AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಪಿಐ ಬಳಸಿ ಕ್ಯಾಷ್ ಡೆಪಾಸಿಟ್; ಪಿಪಿಐನಿಂದ ಹಣ ಪಾವತಿಸಲು ಥರ್ಡ್ ಪಾರ್ಟಿ ಯುಪಿಐ ಆ್ಯಪ್ ಬಳಕೆ; ಇಲ್ಲಿದೆ ಆರ್​ಬಿಐ ಘೋಷಣೆಗಳು

UPI in Cash deposit machines: ಕ್ಯಾಷ್ ಡೆಪಾಸಿಟ್ ಯಂತ್ರಗಳಲ್ಲಿ ಎಟಿಎಂ ಕಾರ್ಡ್ ಬಳಸದೆಯೇ ಯುಪಿಐ ಮೂಲಕ ಕ್ಯಾಷ್ ಡೆಪಾಸಿಟ್ ಮಾಡುವ ಅವಕಾಶವನ್ನು ಕಲ್ಪಿಸಲಾಗುತ್ತಿದೆ. ಆರ್​ಬಿಐ ಗವರ್ನರ್ ಶಕ್ತಿಕಾಂತದಾಸ್ ಎಂಪಿಸಿ ಸಭೆ ಬಳಿಕ ಈ ಸೌಲಭ್ಯವನ್ನು ಘೋಷಿಸಿದ್ದಾರೆ. ಗವರ್ನ್ಮೆಂಟ್ ಸೆಕ್ಯೂರಿಟಿಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ರೂಪಿಸಲಾಗಿರುವ ರೀಟೇಲ್ ಡೈರೆಕ್ಟ್ ಸ್ಕೀಮ್​ನಲ್ಲಿ ಹಾಲಿ ಇರುವ ಪೋರ್ಟಲ್ ಜೊತೆಗೆ ಮೊಬೈಲ್ ಆ್ಯಪನ್ನೂ ಬಿಡುಗಡೆ ಮಾಡಲಾಗಿದೆ.rbi mpc meeting, rbi governor shaktikanta das, upi latest news update, cash deposit machine, ಯುಪಿಐ, ಆರ್​ಬಿಐ ಎಂಪಿಸಿ ಸಭೆ, ಕ್ಯಾಷ್ ಡೆಪಾಸಿಟ್ ಮೆಷಿನ್, ಸಿಡಿಎಂ,

ಯುಪಿಐ ಬಳಸಿ ಕ್ಯಾಷ್ ಡೆಪಾಸಿಟ್; ಪಿಪಿಐನಿಂದ ಹಣ ಪಾವತಿಸಲು ಥರ್ಡ್ ಪಾರ್ಟಿ ಯುಪಿಐ ಆ್ಯಪ್ ಬಳಕೆ; ಇಲ್ಲಿದೆ ಆರ್​ಬಿಐ ಘೋಷಣೆಗಳು
ಎಟಿಎಂ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 05, 2024 | 12:38 PM

Share

ನವದೆಹಲಿ, ಏಪ್ರಿಲ್ 5: ಯುಪಿಐ ಮೂಲಕ ಕೆಲ ಎಟಿಎಂಗಳಲ್ಲಿ ಹಣ ವಿತ್​ಡ್ರಾ ಮಾಡುವ ಅವಕಾಶ ಪಡೆದಿದ್ದೇವೆ. ಅದೇ ರೀತಿ, ಯುಪಿಐ ಬಳಸಿ ಕ್ಯಾಷ್ ಡೆಪಾಸಿಟ್ (cash deposit through UPI) ಮಾಡುವ ಅವಕಾಶವೂ ಸಿಕ್ಕಿದೆ. ಎಂಪಿಸಿ ಸಭೆ ಬಳಿಕ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ಸೌಲಭ್ಯವನ್ನು ಘೋಷಿಸಿದ್ದಾರೆ. ಕ್ಯಾಷ್ ಡೆಪಾಸಿಟ್ ಮೆಷಿನ್​ಗಳಲ್ಲಿ (ಸಿಡಿಎಂ) ಎಟಿಎಂ ಕಾರ್ಡ್ ಬಳಸಿ ನೀವು ನಿಮ್ಮ ಖಾತೆಗೆ ಕ್ಯಾಷ್ ಡೆಪಾಸಿಟ್ ಮಾಡಬಹುದು. ಈಗ ಇದರ ಜೊತೆಗೆ ಯುಪಿಐ ಮೂಲಕ ಈ ಮೆಷಿನ್​ಗಳಿಗೆ ಲಾಗಿನ್ ಆಗಿ ಕ್ಯಾಷ್ ಡೆಪಾಸಿಟ್ ಮಾಡಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ಅಥವಾ ಮಾರ್ಗಸೂಚಿಯನ್ನು ಆರ್​ಬಿಐ ಸದ್ಯದಲ್ಲೇ ಬಹಿರಂಗಪಡಿಸಲಿದೆ.

ಸಿಡಿಎಂ ಬಳಕೆಯನ್ನು ಜನಪ್ರಿಯಗೊಳಿಸಲು ಆರ್​ಬಿಐ ಈ ಕ್ರಮ ಜಾರಿ ಮಾಡಿರುವ ಸಾಧ್ಯತೆ ಇದೆ. ಬ್ಯಾಂಕ್ ಕಚೇರಿಗಳಲ್ಲಿ ನೀವು ಕ್ಯಾಷ್ ಡೆಪಾಸಿಟ್ ಮೆಷಿನ್​ಗಳನ್ನು ಕಾಣಬಹುದು. ಕೆಲ ನಿರ್ದಿಷ್ಟ ಎಟಿಎಂ ಸೆಂಟರ್​ಗಳಲ್ಲೂ ಸಿಡಿಎಂಗಳಿರುತ್ತವೆ. ಇದರಿಂದ ಬ್ಯಾಂಕುಗಳಲ್ಲಿ ಸರದಿಯಲ್ಲಿ ನಿಂತು ಕ್ಯಾಷ್ ಡೆಪಾಸಿಟ್ ಮಾಡುವಾಗ ಸಮಯ ವ್ಯಯ ಆಗುವುದನ್ನು ಸಿಡಿಎಂ ಮೂಲಕ ತಪ್ಪಿಸಬಹುದು. ಬ್ಯಾಂಕ್ ಕಚೇರಿ ಬಾಗಿಲು ಹಾಕಿದರೂ ಈ ಸಿಡಿಎಂಗಳು ತೆರೆದಿರುತ್ತವೆ. ಇದರಿಂದ ಗ್ರಾಹಕರಿಗೆ ಅನುಕೂಲ ಆಗುತ್ತದೆ.

ಇದನ್ನೂ ಓದಿ: ರೆಪೋ ದರದಲ್ಲಿ ಬದಲಾವಣೆ ಇಲ್ಲ; ಶೇ. 6.5ರ ಬಡ್ಡಿದರ ಮುಂದುವರಿಕೆ

ಆರ್​ಬಿಐನಿಂದ ಇತರ ಸ್ಕೀಮ್​ಗಳ ಘೋಷಣೆ

ಇಂಟರ್ನ್ಯಾಷನಲ್ ಫೈನಾನ್ಷಿಯಲ್ ಸರ್ವಿಸಸ್ ಸೆಂಟರ್​ನಲ್ಲಿ (ಐಎಫ್​ಎಸ್​ಸಿ) ಸಾವರೀನ್ ಗೋಲ್ಡ್ ಬಾಂಡ್​ಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಸ್ಕೀಮ್ ಆರಂಭಿಸಲಾಗುತ್ತಿದೆ.

ರೀಟೇಲ್ ಡೈರೆಕ್ಟ್ ಸ್ಕೀಮ್: ಮೊಬೈಲ್ ಆ್ಯಪ್

ಗವರ್ನ್ಮೆಂಟ್ ಸೆಕ್ಯೂರಿಟಿಗಳಲ್ಲಿ ರೀಟೇಲ್ ಹೂಡಿಕೆದಾರರು ಹೂಡಿಕೆ ಮಾಡಲು ರೀಟೇಲ್ ಡೈರೆಕ್ಟ್ ಸ್ಕೀಮ್ ಅನ್ನು 2020ರಲ್ಲಿ ಆರಂಭಿಸಲಾಗಿದೆ. ಇದರ ಅಧಿಕೃತ ಪೋರ್ಟಲ್ ಇದೆ. ಇದೀಗ ಮೊಬೈಲ್ ಆ್ಯಪನ್ನೂ ಆರ್​ಬಿಐ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಆರ್​ಬಿಐನ ರೀಟೇಲ್ ಡೈರೆಕ್ಟ್ ಸ್ಕೀಮ್​ಗಾಗಿ ಮೊಬೈಲ್ ಆ್ಯಪ್ ಬಿಡುಗಡೆ; ಏನಿದು ಸ್ಕೀಮ್, ಇಲ್ಲಿದೆ ಡೀಟೇಲ್ಸ್

ಥರ್ಡ್ ಪಾರ್ಟಿ ಆ್ಯಪ್ ಮೂಲಕ ಪಿಪಿಐನಿಂದ ಯುಪಿಐ ಪಾವತಿ

ಪೇಟಿಎಂ, ಫೋನ್​ಪೆ ಇತ್ಯಾದಿ ಪ್ರೀಪೇಡ್ ಪೆಮೆಂಟ್ ಇನ್ಸ್​ಟ್ರುಮೆಂಟ್ಸ್​ನಿಂದ (ಪಿಪಿಐ) ಯುಪಿಐ ಪಾವತಿ ಮಾಡಬೇಕಾದರೆ ಆ ಪಿಪಿಐಗಳ ಪ್ಲಾಟ್​ಫಾರ್ಮ್ ಅನ್ನು ಬಳಸಬೇಕಾಗುತ್ತದೆ. ಇದೀಗ ಥರ್ಡ್ ಪಾರ್ಟಿ ಯುಪಿಐ ಆ್ಯಪ್​ಗಳನ್ನು ಇದಕ್ಕಾಗಿ ಬಳಸಲು ಅವಕಾಶ ಕೊಡಲು ಆರ್​ಬಿಐ ನಿರ್ಧರಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು