Sign In

By signing in or creating an account, you agree with Associated Broadcasting Company's Terms & Conditions and Privacy Policy.

RBI: ಬಡ್ಡಿ ದರ ಹೆಚ್ಚಳವಾಗುತ್ತಾ? ಆರ್​ಬಿಐನ 3 ದಿನಗಳ ಎಂಪಿಸಿ ಸಭೆ ಬಳಿಕ ತೀರ್ಮಾನ; ತಜ್ಞರಿಂದ ಯಥಾಸ್ಥಿತಿ ನಿರೀಕ್ಷೆ

Reserve Bank of India MPC Meet: ರಿಸರ್ವ್ ಬ್ಯಾಂಕ್ ಈ ಬಾರಿ ಬಡ್ಡಿ ದರ ಹೆಚ್ಚಿಸುವ ನಿರ್ಧಾರಕ್ಕೆ ಕೈಹಾಕುವ ಸಾಧ್ಯತೆ ಕಡಿಮೆ ಎಂದು ವಿವಿಧ ಹಣಕಾಸು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತದಲ್ಲಿ ಸದ್ಯ ರೆಪೋ ದರ ಶೇ. 6.5 ಇದೆ.

RBI: ಬಡ್ಡಿ ದರ ಹೆಚ್ಚಳವಾಗುತ್ತಾ? ಆರ್​ಬಿಐನ 3 ದಿನಗಳ ಎಂಪಿಸಿ ಸಭೆ ಬಳಿಕ ತೀರ್ಮಾನ; ತಜ್ಞರಿಂದ ಯಥಾಸ್ಥಿತಿ ನಿರೀಕ್ಷೆ
ಆರ್​ಬಿಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 05, 2023 | 1:57 PM

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್​ನ ಹಣಕಾಸು ನೀತಿ ಸಮಿತಿ (MPC- Monetary Policy Committee) ನಾಳೆ ಜೂನ್ 6ರಿಂದ ಮೂರು ದಿನಗಳ ಕಾಲ ಸಭೆ ನಡೆಸಲಿದೆ. ಈ ವೇಳೆ ದೇಶದ ಆರ್ಥಿಕ ಮತ್ತು ಹಣಕಾಸು ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ 3 ತಿಂಗಳಿಗೆ ನೀತಿ ರೂಪಿಸುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದೆ. ಜನಸಾಮಾನ್ಯರಿಗೆ ಈ ಎಂಪಿಸಿ ಸಭೆಯಲ್ಲಿ ಇರುವ ಪ್ರಮುಖ ಕುತೂಹಲವೆಂದರೆ ಅದು ರೆಪೋ ದರ ವಿಚಾರದ್ದು. ರೆಪೋ ದರ ಅಥವಾ ಬಡ್ಡಿ ದರ ಹೆಚ್ಚಿಸಲಾಗುತ್ತದಾ, ಅಥವಾ ಇಳಿಸಲಾಗುತ್ತದಾ ಅಥವಾ ಯಥಾಸ್ಥಿತಿ ಮಾಡಲಾಗುತ್ತದಾ ಎಂಬ ಕುತೂಹಲ ಹೆಚ್ಚಿನ ಮಂದಿಯದ್ದು. ಇದನ್ನೂ ಒಳಗೊಂಡಂತೆ ಆರ್​ಬಿಐನ ಎಂಪಿಸಿ ಸಭೆಯಲ್ಲಿ ಹಲವು ವಿಚಾರಗಳನ್ನು ಚರ್ಚಿಸಲಾಗುತ್ತದೆ. ಜೂನ್ 8ರವರೆಗೆ ಎಂಪಿಸಿ ಸಭೆ ನಡೆಯಲಿದ್ದು, ಅಂದು ಸಭೆ ಬಳಿಕ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾದ ವಿಷಯಗಳನ್ನು ಪ್ರಕಟಿಸುತ್ತಾರೆ. ಅದರಲ್ಲಿ ರೆಪೋ ದರದ ಬಗೆಗಿನ ನಿರ್ಧಾರವೂ ಇರುತ್ತದೆ.

ಈ ಬಾರಿ ರೆಪೋ ದರ ಹೆಚ್ಚಳ ಇಲ್ಲ?

ಹಣದುಬ್ಬರ ನಿಯಂತ್ರಣಕ್ಕೆ ಬಾರುತ್ತಿಲ್ಲ ಎನಿಸಿದರೆ ಆಗ ಆರ್​ಬಿಐ ರೆಪೋ ದರ ಹೆಚ್ಚಿಸುತ್ತದೆ. ಇದು ಯಾವುದೇ ದೇಶದ ಸೆಂಟ್ರಲ್ ಬ್ಯಾಂಕ್ ಕೈಯಲ್ಲಿ ಹಣದುಬ್ಬರ ವಿರುದ್ಧ ಇರುವ ಪ್ರಮುಖ ಅಸ್ತ್ರವೇ ಆಗಿರುತ್ತದೆ. ಆದರೆ, ಏಪ್ರಿಲ್ ತಿಂಗಳಲ್ಲಿ ಭಾರತದಲ್ಲಿ ಹಣದುಬ್ಬರ ಶೇ. 4.7ರಷ್ಟು ಇತ್ತು. ಆರ್​ಬಿಐ ಇಟ್ಟುಕೊಂಡಿದ್ದ ಗುರಿಯ ವ್ಯಾಪ್ತಿಯಲ್ಲೇ ಹಣದುಬ್ಬರ ಇದೆ. ಹೀಗಾಗಿ, ರಿಸರ್ವ್ ಬ್ಯಾಂಕ್ ಈ ಬಾರಿ ಬಡ್ಡಿ ದರ ಹೆಚ್ಚಿಸುವ ನಿರ್ಧಾರಕ್ಕೆ ಕೈಹಾಕುವ ಸಾಧ್ಯತೆ ಕಡಿಮೆ ಎಂದು ವಿವಿಧ ಹಣಕಾಸು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತದಲ್ಲಿ ಸದ್ಯ ರೆಪೋ ದರ, ಅಂದರೆ ಆರ್​ಬಿಐನ ಬಡ್ಡಿ ದರ ಶೇ. 6.5 ಇದೆ.

ಇದನ್ನೂ ಓದಿ: Pakistan: ಏಷ್ಯಾದಲ್ಲೇ ಅತಿಹೀನ ಹಣದುಬ್ಬರ; ಐಎಂಎಫ್​ನಿಂದ ಸಾಲ ಮನವಿ ತಿರಸ್ಕಾರ; ಪಾಕಿಸ್ತಾನಕ್ಕೆ ಬಿಡದ ಗ್ರಹಚಾರ

ರೆಪೋ ದರ ಎಂದರೇನು?

ರೆಪೋ ದರ ಎಂದರೆ ಕಮರ್ಷಿಯಲ್ ಬ್ಯಾಂಕುಗಳು ಆರ್​ಬಿಐನಿಂದ ಪಡೆಯುವ ಸಾಲಕ್ಕೆ ತೆರಬೇಕಿರುವ ಬಡ್ಡಿ ದರ. ಇನ್ನು, ರಿವರ್ಸ್ ರೆಪೋ ಎಂದರೆ ಕಮರ್ಷಿಯಲ್ ಬ್ಯಾಂಕುಗಳು ಆರ್​ಬಿಐನಲ್ಲಿ ಇರಿಸುವ ಹಣಕ್ಕೆ ಸಿಗುವ ಬಡ್ಡಿದರವಾಗಿದೆ.

ಈ ರೆಪೋ ದರಗಳು ಬ್ಯಾಂಕುಗಳಲ್ಲಿನ ಬಡ್ಡಿ ದರಗಳ ಮೇಲೆ ಪರಿಣಾಮ ಬೀರುತ್ತವೆ. ರೆಪೋ ದರ ಹೆಚ್ಚಾದರೆ ಬ್ಯಾಂಕುಗಳು ಸಾಮಾನ್ಯವಾಗಿ ತಮ್ಮಲ್ಲಿನ ಬಡ್ಡಿ ದರ ಪರಿಷ್ಕರಿಸುತ್ತವೆ. ಎಫ್​ಡಿಗಳಿಗೆ ಕೊಡುವ ಬಡ್ಡಿ ಹೆಚ್ಚಬಹುದು. ಸಾಲಕ್ಕೆ ಬಡ್ಡಿ ಹೆಚ್ಚಬಹುದು. ಇದೆಲ್ಲವೂ ಹಣದುಬ್ಬರವನ್ನು ತಗ್ಗಿಸಲು ಸಹಾಯವಾಗುತ್ತದೆ ಎಂಬ ಎಣಿಕೆ ಇದೆ. ಭಾರತದಲ್ಲಿ ಶೇ. 7ಕ್ಕಿಂತ ಹೆಚ್ಚು ಇದ್ದ ಹಣದುಬ್ಬರ ಈಗ ಶೇ. 4.7ಕ್ಕೆ ಬಂದಿಳಿಯಲು ಕಾರಣವಾಗಿದ್ದು ರೆಪೋ ದರ ಏರಿಕೆಯೇ. ಒಂದು ಹಂತದಲ್ಲಿ ಶೇ. 3.50ರಷ್ಟಿದ್ದ ರೆಪೋ ದರ ಈಗ ಶೇ. 6.50ಕ್ಕೆ ಏರಿದೆ.

ಇದನ್ನೂ ಓದಿByju’s: ಬೈಜೂಸ್​ಗೆ ನಿಲ್ಲದ ಸಂಕಷ್ಟ, ಸಾಲಗಾರರ ಕಾಟ; ಬಡ್ಡಿಕಟ್ಟಲೂ ಕಷ್ಟ; ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಪರದಾಟ

ಇನ್ನು, ಹಣದುಬ್ಬರವನ್ನು ಶೇ. 4ರ ಆಸುಪಾಸಿಗೆ ತಂದು ನಿಲ್ಲಿಸುವಂತೆ ಆರ್​ಬಿಐಗೆ ಸರ್ಕಾರ ಗುರಿ ಕೊಟ್ಟಿತ್ತು. ಆಸುಪಾಸು ಎಂದರೆ ಶೇ. 2ರ ಆಸುಪಾಸು. ಅಂದರೆ, ಹಣದುಬ್ಬರವು ಶೇ. 2ರಿಂದ ಶೇ. 6ರ ನಡುವೆ ಇರಬೇಕು. ಈ ಗುರಿಯ ಸಾಧನೆ ಆಗಿದೆ. ಈ ಕಾರಣಕ್ಕೆ ಈ ಬಾರಿ ರೆಪೋ ದರ ಯಥಾಸ್ಥಿತಿಯಲ್ಲಿ ಉಳಿಸಲು ಆರ್​ಬಿಐ ತೀರ್ಮಾನಿಸುವ ಸಾಧ್ಯತೆ ಹೆಚ್ಚು. ಒಂದು ವೇಳೆ ಮುಂದಿನ ಎಂಪಿಸಿ ಸಭೆಯಷ್ಟರಲ್ಲಿ ಹಣದುಬ್ಬರವು ಏರಿಕೆ ಕಂಡರೆ ಆಗ ದರ ಹೆಚ್ಚಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ