ಬಿಎಸ್ಇ ಎಸ್ಎಂಇ ಎಕ್ಸ್ಚೇಂಜ್ ಹಲವು ಮಲ್ಟಿಬ್ಯಾಗರ್ ಷೇರುಗಳನ್ನು ನೀಡಿದೆ. ಈಗಾಗಲೇ ಹಲವು ಬಾರಿ ಪ್ರಸ್ತಾವ ಮಾಡಿದಂತೆ, ಮಲ್ಟಿಬ್ಯಾಗರ್ ಅಂದರೆ ಹಾಕಿದ ಬಂಡವಾಳ ಹಲವು ಪಟ್ಟು ಹೆಚ್ಚಳ ಆಗಿರುವಂಥದ್ದು ಎಂದರ್ಥ. ಇನ್ನು ಬಿಎಸ್ಇ ಎಸ್ಎಂಇ ಎಕ್ಸ್ಚೇಂಕ್ ಆರಂಭವಾದದ್ದು 2012ರಲ್ಲಿ. ಸಣ್ಣ ಮತ್ತು ಮಧ್ಯಮ ಗಾತ್ರದ ಸಂಸ್ಥೆಗಳಿಗೆ ಅಂತಲೇ ಮೀಸಲಾದ ಎಕ್ಸ್ಚೇಂಜ್ ಇದು. ಇಲ್ಲಿ ನೀಡಲಾಗಿರುವ ಕೆಲವು ಸ್ಟಾಕ್ಗಳನನ್ಉ ಹೂಡಿಕೆದಾರರು ದೀರ್ಘ ಸಮಯದಿಂದ ಇರಿಸಿಕೊಂಡಿದ್ದರು ಅಂತಾದರೆ ಹೂಡಿಕೆ ಮೊತ್ತವು ಹಲವು ಪಟ್ಟು ಹೆಚ್ಚಾಗಿರುತ್ತದೆ. ಅದರಲ್ಲೂ ಕೆಲವು ಶೇ 5000ದಷ್ಟು ಜಾಸ್ತಿ ಆಗಿರುತ್ತವೆ. ಇಲ್ಲಿ ಒಂದು ಪಟ್ಟಿ ನೀಡಲಾಗಿದ್ದು, ಇವು ಬಿಎಸ್ಇ ಎಸ್ಎಂಇ ಷೇರುಗಳು. ಲಿಸ್ಟಿಂಗ್ ಆದ ಮೇಲೆ ಹಲವು ಪಟ್ಟುಗಳು ಏರಿಕೆ ದಾಖಲಿಸಿವೆ.
1. ಆದಿತ್ಯ ವಿಷನ್
ಈ ಬಿಎಸ್ಇ ಎಸ್ಎಂಇ ಷೇರು ಪ್ರತಿ ಷೇರು 764 (ಮಧ್ಯಾಹ್ನ 2.36) ಇತ್ತು. ಡಿಸೆಂಬರ್ 16, 2016ರಂದು 15.50 ರೂಪಾಯಿಗೆ ಲಿಸ್ಟಿಂಗ್ ಆಗಿತ್ತು. ಪ್ರತಿ ಷೇರಿಗೆ 15ರಂತೆ ವಿತರಿಸಲಾಗಿತ್ತು. ಅದನ್ನು ಇವತ್ತಿನ ದರಕ್ಕೆ ಹೋಲಿಸಿದಲ್ಲಿ ಹೂಡಿಕೆದಾರರಿಗೆ ಶೇ 4834ರಷ್ಟು ರಿಟರ್ನ್ಸ್ ನೀಡಿದೆ. ಹಾಗೆ ನೋಡಿದರೆ ಈಚೆಗಿನ ಟ್ರೇಡಿಂಗ್ ಸೆಷನ್ನಲ್ಲಿ ಹೂಡಿಕೆದಾರರು ಲಾಭವನ್ನು ನಗದು ಮಾಡಿಕೊಂಡಿದ್ದಾರೆ. ಅದಕ್ಕೂ ಕೆಲ ವಾರಗಳ ಹಿಂದೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 1564.10 ರೂಪಾಯಿ ಮುಟ್ಟಿತ್ತು. ಆದಿತ್ಯ ವಿಷನ್ ಕಂಪೆನಿ ಲಿಸ್ಟಿಂಗ್ ಆಗಬೇಕಾದರೆ ಲಾಟ್ ಗಾತ್ರ 8000 ಇತ್ತು. 15 ರೂಪಾಯಿಯಲ್ಲಿ 8000 ಷೇರುಗಳು ಅಂದರೆ, (15X8000) 1.20 ಲಕ್ಷ ರೂಪಾಯಿ ಆಗುತ್ತದೆ. ಒಂದು ವೇಳೆ ಆಗ ಹೂಡಿಕೆ ಮಾಡಿ, ಈಗಲೂ ಆ ಷೇರುಗಳನ್ನು ಇರಿಸಿಕೊಂಡಿದ್ದಲ್ಲಿ 1.2 ಲಕ್ಷ ರೂಪಾಯಿ 61.88 ಲಕ್ಷ ರೂಪಾಯಿ ಆಗಿರುತ್ತದೆ.
2. ರಾಘವ್ ಪ್ರೊಡಕ್ಟಿವಿಟಿ ಎನ್ಹ್ಯಾನ್ಸರ್ಸ್
ರಾಕೇಶ್ ಜುಂಜುನ್ವಾಲಾ ಈ ಎಸ್ಎಂಇ ಸ್ಟಾಕ್ನಲ್ಲಿ 30.90 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಾರೆ ಎಂಬ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದೆ. ಈ ಕಂಪೆನಿಯ ಐಪಿಒ ಪ್ರತಿ ಷೇರಿಗೆ 39 ರೂಪಾಯಿಯಂತೆ, ಲಾಟ್ ಗಾತ್ರ 3000ದಂತೆ ವಿತರಿಸಲಾಯಿತು. ಹೂಡಿಕೆದಾರರು (39X3000) 1.17 ಲಕ್ಷ ರೂಪಾಯಿ ಹಣ ಹಾಕಬೇಕಿತ್ತು. ರಾಘವ್ ಪ್ರೊಡಕ್ಟಿವಿಟಿ ಎನ್ಹ್ಯಾನ್ಸರ್ಸ್ ಏಪ್ರಿಲ್ 13, 2016ರಂದು ಬಿಎಸ್ಇ ಎಸ್ಎಂಇ ಎಕ್ಸ್ಚೇಂಜ್ನಲ್ಲಿ ಲಿಸ್ಟ್ ಆಯಿತು. ದರ ಆರಂಭವಾದದ್ದು 41 ರೂಪಾಯಿಗೆ. ಇವತ್ತಿಗೆ (ಮಧ್ಯಾಹ್ನ 2.51) ಷೇರು ಬೆಲೆ 743.35 ಇದ್ದು, ಲಿಸ್ಟಿಂಗ್ ಬೆಲೆ 18.13 ಪಟ್ಟು ಹೆಚ್ಚಳವಾಗಿದೆ. ಆದ್ದರಿಂದ ಹೂಡಿಕೆದಾರರು ರಾಘವ್ ಪ್ರೊಡಕ್ಟಿವಿಟಿ ಎನ್ಹ್ಯಾನ್ಸರ್ಸ್ ವಿತರಣೆ ವೇಳೆ 1.17 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಲ್ಲಿ ಇವತ್ತಿಗೆ 22.30 ಲಕ್ಷ ರೂಪಾಯಿ ಆಗಿರುತ್ತದೆ.
3. ಷೇರ್ ಇಂಡಿಯಾ ಸೆಕ್ಯೂರಿಟೀಸ್
ಈ ಎಸ್ಎಂಇ ಸ್ಟಾಕ್ ಸಾರ್ವಜನಿಕ ವಿತರಣೆ ಪ್ರತಿ ಷೇರಿಗೆ 41 ರೂಪಾಯಿಯಂತೆ 2017ರ ಸೆಪ್ಟೆಂಬರ್ 21ರಂದು ಆಯಿತು. ಒಂದು ಲಾಟ್ಗೆ 3000 ಷೇರು ಒಳಗೊಂಡಿತ್ತು. ಅಂದರೆ ಒಟ್ಟು, 1.23 ಲಕ್ಷ ರೂಪಾಯಿ (41X3000) ಹೂಡಬೇಕಿತ್ತು. ಎಸ್ಎಂಇ ಸ್ಟಾಕ್ ಬಿಎಸ್ಇ ಎಸ್ಎಂಇ ಎಕ್ಸ್ಚೇಂಜ್ನಲ್ಲಿ ಅಕ್ಟೋಬರ್ 5, 2017ರಂದು 92.60 ರೂಪಾಯಿಗೆ ಶೇ 100ಕ್ಕೂ ಹೆಚ್ಚು ಪ್ರೀಮಿಯಂನೊಂದಿಗೆ ಲಿಸ್ಟ್ ಆಗಿತ್ತು. ಇವತ್ತಿಗೆ ಷೇರ್ ಇಂಡಿಯಾ ದರ 514.65 ರೂಪಾಯಿ ಇದೆ. ಆರಂಭದಲ್ಲಿ 1.23 ಲಕ್ಷ ರೂಪಾಯಿ ಹೂಡಿಕೆ ಮಾಡಿದವರ ಮೊತ್ತ ಈಗ 12.55 ಲಕ್ಷ ರೂಪಾಯಿ ಆಗಿರುತ್ತದೆ.
ಇದನ್ನೂ ಓದಿ: 1 ಲಕ್ಷ ಹೂಡಿಕೆ ಮಾಡಿದ ಈ ಷೇರುದಾರನಿಗೆ ಸಿಕ್ತು 40 ಲಕ್ಷ; ಅಬ್ಬಾ ಯಾವುದೀ ಷೇರು
(Investment Of Rs 1.20 Lakhs In This Multibagger Become Rs 62 Lakhs In 5 Lakhs)