ಕೊವಿಡ್-19 ನಂತರ ಪ್ರಬಲವಾದ ಚೇತರಿಕೆ ಕಾರಣದಿಂದಾಗಿ ಭಾರತೀಯ ಷೇರು ಮಾರುಕಟ್ಟೆಯು 2021ರಲ್ಲಿ ಉತ್ತಮ ಸಂಖ್ಯೆಯ ಮಲ್ಟಿಬ್ಯಾಗರ್ ಸ್ಟಾಕ್‌ಗಳನ್ನು ನೀಡಿತು. ಈ ಮಲ್ಟಿಬ್ಯಾಗರ್ ಸ್ಟಾಕ್‌ಗಳು ಮಾರುಕಟ್ಟೆಯ ಏರಿಕೆಯಲ್ಲಿ ಭಾಗವಹಿಸಿದ್ದು, ಇದರಲ್ಲಿ ಎಲ್ಲ ವಿಭಾಗಗಳ ಷೇರುಗಳನ್ನು ಒಳಗೊಂಡಿದೆ. 2021ನೇ ಇಸವಿಯು ಸಣ್ಣ ಮತ್ತು ಪೆನ್ನಿ ಸ್ಟಾಕ್‌ಗಳಿಗೆ ಗಮನ ಸೆಳೆದಿದೆ. ಏಕೆಂದರೆ ಪೆನ್ನಿ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುವುದರಿಂದ ಕಂಪೆನಿಯ ಮೂಲಭೂತ ಅಂಶಗಳು ಪ್ರಬಲವಾಗಿದ್ದರೆ ಹೆಚ್ಚುವರಿ ಆದಾಯವನ್ನು ಪಡೆಯಬಹುದು ಎಂದು ಈ ಮಾರುಕಟ್ಟೆ ಏರಿಕೆಯು ಸಾಬೀತುಪಡಿಸಿದೆ. ಲಾಯ್ಡ್ಸ್ ಸ್ಟೀಲ್ಸ್ ಇಂಡಸ್ಟ್ರೀಸ್ ಷೇರುಗಳು ಅಂತಹ ಒಂದು ಸ್ಟಾಕ್ ಆಗಿದ್ದು, ಇಲ್ಲಿ ಪ್ರಸ್ತಾವ ಮಾಡಿರುವ ಷೇರು 2021ರಲ್ಲಿ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್‌ಗಳಲ್ಲಿ ಒಂದಾಗಿದೆ. ಈ ಲೋಹದ ಸ್ಟಾಕ್ ರೂ. 0.50 (10ನೇ ಜನವರಿ 2020ರಂದು NSEನಲ್ಲಿನ ಬೆಲೆ)ನಿಂದ ರೂ. 24.95ರ ಮಟ್ಟಕ್ಕೆ (2022ರ ಜನವರಿ 7ನೇ ತಾರೀಕಿನಂದು ಎನ್ಎಸ್ಇ ಬೆಲೆ) ಏರಿಕೆಯಾಗಿದೆ. ಅಂದರೆ ಈ ಎರಡು ವರ್ಷಗಳಲ್ಲಿ ಸುಮಾರು ಶೇ 4900 ಏರಿಕೆ ಆಗಿದೆ.
ಲಾಯ್ಡ್ಸ್ ಸ್ಟೀಲ್ಸ್ ಇಂಡಸ್ಟ್ರೀಸ್ ಷೇರು ಬೆಲೆ ಇತಿಹಾಸ
ಕಳೆದ ಒಂದು ವಾರದಲ್ಲಿ ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ರೂ. 20.65ರಿಂದ ರೂ. 24.95ಕ್ಕೆ ಏರಿದ್ದು, ಷೇರುದಾರರಿಗೆ ಶೇ 21ರಷ್ಟು ಲಾಭವನ್ನು ಪಡೆದಿದೆ. ಕಳೆದ ಒಂದು ತಿಂಗಳಲ್ಲಿ ಪೆನ್ನಿ ಸ್ಟಾಕ್ ರೂ. 10.80ರಿಂದ ರೂ. 24.95ವರೆಗೆ ತಲುಪಿದ ನಂತರ ಅದರ ಷೇರುದಾರರಿಗೆ ಶೇ 130ರಷ್ಟು ಲಾಭವನ್ನು ಗಳಿಸಿದೆ. ಕಳೆದ 6 ತಿಂಗಳಲ್ಲಿ ಲಾಯ್ಡ್ಸ್ ಸ್ಟೀಲ್ಸ್ ಇಂಡಸ್ಟ್ರೀಸ್ ಷೇರಿನ ಬೆಲೆಯು ರೂ. 3.45ರಿಂದ ರೂ. 24.95ಕ್ಕೆ ತಲುಪಿದೆ. ಈ ಅವಧಿಯಲ್ಲಿ ಸುಮಾರು ಶೇ 625ರಷ್ಟು ಏರಿದೆ. ಅದೇ ರೀತಿ ಕಳೆದ ಒಂದು ವರ್ಷದಲ್ಲಿ ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ಪ್ರತಿ ಷೇರಿಗೆ ರೂ. 1.00ರಿಂದ ರೂ. 24.95ಕ್ಕೆ ಏರಿದ್ದು, ಈ ಅವಧಿಯಲ್ಲಿ ಸುಮಾರು ಶೇ 2400ರಷ್ಟು ಏರಿಕೆ ದಾಖಲಿಸಿದೆ. ಅದೇ ರೀತಿ, ಕಳೆದ ಎರಡು ವರ್ಷಗಳಲ್ಲಿ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ರೂ. 0.50ರಿಂದ ರೂ. 24.95 ಕ್ಕೆ ಏರಿದ್ದು, ಈ ಅವಧಿಯಲ್ಲಿ ಸುಮಾರು ಶೇ 4900ರಷ್ಟು ಹೆಚ್ಚಳವಾಗಿದೆ.
ಹೂಡಿಕೆ ಮೇಲೆ ಪರಿಣಾಮ
ಲಾಯ್ಡ್ಸ್ ಸ್ಟೀಲ್ಸ್ ಇಂಡಸ್ಟ್ರೀಸ್ ಷೇರಿನ ಬೆಲೆ ಇತಿಹಾಸ ನೋಡುವುದಾದರೆ, ಹೊಸ ವರ್ಷ 2022ರ ಆರಂಭದಲ್ಲಿ ಹೂಡಿಕೆದಾರರು ಒಂದು ವಾರದ ಹಿಂದೆ ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್‌ನಲ್ಲಿ 1 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಿದ್ದರೆ, ಆ ಮೊತ್ತವು ಇಂದು 1.21 ಲಕ್ಷ ರೂಪಾಯಿಯಾಗಿ ಬದಲಾಗುತ್ತಿತ್ತು. ಹೂಡಿಕೆದಾರರು ಒಂದು ತಿಂಗಳ ಹಿಂದೆ ಈ ಪೆನ್ನಿ ಸ್ಟಾಕ್‌ನಲ್ಲಿ ರೂ. 1 ಲಕ್ಷ ಹೂಡಿಕೆ ಮಾಡಿದ್ದರೆ, ಆ ಮೊತ್ತವು ರೂ. 2.30 ಲಕ್ಷ ಆಗಿರುತ್ತಿತ್ತು. ಅದೇ ಮೊತ್ತ 6 ತಿಂಗಳಲ್ಲಿ ರೂ. 7.25 ಲಕ್ಷ ಆಗುತ್ತಿತ್ತು. ಹೂಡಿಕೆದಾರರು ಒಂದು ವರ್ಷದ ಹಿಂದೆ ಈ ಷೇರುಗಳಲ್ಲಿ 1 ಲಕ್ಷ ಹೂಡಿದ್ದರೆ ಅದು ಇಂದು ರೂ. 25 ಲಕ್ಷ ಆಗಿರುತ್ತಿತ್ತು. ಅದೇ ರೀತಿ, ಹೂಡಿಕೆದಾರರು ಎರಡು ವರ್ಷಗಳ ಹಿಂದೆ ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್‌ನಲ್ಲಿ ರೂ. 1 ಲಕ್ಷವನ್ನು, ಒಂದು ಸ್ಟಾಕ್ಗೆ ತಲಾ ರೂ. 0.50 ರಂತೆ ಖರೀದಿಸಿದ್ದರೆ 2 ವರ್ಷಗಳ ಈ ಅವಧಿಯಲ್ಲಿ ಅದರ ರೂ. 1 ಲಕ್ಷ ಇಂದು ರೂ. 50 ಲಕ್ಷ ಆಗಿರುತ್ತಿತ್ತು.
ಇದನ್ನೂ ಓದಿ: Multibagger Stocks: ಏನಿದು ಮಲ್ಟಿಬ್ಯಾಗರ್ ಸ್ಟಾಕ್? ಇದನ್ನು ಗುರುತಿಸುವುದು ಹೇಗೆ ತಿಳಿಯಿರಿ