Sign In

By signing in or creating an account, you agree with Associated Broadcasting Company's Terms & Conditions and Privacy Policy.

17,545 ಕೋಟಿ ರೂ ಕುಬೇರನ ಆಸ್ತಿ ಒಂದೇ ವರ್ಷದಲ್ಲಿ ಸೊನ್ನೆಗೆ; ಬೈಜು ರವೀಂದ್ರನ್ ಪತನದ ಕಥೆ

Byju Raveendran, from Billionaire to Zero: ಫೋರ್ಬ್ಸ್ ಬಿಲಿಯನೇರ್​ಗಳ ಪಟ್ಟಿ 2024 ನಲ್ಲಿ 25 ಭಾರತೀಯರು ಮೊದಲ ಬಾರಿಗೆ ಸೇರ್ಪಡೆಯಾಗಿದ್ದಾರೆ. ಕಳೆದ ವರ್ಷದ ಪಟ್ಟಿಯಲ್ಲಿದ್ದ ನಾಲ್ವರು ಭಾರತೀಯರು ಈ ಬಾರಿ ಹೊರಬಿದ್ದಿದ್ದಾರೆ. ಅವರ ಪೈಕಿ ಬೈಜು ರವೀಂದ್ರನ್ ಪ್ರಮುಖರು. ಹಿಂದಿನ ವರ್ಷದ ಪಟ್ಟಿಯಲ್ಲಿ 2.1 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿವಂತರಾಗಿದ್ದ ಬೈಜು ರವೀಂದ್ರನ್ ಅವರ ಆಸ್ತಿ ಈಗ ಸೊನ್ನೆಗೆ ತಲುಪಿದೆ. ಫೋರ್ಬ್ಸ್ ಪಟ್ಟಿ ಪ್ರಕಾರ ಮಹಾಪತನಗೊಂಡ ಕುಬೇರರಲ್ಲಿ ರವೀಂದ್ರನ್ ಒಬ್ಬರು.

17,545 ಕೋಟಿ ರೂ ಕುಬೇರನ ಆಸ್ತಿ ಒಂದೇ ವರ್ಷದಲ್ಲಿ ಸೊನ್ನೆಗೆ; ಬೈಜು ರವೀಂದ್ರನ್ ಪತನದ ಕಥೆ
ಬೈಜು ರವೀಂದ್ರನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 04, 2024 | 12:05 PM

ನವದೆಹಲಿ, ಏಪ್ರಿಲ್ 4: ಒಬ್ಬ ಸಾಮಾನ್ಯ ವ್ಯಕ್ತಿ ಹೇಗೆ ಎತ್ತರಕ್ಕೆ ಏರಬಲ್ಲ, ಹೇಗೆ ಎತ್ತರದಿಂದ ಕುಸಿಯಬಲ್ಲ ಎಂಬುದಕ್ಕೆ ಜೀವಂತ ಉದಾಹರಣೆ ಬೈಜು ರವೀಂದ್ರನ್. ಕೋವಿಡ್ ಕಾಲಘಟ್ಟದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ್ದ ಬೈಜುಸ್ ಸಂಸ್ಥೆಯ ಸಂಸ್ಥಾಪಕರು ಇವರು. ಎರಡು ವರ್ಷದ ಹಿಂದಷ್ಟೇ 22 ಬಿಲಿಯನ್ ಡಾಲರ್ ಮೌಲ್ಯದ ಸ್ಟಾರ್ಟಪ್ ಎನಿಸಿದ್ದ ಬೈಜುಸ್ ಇವತ್ತು ಜೀವಂತವಾಗಿರಲು ಹೆಣಗುತ್ತಿದೆ. ಭಾರತದ ಅತ್ಯಂತ ಕಿರಿಯ ವಯಸ್ಸಿನ ಬಿಲಿಯನೇರ್​ಗಳ ಸಾಲಿನಲ್ಲಿದ್ದ ಬೈಜು ರವೀಂದ್ರನ್ (Byju Raveendran) ಇವತ್ತು ಹೊಂದಿರುವ ಆಸ್ತಿ ಮೌಲ್ಯ ಶೂನ್ಯ. ಫೋರ್ಬ್ಸ್ 2024 ಇಂಡೆಕ್ಸ್​ನಲ್ಲಿ ಬೈಜು ರವೀಂದ್ರನ್ ಆಸ್ತಿಮೌಲ್ಯ (net worth) ಸೊನ್ನೆ ಇದೆ. ಹಿಂದಿನ ಪಟ್ಟಿಯಲ್ಲಿ ಇವರ ಆಸ್ತಿಮೌಲ್ಯ 17,545 ಕೋಟಿ ರೂ ಇತ್ತು. ಒಂದೇ ವರ್ಷದಲ್ಲಿ ಸಂಪೂರ್ಣ ನೆಲಕಚ್ಚಿದ್ದಾರೆ ನೋಡಿ.

2023ರ ಫೋರ್ಬ್ಸ್ ಪಟ್ಟಿಯಲ್ಲಿದ್ದ ಕುಬೇರರ ಪೈಕಿ 189 ಜನರು 2024ರ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಇದರಲ್ಲಿ ಭಾರತದ ನಾಲ್ವರಿದ್ದಾರೆ. ಈ ಪೈಕಿ ಬೈಜು ರವೀಂದ್ರನ್ ಒಬ್ಬರು. 2.1 ಬಿಲಿಯನ್ ಡಾಲರ್ ಸಂಪತ್ತಿನಿಂದ ಶೂನ್ಯಕ್ಕೆ ಇಳಿದ ಏಕೈಕ ವ್ಯಕ್ತಿ ಇವರು. ಇದಕ್ಕಿಂತ ಮುಖ್ಯವಾಗಿ ಬೈಜು ರವೀಂದ್ರನ್ ಬೇರೆ ಹಲವಾರು ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಾ ಜರ್ಝರಿತವಾಗಿ ಹೋಗಿದ್ದಾರೆ.

ಇದನ್ನೂ ಓದಿ: ಹೂಡಿಕೆಯಲ್ಲಿ ಬುದ್ಧಿವಂತ ರಾಹುಲ್ ಗಾಂಧಿ; ಎಲ್ಲೆಲ್ಲಿ ಅವರ ಇನ್ವೆಸ್ಟ್​ಮೆಂಟ್ ಇದೆ ನೋಡಿ

ಬೈಜು ರವೀಂದ್ರನ್ ತಾನೇ ಕಟ್ಟಿ ಬೆಳೆಸಿದ್ದ ಸಂಸ್ಥೆಯಿಂದ ಬಲವಂತವಾಗಿ ದೂಡಲ್ಪಡುವ ಹಂತಕ್ಕೆ ಬಂದಿದ್ದಾರೆ. ಬೈಜುಸ್​ನಲ್ಲಿ ಹೂಡಿಕೆ ಮಾಡಿದ ಸಂಸ್ಥೆಗಳು ರವೀಂದ್ರನ್ ಮತ್ತು ಅವರ ಕುಟುಂಬ ಸದಸ್ಯರನ್ನು ಬೋರ್ಡ್​ನಿಂದ ಹೊರಹಾಕಲು ಪ್ರಯತ್ನಿಸುತ್ತಿವೆ.

ಇಡಿ ವಿಚಾರಣೆ, ಅವ್ಯವಹಾರಗಳಾಗಿರುವ ಆರೋಪ, ಫೆಮಾ ನಿಯಮಗಳ ಉಲ್ಲಂಘನೆ ಆರೋಪ ಇವು ಬೈಜುಸ್ ಪತನದ ವೇಗ ಹೆಚ್ಚಿಸಿವೆ. 2022ರಲ್ಲಿ ಬ್ಲ್ಯಾಕ್​ರಾಕ್ ಸಂಸ್ಥೆ ಬೈಜುಸ್​ಗೆ 22 ಬಿಲಿಯನ್ ಡಾಲರ್ ಮೌಲ್ಯಮಾಪನ ಕೊಟ್ಟಿತ್ತು. ಆದರೆ, 2021-22ರ ಹಣಕಾಸು ವರ್ಷದಲ್ಲಿ ಬೈಜುಸ್ 1 ಬಿಲಿಯನ್ ಡಾಲರ್ ನಷ್ಟ ತೋರಿಸಿತ್ತು. ಅದಾದ ಬೆನ್ನಲ್ಲೇ ಬ್ಲ್ಯಾಕ್​ರಾಕ್ ಮರುಮೌಲ್ಯಮಾಪನ ಮಾಡಿ ಬೈಜುಸ್ ಮೌಲ್ಯವನ್ನು 1 ಬಿಲಿಯನ್ ಡಾಲರ್​ಗೆ ಇಳಿಸಿತು. ಇದು ಬೈಜುಸ್​ಗೆ ಚೇತರಿಸಿಕೊಳ್ಳಲಾಗದ ಪೆಟ್ಟು ಕೊಟ್ಟಿದ್ದು ಹೌದು.

ಇದನ್ನೂ ಓದಿ: ಭಾರತದಲ್ಲಿ ಮೊದಲ ಬಾರಿಗೆ 200 ದಾಟಿದ ಬಿಲಿಯನೇರ್​ಗಳ ಸಂಖ್ಯೆ; ಪಟ್ಟಿಗೆ ಈ ವರ್ಷ 25 ಹೊಸಬರು ಸೇರ್ಪಡೆ

ಕೋವಿಡ್ ನಂತರ ಶಾಲೆಗಳು ಪುನಾರಂಭಗೊಂಡವು. ಪರಿಣಾಮವಾಗಿ ಬೈಜುಸ್ ಟ್ಯೂಷನ್​ಗಳಿಗೆ ಬೇಡಿಕೆ ಗಣನೀಯವಾಗಿ ಕಡಿಮೆ ಆಯಿತು. ಸಾಲಗಳು ಹೆಚ್ಚಾದವು. ಸಾಲ ಕೊಟ್ಟವರು, ಬಂಡವಾಳ ಹಾಕಿದವರು ಹತಾಶರಾಗಿದ್ದಾರೆ. ಎಲ್ಲದಕ್ಕೂ ಬೈಜು ರವೀಂದ್ರನ್ ಅವರ ಅಸಮರ್ಪಕ ಆಡಳಿತ ನಿರ್ವಹಣೆ ಕಾರಣ ಎಂಬುದು ಹೂಡಿಕೆದಾರರ ಅನಿಸಿಕೆ. ಹೀಗಾಗಿ, ಅವರನ್ನು ಹೊರಗಿಟ್ಟು ಹೊಸ ಆಡಳಿತ ತರಲು ಹೂಡಿಕೆದಾರರು ಪ್ರಯತ್ನಿಸುತ್ತಿದ್ದಾರೆ. ಆದರೆ, ತಾನೇ ಕಟ್ಟಿದ ಸಂಸ್ಥೆಯನ್ನು ಬಿಡಲು ರವೀಂದ್ರನ್ ಸಿದ್ದರಿಲ್ಲ. ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಬೇಕು: ಸಿದ್ದರಾಮಯ್ಯ
ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಬೇಕು: ಸಿದ್ದರಾಮಯ್ಯ
ಭೂಮಾಪನ ಇಲಾಖೆಯಲ್ಲಾದ ಬದಲಾವಣೆಗಳ ಕ್ರೆಡಿಟ್ ಮುಖ್ಯಮಂತ್ರಿಗೆ
ಭೂಮಾಪನ ಇಲಾಖೆಯಲ್ಲಾದ ಬದಲಾವಣೆಗಳ ಕ್ರೆಡಿಟ್ ಮುಖ್ಯಮಂತ್ರಿಗೆ
ಚುನಾವಣೆ ಹತ್ತಿರದಲ್ಲಿಲ್ಲ, ದಗಿಮಿಕ್ ಮಾಡ್ತಿಲ್ಲ; ಉಡುಪಿಯಲ್ಲಿ ವಿಜಯೇಂದ್ರ
ಚುನಾವಣೆ ಹತ್ತಿರದಲ್ಲಿಲ್ಲ, ದಗಿಮಿಕ್ ಮಾಡ್ತಿಲ್ಲ; ಉಡುಪಿಯಲ್ಲಿ ವಿಜಯೇಂದ್ರ
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ಲೈವ್​ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
ಲೈವ್​ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ತುಮಕೂರು ಜಿಲ್ಲೆ ನೀರಿನ ಯೋಜನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ ಪರಮೇಶ್ವರ್
ತುಮಕೂರು ಜಿಲ್ಲೆ ನೀರಿನ ಯೋಜನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ ಪರಮೇಶ್ವರ್
ಕಾಂಗ್ರೆಸ್ ಅಧಿಕಾರದಲ್ಲಿ 50 ವಸ್ತುಗಳ ಬೆಲೆ ಜಾಸ್ತಿಯಾಗಿದೆ: ಹಿರಿಯ ನಾಗರಿಕ
ಕಾಂಗ್ರೆಸ್ ಅಧಿಕಾರದಲ್ಲಿ 50 ವಸ್ತುಗಳ ಬೆಲೆ ಜಾಸ್ತಿಯಾಗಿದೆ: ಹಿರಿಯ ನಾಗರಿಕ