AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Multibagger Stock: ಟಾಟಾ ಸಮೂಹದ ಈ ಸ್ಟಾಕ್​ನಿಂದ ವರ್ಷದಲ್ಲಿ ಶೇ 1000ದಷ್ಟು ರಿಟರ್ನ್ಸ್

ಈ ಮಲ್ಟಿಬ್ಯಾಗರ್ ಸ್ಟಾಕ್​ ಕೇವಲ 1 ವರ್ಷದೊಳಗೆ ಶೇ 1000ದಷ್ಟು ರಿಟರ್ನ್ಸ್ ನೀಡಿದೆ. ಯಾವುದು ಆ ಸ್ಟಾಕ್ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Multibagger Stock: ಟಾಟಾ ಸಮೂಹದ ಈ ಸ್ಟಾಕ್​ನಿಂದ ವರ್ಷದಲ್ಲಿ ಶೇ 1000ದಷ್ಟು ರಿಟರ್ನ್ಸ್
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Mar 22, 2022 | 11:46 AM

Share

ರಷ್ಯಾ- ಉಕ್ರೇನ್ ಯುದ್ಧದ (Russia- Ukraine War) ಸನ್ನಿವೇಶದ ಆತಂಕ ಏನೇ ಇರಲಿ, ಆಟೋಮೊಟಿವ್ ಸ್ಟ್ಯಾಂಪಿಂಗ್ಸ್ ಅಂಡ್ ಅಸೆಂಬ್ಲೀಸ್ ಲಿಮಿಟೆಡ್​ನ ಷೇರು ಅದ್ಭುತ ಏರಿಕೆ ದಾಖಲಿಸಿದೆ. ಇದು ಟಾಟಾ ಸಮೂಹಕ್ಕೆ ಸೇರಿದ ಷೇರು. ಫೆಬ್ರವರಿ 25, 2022ರಿಂದ ಮಾರ್ಚ್ 16, 2022ಕ್ಕೆ ಪ್ರತಿ ಷೇರಿನ ಬೆಲೆ 244.40 ರೂಪಾಯಿಯಿಂದ 438.40ಕ್ಕೆ ಹೆಚ್ಚಳವಾಗಿದ್ದು, ಆ ಮೂಲಕ ಶೇ 80ರಷ್ಟು ಏರಿಕೆ ಕಂಡಿದೆ. ಆದರೆ ಈಗ ಈ ಷೇರು ಪ್ರಾಫಿಟ್​ ಬುಕ್ಕಿಂಗ್ ಒತ್ತಡದಲ್ಲಿದ್ದು, ಕಳೆದ ಎರಡು ಟ್ರೇಡಿಂಗ್ ಸೆಷನ್​ನಲ್ಲಿ ಲೋಯರ್ ಸರ್ಕ್ಯೂಟ್ ದಾಖಲಿಸಿದೆ. ಟಾಟಾ ಸಮೂಹಕ್ಕೆ ಸೇರಿದ ಈ ಷೇರು ತನ್ನ ಷೇರುದಾರರಿಗೆ ಅತ್ಯುತ್ತಮ ರಿಟರ್ನ್ಸ್ ನೀಡಿದ ಇತಿಹಾಸ ಹೊಂದಿದ್ದು, 2021ನೇ ಇಸವಿಯಲ್ಲಿ ಮಲ್ಟಿಬ್ಯಾಗರ್ ಸ್ಟಾಕ್​ಗಳಲ್ಲಿ ಒಂದಾಗಿದೆ. ಕಳೆದ ಒಂದು ವರ್ಷದಲ್ಲಿ ಆಟೋಮೊಟಿವ್ ಸ್ಟ್ಯಾಂಪಿಂಗ್ಸ್ ಅಂಡ್ ಅಸೆಂಬ್ಲೀಸ್ ಲಿಮಿಟೆಡ್​ನ ಷೇರು ಬೆಲೆ 35.25 ರೂಪಾಯಿಯಿಂದ 395.70 ರೂಪಾಯಿ ಮಟ್ಟಕ್ಕೆ ಏರಿಕೆ ಆಗಿದೆ. ಅಂದರೆ ಈ ಅವಧಿಯಲ್ಲಿ ಶೇ 1000ಕ್ಕೂ ಜಾಸ್ತಿ ಮೇಲೇರಿದೆ.

ಆಟೋಮೊಟಿವ್ ಸ್ಟ್ಯಾಂಪಿಂಗ್ಸ್ ಅಂಡ್ ಅಸೆಂಬ್ಲೀಸ್ ಲಿಮಿಟೆಡ್​ನ ಷೇರು ಇತಿಹಾಸ 2022ರ ಜನವರಿಯಲ್ಲಿ ಎನ್​ಎಸ್​ಇಯಲ್ಲಿ ಈ ಷೇರಿನ ಬೆಲೆ ಒಂದಕ್ಕೆ 925.45 ರೂಪಾಯಿಯಂತೆ ಗರಿಷ್ಠ ಮಟ್ಟವನ್ನು ಮುಟ್ಟಿತು. ಅಲ್ಲಿಂದ ಆಚೆಗೆ ಒಂದು ತಿಂಗಳು ಮಾರಾಟದ ಒತ್ತಡವನ್ನು ಎದುರಿಸಿತು. ಆದರೆ ಉಕ್ರೇನ್- ರಷ್ಯಾ ಬಿಕ್ಕಟ್ಟು ಕಾಣಿಸಿಕೊಂಡ ಮೇಲೆ ಭಾರತದ ಷೇರು ಮಾರುಕಟ್ಟೆಯಲ್ಲಿನ ದುರ್ಬಲತೆಯ ಹೊರತಾಗಿಯೂ ಟ್ರೆಂಡ್ ಉಲ್ಟಾ ಆಗಿದೆ. ಕಳೆದ ಒಂದು ತಿಂಗಳಲ್ಲಿ ಈ ಸ್ಟಾಕ್ 285 ರೂಪಾಯಿಯಿಂದ 395.70 ರೂಪಾಯಿ ಮಟ್ಟಕ್ಕೆ ಏರಿಕೆ ಆಗಿದೆ. ಅಂದರೆ ಹತ್ತಿರ ಹತ್ತಿರ ಶೇ 40ರಷ್ಟು ಮೇಲೇರಿದೆ. ಕಳೆದ 6 ತಿಂಗಳಲ್ಲಿ 58.45 ರುಪಾಯಿಯಿಂದ 395.70 ತಲುಪಿದ್ದು, ಶೇ 575ರಷ್ಟನ್ನು ಈ ಅವಧಿಯಲ್ಲಿ ರಿಟರ್ನ್ಸ್ ನೀಡಿದೆ. ಅದೇ ರೀತಿ ಕಳೆದ ಒಂದು ವರ್ಷದಲ್ಲಿ ಈ ಸ್ಟಾಕ್ 35.25ರ ಮಟ್ಟದಿಂದ 395.70ಗೆ ಜಿಗಿದಿದೆ. ಅಲ್ಲಿಗೆ ಕೇವಲ ಒಂದು ವರ್ಷದೊಳಗೆ 11 ಪಟ್ಟಿಗೂ ಹೆಚ್ಚು ಗಳಿಕೆ ದಾಖಲಿಸಿದೆ.

1 ಲಕ್ಷ ರೂಪಾಯಿ ಒಂದು ವರ್ಷದಲ್ಲಿ 11 ಲಕ್ಷ ಈ ಸ್ಟಾಕ್​ನ ಬೆಲೆ ಇತಿಹಾಸವನ್ನು ಗಮನಿಸುವುದಾದರೆ, ಹೂಡಿಕೆದಾರರು ಈ ಸ್ಟಾಕ್​ನಲ್ಲಿ ತಿಂಗಳ ಹಿಂದೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಲ್ಲಿ ಅದು ಇವತ್ತಿಗೆ 1.40 ಲಕ್ಷ ಆಗಿರುತ್ತಿತ್ತು. ಅದೇ ಅರು ತಿಂಗಳ ಹಿಂದೆ ಆಗಿದ್ದಲ್ಲಿ ಈಗ ಅದರ ಮೌಲ್ಯ 6.75 ಲಕ್ಷ ರೂಪಾಯಿ. ಇನ್ನು ಒಂದು ವರ್ಷದ ಹಿಂದೆ ಈ ಸ್ಟಾಕ್​ನಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿ, ಹಾಗೇ ಉಳಿಸಿಕೊಂಡಿದ್ದರೆ ಆ ಮೊತ್ತವು ಇವತ್ತಿಗೆ 11 ಲಕ್ಷ ರೂಪಾಯಿ ಆಗಿರುತ್ತಿತ್ತು.

ಆಟೋಮೊಟಿವ್ ಸ್ಟ್ಯಾಂಪಿಂಗ್ಸ್ ಅಂಡ್ ಅಸೆಂಬ್ಲೀಸ್ ಲಿಮಿಟೆಡ್​ ಬಗ್ಗೆ ಇನ್ನಷ್ಟು ಮಾಹಿತಿ ಟಾಟಾ ಸಮೂಹಕ್ಕೆ ಸೇರಿದ ಈ ಮಲ್ಟಿಬ್ಯಾಗರ್ ಸ್ಟಾಕ್​ನ ಸದ್ಯದ ಮಾರುಕಟ್ಟೆ ಬಂಡವಾಳ ಮೌಲ್ಯ 627.75 ಕೋಟಿ ರೂಪಾಯಿ. ಈ ಷೇರಿನ ಸಾರ್ವಕಾಲಿಕ ಗರಿಷ್ಠ ಮಟ್ಟದ ಬೆಕೆ 925.45 ರೂಪಾಯಿ ಮಟ್ಟವನ್ನು ಎನ್ಎಸ್​ಇಯಲ್ಲಿ 2022ರ ಜನವರಿಯಲ್ಲಿ ಮುಟ್ಟಿತ್ತು. ಇನ್ನು ವಾರ್ಷಿಕ ಕನಿಷ್ಠ ಮಟ್ಟ 30.25 ರೂಪಾಯಿ. ಸದ್ಯಕ್ಕೆ ಇದರ ವಹಿವಾಟಾಗುತ್ತಿರುವ ವಾಲ್ಯೂಮ್ 17,220. ಅಂದರೆ ಈ ಸ್ಟಾಕ್ ಕಡಿಮೆ ಲಿಕ್ವಿಡ್ ಮತ್ತು ಹೆಚ್ಚಿನ ಅಪಾಯದ್ದಾಗಿದ್ದು, ಭಾರೀ ಏರಿಳಿತಕ್ಕೆ ಕಾರಣ ಆಗುತ್ತದೆ.

ಇದನ್ನೂ ಓದಿ: Multibagger stock: ಈ ಮಲ್ಟಿಬ್ಯಾಗರ್ ಸ್ಟಾಕ್ ಮೇಲೆ 3 ವರ್ಷದ ಹಿಂದೆ ಮಾಡಿದ 1 ಲಕ್ಷದ ಹೂಡಿಕೆ ಈಗ ಎಷ್ಟು ಕೋಟಿ ಗೊತ್ತೆ?

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?