ಪೆನ್ನಿ ಸ್ಟಾಕ್‌ನಲ್ಲಿ ಹೂಡಿಕೆ ಮಾಡುವುದು ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ ಹೆಚ್ಚಿನ ಅಪಾಯವನ್ನು ಎದುರಿಸಲು ಸಿದ್ಧರಿರುವ ಹೂಡಿಕೆದಾರರು ಅಂತಹ ಷೇರುಗಳಲ್ಲಿ ಹೂಡಿಕೆ (Investments) ಮಾಡಲು ಬಯಸುತ್ತಾರೆ. ಏಕೆಂದರೆ ಅದು ದೀರ್ಘಾವಧಿಯಲ್ಲಿ ತನ್ನ ಷೇರುದಾರರಿಗೆ ಭಾರೀ ಲಾಭವನ್ನು ನೀಡುತ್ತವೆ. ಷೇರು ಮಾರುಕಟ್ಟೆ ತಜ್ಞರ ಪ್ರಕಾರ, ಷೇರುಗಳಲ್ಲಿ ಹೂಡಿಕೆ ಮಾಡುವುದು ವ್ಯಾಪಾರದಲ್ಲಿ ಹೂಡಿಕೆ ಮಾಡಿದಂತೆ. ಈ ದಿನಗಳಲ್ಲಿ ಸಣ್ಣ ಕಂಪೆನಿಯ ವ್ಯವಹಾರ ಮಾಡೆಲ್ ಯಶಸ್ಸಿನ ಬಗ್ಗೆ ಭರವಸೆ ಇದ್ದಲ್ಲಿ ಉತ್ತಮ ಸಂಖ್ಯೆಯ ಹೂಡಿಕೆದಾರರು ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಅದೇ ರೀತಿ, ಹೆಚ್ಚಿನ ಅಪಾಯ ತೆಗೆದುಕೊಳ್ಳುವುದಕ್ಕೆ ಸಿದ್ಧರಿರುವ ಹೂಡಿಕೆದಾರರು ಸಣ್ಣ ಲಿಸ್ಟಿಂಗ್ ಕಂಪೆನಿಯ ವ್ಯವಹಾರ ಮಾಡೆಲ್ ಸುಸ್ಥಿರತೆ ಮತ್ತು ಲಾಭದಾಯಕತೆಯ ಬಗ್ಗೆ ಮನವರಿಕೆ ಮಾಡಿಕೊಂಡಾಗ, ಅಂತಹ ಸ್ಟಾಕ್ ಅನ್ನು ಒಬ್ಬರ ಪೋರ್ಟ್‌ಫೋಲಿಯೊದಲ್ಲಿ ಸೇರಿಸುತ್ತಾರೆ. ಮತ್ತು ಸಾಧ್ಯವಾದಷ್ಟು ಕಾಲ ಅದನ್ನು ಇರಿಸಿಕೊಳ್ಳುತ್ತಾರೆ. ಅಂತಹ ತಂತ್ರವು ಕೆಲವು ಬಾರಿ ಅದರ ಷೇರುದಾರರಿಗೆ ಅಸಾಧಾರಣ ಲಾಭವನ್ನು ನೀಡುತ್ತದೆ.
ಎಸ್‌ಆರ್‌ಎಫ್ ಷೇರುಗಳು ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಇದು 2021ರಲ್ಲಿ ಮಲ್ಟಿಬ್ಯಾಗರ್ ಸ್ಟಾಕ್‌ಗಳಲ್ಲಿ ಒಂದಾಗಿದೆ. ಆದರೆ ರಾಸಾಯನಿಕ ಸ್ಟಾಕ್ ತನ್ನ ಷೇರುದಾರರಿಗೆ ಅಮೋಘ ಆದಾಯವನ್ನು ನೀಡುವ ಇತಿಹಾಸವನ್ನು ಹೊಂದಿದೆ. ಕಳೆದ 20 ವರ್ಷಗಳಲ್ಲಿ ಎಸ್‌ಆರ್‌ಎಫ್ ಷೇರಿನ ಬೆಲೆ ರೂ. 3.71 ರಿಂದ (22 ಫೆಬ್ರವರಿ 2002ರಂದು ಎನ್‌ಎಸ್‌ಇಯಲ್ಲಿನ ಬೆಲೆ) ಇಂದು ರೂ. 2424.50ಕ್ಕೆ ಏರಿದೆ. ಈ ಅವಧಿಯಲ್ಲಿ ಸುಮಾರು ಶೇ 65,250ರಷ್ಟು ಏರಿಕೆಯಾಗಿದೆ.
ಎಸ್‌ಆರ್‌ಎಫ್ ಷೇರು ಬೆಲೆ ಇತಿಹಾಸ:
ಕಳೆದ ಒಂದು ತಿಂಗಳಲ್ಲಿ ಎಸ್‌ಆರ್‌ಎಫ್ ಷೇರಿನ ಬೆಲೆಯು ಸುಮಾರು ರೂ. 2349ರಿಂದ ರೂ. 2424ಕ್ಕೆ ಏರಿದ್ದು, ಈ ಅವಧಿಯಲ್ಲಿ ಸುಮಾರು ಶೇ 3.5ರಷ್ಟು ಹೆಚ್ಚಳವಾಗಿದೆ. ಕಳೆದ 6 ತಿಂಗಳಲ್ಲಿ ಎಸ್‌ಆರ್‌ಎಫ್ ಷೇರುಗಳು ಸುಮಾರು ರೂ. 1812ರಿಂದ ರೂ. 2424ರ ಹಂತಕ್ಕೆ ಏರಿದ್ದು, ಈ ಅವಧಿಯಲ್ಲಿ ಸುಮಾರು ಶೇ 35ರಷ್ಟು ಹೆಚ್ಚಳವಾಗಿದೆ. ಕಳೆದ ಒಂದು ವರ್ಷದಲ್ಲಿ ಈ ಸ್ಟಾಕ್ ಸುಮಾರು ರೂ. 1090ರಿಂದ ರೂ. 2424ಕ್ಕೆ ಏರಿದ್ದು, ಈ ಸಮಯದಲ್ಲಿ ಸುಮಾರು ಶೇ 125ರಷ್ಟು ಮೇಲೇರಿದೆ. ಕಳೆದ 5 ವರ್ಷಗಳಲ್ಲಿ ಈ ಮಲ್ಟಿಬ್ಯಾಗರ್ ಕೆಮಿಕಲ್ ಸ್ಟಾಕ್ ರೂ. 315ರಿಂದ ರೂ. 2424ರ ಮಟ್ಟಕ್ಕೆ ತಲುಪಿದೆ. ಅಂದರೆ ಈ ಅವಧಿಯಲ್ಲಿ ಶೇ 675ರಷ್ಟು ಜಾಸ್ತಿಯಾಗಿದೆ.
ಇನ್ನು ಕಳೆದ ಒಂದು ದಶಕದಲ್ಲಿ ಎಸ್‌ಆರ್‌ಎಫ್ ಷೇರಿನ ಬೆಲೆಯು ರೂ. 54.54 ಮಟ್ಟದಿಂದ (ಎನ್‌ಎಸ್‌ಇಯಲ್ಲಿ ಫೆಬ್ರವರಿ 24ರಂದು ಬೆಲೆ) ರೂ. 2424.50 ಮಟ್ಟಕ್ಕೆ ಇಂದು ಏರಿಕೆಯಾಗಿದ್ದು, ಈ ಅವಧಿಯಲ್ಲಿ ಸುಮಾರು ಶೇ 4350ರಷ್ಟು ಮೇಲೇರಿದೆ. ಆದರೆ ಈ ಮಲ್ಟಿಬ್ಯಾಗರ್ ಸ್ಟಾಕ್ ಭಾರತೀಯ ಮಾಧ್ಯಮಿಕ ಮಾರುಕಟ್ಟೆಗಳಲ್ಲಿನ ಪೆನ್ನಿ ಸ್ಟಾಕ್‌ಗಳಲ್ಲಿ ಒಂದಾಗಿದ್ದ ಸಮಯವಿತ್ತು. ಈ ಪೆನ್ನಿ ಸ್ಟಾಕ್ ಕಳೆದ 20 ವರ್ಷಗಳಲ್ಲಿ ರೂ. 3.71ರ ಹಂತದಿಂದ ರೂ. 2424.50 ಮಟ್ಟಕ್ಕೆ ಏರಿದ್ದು, ಈ ಅವಧಿಯಲ್ಲಿ ಸುಮಾರು 653 ಪಟ್ಟು ಏರಿದೆ.
1 ಲಕ್ಷ ರೂಪಾಯಿ 6.53 ಕೋಟಿ:
ಹೂಡಿಕೆದಾರರು ಒಂದು ತಿಂಗಳ ಹಿಂದೆ ಈ ಸ್ಟಾಕ್‌ನಲ್ಲಿ ರೂ. 1 ಲಕ್ಷ ಹೂಡಿಕೆ ಮಾಡಿದ್ದರೆ ಇಂದು 1.03 ಲಕ್ಷಕ್ಕೆ ಆಗಿರುತ್ತಿತ್ತು. ಕಳೆದ 6 ತಿಂಗಳಲ್ಲಿ ರೂ. 1.35 ಲಕ್ಷ ಆಗಿರುತ್ತಿತ್ತು. ಹೂಡಿಕೆದಾರರು ಒಂದು ವರ್ಷದ ಹಿಂದೆ ಈ ಮಲ್ಟಿಬ್ಯಾಗರ್ ಸ್ಟಾಕ್‌ನಲ್ಲಿ ರೂ. 1 ಲಕ್ಷ ಹೂಡಿಕೆ ಮಾಡಿದ್ದರೆ ರೂ. 2.25 ಲಕ್ಷ ಆಗುತ್ತಿತ್ತು. ಅದೇ ರೀತಿ, ಹೂಡಿಕೆದಾರರು 5 ವರ್ಷಗಳ ಹಿಂದೆ ಈ ಷೇರುಗಳಲ್ಲಿ ಹೂಡಿದ್ದರೆ, ಅದರ ರೂ. 1 ಲಕ್ಷ ಇಂದು ರೂ. 7.75 ಲಕ್ಷ ಆಗಿರುತ್ತಿತ್ತು. ಹೂಡಿಕೆದಾರರು 10 ವರ್ಷಗಳ ಹಿಂದೆ ಈ ಮಲ್ಟಿಬ್ಯಾಗರ್ ಸ್ಟಾಕ್‌ನಲ್ಲಿ 1 ಲಕ್ಷ ಹೂಡಿಕೆ ಮಾಡಿ, 54.54ರಂತೆ ಒಂದು ಷೇರು ಖರೀದಿಸಿದ್ದರೆ ಆ 1 ಲಕ್ಷ ಇಂದು ರೂ. 44.50 ಲಕ್ಷಕ್ಕೆ ಏರಿರುತ್ತಿತ್ತು. ಆದರೆ ಹೂಡಿಕೆದಾರರು 20 ವರ್ಷಗಳ ಹಿಂದೆ ರೂ. 1 ಲಕ್ಷವನ್ನು ಈ ಪೆನ್ನಿ ಸ್ಟಾಕ್‌ನಲ್ಲಿ ಹೂಡಿಕೆ ಮಾಡಿದ್ದರೆ ಮತ್ತು ಈ ಅವಧಿಯಲ್ಲಿ ಈ ರಾಸಾಯನಿಕ ಸ್ಟಾಕ್‌ನಲ್ಲಿನ ಹೂಡಿಕೆ 1 ಲಕ್ಷದಿಂದ ರೂ. 6.53 ಕೋಟಿಗೆ ಬದಲಾಗುತ್ತಿತ್ತು.
ಇದನ್ನೂ ಓದಿ: Multibagger penny stocks: ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್‌ನಲ್ಲಿ ಹೂಡಿದ 1 ಲಕ್ಷ ರೂಪಾಯಿ 10 ವರ್ಷಗಳಲ್ಲಿ ರೂ. 4 ಕೋಟಿಗೆ