Tata Motors: ಏಪ್ರಿಲ್​ 1ರಿಂದ ಅನ್ವಯಿಸುವಂತೆ ಟಾಟಾ ಮೋಟಾರ್ಟ್​ ವಾಣಿಜ್ಯ ವಾಹನಗಳ ಬೆಲೆ ಏರಿಕೆ

ಟಾಟಾ ಮೋಟಾರ್ಸ್​ನಿಂದ ವಾಣಿಜ್ಯ ವಾಹನಗಳ ಬೆಲೆಗಳನ್ನು ಏಪ್ರಿಲ್ 1,2022ರಿಂದ ಜಾರಿಗೆ ಬರುವಂತೆ ಏರಿಕೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ.

Tata Motors: ಏಪ್ರಿಲ್​ 1ರಿಂದ ಅನ್ವಯಿಸುವಂತೆ ಟಾಟಾ ಮೋಟಾರ್ಟ್​ ವಾಣಿಜ್ಯ ವಾಹನಗಳ ಬೆಲೆ ಏರಿಕೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Mar 22, 2022 | 2:58 PM

ಟಾಟಾ ಮೋಟಾರ್ಸ್ (Tata Motors) ಮಾರ್ಚ್ 22ನೇ ತಾರೀಕಿನ ಮಂಗಳವಾರದಂದು ತನ್ನ ವಾಣಿಜ್ಯ ವಾಹನ ಶ್ರೇಣಿಯ ಬೆಲೆಗಳನ್ನು ಶೇ 2ರಿಂದ 2.5ರಷ್ಟು ಹೆಚ್ಚಿಸುವುದಾಗಿ ಘೋಷಿಸಿದ್ದು, ಇದು ಮಾಡೆಲ್ ಮತ್ತು ವೇರಿಯಂಟ್ ಅನ್ನು ಅವಲಂಬಿಸಿ ಏಪ್ರಿಲ್ 1ನೇ ತಾರೀಕಿನಿಂದ ಜಾರಿಗೆ ಬರಲಿದೆ. ವಿನಿಮಯ ಕೇಂದ್ರದಲ್ಲಿನ ತನ್ನ ಫೈಲಿಂಗ್‌ನಲ್ಲಿ, ಟಾಟಾ ಮೋಟಾರ್ಸ್ ಇದನ್ನು “ಜಾರಿಗೆ ಬರಲಿರುವ ಬೆಲೆ ಏರಿಕೆ” ಎಂದು ಕರೆದಿದೆ. ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಆದ ಟಾಟಾ ಕಂಪೆನಿಯು ಉಕ್ಕು, ಅಲ್ಯೂಮಿನಿಯಂ ಮತ್ತು ಇತರ ಅಮೂಲ್ಯ ಲೋಹಗಳಂತಹ ಸರಕುಗಳ ಬೆಲೆಗಳಲ್ಲಿ ಹೆಚ್ಚಳವನ್ನು ಉಲ್ಲೇಖಿಸಿದ್ದು, ಜತೆಗೆ ಇತರ ಕಚ್ಚಾ ವಸ್ತುಗಳ ಹೆಚ್ಚಿನ ವೆಚ್ಚಗಳು ಏರಿಕೆಗೆ ಕಾರಣಗಳಾಗಿವೆ ಎಂದಿದೆ.

“ಕಂಪೆನಿಯು ಹೆಚ್ಚಿದ ವೆಚ್ಚಗಳ ಗಮನಾರ್ಹ ಭಾಗವನ್ನು ತಗ್ಗಿಸಿಕೊಳ್ಳಲು ಉತ್ಪಾದನೆಯ ವಿವಿಧ ಹಂತಗಳಲ್ಲಿ ಕ್ರಮಗಳನ್ನು ಪ್ರಾರಂಭಿಸಿದೆ. ಒಟ್ಟಾರೆ ಇನ್​ಪುಟ್ ವೆಚ್ಚಗಳಲ್ಲಿನ ತೀಕ್ಷ್ಣ ಏರಿಕೆಯು ಅದರ ಸ್ವಲ್ಪ ಭಾಗವನ್ನು ಕನಿಷ್ಠ ಪ್ರಮಾಣದ ಬೆಲೆ ಏರಿಕೆ ಮೂಲಕ ದಾಟಿಸುವುದು ಅನಿವಾರ್ಯ ಎಂಬ ಸನ್ನಿವೇಶ ನಿರ್ಮಾಣ ಆಗುವಂತೆ ಮಾಡಿದೆ,” ಎಂದು ಹೇಳಿಕೆ ತಿಳಿಸಿದೆ. ಈ ಪ್ರಕಟಣೆಯ ನಂತರ ಟಾಟಾ ಮೋಟಾರ್ಸ್ ಷೇರು ಬಿಎಸ್‌ಇಯಲ್ಲಿ 3.75 ರೂಪಾಯಿ ಅಥವಾ ಶೇ 0.88ರಷ್ಟು ಇಳಿಕೆಯಾಗಿ, 424.20 ರೂಪಾಯಿಯಲ್ಲಿ ವಹಿವಾಟು ನಡೆಸಿತು.

ಟಾಟಾ ಸಮೂಹದ ಭಾಗ ಆಗಿರುವ ಟಾಟಾ ಮೋಟಾರ್ಸ್ 34-ಬಿಲಿಯನ್ ಡಾಲರ್ ಮೌಲ್ಯದ ವಾಹನ ತಯಾರಕ – ವಾಣಿಜ್ಯ ವಾಹನಗಳ (CV) ವಿಭಾಗದಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು ಪ್ರಯಾಣಿಕ ವಾಹನಗಳ (PV) ವಿಭಾಗದಲ್ಲಿ ಅಗ್ರ ಮೂರು ಸ್ಥಾನಗಳಲ್ಲಿದೆ. ಇದು ಎಲೆಕ್ಟ್ರಿಕ್ ವೆಹಿಕಲ್ಸ್ (ಇವಿ) ಮೇಲೆ ಸಹ ಉತ್ಸುಕವಾಗಿದೆ ಹಾಗೂ ನೀತಿ ಚೌಕಟ್ಟನ್ನು ಅಭಿವೃದ್ಧಿಪಡಿಸಲು ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದು, ಸಕ್ರಿಯ ಪಾತ್ರವನ್ನು ವಹಿಸುತ್ತಿದೆ.

ಟಾಟಾ ಮೋಟಾರ್ಸ್ ಭಾರತ, ಇಟಲಿ, ದಕ್ಷಿಣ ಕೊರಿಯಾ, ಅಮೆರಿಕ ಮತ್ತು ಯುನೈಟೆಡ್​ ಕಿಂಗ್​ಡಮ್​ನಲ್ಲಿ ಆರ್​ಅಂಡ್​ಡಿ ಕೇಂದ್ರಗಳನ್ನು ಹೊಂದಿದ್ದು; ಮಾರ್ಚ್ 31, 2021ರಂತೆ 103 ಅಂಗಸಂಸ್ಥೆಗಳು, ಒಂಬತ್ತು ಸಹವರ್ತಿ ಕಂಪೆನಿಗಳು, ನಾಲ್ಕು ಜಂಟಿ ಉದ್ಯಮಗಳು ಮತ್ತು ಎರಡು ಜಂಟಿ ಕಾರ್ಯಾಚರಣೆಗಳ ಜಾಗತಿಕ ನೆಟ್‌ವರ್ಕ್‌ನಿಂದ ಬೆಂಬಲಿತವಾದ ಭಾರತ, ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ ಮತ್ತು ಥಾಯ್ಲೆಂಡ್‌ನಲ್ಲಿ ವ್ಯವಹಾರಗಳನ್ನು ನಡೆಸುತ್ತದೆ. ಇದರ ವಾಣಿಜ್ಯ ವಾಹನ (CV)ಗಳು ಮತ್ತು ಪ್ರಯಾಣಿಕರ ವಾಹನ (PV)ಗಳನ್ನು ಆಫ್ರಿಕಾ, ಆಸ್ಟ್ರೇಲಿಯಾ, ಮಧ್ಯಪ್ರಾಚ್ಯ, ರಷ್ಯಾ, ದಕ್ಷಿಣ ಅಮೆರಿಕಾ, ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ಇತರ ಸಿಐಎಸ್​ ದೇಶಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಇದನ್ನೂ ಓದಿ: Tata Motors CNG: ಟಾಟಾ ಮೋಟಾರ್ಸ್ ಟಿಯಾಗೋ, ಟಿಗೊರ್ ಸಿಎನ್​ಜಿ ಭಾರತದಲ್ಲಿ ಬಿಡುಗಡೆ; ಬೆಲೆ, ವೈಶಿಷ್ಟ್ಯ ಇತರ ವಿವರ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ