ಬಿಕ್ಕಟ್ಟಿನಲ್ಲಿ ಏರಬೇಕಿದ್ದ ಚಿನ್ನದ ಬೆಲೆ ಕಡಿಮೆ ಕಡಿಮೆ ಆಗುತ್ತಿರುವುದು ಯಾಕೆ? ಇಲ್ಲಿವೆ ಇಂಟರೆಸ್ಟಿಂಗ್ ಕಾರಣಗಳು

Interesting reasons why Gold and silver rates decreasing, despite Middle east crisis: ಅನಿಶ್ಚಿತ ಸಂದರ್ಭಗಳಲ್ಲಿ ಚಿನ್ನದ ಬೆಲೆ ಸಹಜವಾಗಿ ಏರುತ್ತವೆ. ಆದರೆ, ಈಗ ಯುದ್ಧದ ಪ್ರಳಯ ಇದ್ದರೂ ಬಂಗಾರದ ಬೆಲೆ ಕಡಿಮೆ ಆಗುತ್ತಿದೆ. ಇದಕ್ಕೆ ಹಲವು ಕಾರಣಗಳಿರಬಹುದು ಎಂದು ಭಾವಿಸಲಾಗಿದೆ. ಬೆಳ್ಳಿ ಬೆಲೆಯೂ ಕಡಿಮೆ ಆಗುತ್ತಿದೆ. ಇವೆರಡು ಲೋಹಗಳ ಬೆಲೆ ಯಾಕೆ ಕುಸಿಯುತ್ತಿದೆ? ಇಲ್ಲಿದೆ ಲೆಕ್ಕಾಚಾರ.

ಬಿಕ್ಕಟ್ಟಿನಲ್ಲಿ ಏರಬೇಕಿದ್ದ ಚಿನ್ನದ ಬೆಲೆ ಕಡಿಮೆ ಕಡಿಮೆ ಆಗುತ್ತಿರುವುದು ಯಾಕೆ? ಇಲ್ಲಿವೆ ಇಂಟರೆಸ್ಟಿಂಗ್ ಕಾರಣಗಳು
ಚಿನ್ನ

Updated on: Mar 09, 2026 | 1:17 PM

ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and Silver Prices) ಕಡಿಮೆ ಆಗತೊಡಗಿವೆ. ಸಾಮಾನ್ಯವಾಗಿ ಈ ಅಮೂಲ್ಯ ಲೋಹಗಳನ್ನು ಆಪತ್ಕಾಲದ ಆಸ್ತಿಗಳೆಂದು ಪರಿಗಣಿಸಲಾಗುತ್ತದೆ. ಜಾಗತಿಕ ರಾಜಕೀಯ ಬಿಕ್ಕಟ್ಟು, ಯುದ್ಧ, ಆರ್ಥಿಕ ಹಿಂಜರಿಕೆ ಇತ್ಯಾದಿ ಅನಿಶ್ಚಿತ ಸಂದರ್ಭಗಳು ಎದುರಾದಾಗ ಈ ಲೋಹಗಳ ಬೆಲೆ ಸಹಜವಾಗಿ ಏರಿಕೆ ಆಗುತ್ತದೆ. ಇತ್ತೀಚೆಗೆ ದೊಡ್ಡ ಮಟ್ಟದ ಅನಿಶ್ಚಿತ ಪರಿಸ್ಥಿತಿ ಬಂದೆರಗದೇ ಹೋದರೂ ಒಂದೆರಡು ತಿಂಗಳಲ್ಲೇ ಚಿನ್ನ, ಬೆಳ್ಳಿ ಬೆಲೆಗಳು ಸಿಕ್ಕಾಪಟ್ಟೆ ಏರಿದ್ದವು. ಈಗ ಇರಾನ್ ಯುದ್ಧದಿಂದ ಪಶ್ಚಿಮ ಏಷ್ಯಾ ಹೊತ್ತಿ ಉರಿಯುತ್ತಿದ್ದರೂ ಚಿನ್ನ, ಬೆಳ್ಳಿ ಬೆಲೆಗಳು ಏರಿಕೆಯಾಗುತ್ತಿಲ್ಲ. ಬದಲಾಗಿ ಬೆಲೆ ಇಳಿಕೆ ಆಗುತ್ತಿರುವುದು ಅಚ್ಚರಿ ಮೂಡಿಸಿದೆ. ಅದಕ್ಕೆ ಕೆಲ ಕುತೂಹಲಕಾರಿ ಕಾರಣಗಳಿವೆ.

ಸೆಂಟ್ರಲ್ ಬ್ಯಾಂಕುಗಳಿಂದ ಚಿನ್ನದ ಮಾರಾಟ?

ಇತ್ತೀಚಿನ ಎರಡು ತಿಂಗಳಲ್ಲಿ ಚಿನ್ನದ ಬೆಲೆ ಸಿಕ್ಕಾಪಟ್ಟೆ ಏರಲು ಸೆಂಟ್ರಲ್ ಬ್ಯಾಂಕ್​ಗಳು ಕಾರಣವಾಗಿದ್ದವು. ಚಿನ್ನವನ್ನು ಸತತವಾಗಿ ಖರೀದಿ ಮಾಡಿದ್ದರಿಂದ ಬೆಲೆ ಏರಿತ್ತು. ಇದೀಗ ಕೆಲ ವರದಿಗಳ ಪ್ರಕಾರ ಸೆಂಟ್ರಲ್ ಬ್ಯಾಂಕುಗಳು ಚಿನ್ನವನ್ನು ಮಾರಾಟ ಮಾಡುತ್ತಿವೆ. ಲಿಕ್ವಿಡಿಟಿ ಹೆಚ್ಚಿಸಲು, ಅಂದರೆ, ನಗದನ್ನು ಪಡೆಯಲು ಚಿನ್ನದ ಮಾರಾಟ ಮಾಡಲಾಗುತ್ತಿದೆ ಎನ್ನಲಾಗಿದೆ. ವರ್ಲ್ಡ್ ಗೋಲ್ಡ್ ಕೌನ್ಸಿಲ್​ನ ಇತ್ತೀಚಿನ ವರದಿ ಪ್ರಕಾರವೂ ಜನವರಿ ತಿಂಗಳಿಂದಲೇ ಸೆಂಟ್ರಲ್ ಬ್ಯಾಂಕುಗಳಿಂದ ಚಿನ್ನದ ಖರೀದಿ ಕಡಿಎಮ ಆಗಿದೆ.

ಇದನ್ನೂ ಓದಿ: ಬ್ಯಾರಲ್​ಗೆ 120 ಡಾಲರ್ ಮುಟ್ಟಿದ ಕಚ್ಚಾ ತೈಲ ಬೆಲೆ; ಇತಿಹಾಸದಲ್ಲಿ ತೈಲ ಅತಿ ದುಬಾರಿ ಎನಿಸಿದ್ದು ಯಾವಾಗ ಗೊತ್ತಾ?

ಪ್ರಾಫಿಟ್ ಬುಕಿಂಗ್ ಮಾಡುತ್ತಿರುವ ಹೂಡಿಕೆದಾರರು…

ಚಿನ್ನ ಮತ್ತು ಬೆಳ್ಳಿ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದ ಬಳಿಕ ಹೂಡಿಕೆದಾರರು ಪ್ರಾಫಿಟ್ ಬುಕಿಂಗ್​ನಲ್ಲಿ ನಿರತರಾಗಿರಬಹುದು. ಈಕ್ವಿಟಿ ಮಾರುಕಟ್ಟೆ ಹಿನ್ನಡೆಯಾಗಿರುವುದರಿಂದ ಅದರ ನಷ್ಟ ಸರಿದೂಗಿಸಲು ಚಿನ್ನದ ಹೂಡಿಕೆಯನ್ನು ಮಾರುತ್ತಿರಲೂ ಬಹುದು ಎನ್ನಲಾಗುತ್ತಿದೆ.

ಪ್ರಬಲವಾಗಿರುವ ಅಮೆರಿಕನ್ ಡಾಲರ್

ಅಮೆರಿಕನ್ ಡಾಲರ್ ಕರೆನ್ಸಿ ಮತ್ತಷ್ಟು ಪ್ರಬಲವಾಗಿದೆ. ಇತರ ಕರೆನ್ಸಿಗಳಲ್ಲಿ ಚಿನ್ನವನ್ನು ಖರೀದಿಸುವುದು ತುಸು ದುಬಾರಿ ಎನಿಸಿದೆ. ಹಾಗೆಯೇ, 10 ವರ್ಷದ ಅಮೆರಿಕನ್ ಟ್ರೆಷರಿ ಯೀಲ್ಡ್ ಹೆಚ್ಚಿದೆ. ಇದು ಹೂಡಿಕೆದಾರರಿಗೆ ಹೆಚ್ಚು ಆಕರ್ಷಣೀಯ ಎನಿಸಿರಬಹುದು.

ಇದನ್ನೂ ಓದಿ: ಪೆಟ್ರೋಲ್ , ಡೀಸೆಲ್ ಬೆಲೆ ಏರಿಕೆ ಆಗುವುದಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

ಅಲ್ಲದೇ, ಅಮೆರಿಕದ ಫೆಡರಲ್ ರಿಸರ್ವ್ ಸಂಸ್ಥೆ ಬಡ್ಡಿದರವನ್ನು ಕಡಿತ ಮಾಡುವ ನಿರೀಕ್ಷೆ ಬಹುತೇಕ ಹುಸಿಯಾಗಿದೆ. ಬಡ್ಡಿದರ ಕಡಿಮೆ ಮಾಡಿದ್ದರೆ ಚಿನ್ನದ ಮೇಲಿನ ಹೂಡಿಕೆ ಹೆಚ್ಚು ಆಕರ್ಷಕ ಎನಿಸುತ್ತಿತ್ತು. ಆದರೆ, ಬಡ್ಡಿದರ ಕಡಿಮೆ ಆಗದ ಕಾರಣ ಚಿನ್ನವನ್ನು ಇರಿಸಿಕೊಳ್ಳುವುದು ಹೂಡಿಕೆದಾರರಿಗೆ ಹೆಚ್ಚು ಲಾಭದಾಯಕ ಎನಿಸದಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us