Retrospective Case: ಕೇರ್ನ್ ಹಾಕಿದ 120 ಕೋಟಿ ಅಮೆರಿಕನ್ ಡಾಲರ್ ದಾವೆ ತಿರಸ್ಕರಿಸುವಂತೆ ಭಾರತದಿಂದ ಅಮೆರಿಕಾಗೆ ಮನವಿ

ಭಾರತ ಸರ್ಕಾರದಿಂದ 120 ಕೋಟಿ ಯುಎಸ್​ಡಿ ವಸೂಲಿ ಮಾಡಿಕೊಡುವುದಕ್ಕೆ ಮಧ್ಯಪ್ರವೇಶ ಮಾಡಬೇಕು ಎಂದು ಕೇಳಿಕೊಂಡಿರುವ ಕೇರ್ನ್ ಎನರ್ಜಿ ಅರ್ಜಿಯನ್ನು ತಿರಸ್ಕರಿಸುವಂತೆ ಅಮೆರಿಕ ಕೋರ್ಟ್​ ಅನ್ನು ಕೇಂದ್ರ ಕೇಳಿದೆ.

Retrospective Case: ಕೇರ್ನ್ ಹಾಕಿದ 120 ಕೋಟಿ ಅಮೆರಿಕನ್ ಡಾಲರ್ ದಾವೆ ತಿರಸ್ಕರಿಸುವಂತೆ ಭಾರತದಿಂದ ಅಮೆರಿಕಾಗೆ ಮನವಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on: Aug 17, 2021 | 9:04 PM

120 ಕೋಟಿ ಅಮೆರಿಕನ್ ಡಾಲರ್ ಮೊತ್ತದ ಮಧ್ಯಸ್ಥಿಕೆ ಪರಿಹಾರ ಕೊಡಿಸಬೇಕು ಎಂದು ಅಮೆರಿಕದ ಫೆಡರಲ್ ಕೋರ್ಟ್​ನಲ್ಲಿ ಬ್ರಿಟನ್ ಮೂಲದ ಕೇರ್ನ್ ಎನರ್ಜಿಯಿಂದ ಹಾಕಿರುವ ಅರ್ಜಿಯನ್ನು ವಜಾಗೊಳಿಸಬೇಕು, ಅಮೆರಿಕದ ಕಾನೂನು ಅಡಿಯಲ್ಲಿ ಭಾರತೀಯ ಸರ್ಕಾರಕ್ಕೆ ಸಾರ್ವಭೌಮತೆಯ ರಕ್ಷಣೆ ಇದೆ ಎಂದು ಕೇಂದ್ರದಿಂದ ಕೇಳಲಾಗಿದೆ. ಕಳೆದ ಡಿಸೆಂಬರ್​ನಲ್ಲಿ ಗೆದ್ದ ತೆರಿಗೆ ವ್ಯಾಜ್ಯದ ಪ್ರಕರಣಕ್ಕೆ ಸಂಬಂಧಿಸಿದಂತೆ ಏರ್​ ಇಂಡಿಯಾದಿಂದ 126 ಕೋಟಿ ಅಮೆರಿಕನ್ ಡಾಲರ್ ಮಧ್ಯಸ್ಥಿಕೆ ಪರಿಹಾರ ಮೊತ್ತವನ್ನು ಕೊಡಿಸುವುದಕ್ಕೆ ಕೋರ್ಟ್​ನಿಂದ ಏರ್​ ಇಂಡಿಯಾ ಮೇಲೆ ಒತ್ತಡ ಹೇರಬೇಕು ಎಂಬುದಾಗಿ ಕೇರ್ನ್ ಕೇಳಿಕೊಂಡಿತ್ತು. ಅಮೆರಿಕದ ಡಿಸ್ಟ್ರಿಕ್ಟ್​ ಕೋರ್ಟ್​- ಕೊಲಂಬಿಯಾ ಜಿಲ್ಲಾ ಕೋರ್ಟ್​​ನಲ್ಲಿ ಭಾರತ ಸರ್ಕಾರವು ವಜಾ ನಿರ್ಣಯಕ್ಕಾಗಿ ಆಗಸ್ಟ್​ 13ಕ್ಕೆ ಅರ್ಜಿ ಸಲ್ಲಿಸಿತ್ತು. ಭಾರತದ ತೆರಿಗೆ ಅಧಿಕಾರಿಗಳು ಮತ್ತು ಕೇರ್ನ್ ಮಧ್ಯೆ ಇರುವ ವ್ಯಾಜ್ಯವು ಅಲ್ಲಿನ ನ್ಯಾಯಾಂಗದ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿರುವುದಾಗಿ ಫೈಲಿಂಗ್ ಅನ್ನು ಗಮನಿಸಿರುವ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕೆಲ ದಿನಗಳ ಹಿಂದಷ್ಟೇ ಭಾರತ ಸರ್ಕಾರವು ಪೂರ್ವಾನ್ವಯ ತೆರಿಗೆಯನ್ನು ರದ್ದುಗೊಳಿಸಿದೆ. ಇದಕ್ಕೂ ಮುನ್ನ ತೆರಿಗೆ ಇಲಾಖೆಗೆ ಇದ್ದ ಅಧಿಕಾರದ ಪ್ರಕಾರ, 50 ವರ್ಷಗಳ ಹಿಂದಿನ ತನಕ ಪರಿಶೀಲಿಸಿ, ವಿದೇಶದಲ್ಲಿ ಮಾಲೀಕತ್ವ ಬದಲಾದಲ್ಲಿ ಕ್ಯಾಪಿಟಲ್ ಗೇಯ್ನ್ಸ್​ ತೆರಿಗೆ ವಿಧಿಸಬಹುದಾಗಿತ್ತು. ಆದರೆ ಆ ಉದ್ಯಮದ ಆಸ್ತಿಯು ಭಾರತದಲ್ಲಿ ಇರಬೇಕು. ಈ ನಿಯಮವನ್ನು ಬಳಸಿ, ಕ್ಯುಮ್ಯುಲೇಟಿವ್ ಆಗಿ 1.10 ಲಕ್ಷ ಕೋಟಿ ರೂಪಾಯಿಯನ್ನು 17 ಕಂಪೆನಿಗಳ ಮೇಲೆ ತೆರಿಗೆಯಾಗಿ ವಿಧಿಸಲಾಗಿತ್ತು. ಅದರಲ್ಲಿ ಕೇರ್ನ್​ನ 10,247 ಕೋಟಿ ರೂಪಾಯಿ ಸಹ ಒಳಗೊಂಡಿತ್ತು. ಅಧಿಕಾರಿಗಳು ಹೇಳಿರುವಂತೆ, ಅಂತಹ ತೆರಿಗೆ ಬೇಡಿಕೆಗಳನ್ನು ಹಿಂಪಡೆಯುವ ನಿಯಮಾವಳಿಗಳನ್ನು ರೂಪಿಸುವ ಪ್ರಕ್ರಿಯೆ ನಡೆದಿದೆ.

ಮೊಕದ್ದಮೆಗಳನ್ನು ಹಿಂಪಡೆಯುವುದಕ್ಕೆ ಒಪ್ಪಬೇಕು “ಪೂರ್ವಾನ್ವಯ ತೆರಿಗೆ ಕೈಬಿಡುವುದಕ್ಕೆ ಅತಿ ಮುಖ್ಯವಾದ ಅಗತ್ಯ ಏನೆಂದರೆ, ಸಂಬಂಧಪಟ್ಟ ಪಕ್ಷಗಳವರು ಸರ್ಕಾರ/ತೆರಿಗೆ ಇಲಾಖೆ ವಿರುದ್ಧ ಹೂಡಿರುವ ಮೊಕದ್ದಮೆಗಳನ್ನು ಹಿಂಪಡೆಯುವುದಕ್ಕೆ ಒಪ್ಪಬೇಕು. ಆದ್ದರಿಂದ ಈ ಎಲ್ಲವೂ ಪ್ರಕ್ರಿಯೆಯಲ್ಲಿ ಇರುವುದರಿಂದ ಎಲ್ಲಿ ಸಮಯದ ಗಡುವು ಎಂದಿದೆಯೋ ಅಂಥ ಕಡೆಗಳಲ್ಲಿ ಸರ್ಕಾರದಿಂದ ಪ್ರತಿಕ್ರಿಯೆಗಳ್ನು ದಾಖಲಿಸಬೇಕಾಗುತ್ತದೆ,” ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಕೇರ್ನ್​ನಿಂದ ತೆರಿಗೆ ಬೇಡಿಕೆ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿಯ ಮುಂದೆ ಪ್ರಶ್ನಿಸಲಾಗಿತ್ತು. ಕಳೆದ ಡಿಸೆಂಬರ್​ನಲ್ಲಿ ಭಾರತ ಸರ್ಕಾರದ ಬೇಡಿಕೆ ವಿರುದ್ಧ ತೀರ್ಪು ಬಂದು, ಸಂಗ್ರಹ ಮಾಡಿದ ಮೊತ್ತವನ್ನು ಹಿಂತಿರುಗಿಸುವಂತೆ ಭಾರತ ಸರ್ಕಾರಕ್ಕೆ ಆದೇಶ ನೀಡಲಾಯಿತು. ಆರಂಭದಲ್ಲಿ 120 ಕೋಟಿ ಅಮೆರಿಕನ್ ಡಾಲರ್ ಹಿಂತಿರುಗಿಸಲು ಸರ್ಕಾರ ನಿರಾಕರಿಸಿತು. ಈ ಕಾರಣದಿಂದ ವಿದೇಶಗಳಲ್ಲಿ ಇರುವ ಭಾರತ ಸರ್ಕಾರದ ಆಸ್ತಿಯನ್ನು ವಶಪಡಿಸಿಕೊಂಡು, ಆ ಹಣವನ್ನು ವಸೂಲಿ ಮಾಡುವುದಕ್ಕೆ ಕೇರ್ನ್ ಮುಂದಾಗುವಂತೆ ಮಾಡಿತು.

ಕಳೆದ ಮೇ ತಿಂಗಳಲ್ಲಿ ಏರ್​ ಇಂಡಿಯಾವನ್ನು ಅಮೆರಿಕ ಕೋರ್ಟ್​ಗೆ ಎಳೆಯಿತು ಕೇರ್ನ್ ಮತ್ತು ಕಳೆದ ತಿಂಗಳು ಪ್ಯಾರಿಸ್​ನಲ್ಲಿನ ಭಾರತೀಯ ಸರ್ಕಾರಕ್ಕೆ ಸೇರಿದ ರಿಯಲ್ ಎಸ್ಟೇಟ್ ಆಸ್ತಿಗಳನ್ನು ವಶಪಡಿಸಿಕೊಳ್ಳುವುದಕ್ಕೆ ಫ್ರೆಂಚ್ ಕೋರ್ಟ್​ನಿಂದ ಆದೇಶ ಪಡೆಯಿತು. ಅಮೆರಿಕದಲ್ಲಿ ದಾವೆ ಹೂಡಿದ ಕೇರ್ನ್, ಏರ್​ ಇಂಡಿಯಾವು ಭಾರತ ಸರ್ಕಾರದ ಹತೋಟಿಯಲ್ಲಿದೆ. ಆದ್ದರಿಂದ ಮಧ್ಯಸ್ಥಿಕೆ ಮೊತ್ತವನ್ನು ಪಾವತಿಸಲು ಅದು ಜವಾಬ್ದಾರಿ ಆಗುತ್ತದೆ ಎಂದಿತ್ತು. ಅದಕ್ಕೆ ಪ್ರತಿಕ್ರಿಯೆಯಾಗಿ ಭಾರತ ಸರ್ಕಾರದಿಂದ ವಜಾ ನಿರ್ಣಯವನ್ನು ದಾಖಲಿಸಲಾಯಿತು. ಯುಎಸ್​ ಫಾರಿನ್ ಸವರನ್ ಇಮ್ಯುನಿಟೀಸ್ ಆ್ಯಕ್ಟ್ ಆಫ್ 1976 ಅಡಿಯಲ್ಲಿ ರಕ್ಷಣೆ ದೊರೆಯಬೇಕು ಎಂದಿತ್ತು.

ಚರ್ಚೆ ನಡೆಯುತ್ತಿದೆ ಭಾರತವು ಪೂರ್ವಾನ್ವಯ ತೆರಿಗೆ ಎಂದು ಸಂಗ್ರಹಿಸಿರುವ 8100 ಕೋಟಿ ರೂಪಾಯಿ ಹಿಂತಿರುಗಿಸಬೇಕು. ಅದರಲ್ಲಿ 7900 ಕೋಟಿ ರೂಪಾಯಿ ಕೇರ್ನ್ ಎನರ್ಜಿಗೆ ನೀಡಬೇಕು. ಇತರ ಪ್ರಕರಣದಲ್ಲಿ ತೆರಿಗೆ ಬೇಡಿಕೆ ವಸೂಲಿಗೆ ಕಠಿಣ ಕ್ರಮಕ್ಕೆ ಮುಂದಾಗಿಲ್ಲ. ಈ ಹಿಂದೆ ಭಾರತದ ಅಂಗಸಂಸ್ಥೆಯಲ್ಲಿ ಕೇರ್ನ್ ಹೊಂದಿದ್ದ ಶೇ 10ರಷ್ಟು ಷೇರಿನ ಪಾಲನ್ನು ಆದಾಯ ತೆರಿಗೆ ಇಲಾಖೆಯು ಮಾರಾಟ ಮಾಡಿದೆ ಹಾಗೂ 1140 ಕೋಟಿ ರೂಪಾಯಿ ಡಿವಿಡೆಂಡ್​ಗಳನ್ನು ವಶಪಡಿಸಿಕೊಂಡಿದೆ ಮತ್ತು 1590 ಕೋಟಿ ರೂಪಾಯಿ ತೆರಿಗೆ ರೀಫಂಡ್​ಗಳನ್ನು ತಡೆದಿದೆ. ಅಂದಹಾಗೆ 22,100 ಕೋಟಿ ರೂಪಾಯಿ ತೆರಿಗೆ ವ್ಯಾಜ್ಯದಲ್ಲಿ ವೊಡಾಫೋನ್​ ಪರವಾಗಿ ತೀರ್ಪು ಬಂದಿದೆ. ಅಂದಹಾಗೆ ಹಣಕಾಸು ಸಚಿವೆ ಮಾತನಾಡಿ, ಸಚಿವಾಲಯದ ಅಧಿಕಾರಿಗಳು ಕೇರ್ನ್ ಮತ್ತು ವೊಡಾಫೋನ್ ಜತೆಗೆ ಪೂರ್ವಾನ್ವಯ ತೆರಿಗೆ ಬಗ್ಗೆ ಚರ್ಚಿಸುತ್ತಿದ್ದು, ಮರುಪಾವತಿ ಹಾಗೂ ವಿಲೇವಾರಿ ಮಾಡಲಾಗುವುದು ಎಂದಿದ್ದಾರೆ.

ಇದನ್ನೂ ಓದಿ: Retrospective Tax: ಪೂರ್ವಾನ್ವಯ ತೆರಿಗೆ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲೂ ಅಂಗೀಕಾರ

Retrospective Tax: ಹಿಂದಿನ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಪ್ರಸ್ತಾವದ ಮಹತ್ವ ಏನು? ವಿವರಣೆ ಇಲ್ಲಿದೆ

(Indian Government Asks US Court To Reject Cairn Energy Appeal Court To Intervention In 120 Crore USD Suit)

ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ