AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Multibagger Penny Stock: ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್​ನಲ್ಲಿನ ರೂ. 1 ಲಕ್ಷ ಹೂಡಿಕೆ 3 ವರ್ಷದಲ್ಲಿ ರೂ. 91 ಲಕ್ಷ

ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್​ನಲ್ಲಿ ರೂ. 1 ಲಕ್ಷದ ಹೂಡಿಕೆ ಕೇವಲ ಮೂರು ವರ್ಷದಲ್ಲಿ 91 ಲಕ್ಷ ರೂಪಾಯಿ ಆಗಿದೆ. ಯಾವುದು ಆ ಸ್ಟಾಕ್ ಎಂಬ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.

Multibagger Penny Stock: ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್​ನಲ್ಲಿನ ರೂ. 1 ಲಕ್ಷ ಹೂಡಿಕೆ 3 ವರ್ಷದಲ್ಲಿ ರೂ. 91 ಲಕ್ಷ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Dec 18, 2021 | 1:01 PM

Share

ಅಮೆರಿಕದ ಹಿರಿಯ ಹೂಡಿಕೆದಾರರೊಬ್ಬರು ಹೇಳಿರುವ ಪ್ರಕಾರ, ಹಣ ಇರುವುದು ಖರೀದಿ ಮತ್ತು ಮಾರಾಟದಲ್ಲಿ ಅಲ್ಲ; ಕಾಯುವುದರಲ್ಲಿ ಎಂದಿದ್ದಾರೆ. ಬರ್ಕ್‌ಶೈರ್ ಹಾಥ್‌ವೇ ಉಪಾಧ್ಯಕ್ಷರಾದ ಅವರ ಈ ಹೇಳಿಕೆಯು ಹೈದರಾಬಾದ್ ಮೂಲದ ಡಿಜಿಟಲ್ ಮಾರ್ಕೆಟಿಂಗ್ ಕಂಪೆನಿ ಸ್ಟಾಕ್ ಬ್ರೈಟ್‌ಕಾಮ್ ಗ್ರೂಪ್​ಗೆ ಚೆನ್ನಾಗಿ ಒಪ್ಪುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಈ ಪೆನ್ನಿ ಸ್ಟಾಕ್ ಪ್ರತಿ ರೂ. 2.16ರಿಂದ ರೂ. 195.90 ಮಟ್ಟಕ್ಕೆ ಏರಿದೆ – ಅದರ ಷೇರುದಾರರಿಗೆ ಶೇ 9,000ದಷ್ಟು ಲಾಭವನ್ನು ನೀಡುತ್ತದೆ.

ಬ್ರೈಟ್‌ಕಾಮ್ ಗ್ರೂಪ್ ಷೇರು ಬೆಲೆ ಇತಿಹಾಸ ಹೊಸ ವರ್ಷ ಪ್ರಾರಂಭವಾಗುತ್ತಿದ್ದಂತೆ ಷೇರು ಮಾರುಕಟ್ಟೆಯ ಹೂಡಿಕೆದಾರರು 2022ಕ್ಕೆ ಮಲ್ಟಿಬ್ಯಾಗರ್ ಸ್ಟಾಕ್‌ ಆಗಿ ಇದರ ಮೇಲೆ ಹಣ ಹೂಡಬಹುದು ಎಂಬ ಸುಳಿವು ನೀಡುತ್ತಿದೆ. ಕಳೆದ ಒಂದು ವಾರದಲ್ಲಿ ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ 5ರಲ್ಲಿ 3 ಟ್ರೇಡ್ ಸೆಷನ್‌ಗಳಲ್ಲಿ ಶೇ 5ರ ಅಪ್ಪರ್ ಸರ್ಕ್ಯೂಟ್‌ನಲ್ಲಿ ಶೇಕಡಾ 16ರಷ್ಟು ಏರಿಕೆಯಾಗಿದೆ. ಕಳೆದ ಒಂದು ತಿಂಗಳಲ್ಲಿ ಪೆನ್ನಿ ಸ್ಟಾಕ್ ಸುಮಾರು ರೂ.108ರಿಂದ ರೂ. 195.90ಕ್ಕೆ ಏರಿದೆ. ಈ ಅವಧಿಯಲ್ಲಿ ಸುಮಾರು ಶೇ 80ರಷ್ಟು ಹೆಚ್ಚಳ ಕಂಡಿದೆ. ಅದೇ ರೀತಿ ಕಳೆದ 6 ತಿಂಗಳಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿನ ಈ ಮಲ್ಟಿಬ್ಯಾಗರ್ ಸ್ಟಾಕ್ ರೂ. 12.20ರಿಂದ ರೂ. 195.90 ಮಟ್ಟಕ್ಕೆ ಜಿಗಿದಿದ್ದು, ಶೇ 1500ರಷ್ಟು ಏರಿಕೆ ದಾಖಲಿಸಿದೆ.

ಈ ವರ್ಷದ ಆರಂಭದಿಂದ ಇಲ್ಲಿಯ ತನಕ (YTD) ಸಮಯದಲ್ಲಿ NSEಯಲ್ಲಿ ಲಿಸ್ಟಿಂಗ್ ಆದ ಮಲ್ಟಿಬ್ಯಾಗರ್ ಸ್ಟಾಕ್ ಸುಮಾರು ರೂ. 7ರಿಂದ ರೂ. 195.90ಕ್ಕೆ ಏರಿದೆ. ಅದರ ಷೇರುದಾರರಿಗೆ ಸುಮಾರು ಶೇ 2700ರಷ್ಟು ಲಾಭವನ್ನು ನೀಡಿದೆ. ಅದೇ ರೀತಿ ಕಳೆದ ಒಂದು ವರ್ಷದಲ್ಲಿ ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ರೂ. 4.24 ರಿಂದ ರೂ. 195.90 ಮಟ್ಟಕ್ಕೆ ಏರಿಕೆಯಾಗಿದೆ. ಅಂದರೆ ಪೆನ್ನಿ ಸ್ಟಾಕ್ ಕಳೆದ ಒಂದು ವರ್ಷದಲ್ಲಿ ಶೇ 4500ರಷ್ಟು ಏರಿಕೆ ದಾಖಲಿಸಿದೆ.

ಬ್ರೈಟ್‌ಕಾಮ್ ಸಮೂಹದ ಷೇರಿನ ಬೆಲೆ ಇತಿಹಾಸವನ್ನು ಇನ್ನಷ್ಟು ಆಳವಾಗಿ ಗಮನಿಸಿದರೆ, ಈ ಡಿಜಿಟಲ್ ಮಾರ್ಕೆಟಿಂಗ್ ಕಂಪೆನಿಯ ಸ್ಟಾಕ್ ಬೆಲೆಯು 4ನೇ ಜನವರಿ 2019ರಂದು ಎನ್​ಎಸ್​ಇನಲ್ಲಿ ರೂ. 2.16 ಇದ್ದದ್ದು, 17ನೇ ಡಿಸೆಂಬರ್ 2021ರಂದು ಎನ್​ಎಸ್​ಇನಲ್ಲಿ ಇದರ ಅಂತಿಮ ಬೆಲೆ ರೂ. 195.90 ಆಗಿದೆ. ಆದ್ದರಿಂದ ಸುಮಾರು 3 ವರ್ಷಗಳ ಅವಧಿಯಲ್ಲಿ ಷೇರುಗಳು ತನ್ನ ಷೇರುದಾರರಿಗೆ ಶೇ 9000ದಷ್ಟು ಲಾಭವನ್ನು ನೀಡಿವೆ.

ಹೂಡಿಕೆಯ ಮೇಲೆ ಪರಿಣಾಮ ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್‌ಗಳ ಷೇರುಗಳ ಬೆಲೆ ಇತಿಹಾಸದ ಬೆಲೆಯನ್ನು ಗಮನಿಸುವುದಾದರೆ, ಹೂಡಿಕೆದಾರರು ಒಂದು ತಿಂಗಳ ಹಿಂದೆ ಈ ಸ್ಟಾಕ್‌ನಲ್ಲಿ ರೂ. 1 ಲಕ್ಷವನ್ನು ಹೂಡಿಕೆ ಮಾಡಿದ್ದರೆ ಆ 1 ಲಕ್ಷವು ಇಂದು ರೂ. 1.80 ಲಕ್ಷಕ್ಕೆ ಬದಲಾಗುತ್ತಿತ್ತು. ಈ ಮಲ್ಟಿಬ್ಯಾಗರ್ ಸ್ಟಾಕ್‌ನಲ್ಲಿ ಹೂಡಿಕೆದಾರರು 6 ತಿಂಗಳ ಹಿಂದೆ 1 ಲಕ್ಷ ಹೂಡಿಕೆ ಮಾಡಿದ್ದರೆ ಇಂದು ರೂ. 16 ಲಕ್ಷ ಆಗುತ್ತಿತ್ತು. ಹೂಡಿಕೆದಾರರು ಒಂದು ವರ್ಷದ ಹಿಂದೆ ಈ ಕೌಂಟರ್‌ನಲ್ಲಿ ರೂ. 1 ಲಕ್ಷ ಹೂಡಿಕೆ ಮಾಡಿದ್ದರೆ ಮತ್ತು ಈ ಅವಧಿಯಲ್ಲಿ ಆ 1 ಲಕ್ಷ ರೂ. 46 ಲಕ್ಷಕ್ಕೆ ಬದಲಾಗುತ್ತಿತ್ತು.

ಅದೇ ರೀತಿ, ಹೂಡಿಕೆದಾರರು ಸುಮಾರು 3 ವರ್ಷಗಳ ಹಿಂದೆ 1 ಲಕ್ಷ ರೂಪಾಯಿಯನ್ನು ತಲಾ ರೂ. 2.16ರಂತೆ ಖರೀದಿಸಿ, ಇಲ್ಲಿಯವರೆಗೆ ಸ್ಕ್ರಿಪ್‌ನಲ್ಲಿ ಹೂಡಿಕೆ ಮಾಡಿದ್ದರೆ ಆ 1 ಲಕ್ಷ ರೂಪಾಯಿ ಇಂದು 91 ಲಕ್ಷ ರೂಪಾಯಿಯಾಗಿ ಬದಲಾಗುತ್ತಿತ್ತು.

ಇದನ್ನೂ ಓದಿ: Multibagger: ಕೇವಲ 18 ತಿಂಗಳಲ್ಲಿ 1 ಲಕ್ಷ ರೂ. ಹೂಡಿಕೆ 1.06 ಕೋಟಿ ರೂಪಾಯಿಗೆ ಬೆಳೆದ ಮಲ್ಟಿಬ್ಯಾಗರ್ ಸ್ಟಾಕ್ ಇದು

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್