Multibagger Stock: ಟಾಟಾ ಸಮೂಹದ ಈ ಸ್ಟಾಕ್​ನಿಂದ ವರ್ಷದಲ್ಲಿ ಶೇ 1000ದಷ್ಟು ರಿಟರ್ನ್ಸ್

| Updated By: Srinivas Mata

Updated on: Mar 22, 2022 | 11:46 AM

ಈ ಮಲ್ಟಿಬ್ಯಾಗರ್ ಸ್ಟಾಕ್​ ಕೇವಲ 1 ವರ್ಷದೊಳಗೆ ಶೇ 1000ದಷ್ಟು ರಿಟರ್ನ್ಸ್ ನೀಡಿದೆ. ಯಾವುದು ಆ ಸ್ಟಾಕ್ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Multibagger Stock: ಟಾಟಾ ಸಮೂಹದ ಈ ಸ್ಟಾಕ್​ನಿಂದ ವರ್ಷದಲ್ಲಿ ಶೇ 1000ದಷ್ಟು ರಿಟರ್ನ್ಸ್
ಸಾಂದರ್ಭಿಕ ಚಿತ್ರ
Follow us on

ರಷ್ಯಾ- ಉಕ್ರೇನ್ ಯುದ್ಧದ (Russia- Ukraine War) ಸನ್ನಿವೇಶದ ಆತಂಕ ಏನೇ ಇರಲಿ, ಆಟೋಮೊಟಿವ್ ಸ್ಟ್ಯಾಂಪಿಂಗ್ಸ್ ಅಂಡ್ ಅಸೆಂಬ್ಲೀಸ್ ಲಿಮಿಟೆಡ್​ನ ಷೇರು ಅದ್ಭುತ ಏರಿಕೆ ದಾಖಲಿಸಿದೆ. ಇದು ಟಾಟಾ ಸಮೂಹಕ್ಕೆ ಸೇರಿದ ಷೇರು. ಫೆಬ್ರವರಿ 25, 2022ರಿಂದ ಮಾರ್ಚ್ 16, 2022ಕ್ಕೆ ಪ್ರತಿ ಷೇರಿನ ಬೆಲೆ 244.40 ರೂಪಾಯಿಯಿಂದ 438.40ಕ್ಕೆ ಹೆಚ್ಚಳವಾಗಿದ್ದು, ಆ ಮೂಲಕ ಶೇ 80ರಷ್ಟು ಏರಿಕೆ ಕಂಡಿದೆ. ಆದರೆ ಈಗ ಈ ಷೇರು ಪ್ರಾಫಿಟ್​ ಬುಕ್ಕಿಂಗ್ ಒತ್ತಡದಲ್ಲಿದ್ದು, ಕಳೆದ ಎರಡು ಟ್ರೇಡಿಂಗ್ ಸೆಷನ್​ನಲ್ಲಿ ಲೋಯರ್ ಸರ್ಕ್ಯೂಟ್ ದಾಖಲಿಸಿದೆ. ಟಾಟಾ ಸಮೂಹಕ್ಕೆ ಸೇರಿದ ಈ ಷೇರು ತನ್ನ ಷೇರುದಾರರಿಗೆ ಅತ್ಯುತ್ತಮ ರಿಟರ್ನ್ಸ್ ನೀಡಿದ ಇತಿಹಾಸ ಹೊಂದಿದ್ದು, 2021ನೇ ಇಸವಿಯಲ್ಲಿ ಮಲ್ಟಿಬ್ಯಾಗರ್ ಸ್ಟಾಕ್​ಗಳಲ್ಲಿ ಒಂದಾಗಿದೆ. ಕಳೆದ ಒಂದು ವರ್ಷದಲ್ಲಿ ಆಟೋಮೊಟಿವ್ ಸ್ಟ್ಯಾಂಪಿಂಗ್ಸ್ ಅಂಡ್ ಅಸೆಂಬ್ಲೀಸ್ ಲಿಮಿಟೆಡ್​ನ ಷೇರು ಬೆಲೆ 35.25 ರೂಪಾಯಿಯಿಂದ 395.70 ರೂಪಾಯಿ ಮಟ್ಟಕ್ಕೆ ಏರಿಕೆ ಆಗಿದೆ. ಅಂದರೆ ಈ ಅವಧಿಯಲ್ಲಿ ಶೇ 1000ಕ್ಕೂ ಜಾಸ್ತಿ ಮೇಲೇರಿದೆ.

ಆಟೋಮೊಟಿವ್ ಸ್ಟ್ಯಾಂಪಿಂಗ್ಸ್ ಅಂಡ್ ಅಸೆಂಬ್ಲೀಸ್ ಲಿಮಿಟೆಡ್​ನ ಷೇರು ಇತಿಹಾಸ
2022ರ ಜನವರಿಯಲ್ಲಿ ಎನ್​ಎಸ್​ಇಯಲ್ಲಿ ಈ ಷೇರಿನ ಬೆಲೆ ಒಂದಕ್ಕೆ 925.45 ರೂಪಾಯಿಯಂತೆ ಗರಿಷ್ಠ ಮಟ್ಟವನ್ನು ಮುಟ್ಟಿತು. ಅಲ್ಲಿಂದ ಆಚೆಗೆ ಒಂದು ತಿಂಗಳು ಮಾರಾಟದ ಒತ್ತಡವನ್ನು ಎದುರಿಸಿತು. ಆದರೆ ಉಕ್ರೇನ್- ರಷ್ಯಾ ಬಿಕ್ಕಟ್ಟು ಕಾಣಿಸಿಕೊಂಡ ಮೇಲೆ ಭಾರತದ ಷೇರು ಮಾರುಕಟ್ಟೆಯಲ್ಲಿನ ದುರ್ಬಲತೆಯ ಹೊರತಾಗಿಯೂ ಟ್ರೆಂಡ್ ಉಲ್ಟಾ ಆಗಿದೆ. ಕಳೆದ ಒಂದು ತಿಂಗಳಲ್ಲಿ ಈ ಸ್ಟಾಕ್ 285 ರೂಪಾಯಿಯಿಂದ 395.70 ರೂಪಾಯಿ ಮಟ್ಟಕ್ಕೆ ಏರಿಕೆ ಆಗಿದೆ. ಅಂದರೆ ಹತ್ತಿರ ಹತ್ತಿರ ಶೇ 40ರಷ್ಟು ಮೇಲೇರಿದೆ. ಕಳೆದ 6 ತಿಂಗಳಲ್ಲಿ 58.45 ರುಪಾಯಿಯಿಂದ 395.70 ತಲುಪಿದ್ದು, ಶೇ 575ರಷ್ಟನ್ನು ಈ ಅವಧಿಯಲ್ಲಿ ರಿಟರ್ನ್ಸ್ ನೀಡಿದೆ. ಅದೇ ರೀತಿ ಕಳೆದ ಒಂದು ವರ್ಷದಲ್ಲಿ ಈ ಸ್ಟಾಕ್ 35.25ರ ಮಟ್ಟದಿಂದ 395.70ಗೆ ಜಿಗಿದಿದೆ. ಅಲ್ಲಿಗೆ ಕೇವಲ ಒಂದು ವರ್ಷದೊಳಗೆ 11 ಪಟ್ಟಿಗೂ ಹೆಚ್ಚು ಗಳಿಕೆ ದಾಖಲಿಸಿದೆ.

1 ಲಕ್ಷ ರೂಪಾಯಿ ಒಂದು ವರ್ಷದಲ್ಲಿ 11 ಲಕ್ಷ
ಈ ಸ್ಟಾಕ್​ನ ಬೆಲೆ ಇತಿಹಾಸವನ್ನು ಗಮನಿಸುವುದಾದರೆ, ಹೂಡಿಕೆದಾರರು ಈ ಸ್ಟಾಕ್​ನಲ್ಲಿ ತಿಂಗಳ ಹಿಂದೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಲ್ಲಿ ಅದು ಇವತ್ತಿಗೆ 1.40 ಲಕ್ಷ ಆಗಿರುತ್ತಿತ್ತು. ಅದೇ ಅರು ತಿಂಗಳ ಹಿಂದೆ ಆಗಿದ್ದಲ್ಲಿ ಈಗ ಅದರ ಮೌಲ್ಯ 6.75 ಲಕ್ಷ ರೂಪಾಯಿ. ಇನ್ನು ಒಂದು ವರ್ಷದ ಹಿಂದೆ ಈ ಸ್ಟಾಕ್​ನಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿ, ಹಾಗೇ ಉಳಿಸಿಕೊಂಡಿದ್ದರೆ ಆ ಮೊತ್ತವು ಇವತ್ತಿಗೆ 11 ಲಕ್ಷ ರೂಪಾಯಿ ಆಗಿರುತ್ತಿತ್ತು.

ಆಟೋಮೊಟಿವ್ ಸ್ಟ್ಯಾಂಪಿಂಗ್ಸ್ ಅಂಡ್ ಅಸೆಂಬ್ಲೀಸ್ ಲಿಮಿಟೆಡ್​ ಬಗ್ಗೆ ಇನ್ನಷ್ಟು ಮಾಹಿತಿ
ಟಾಟಾ ಸಮೂಹಕ್ಕೆ ಸೇರಿದ ಈ ಮಲ್ಟಿಬ್ಯಾಗರ್ ಸ್ಟಾಕ್​ನ ಸದ್ಯದ ಮಾರುಕಟ್ಟೆ ಬಂಡವಾಳ ಮೌಲ್ಯ 627.75 ಕೋಟಿ ರೂಪಾಯಿ. ಈ ಷೇರಿನ ಸಾರ್ವಕಾಲಿಕ ಗರಿಷ್ಠ ಮಟ್ಟದ ಬೆಕೆ 925.45 ರೂಪಾಯಿ ಮಟ್ಟವನ್ನು ಎನ್ಎಸ್​ಇಯಲ್ಲಿ 2022ರ ಜನವರಿಯಲ್ಲಿ ಮುಟ್ಟಿತ್ತು. ಇನ್ನು ವಾರ್ಷಿಕ ಕನಿಷ್ಠ ಮಟ್ಟ 30.25 ರೂಪಾಯಿ. ಸದ್ಯಕ್ಕೆ ಇದರ ವಹಿವಾಟಾಗುತ್ತಿರುವ ವಾಲ್ಯೂಮ್ 17,220. ಅಂದರೆ ಈ ಸ್ಟಾಕ್ ಕಡಿಮೆ ಲಿಕ್ವಿಡ್ ಮತ್ತು ಹೆಚ್ಚಿನ ಅಪಾಯದ್ದಾಗಿದ್ದು, ಭಾರೀ ಏರಿಳಿತಕ್ಕೆ ಕಾರಣ ಆಗುತ್ತದೆ.

ಇದನ್ನೂ ಓದಿ: Multibagger stock: ಈ ಮಲ್ಟಿಬ್ಯಾಗರ್ ಸ್ಟಾಕ್ ಮೇಲೆ 3 ವರ್ಷದ ಹಿಂದೆ ಮಾಡಿದ 1 ಲಕ್ಷದ ಹೂಡಿಕೆ ಈಗ ಎಷ್ಟು ಕೋಟಿ ಗೊತ್ತೆ?