ಬೈಜುಸ್ ಮಾಲೀಕರ ಭರ್ಜರಿ ಅಸ್ತ್ರ; ಹೂಡಿಕೆದಾರರಿಗೆ ಮಾಡು ಇಲ್ಲ ಮಡಿ ಸ್ಥಿತಿ?

Byjus vs Investors: ಬೈಜುಸ್ ತನ್ನ ಅಧಿಕೃತ ಷೇರು ಹೆಚ್ಚಳಕ್ಕೆ ಇಜಿಎಂ ಸಭೆಯಲ್ಲಿ ಸಮ್ಮತಿ ಸಿಕ್ಕಿದೆ. ಅದರ ರೈಟ್ಸ್ ಇಷ್ಯೂ ಪ್ರಸ್ತಾಪಕ್ಕೆ ಶೇ. 50ಕ್ಕೂ ಹೆಚ್ಚು ಷೇರುದಾರರಿಂದ ವೋಟಿಂಗ್ ಮೂಲಕ ಒಪ್ಪಿಗೆ ಸಿಕ್ಕಿದೆ. ಬೈಜುಸ್​ನ ಗರಿಷ್ಠ ಮೌಲ್ಯದ ಶೇ. 99ರಷ್ಟು ರಿಯಾಯಿತಿ ದರದಲ್ಲಿ ರೈಟ್ಸ್ ಇಷ್ಯೂ ಆಫರ್ ಮಾಡಲಾಗಿದೆ. ಹಾಲಿ ಇರುವ ಷೇರುದಾರರು ತಮ್ಮ ಷೇರುಪಾಲಿನ ಸಂಖ್ಯೆಯನ್ನು ಉಳಿಸಿಕೊಳ್ಳಬೇಕಾದರೆ ಹೆಚ್ಚುವರಿ ಷೇರು ಖರೀದಿಸುವುದು ಅನಿವಾರ್ಯ. ಇಲ್ಲದಿದ್ದರೆ ಅವರ ಷೇರುಪಾಲು ಕುಸಿಯುತ್ತದೆ.

ಬೈಜುಸ್ ಮಾಲೀಕರ ಭರ್ಜರಿ ಅಸ್ತ್ರ; ಹೂಡಿಕೆದಾರರಿಗೆ ಮಾಡು ಇಲ್ಲ ಮಡಿ ಸ್ಥಿತಿ?
ಬೈಜುಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 29, 2024 | 2:30 PM

ನವದೆಹಲಿ, ಮಾರ್ಚ್ 29: ಬೈಜುಸ್​ನ ಮಾಲೀಕರು ಮತ್ತು ಹೂಡಿಕೆದಾರರ ಮಧ್ಯೆ ನಡೆಯುತ್ತಿರುವ ಜಂಗೀ ಕುಸ್ತಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ರೈಟ್ಸ್ ಇಷ್ಯೂ ಎಂಬ ಅಸ್ತ್ರ ಬಿಟ್ಟು ಹೂಡಿಕೆದಾರರನ್ನು ಅಡಕತ್ತರಿಗೆ ಸಿಲುಕಿಸಿದ್ದಾರೆ ಬೈಜುಸ್ ಸಿಇಒ ಬೈಜು ರವೀಂದ್ರನ್. ಹೂಡಿಕೆದಾರರು ಈಗ ಬೈಜುಸ್​ಗೆ ಫಂಡಿಂಗ್ ಮಾಡದಿದ್ದರೆ ತಮ್ಮ ಷೇರುಪಾಲು ನಗಣ್ಯ ಮಟ್ಟಕ್ಕೆ ಕುಸಿಯುವುದನ್ನು ನೋಡಬೇಕಾಗುತ್ತದೆ. ಆ ಮಟ್ಟಿಗೆ ಇದು ಚೆಸ್ ಆಟದಂತೆ ಮುಂದುವರಿಯುತ್ತಿದೆ. 200 ಮಿಲಿಯನ್ ಡಾಲರ್ ಮೊತ್ತಕ್ಕೆ ಹೆಚ್ಚುವರಿ ಷೇರು ಹಂಚಿಕೆಗೆ ಬೇಕಾದ ಅಧಿಕೃತ ಷೇರು ಬಂಡವಾಳವನ್ನು (Authorised share capital) ಹೆಚ್ಚಿಸಲು ಇಜಿಎಂ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಪಾಲ್ಗೊಂಡಿದ್ದ ಯಾವ ಹೂಡಿಕೆದಾರರು ತಕರಾರು ಎತ್ತಲಿಲ್ಲ.

ಹೆಚ್ಚುವರಿ ಷೇರುಗಳ ವಿತರಣೆಗೆ (Rights Issue) ಅನುಮತಿಸಲು ಮಾರ್ಚ್ 7ರಂದು ಅಂಚೆ ಮೂಲಕ ಮತದಾನ ಘೋಷಿಸಲಾಗಿತ್ತು. ಇದರಲ್ಲಿ ಅನುಮತಿ ನೀಡಿ ಶೇ. 50ಕ್ಕಿಂತಲೂ ಹೆಚ್ಚು ವೋಟುಗಳು ಬಂದಿರುವ ವಿಷಯವನ್ನು ಬೈಜು ರವೀಂದ್ರನ್ ಅವರು ಎಲ್ಲಾ ಷೇರುದಾರರಿಗೂ ತಿಳಿಸಿದ್ದಾರೆ. ಈ ವೋಟಿಂಗ್​ನ ಅಂತಿಮ ಫಲಿತಾಂಶ ಏಪ್ರಿಲ್ 6ರಂದು ಗೊತ್ತಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಅದಾನಿ ಅಡ್ಡಾಗೆ ಅಂಬಾನಿ ಎಂಟ್ರಿ; 50 ಕೋಟಿ ರೂಗೆ ಪವರ್ ಕಂಪನಿಯ ಶೇ. 26 ಪಾಲು ಪಡೆದ ರಿಲಾಯನ್ಸ್

ಶೇ. 99ರಷ್ಟು ರಿಯಾಯಿತಿಯಲ್ಲಿ ಹೆಚ್ಚುವರಿ ಷೇರು

ಬೈಜೂಸ್ ಸಂಸ್ಥೆಯ ಗರಿಷ್ಠ ಮೌಲ್ಯದ ಶೇ. 99ರಷ್ಟು ರಿಯಾಯಿತಿ ದರದಲ್ಲಿ ರೈಟ್ಸ್ ಇಷ್ಯೂ ಆಫರ್ ಮಾಡಿದೆ. 2022ರಲ್ಲಿ ಬೈಜುಸ್ 22 ಬಿಲಿಯನ್ ಡಾಲರ್ ಮೌಲ್ಯ ಪಡೆದಿತ್ತು.

ರೈಟ್ಸ್ ಇಷ್ಯೂ ಮಾಡುವುದೆಂದರೆ, ಹಾಲಿ ಇರುವ ಷೇರುದಾರರಿಗೆ ಕಡಿಮೆ ಬೆಲೆಗೆ ಹೆಚ್ಚುವರಿ ಷೇರುಗಳನ್ನು ಖರೀದಿಸುವ ಅವಕಾಶ ಕಲ್ಪಿಸುವುದು. ಇದು ಕಂಪನಿಯು ಹೆಚ್ಚುವರಿ ಬಂಡವಾಳ ಸಂಗ್ರಹಿಸುವ ಒಂದು ವಿಧಾನ.

ಬೈಜುಸ್​ನಲ್ಲಿ ಅದರ ಸಂಸ್ಥಾಪಕರು ಹಾಗೂ ಅವರ ಕುಟುಂಬದ ಸದಸ್ಯರ ಒಟ್ಟು ಷೇರುಪಾಲು ಶೇ. 26.30ರಷ್ಟಿದೆ. ಪ್ರೋಸಸ್, ಪೀಕ್ ಎಕ್ಸ್​ವಿ ಪಾರ್ಟ್ನರ್ಸ್, ಜನರಲ್ ಅಟ್ಲಾಂಟಿಕ್, ಸೋಫಿನಾ ಸಂಸ್ಥೆಗಳು ತಲಾ ಶೇ. 5ಕ್ಕಿಂತಲೂ ಹೆಚ್ಚು ಷೇರುಪಾಲು ಹೊಂದಿವೆ. ಚಾನ್ ಜುಕರ್​ಬರ್ಗ್ ಇನಿಷಿಯೇಟಿವ್, ಟೈಗರ್ ಗ್ಲೋಬಲ್, ಇಸೋಪ್, ಓಲ್ ವೆಂಚರ್ಸ್ ಮೊದಲಾದ ಹೂಡಿಕೆ ಸಂಸ್ಥೆಗಳು ಪ್ರಮುಖ ಷೇರುಪಾಲು ಹೊಂದಿವೆ. ಇತರ ಸಣ್ಣ ಹೂಡಿಕೆದಾರರು ಹೊಂದಿರುವ ಷೇರುಪ್ರಮಾಣ ಶೇ. 36.10ರಷ್ಟಿದೆ.

ಇದನ್ನೂ ಓದಿ: ನಮ್ಮನ್ನು ಕೆಲಸದಿಂದ ತೆಗೆದು ಕಡಿಮೆ ಸಂಬಳಕ್ಕೆ ಭಾರತೀಯರನ್ನು ಕರೆಸಲಾಗುತ್ತಿದೆ: ಟಿಸಿಎಸ್ ಮೇಲೆ ಉರಿದುಬೀಳುತ್ತಿರುವ ಅಮೆರಿಕನ್ನರು

ಈಗ ಬೈಜುಸ್ ವಿರುದ್ಧ ಸೆಟೆದು ನಿಂತಿರುವ ಹೂಡಿಕೆದಾರರಲ್ಲಿ ಪ್ರಮುಖವಾದವು ಪ್ರೋಸಸ್, ಪೀಕ್ ಎಕ್ಸ್​ವಿ ಪಾರ್ಟ್ನರ್ಸ್. ಪ್ರೋಸಸ್ ತನ್ನ ಶೇ. 9ರಷ್ಟು ಷೇರುಪಾಲನ್ನು ಉಳಿಸಿಕೊಳ್ಳಬೇಕಾದರೆ 18 ಮಿಲಿಯನ್ ಡಾಲರ್ ಹೂಡಿಕೆ ಮಾಡಬೇಕಾಗುತ್ತದೆ. ಒಂದು ವೇಳೆ ಹೆಚ್ಚುವರಿ ಷೇರು ಖರೀದಿಸದೇ ಹೋದರೆ, ಒಟ್ಟಾರೆ ಹೆಚ್ಚಾಗುವ ಷೇರು ಮೊತ್ತದಲ್ಲಿ ಅದರ ಷೇರುಪಾಲು ಕುಂಠಿತಗೊಳ್ಳುತ್ತದೆ.

ಹಾಗೆಯೇ, ಪೀಕ್ ಎಕ್ಸ್​ವಿ ಪಾರ್ಟ್ನರ್ಸ್ (Peak XV Partners) ಸಂಸ್ಥೆ ಬೈಜುಸ್​ನಲ್ಲಿರುವ ತನ್ನ ಷೇರುಪಾಲನ್ನು ಉಳಿಸಿಕೊಳ್ಳಲು 14 ಮಿಲಿಯನ್ ಡಾಲರ್​ಗೆ ಹೆಚ್ಚುವರಿ ಷೇರುಗಳನ್ನು ಖರೀದಿಸುವುದು ಅನಿವಾರ್ಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ