Arjun Deshpande: 110 ರೂ ಬೆಲೆಯ ಔಷಧ ಕೇವಲ 5ಕ್ಕೆ; 21 ವರ್ಷದ ಯುವಕನ ಕಂಪನಿ ಇಷ್ಟು ಅಗ್ಗದಲ್ಲಿ ಮಾರಲು ಹೇಗೆ ಸಾಧ್ಯ?

Generic Aadhaar: ಕೇವಲ 16 ರ ವಯಸ್ಸಿನಲ್ಲಿ ಸ್ವಂತ ಕಂಪನಿಯ ಒಡೆಯನಾಗಿದ್ದ ಅರ್ಜುನ್ ದೇಶಪಾಂಡೆ ಈಗ 21ರ ಹರೆಯದಲ್ಲಿ 500 ಕೋಟಿ ರೂ ಮೌಲ್ಯದ ಜೆನರಿಕ್ ಆಧಾರ್ ಕಂಪನಿಯ ಸಿಇಒ ಆಗಿದ್ದಾರೆ. ಇವರ ಫ್ರಾಂಚೈಸಿ ಮಳಿಗೆಗಳಲ್ಲಿ ಮಾರಲಾಗುವ ಔಷಧಗಳಿಗೆ ಶೇ. 90ರಷ್ಟು ಡಿಸ್ಕೌಂಟ್ ಇದೆ.

Arjun Deshpande: 110 ರೂ ಬೆಲೆಯ ಔಷಧ ಕೇವಲ 5ಕ್ಕೆ; 21 ವರ್ಷದ ಯುವಕನ ಕಂಪನಿ ಇಷ್ಟು ಅಗ್ಗದಲ್ಲಿ ಮಾರಲು ಹೇಗೆ ಸಾಧ್ಯ?
ಅರ್ಜುನ್ ದೇಶಪಾಂಡೆ
Follow us
|

Updated on: Jun 05, 2023 | 4:18 PM

ಬ್ಯುಸಿನೆಸ್ ಎಂದರೆ ಲಾಭದ ಮಾರ್ಜಿನ್ ಭರ್ಜರಿಯಾಗಿರಬೇಕು ಎಂಬ ಅಭಿಪ್ರಾಯ ಇದೆ. ಇದನ್ನು ಸುಳ್ಳಾಗಿಸಿದವರು 21 ವರ್ಷದ ಅರ್ಜುನ್ ದೇಶಪಾಂಡೆ. ಈ ಯುವಕ ಸ್ಥಾಪಿಸಿದ ಜೆನೆರಿಕ್ ಆಧಾರ್ (Generic Aadhaar) ಎಂಬ ಕಂಪನಿಯ ಮಳಿಗೆಗಳಲ್ಲಿ ನೀವು ಶೇ. 90ರವರೆಗೂ ಡಿಸ್ಕೌಂಟ್​ಗಳಲ್ಲಿ ಔಷಧಿ ಖರೀದಿಸಬಹುದು. ನೂರು ರೂ ಬೆಲೆಯ ಔಷಧಿ ನಿಮಗೆ ಕೇವಲ 10 ರೂ ಒಳಗೆ ಸಿಕ್ಕಿಬಿಡುತ್ತದೆ. ಕೇವಲ 16 ರ ವಯಸ್ಸಿನಲ್ಲಿ ಸ್ವಂತ ಕಂಪನಿಯ ಒಡೆಯನಾಗಿದ್ದ ಈತ ಈಗ 500 ಕೋಟಿ ರೂ ಮೌಲ್ಯದ ಜೆನರಿಕ್ ಆಧಾರ್ ಕಂಪನಿಯ ಸಿಇಒ ಆಗಿದ್ದಾರೆ. ದೇಶಾದ್ಯಂತ 2,000 ಫ್ರಾಂಚೈಸಿ ಸ್ಟೋರ್​ಗಳ ಮೂಲಕ ಇವರು ಔಷಧ ಮಾರುತ್ತಾರೆ. ಈಗ ರತನ್ ಟಾಟಾ ಅವರ ಬೆಂಬಲವನ್ನೂ ಪಡೆದಿರುವ ಅರ್ಜುನ್ ದೇಶಪಾಂಡೆ ಉತ್ಸಾಹ ಇಮ್ಮಡಿಗೊಂಡಿದೆ.

ಭಾರತ ವಿವಿಧೆಡೆ 2,000 ರೂ ಜೆನೆರಿಕ್ ಆಧಾರ್ ಸ್ಟೋರ್​ಗಳು ಸ್ಥಾಪನೆಯಾಗಿವೆ. ಬಾಂಗ್ಲಾದೇಶ, ಭೂತಾನ್, ಶ್ರೀಲಂಕಾ, ನೇಪಾಳ, ಯುಎಇ, ಮಯನ್ಮಾರ್, ಓಮನ್, ಕಾಂಬೋಡಿಯಾ, ವಿಯೆಟ್ನಾಂ ಮೊದಲಾದೆಡೆಯೂ ಜೆನರಿಕ್ ಆಧಾರ್ ಕಂಪನಿಯ ವ್ಯವಹಾರ ವಿಸ್ತರಿಸುವ ನಿಟ್ಟಿನಲ್ಲಿ ಅರ್ಜುನ್ ದೇಶಪಾಂಡೆ ಗಮನ ಹರಿಸುತ್ತಿದ್ದಾರೆ.

100 ರೂ ಬೆಲೆಯ ಔಷಧ 10 ರೂಗೆ ಕೊಡಲು ಸಾಧ್ಯವಾ? ಅರ್ಜುನ್ ಬ್ಯುಸಿನೆಸ್ ಮಾಡೆಲ್ ಕೆಲಸ ಮಾಡುತ್ತಾ?

ಅರ್ಜುನ್ ದೇಶಪಾಂಡೆ ಅವರ ಜೆನೆರಿಕ್ ಆಧಾರ್ ಮಳಿಗೆಗಳಲ್ಲಿ ಔಷಧಗಳು ಬಹಳ ಕಡಿಮೆ ಬೆಲೆಗೆ ಸಿಗುತ್ತವೆ. ಶೇ. 80-90ರಷ್ಟು ರಿಯಾಯಿತಿ ದರದಲ್ಲಿ ಮಾರಲಾಗುತ್ತದೆ. ಕೆಲ ಔಷಧಗಳು ಇನ್ನೂ ಕಡಿಮೆ ಬೆಲೆಗೆ ಸಿಗುತ್ತವೆ. ಉದಾಹರಣೆಗೆ, ಡಯಾಬಿಟಿಸ್​ಗೆ ನೀಡಲಾಗುವ ಗ್ಲಿಮಿಪಿರೈಡ್ ಎಂಬ ಔಷಧ ಮಾಮೂಲಿಯ ಬ್ರ್ಯಾಂಡ್​ಗಳಲ್ಲಿ ಒಂದು ಸ್ಟ್ರಿಪ್​ಗೆ 110 ರೂ ದರ ಇದೆ. ಇದನ್ನು ಜೆನರಿಕ್ ಆಧಾರ್ ಮಳಿಗೆಯಲ್ಲಿ ಕೇವಲ 5 ರೂಗೆ ಪಡೆಯಬಹುದು. ಇಷ್ಟು ಕಡಿಮೆ ಬೆಲೆಗೆ ಒಂದು ಔಷಧವನ್ನು ಮಾರಲು ಸಾಧ್ಯವಾ? ಕಳಪೆ ಗುಣಮಟ್ಟದ ಔಷಧವನ್ನು ಮಾರಲಾಗುತ್ತದಾ ಎಂಬ ಅನುಮಾನ ಬರಬಹುದು. ಆದರೆ, ಅರ್ಜುನ್ ದೇಶಪಾಂಡೆ ನೀಡುವ ಸಮಜಾಯಿಷಿ ಈ ಪ್ರಶ್ನೆಗಳಿಗೆ ಸಮಾಧಾನ ತರುತ್ತದೆ.

ಇದನ್ನೂ ಓದಿByju’s: ಬೈಜೂಸ್​ಗೆ ನಿಲ್ಲದ ಸಂಕಷ್ಟ, ಸಾಲಗಾರರ ಕಾಟ; ಬಡ್ಡಿಕಟ್ಟಲೂ ಕಷ್ಟ; ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಪರದಾಟ

ಮಾರುಕಟ್ಟೆಯಲ್ಲಿರುವ ಒಂದು ಬ್ರ್ಯಾಂಡೆಡ್ ಉತ್ಪನ್ನಕ್ಕೆ ನಿಗದಿ ಮಾಡಲಾಗಿರುವ ಎಂಆರ್​ಪಿ ದರವು ಆ ಉತ್ಪನ್ನದ ನೈಜ ಮೌಲ್ಯ ಆಗಿರುವುದಿಲ್ಲ. ಆ ಉತ್ಪನ್ನದ ಮಾರ್ಕೆಟಿಂಗ್ ಮತ್ತು ಪ್ರಚಾರಕ್ಕೆ ಮಾಡಲಾಗುವ ವೆಚ್ಚವೇ ಬಹಳ ಹೆಚ್ಚಿರುತ್ತದೆ. ಇದೆಲ್ಲವನ್ನೂ ಸೇರಿ ಉತ್ಪನ್ನಕ್ಕೆ ಬೆಲೆ ನಿಗದಿ ಮಾಡಲಾಗುತ್ತದೆ. ಔಷಧ ತಯಾರಿಕೆಯ ಬಳಿಕ ಗ್ರಾಹಕರನ್ನು ತಲುಪುವುದರೊಳಗೆ ವಿವಿಧ ವೆಚ್ಚಗಳು ಒಂದು ಉತ್ಪನ್ನದ ಮೇಲೆ ಆಗುತ್ತದೆ. ಈ ಸರಣಿಯನ್ನು ಕತ್ತರಿಸಿ, ಉತ್ಪಾದಕರಿಂದ ಔಷಧ ನೇರವಾಗಿ ಗ್ರಾಹಕರನ್ನು ತಲುಪುವಂತಹ ಮಾಡೆಲ್ ಅನ್ನು ಅರ್ಜುನ್ ದೇಶಪಾಂಡೆ ಅನುಸರಿಸುತ್ತಿದ್ದಾರೆ. ಹೀಗಾಗಿ, ಅವರ ಜೆನರಿಕ್ ಆಧಾರ್ ಮಳಿಗೆಗಳಲ್ಲಿ ಬಹಳ ಕಡಿಮೆ ಬೆಲೆಗೆ ಜೆನೆರಿಕ್ ಔಷಧಗಳು ಸಿಗುತ್ತವೆ.

ಅರ್ಜುನ್ ದೇಶಪಾಂಡೆ ತಾಯಿ ಫಾರ್ಮಾ ಕ್ಷೇತ್ರದಲ್ಲಿ ಕೆಲಸ ಮಾಡುವವರು

ಮಹಾರಾಷ್ಟ್ರ ರಾಜ್ಯದವರಾದ ಅರ್ಜುನ್ ದೇಶಪಾಂಡೆ 2002ರಲ್ಲಿ ಥಾಣೆ ನಗರದಲ್ಲಿ ಜನಿಸಿದವರು. ಇವರ ತಾಯಿ ಫಾರ್ಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ. ಇವರ ತಂದೆ ಒಬ್ಬ ಬ್ಯುಸಿನೆಸ್​ಮ್ಯಾನ್. ಇಬ್ಬರ ಜಾಣ್ಮೆ ಅರ್ಜುನ್​ಗೆ ಸಿಕ್ಕಿದೆ. ಇದರ ಜೊತೆಗೆ ಸಾಮಾಜಿಕ ಕಾಳಜಿಯು ಅರ್ಜುನ್ ಅವರನ್ನು ಜೆನೆರಿಕ್ ಆಧಾರ್ ಕಂಪನಿ ಸ್ಥಾಪಿಸುವಂತೆ ಪ್ರೇರೇಪಿಸಿದೆ.

ಇದನ್ನೂ ಓದಿPakistan: ಏಷ್ಯಾದಲ್ಲೇ ಅತಿಹೀನ ಹಣದುಬ್ಬರ; ಐಎಂಎಫ್​ನಿಂದ ಸಾಲ ಮನವಿ ತಿರಸ್ಕಾರ; ಪಾಕಿಸ್ತಾನಕ್ಕೆ ಬಿಡದ ಗ್ರಹಚಾರ

ನಮ್ಮ ದೇಶವು ಔಷಧಗಳ ತಯಾರಿಕೆಯ ಅಡ್ಡೆಯಾಗಿದ್ದರೂ ಜನರು ಅಗತ್ಯ ಔಷಧಗಳಿಗೆ ಬಹಳ ಹಣ ವ್ಯಯಿಸುತ್ತಿದ್ದಾರಲ್ಲ ಎಂಬುದು ನಾನು 16ನೇ ವಯಸ್ಸಿನಲ್ಲಿದ್ದಾಗ ಮನಸಿಗೆ ನಾಟಿತು. ಔಷಧವು ಐಷಾರಾಮಿ ಅಲ್ಲ, ಅದೊಂದು ಮೂಲಭೂತ ಅವಶ್ಯಕತೆ ಇರುವ ವಸ್ತು ಎಂಬುದು ನನ್ನ ಭಾವನೆ. ಹೀಗಾಗಿ, ಆ ವಯಸ್ಸಿನಲ್ಲೇ ನಾನು ಕಡಿಮೆ ಬೆಲೆಗೆ ಔಷಧ ಮಾರುವ ಐಡಿಯಾ ಜಾರಿಗೆ ತಂದೆ ಎಂದು ಅರ್ಜುನ್ ದೇಶಪಾಂಡೆ ಹೇಳುತ್ತಾರೆ.

ಅರ್ಜುನ್ ದೇಶಪಾಂಡೆ ಅವರ ಸೇವೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೇ ಖುದ್ದಾಗಿ ಶ್ಲಾಘಿಸಿದ್ದಾರೆ. ಇವರ ಬ್ಯುಸಿನೆಸ್ ಮಾಡೆಲ್ ಕಂಡು ಸ್ವತಃ ರತನ್ ಟಾಟಾ ಅವರೇ ಸಂತುಷ್ಟರಾಗಿದ್ದಾರೆ. ಇವರ ವ್ಯವಹಾರ ವಿಸ್ತರಣೆಗೆ ಟಾಟಾ ಗ್ರೂಪ್​ನಿಂದ ಹಣಕಾಸು ನೆರವು ಸಿಕ್ಕಿದೆ. ಸದ್ಯ ದೇಶಾದ್ಯಂತ 2,000 ಇರುವ ಔಷಧ ಮಳಿಗೆಗಳ ಸಂಖ್ಯೆಯನ್ನು ಶೇ. 50ರಷ್ಟು ಏರಿಸಲು ಗುರಿ ಇಟ್ಟಿದ್ದಾರೆ. ಇದೇ ಬ್ಯುಸಿನೆಸ್ ಮಾಡೆಲ್​ನಲ್ಲಿ ಪಶುಗಳಿಗೆ ಕಡಿಮೆ ಬೆಲೆಗೆ ಔಷಧ ಒದಗಿಸುವ ಯೋಜನೆಯನ್ನೂ ಈ ಯುವಕ ಹಮ್ಮಿಕೊಂಡಿದ್ದಾರೆ. ಇತ್ತೀಚೆಗೆ ಆಂಧ್ರದಲ್ಲಿ ಒಂದು ಪಶುವೈದ್ಯಕೀಯ ಮಳಿಗೆಯನ್ನೂ ತೆರೆದು ಅಡಿ ಇಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ