ಮರು ಅಭಿವೃದ್ಧಿಪಡಿಸಿದ ನಿಲ್ದಾಣಗಳಲ್ಲಿ ಹತ್ತಲು, ಇಳಿಯಲು ವಿಧಿಸಲಿದೆ ರೈಲ್ವೆ ಶುಲ್ಕ

ಮರು ಅಭಿವೃದ್ಧಿ ಪಡಿಸಿದ ರೈಲು ನಿಲ್ದಾಣಗಳಲ್ಲಿ ರೈಲುಗಳನ್ನು ಹತ್ತುವುದಕ್ಕೆ ಹಾಗೂ ಇಳಿಯುವುದಕ್ಕೆ ವಿಶೇಷ ಶುಲ್ಕವನ್ನು ವಿಧಿಸಲಾಗುತ್ತದೆ ಎಂಬ ಯೋಜನೆ ಕೇಂದ್ರಕ್ಕಿದೆ.

ಮರು ಅಭಿವೃದ್ಧಿಪಡಿಸಿದ ನಿಲ್ದಾಣಗಳಲ್ಲಿ ಹತ್ತಲು, ಇಳಿಯಲು ವಿಧಿಸಲಿದೆ ರೈಲ್ವೆ ಶುಲ್ಕ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jan 08, 2022 | 8:48 PM

ರೈಲು ನಿಲ್ದಾಣಗಳನ್ನು ಪುನರ್​ ಅಭಿವೃದ್ಧಿ ಮಾಡುವ ಉದ್ದೇಶದಿಂದ ಪ್ರಯಾಣದ ವರ್ಗ ಯಾವುದು ಎಂಬುದರ ಆಧಾರದಲ್ಲಿ ರೂ. 10ರಿಂದ ರೂ. 50 ಶುಲ್ಕ ಹೇರುವುದಕ್ಕೆ ಯೋಜನೆ ಮಾಡಿಕೊಳ್ಳಲಾಗಿದೆ. ಇದರೊಂದಿಗೆ ದೂರ ಪ್ರಯಾಣದ ರೈಲು ಟಿಕೆಟ್ ವೆಚ್ಚ ಪ್ರಯಾಣಿಕರಿಗೆ ದುಬಾರಿ ಆಗಲಿದೆ. ಬುಕ್ಕಿಂಗ್ ಸಮಯದಲ್ಲಿ ರೈಲು ಟಿಕೆಟ್‌ಗೆ ಶುಲ್ಕವನ್ನು ಸೇರಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂತಹ ನಿಲ್ದಾಣಗಳು ಕಾರ್ಯಾರಂಭ ಮಾಡಿದ ನಂತರವೇ ಶುಲ್ಕವನ್ನು ವಿಧಿಸಲಾಗುವುದು. ಬಳಕೆದಾರರ ಶುಲ್ಕವು ಮೂರು ವಿಭಾಗಗಳಲ್ಲಿರುತ್ತದೆ. ಎಲ್ಲ ಏಸಿ ಕ್ಲಾಸ್​ಗಳಿಗೆ 50 ರೂ., ಸ್ಲೀಪರ್ ಕ್ಲಾಸ್​ಗೆ 25 ರೂ. ಮತ್ತು ಕಾಯ್ದಿರಿಸದ ವರ್ಗಕ್ಕೆ 10 ರೂ. ರೈಲ್ವೆ ಮಂಡಳಿ ಹೊರಡಿಸಿರುವ ಸುತ್ತೋಲೆಯ ಪ್ರಕಾರ ಉಪನಗರ ರೈಲು ಪ್ರಯಾಣಕ್ಕೆ ಯಾವುದೇ ನಿಲ್ದಾಣ ಅಭಿವೃದ್ಧಿ ಶುಲ್ಕವನ್ನು ವಿಧಿಸುವುದಿಲ್ಲ. ಈ ನಿಲ್ದಾಣಗಳಲ್ಲಿನ ಪ್ಲಾಟ್‌ಫಾರ್ಮ್ ಟಿಕೆಟ್‌ಗಳು ಸಹ 10 ರೂಪಾಯಿಗಳಷ್ಟು ದುಬಾರಿಯಾಗುತ್ತವೆ ಎಂದು ಹೇಳಲಾಗಿದೆ.

“ನಿಲ್ದಾಣ ಅಭಿವೃದ್ಧಿ ಶುಲ್ಕವನ್ನು (SDF) ಪ್ರಯಾಣಿಕರಿಂದ (ಹತ್ತಲು ಮತ್ತು ಅಂತಹ ನಿಲ್ದಾಣಗಳಲ್ಲಿ ಇಳಿಯುವುದು) ಸಂಗ್ರಹಿಸಲಾಗುತ್ತದೆ. “ಅಭಿವೃದ್ಧಿಪಡಿಸಿದ/ಪುನರ್​ ಅಭಿವೃದ್ಧಿಪಡಿಸಿದ ನಿಲ್ದಾಣಗಳಿಗೆ ವರ್ಗವಾರು SDF ಅನ್ನು ವಿಧಿಸಲಾಗುತ್ತದೆ: ಅಂತಹ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಇಳಿಸಲು, SDF ಮೇಲೆ ಸೂಚಿಸಲಾದ ದರಗಳ ಶೇ 50 ರಷ್ಟು ಇರುತ್ತದೆ. ಅಂತಹ ನಿಲ್ದಾಣಗಳಲ್ಲಿ ಹತ್ತುವ/ಇಳಿಯುವ ವೇಳೆ, ಆ ಸಂದರ್ಭದಲ್ಲಿ, SDF ಅನ್ವಯವಾಗುವ ದರದ 1.5 ಪಟ್ಟು ಇರಬೇಕು,” ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಅಂತಹ ಎಲ್ಲ ನಿಲ್ದಾಣಗಳಲ್ಲಿ SDF ಏಕರೂಪವಾಗಿರಬೇಕು ಮತ್ತು ಪ್ರತ್ಯೇಕ ಘಟಕ ಮತ್ತು ಅನ್ವಯವಾಗುವ GSTಯಂತೆ ಶುಲ್ಕ ವಿಧಿಸಲಾಗುತ್ತದೆ. ಇದಕ್ಕಾಗಿ ಪ್ರತ್ಯೇಕವಾಗಿ ಸೂಚನೆಗಳನ್ನು ನೀಡಲಾಗುತ್ತದೆ, ಎಂದು ಸೇರಿಸಲಾಗಿದೆ. ಎಸ್‌ಡಿಎಫ್ ಅನ್ನು ವಿಧಿಸುವುದರಿಂದ ರೈಲ್ವೆಗೆ ನಿರಂತರ ಆದಾಯದ ಹರಿವನ್ನು ಖಚಿತಪಡಿಸುತ್ತದೆ ಮತ್ತು ಖಾಸಗಿಯವರನ್ನು ಆಕರ್ಷಿಸಲು ರಾಷ್ಟ್ರೀಯ ಸಾಗಣೆದಾರರಿಗೆ ಮಾದರಿಯನ್ನು ಆರ್ಥಿಕವಾಗಿ ಸಮರ್ಥವಾಗಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಧುನಿಕ ಸೌಕರ್ಯಗಳನ್ನು ಒದಗಿಸಲು ಭಾರತೀಯ ರೈಲ್ವೇಯಲ್ಲಿ ವಿವಿಧ ನಿಲ್ದಾಣಗಳನ್ನು ಮರು ಅಭಿವೃದ್ಧಿ ಮಾಡಲಾಗುತ್ತಿದೆ. ಪಶ್ಚಿಮ ಮಧ್ಯ ರೈಲ್ವೆಯ ರಾಣಿ ಕಮಲಾಪತಿ ನಿಲ್ದಾಣ ಮತ್ತು ಪಶ್ಚಿಮ ರೈಲ್ವೆಯ ಗಾಂಧಿನಗರ ರಾಜಧಾನಿ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಕಾರ್ಯಾರಂಭ ಮಾಡಲಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿ ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್; ಮೆಮು ರೈಲು ಸಂಚಾರ ಪ್ರಾರಂಭಿಸಲು ಚಿಂತನೆ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್