TCS Share Buyback: ಜನವರಿ 12ಕ್ಕೆ ಷೇರು ಮರುಖರೀದಿ ಪ್ರಸ್ತಾವ ಪರಿಗಣಿಸಲಿದೆ ಟಿಸಿಎಸ್​

ಜನವರಿ 12ನೇ ತಾರೀಕಿನಂದು ನಡೆಯಲಿರುವ ಸಭೆಯಲ್ಲಿ ಟಿಸಿಎಸ್​ ಷೇರು ಖರೀದಿ ಪ್ರಸ್ತಾವದ ಬಗ್ಗೆ ಪರಿಗಣಿಸಲಾಗುವುದು ಎಂದು ಸ್ಟಾಕ್ ಎಕ್ಸ್​ಚೇಂಜ್ ಫೈಲಿಂಗ್​ನಲ್ಲಿ ತಿಳಿಸಲಾಗಿದೆ.

TCS Share Buyback: ಜನವರಿ 12ಕ್ಕೆ ಷೇರು ಮರುಖರೀದಿ ಪ್ರಸ್ತಾವ ಪರಿಗಣಿಸಲಿದೆ ಟಿಸಿಎಸ್​
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jan 08, 2022 | 2:12 PM

ಭಾರತದ ಅತಿದೊಡ್ಡ ಐ.ಟಿ. (ಮಾಹಿತಿ ತಂತ್ರಜ್ಞಾನ) ಸೇವೆಗಳ ಕಂಪೆನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ನಿರ್ದೇಶಕರ ಮಂಡಳಿಯು ಜನವರಿ 7ರಂದು ಅದರ ಷೇರು ಮರುಖರೀದಿ ಪ್ರಸ್ತಾವನೆಯನ್ನು ಜನವರಿ 12ರಂದು ಪರಿಗಣಿಸಲಿದೆ ಎಂದು ಘೋಷಿಸಿದೆ. ಸಾಫ್ಟ್‌ವೇರ್ ಸೇವೆಗಳ ಪ್ರಮುಖ ಕಂಪೆನಿಯಾದ ಟಿಸಿಎಸ್ ತನ್ನ Q3FY21 (ಅಕ್ಟೋಬರ್-ಡಿಸೆಂಬರ್ ಅವಧಿ) ಫಲಿತಾಂಶಗಳನ್ನು ಆ ದಿನ ಬಿಡುಗಡೆ ಮಾಡಲು ಈಗಾಗಲೇ ನಿರ್ಧರಿಸಿದೆ. 16,000 ಕೋಟಿ ರೂಪಾಯಿ ಮೌಲ್ಯದ ಕಂಪೆನಿಯ ಕೊನೆಯ ಮರು ಖರೀದಿಯನ್ನು ಡಿಸೆಂಬರ್ 18, 2020ರಂದು ಆರಂಭಿಸಿ, ಜನವರಿ 1, 2021ರಂದು ಮುಕ್ತಾಯಗೊಳಿಸಲಾಗಿತ್ತು.

“ಸೆಬಿ (ಲಿಸ್ಟಿಂಗ್ ಮಾಡುವ ಹೊಣೆಗಾರಿಕೆಗಳು ಮತ್ತು ಬಹಿರಂಗಪಡಿಸುವಿಕೆ ಅಗತ್ಯಗಳು) ನಿಯಮಗಳು, 2015ರ ನಿಯಮಾವಳಿ 29(1 )(ಬಿ) ಅನುಸಾರವಾಗಿ ನಿರ್ದೇಶಕರ ಮಂಡಳಿಯು ಕಂಪೆನಿಯ ಈಕ್ವಿಟಿ ಷೇರುಗಳ ಮರುಖರೀದಿಯ ಪ್ರಸ್ತಾವವನ್ನು ಪರಿಗಣಿಸುತ್ತದೆ ಎಂದು ನಿಮಗೆ ತಿಳಿಸುವುದು. ಜನವರಿ 12, 2022ರಂದು ಸಭೆಯು ನಡೆಯಲಿದೆ,” ಎಂದು ಸ್ಟಾಕ್ ಎಕ್ಸ್​ಚೇಂಜ್ ಫೈಲಿಂಗ್​ನಲ್ಲಿ ಟಿಸಿಎಸ್ ತಿಳಿಸಿದೆ. ಅಲ್ಲದೆ, ಮಂಡಳಿಯ ಸಭೆಯಲ್ಲಿ ಈಕ್ವಿಟಿ ಷೇರುದಾರರಿಗೆ ಮೂರನೇ ಮಧ್ಯಂತರ ಲಾಭಾಂಶದ ಘೋಷಣೆಯನ್ನು ಪರಿಗಣಿಸುತ್ತದೆ.

ಇದು ಟಿಸಿಎಸ್​ನ ನಾಲ್ಕನೇ ಮರುಖರೀದಿಯಾಗಿದೆ. ಇದಕ್ಕೂ ಮೊದಲು ಟಿಸಿಎಸ್ ತನ್ನ ಇತಿಹಾಸದಲ್ಲಿ ಮೂರು ಬೈಬ್ಯಾಕ್‌ಗಳನ್ನು ನಡೆಸಿದೆ – 2017, 2018 ಮತ್ತು 2020ರಲ್ಲಿ. ಆಸಕ್ತಿಕರವಾಗಿ ಎಲ್ಲ ಮೂರು ಬೈಬ್ಯಾಕ್‌ಗಳು 16,000 ಕೋಟಿ ರೂಪಾಯಿಯದಾಗಿದೆ. ಟಿಸಿಎಸ್ ಸೆಪ್ಟೆಂಬರ್ 2021ರ (Q2FY22) ತ್ರೈಮಾಸಿಕದಲ್ಲಿ 9,624 ಕೋಟಿ ರೂಪಾಯಿಗಳ ಕ್ರೋಡೀಕೃತ ನಿವ್ವಳ ಲಾಭವನ್ನು ವರದಿ ಮಾಡಿದೆ. ಇದು ವಿಶಾಲ-ಆಧಾರಿತ ಬೇಡಿಕೆ ಮತ್ತು ಚೇತರಿಸಿಕೊಳ್ಳುವ ಮಾರ್ಜಿನ್​ಗಳಿಂದ ವರ್ಷದಿಂದ ವರ್ಷಕ್ಕೆ (YoY) ಶೇಕಡಾ 14.1 ಬೆಳವಣಿಗೆಯನ್ನು ದಾಖಲಿಸಿದೆ. ವರ್ಷದಿಂದ ವರ್ಷಕ್ಕೆ ಶೇ 21.6ರಷ್ಟು ಹೆಚ್ಚಿದ ಇತರ ಆದಾಯದಿಂದ (ತಿಂಗಳಿಂದ ತಿಂಗಳಿಗೆ ಶೇ 54.1 ಹೆಚ್ಚಳ) ಲಾಭ ಬಂದಿದೆ.

ಟಿಸಿಎಸ್ ಜೊತೆಗೆ ಇನ್ಫೋಸಿಸ್ ಮತ್ತು ಎಚ್​ಸಿಎಲ್ ಟೆಕ್ನಾಲಜೀಸ್ ಸಹ ತಮ್ಮ Q3 ಫಲಿತಾಂಶವನ್ನು ಜನವರಿ 12ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಜನವರಿ 7ರಂದು ಎನ್‌ಎಸ್‌ಇಯಲ್ಲಿ ಟಿಸಿಎಸ್ ಷೇರುಗಳು ಶೇಕಡಾ 1.35 ರಷ್ಟು ಏರಿಕೆಯಾಗಿ 3,858.90 ರೂಪಾಯಿಗೆ ವಹಿವಾಟು ಮುಗಿಸಿದೆ.

ಇದನ್ನೂ ಓದಿ: ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ; 35 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳ ನೇಮಕಕ್ಕೆ ಸಿದ್ಧವಾಗಿದೆ ಟಿಸಿಎಸ್​