Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಬಾರಿಗೆ ಮೈಸೂರಿನ ಉದ್ಯಮಿ ರಮೇಶ್​ಗೆ ಸ್ಥಾನ; ಚಂದ್ರಯಾನಕ್ಕೆ ಕೊಡುಗೆ ಕೊಟ್ಟಿದ್ದರ ಫಲಶ್ರುತಿ

Mysore businessman Ramesh Kunhikannan first time billionaire: ಮೈಸೂರಿನ ಉದ್ಯಮಿ ರಮೇಶ್ ಕುಂಞಕಣ್ಣನ್ ಅವರು ಇದೇ ಮೊದಲ ಬಾರಿಗೆ ಫೋರ್ಬ್ಸ್ ಬಿಲಿಯನೇರ್​ಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ರಮೇಶ್ ಅವರು ಮೈಸೂರಿನಲ್ಲಿ ಮುಖ್ಯಕಚೇರಿ ಹೊಂದಿರುವ ಕೇನಸ್ ಟೆಕ್ನಾಲಜೀಸ್ ಇಂಡಿಯಾ ಕಂಪನಿಯ ಸಂಸ್ಥಾಪಕರು ಮತ್ತು ಎಂಡಿ ಆಗಿದ್ದಾರೆ. ಕಳೆದ ವರ್ಷ ಯಶಸ್ವಿಯಾಗಿ ನಡೆದ ಮೂರನೇ ಚಂದ್ರಯಾನ ಯೋಜನೆಗೆ ಕೇನಸ್ ಟೆಕ್ನಾಲಜೀಸ್ ಕೊಡುಗೆ ನೀಡಿತ್ತು. ಅದಾದ ಬಳಿಕ ಕಂಪನಿಯ ಷೇರು ಸಾಕಷ್ಟು ಬೇಡಿಕೆ ಪಡೆದಿದೆ. ಪರಿಣಾಮವಾಗಿ ಕಂಪನಿ ಮತ್ತು ರಮೇಶ್ ಅವರ ಮಾರುಕಟ್ಟೆ ಸಂಪತ್ತು ಗಣನೀಯವಾಗಿ ಹೆಚ್ಚಾಗಿದೆ.

ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಬಾರಿಗೆ ಮೈಸೂರಿನ ಉದ್ಯಮಿ ರಮೇಶ್​ಗೆ ಸ್ಥಾನ; ಚಂದ್ರಯಾನಕ್ಕೆ ಕೊಡುಗೆ ಕೊಟ್ಟಿದ್ದರ ಫಲಶ್ರುತಿ
ರಮೇಶ್ ಕುನ್ಹಿಕಣ್ಣನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 05, 2024 | 3:05 PM

ಬೆಂಗಳೂರು, ಏಪ್ರಿಲ್ 5: ಮೈಸೂರಿನ ಕೇನೆಸ್ ಟೆಕ್ನಾಲಜಿ (Kaynes technology India) ಸಂಸ್ಥೆಯ ಎಂಡಿ ಮತ್ತು ಸಂಸ್ಥಾಪಕ ರಮೇಶ್ ಕುಂಞಕಣ್ಣನ್ (Ramesh Kunhikannan) ಅವರು ಫೋರ್ಬ್ಸ್​ನ ಬಿಲಿಯನೇರ್​ಗಳ ಪಟ್ಟಿಗೆ (Forbes Billionaires Index) ಸೇರ್ಪಡೆಯಾಗಿದ್ದಾರೆ. 2024ರ ಸಾಲಿನ ಫೋರ್ಬ್ಸ್ ಇಂಡೆಕ್ಸ್​ನಲ್ಲಿ ಮೊದಲ ಬಾರಿಗೆ ಸೇರ್ಪಡೆಯಾದ 25 ಭಾರತೀಯ ಬಿಲಿಯನೇರ್​ಗಳಲ್ಲಿ ರಮೇಶ್ ಕೂಡ ಒಬ್ಬರು. ಜೆಫ್ ಬೇಜೋಸ್, ಇಲಾನ್ ಮಸ್ಕ್, ಅಂಬಾನಿ, ಅದಾನಿ ಮೊದಲಾದ ದಿಗ್ಗಜರ ಸಾಲಿನಲ್ಲಿ ಇವರೂ ಇದ್ದಂತಾಗಿದೆ. ಫೋರ್ಬ್ಸ್ ಪ್ರಕಾರ ರಮೇಶ್ ಕುನ್ಹಿಕಣ್ಣನ್ ಅವರ ಆಸ್ತಿಮೌಲ್ಯ 1.2 ಬಿಲಿಯನ್ ಡಾಲರ್ ಇದೆ. ಅಂದರೆ, ಸುಮಾರು 10,000 ಕೋಟಿ ರೂ ಮೊತ್ತದ ಶ್ರೀಮಂತರು ಅವರು.

ರಮೇಶ್ ಕುನ್ಹಿಕಣ್ಣನ್ ಬಿಲಿಯನೇರ್ ಆಗಲು ಚಂದ್ರಯಾನ ಕಾರಣ?

2023ರಲ್ಲಿ ಭಾರತದ ಚಂದ್ರಯಾನ-3 ಯೋಜನೆ ಯಶಸ್ವಿಯಾಗಿತ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿದ ಮೊದಲ ದೇಶ ಭಾರತವಾಗಿದೆ. ಈ ಮೂರನೇ ಚಂದ್ರಯಾನ ಯೋಜನೆಯನ್ನು ಇಸ್ರೋ ಕೈಗೊಂಡಿತಾದರೂ ಬಹಳಷ್ಟು ಕಂಪನಿಗಳು ಒಂದಿಲ್ಲೊಂದು ರೀತಿಯಲ್ಲಿ ಇದಕ್ಕೆ ಕೊಡುಗೆ ನೀಡಿದ್ದವು. ಅದರಲ್ಲಿ ಕೇನಸ್ ಟೆಕ್ನಾಲಜಿ ಪ್ರಮುಖವಾದುದು.

ಇದನ್ನೂ ಓದಿ: 17,545 ಕೋಟಿ ರೂ ಕುಬೇರನ ಆಸ್ತಿ ಒಂದೇ ವರ್ಷದಲ್ಲಿ ಸೊನ್ನೆಗೆ; ಬೈಜು ರವೀಂದ್ರನ್ ಪತನದ ಕಥೆ

ಚಂದ್ರಯಾನದ ಲ್ಯಾಂಡರ್ ಮತ್ತು ರೋವರ್​ಗೆ ಪವರ್ ಸಿಸ್ಟಂಗಳನ್ನು ಕೊಟ್ಟಿದ್ದು ರಮೇಶ್ ಅವರ ಕಂಪನಿಯೇ. ಚಂದ್ರಯಾನ ಯಶಸ್ವಿಯಾಗುತ್ತಿದ್ದಂತೆಯೇ ಕೇನಸ್ ಸೇರಿದಂತೆ ಆ ಯೋಜನೆಗೆ ಕೊಡುಗೆ ನೀಡಿದ ವಿವಿಧ ಸಂಸ್ಥೆಗಳು ಸಾಕಷ್ಟು ಜನರ ಗಮನ ಸೆಳೆದವು. ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಕೇನಸ್ ಟೆಕ್ನಾಲಜೀಸ್ 2022ರ ನವೆಂಬರ್ ತಿಂಗಳಲ್ಲಿ 745 ರೂ ಷೇರುಬೆಲೆ ಹೊಂದಿತ್ತು. ಚಂದ್ರಯಾನ-3 ಯಶಸ್ವಿಯಾದ ಬಳಿಕ ಅದರ ಷೇರುಗಳಿಗೆ ಬೇಡಿಕೆ ಹೆಚ್ಚಾಗತೊಡಗಿತ್ತು. 2023ರ ಆಗಸ್ಟ್​ನಲ್ಲಿ 1,719 ರೂ ಇದ್ದ ಅದರ ಷೇರುಬೆಲೆ 2024ರ ಏಪ್ರಿಲ್ ತಿಂಗಳಲ್ಲಿ 2,800 ರೂ ಮೈಲಿಗಲ್ಲು ದಾಟಿದೆ.

ಕೇನಸ್ ಟೆಕ್ನಾಲಜೀಸ್​ನ ಮಾರುಕಟ್ಟೆ ಮೌಲ್ಯ 17,000 ಕೋಟಿ ರೂ ಇದೆ. ಈ ಕಂಪನಿಯಲ್ಲಿ ರಮೇಶ್ ಕುಂಞಕಣ್ಣನ್ ಅವರು ವೈಯಕ್ತಿಕವಾಗಿ ಶೇ. 64ರಷ್ಟು ಷೇರುಪಾಲು ಹೊಂದಿದ್ದಾರೆ. ಈ ಆಧಾರದಲ್ಲಿ ಅವರ ಆಸ್ತಿಮೌಲ್ಯ 1 ಬಿಲಿಯನ್ ಡಾಲರ್​ಗಿಂತಲೂ ಹೆಚ್ಚಿದೆ.

ಇದನ್ನೂ ಓದಿ: ಭಾರತದಲ್ಲಿ ಮೊದಲ ಬಾರಿಗೆ 200 ದಾಟಿದ ಬಿಲಿಯನೇರ್​ಗಳ ಸಂಖ್ಯೆ; ಪಟ್ಟಿಗೆ ಈ ವರ್ಷ 25 ಹೊಸಬರು ಸೇರ್ಪಡೆ

ಕೇನಸ್ ಟೆಕ್ನಾಲಜೀಸ್ ಇಂಡಿಯಾ ಕಂಪನಿ ಶುರುವಾಗಿ 36 ವರ್ಷ ಆಗಿದೆ. ಎಲೆಕ್ಟ್ರಾನಿಕ್ ಸಿಸ್ಟಂ ಮತ್ತು ಡಿಸೈನ್ ಸೇವೆಗಳನ್ನು ಅದು ಒದಗಿಸುತ್ತದೆ. ಎಲೆಕ್ಟ್ರಿಕ್ ವಾಹನಗಳು, ರೈಲ್ವೆ ಸಿಗ್ನಲ್ ಮೊದಲಾದವುಗಳಿಗೆ ಎಲೆಕ್ಟ್ರಾನಿಕ್ ಕಂಟ್ರೋಲ್​ಗೆ ಕೇನಸ್ ಟೆಕ್ನಾಲಜೀಸ್ ಉತ್ಪನ್ನಗಳು ಬಳಕೆ ಆಗುತ್ತವೆ. ಆಟೊಮೊಬೈಲ್, ಏರೋಸ್ಪೇಸ್, ವೈದ್ಯಕೀಯ ಮತ್ತು ಡಿಫೆನ್ಸ್ ಕ್ಷೇತ್ರಗಳಲ್ಲಿ ಅದರ ಮಾರುಕಟ್ಟೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:58 pm, Fri, 5 April 24

ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು?
ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು?
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ
ಬನಶಂಕರಿ ದೇವಿ ಸನ್ನಿಧಿಯಲ್ಲಿ ಪವಿತ್ರಾ ಗೌಡ, ಇಲ್ಲಿದೆ ವಿಡಿಯೋ
ಬನಶಂಕರಿ ದೇವಿ ಸನ್ನಿಧಿಯಲ್ಲಿ ಪವಿತ್ರಾ ಗೌಡ, ಇಲ್ಲಿದೆ ವಿಡಿಯೋ
ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ
ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ
ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!
ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!
ಬಿಜೆಪಿಯ ರಾಜಕೀಯ ಪಿತೂರಿ; ಇಡಿ ಸಮನ್ಸ್ ಬಳಿಕ ರಾಬರ್ಟ್ ವಾದ್ರಾ ಆರೋಪ
ಬಿಜೆಪಿಯ ರಾಜಕೀಯ ಪಿತೂರಿ; ಇಡಿ ಸಮನ್ಸ್ ಬಳಿಕ ರಾಬರ್ಟ್ ವಾದ್ರಾ ಆರೋಪ