೂ ಅಂತಿಮ ತೀರ್ಮಾನ ತೆಗೆದುಕೊಂಡಿರುವುದು ಸ್ಪಷ್ಟವಾಗಿಲ್ಲ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್​ನ ಆರ್ಥಿಕತಜ್ಞ ಲಾರ್ಡ್ ನಿಕೋಲಾಸ್ ಸ್ಟರ್ನ್ ಅವರು ಈ ಆರ್ಥಿಕ ಸಲಹಾ ಸಮಿತಿಯ ಅಧ್ಯಕ್ಷ ಸ್ಥಾನ ಹೊಂದಿದ್ದಾರೆ. ವರ್ಲ್ಡ್ ಬ್ಯಾಂಕ್ ಗ್ರೂಪ್​ನ ಮುಖ್ಯ ಆರ್ಥಿಕ ತಜ್ಞ ಇಂದರ್ಮೀತ್ ಗಿಲ್ ಅವರು ಸಹ-ಅಧ್ಯಕ್ಷರಾಗಿದ್ದಾರೆ.

ವರ್ಲ್ಡ್ ಬ್ಯಾಂಕ್ ಗ್ರೂಪ್​ನ ಆರ್ಥಿಕ ಸಲಹಾ ಸಮಿತಿಯು ಈ ಸಂಘಟನೆಯ ಗುರಿ, ಸಂಶೋಧನಾ ಆದ್ಯತೆ ಹಾಗು ಚಟುವಟಿಕೆಗಳು ಹೇಗೆ ಇರಬೇಕು ಎಂದು ತಂತ್ರಗಾರಿಕೆ ರೂಪಿಸುವ ಕೆಲಸ ಮಾಡುತ್ತದೆ. ವರ್ಲ್ಡ್ ಬ್ಯಾಂಕ್​ನ ಯೋಜನೆಗಳಲ್ಲಿ ಸಲಹೆಗಳನ್ನೂ ಇದು ನೀಡುತ್ತದೆ. ಈ ಸಮಿತಿಯ ಸದಸ್ಯರ ಅವಧಿ ಎರಡು ವರ್ಷದ್ದಾಗಿರುತ್ತದೆ.

ಇದನ್ನೂ ಓದಿ: 17,545 ಕೋಟಿ ರೂ ಕುಬೇರನ ಆಸ್ತಿ ಒಂದೇ ವರ್ಷದಲ್ಲಿ ಸೊನ್ನೆಗೆ; ಬೈಜು ರವೀಂದ್ರನ್ ಪತನದ ಕಥೆ

ರಾಕೇಶ್ ಮೋಹನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ಸಲಹಾ ಮಂಡಳಿಯ ಸದಸ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಸೆಂಟರ್ ಫಾರ್ ಸೋಷಿಯಲ್ ಅಂಡ್ ಎಕನಾಮಿಕ್ ಪ್ರೋಗ್ರೆಸ್ (ಸಿಎಸ್​ಇಪಿ) ಸಂಸ್ಥೆಯಲ್ಲಿ ಗೌರವ ಅಧ್ಯಕ್ಷ ಸ್ಥಾನ ಹೊಂದಿದ್ದಾರೆ. ಯಾಲೆ ಯೂನಿವರ್ಸಿಟಿಯ ಜ್ಯಾಕ್ಸನ್ ಇನ್ಸ್​ಟಿಟ್ಯೂಟ್ ಫಾರ್ ಗ್ಲೋಬಲ್ ಅಫೇರ್ಸ್​ನಲ್ಲಿ ಸೀನಿಯರ್ ಫೆಲೋ ಆಗಿ ರಾಕೇಶ್ ಮೋಹನ್ ಸೇವೆ ಸಲ್ಲಿಸಿದ್ದರು. 2010ರಿಂದ 2014ರವರೆಗೆ ಭಾರತ ಸರ್ಕಾರದ ನ್ಯಾಷನಲ್ ಟ್ರಾನ್ಸ್​ಪೋರ್ಟ್ ಡೆವಲಪ್ಮೆಂಟ್ ಪಾಲಿಸಿ ಕಮಿಟಿಯ ಚೇರ್ಮನ್ ಆಗಿದ್ದರು. ಇದು ರಾಜ್ಯ ದರ್ಜೆ ಸಚಿವ ಸ್ಥಾನದ ಶ್ರೇಣಿಯ ಹುದ್ದೆಯಾಗಿದೆ.

ಅರ್​ಬಿಐನ ಡೆಪ್ಯುಟಿ ಗವರ್ನರ್ ಸ್ಥಾನ, ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿ ಸ್ಥಾನ ಇತ್ಯಾದಿ ಹಲವು ಗುರುತರ ಸ್ಥಾನಗಳಲ್ಲಿ ರಾಕೇಶ್ ಮೋಹನ್ ಜವಾಬ್ದಾರಿ ನಿಭಾಯಿಸಿದ್ದಾರೆ.

ರಾಕೇಶ್ ಮೋಹನ್ ಹಣಕಾಸು ನೀತಿ ಬಗ್ಗೆ ಎರಡು ಪುಸ್ತಕಗಳನ್ನೂ ಕೂಡ ರಚಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ