Multibagger stock: ಈ ಫಾರ್ಮಾಸ್ಯುಟಿಕಲ್ಸ್​ ಷೇರಿನಲ್ಲಿ ಮಾಡಿದ ರೂ. 1 ಲಕ್ಷ ಹೂಡಿಕೆ 13 ವರ್ಷದಲ್ಲಿ 46 ಲಕ್ಷ ರೂ.

13 ವರ್ಷಗಳ ಹಿಂದೆ ಈ ಸ್ಟಾಕ್​ನಲ್ಲಿ ಮಾಡಿದ 1 ಲಕ್ಷ ರೂಪಾಯಿ ಹೂಡಿಕೆ 46 ಲಕ್ಷ ರೂಪಾಯಿ ಆಗಿದೆ. ಅಂದ ಹಾಗೆ ಇದು ಫಾರ್ಮಾಸ್ಯುಟಿಕಲ್ಸ್ ಸ್ಟಾಕ್.

Multibagger stock: ಈ ಫಾರ್ಮಾಸ್ಯುಟಿಕಲ್ಸ್​ ಷೇರಿನಲ್ಲಿ ಮಾಡಿದ ರೂ. 1 ಲಕ್ಷ ಹೂಡಿಕೆ 13 ವರ್ಷದಲ್ಲಿ 46 ಲಕ್ಷ ರೂ.
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Feb 16, 2022 | 6:07 PM

ಷೇರು ಮಾರುಕಟ್ಟೆ (Stock Market) ಹೂಡಿಕೆದಾರರು ಅಂದರೆ ಅವರು ಏರಿಳಿತದ ಕಥೆ. ಕೆಲವರು ಅಲ್ಪಾವಧಿಯಲ್ಲಿ ಎಷ್ಟು ಲಾಭ ಬಂದರೆ ಅಷ್ಟೇ ಸಾಕು ಎಂದು ಯೋಚಿಸಿದರೆ, ಬಹುಪಾಲು ಮಂದಿ ಹೇಗೆಂದರೆ, ಆ ತಕ್ಷಣಕ್ಕೆ ಅಷ್ಟೇನೂ ಆಕರ್ಷಕ ಅಲ್ಲದ, ಆದರೆ ದೀರ್ಘಾವಧಿಯಲ್ಲಿ ಪ್ರಬಲ ಬೆಳವಣಿಗೆಯನ್ನು ನೀಡುವಂಥದ್ದರ ಕಡೆಗೆ ಕಣ್ಣು ನೆಟ್ಟಿರುತ್ತಾರೆ. ಅಂಥ ಹೂಡಿಕೆದಾರರು ಮಲ್ಟಿಬ್ಯಾಗರ್​ ಸ್ಟಾಕ್​ಗಳಿಂದ ಪ್ರಯೋಜನ ಪಡೆಯುತ್ತಾರೆ. ಈ ಲೇಖನದಲ್ಲಿ ಅಂಥದ್ದೇ ಒಂದು ಸ್ಟಾಕ್​ ಬಗ್ಗೆ ತಿಳಿಸಲಾಗುತ್ತಿದೆ. ಕೇವಲ 13 ವರ್ಷದ ಅವಧಿಯಲ್ಲಿ 1 ಲಕ್ಷ ರೂಪಾಯಿಯ ಹೂಡಿಕೆ 46 ಲಕ್ಷ ರೂಪಾಯಿ ಆಗಿ ಬೆಳೆದಿದೆ. ಯಾವುದು ಆ ಷೇರು ಅಂದರೆ ಅರಬಿಂದೋ ಫಾರ್ಮಾ ಲಿಮಿಟೆಡ್​ದು. ಫೆಬ್ರವರಿ 13, 2022ಕ್ಕೆ ಈ ಷೇರಿನ ಬೆಲೆ 691.40 ಇತ್ತು. ಅದೇ ಫೆಬ್ರವರಿ 13, 2009ಕ್ಕೆ ಈ ಕಂಪೆನಿಯ ಸ್ಟಾಕ್ ರೂ. 14.98 ಇತ್ತು. ಇದರರ್ಥ ಏನೆಂದರೆ, ಈ ಮಲ್ಟಿಬ್ಯಾಗರ್ ಸ್ಟಾಕ್ ಇಷ್ಟು ಅವಧಿಯಲ್ಲಿ ಶೇ 4,615.49ರಷ್ಟು ರಿಟರ್ನ್ ನೀಡಿದೆ.

ಈಗೇನೋ ಷೇರಿನ ಬೆಲೆ 691.40 ರೂಪಾಯಿ ಇರಬಹುದು. ಆದರೆ ಕಳೆದ ವರ್ಷ ಮೇ 10, 2021ರಲ್ಲಿ 1047.95 ರೂಪಾಯಿ ಮುಟ್ಟಿತ್ತು. ಈ ಭಾರತೀಯ ಫಾರ್ಮಾಸ್ಯುಟಿಕಲ್ ಕಂಪೆನಿ ಅರಬಿಂದೋ ಫಾರ್ಮಾ ಲಿಮಿಟೆಡ್ ಜೆನೆರಿಕ್ ಫಾರ್ಮಾಸ್ಯುಟಿಕಲ್ಸ್, ಆಕ್ಟಿವ್ ಫಾರ್ಮಾಸ್ಯುಟಿಕಲ್ ಇಂಗ್ರೆಡಿಯೆಂಟ್ಸ್ (APIs) ತಯಾರಿಸುತ್ತದೆ. ಆ್ಯಂಟಿ ಬಯಾಟಿಕ್ಸ್, ಆ್ಯಂಟಿ- ರೆಟ್ರೊವೈರಲ್ಸ್, ಆ್ಯಂಟಿ-ಅಲರ್ಜಿಕ್ಸ್, ಗ್ಯಾಸ್ಟ್ರೋಎಂಟರೋಲಾಜಿಕಲ್ಕ್ಸ್, ಕಾರ್ಡಿಯೋವಾಸ್ಕ್ಯುಲರ್ ಮತ್ತು ಕೇಂದ್ರೀಯ ನರ ವ್ಯವಸ್ಥೆ ಉತ್ಪನ್ನಗಳನ್ನು ಸಹ ಹೊಂದಿದೆ. ಅರಬಿಂದೋ ಫಾರ್ಮಾದ ಮುಖ್ಯಕಚೇರಿ ಹೈದರಾಬಾದ್ ಹೈಟೆಕ್​ ಸಿಟಿಯಲ್ಲಿದೆ. ವಿಶ್ವದಾದ್ಯಂತ 125ಕ್ಕೂ ಹೆಚ್ಚು ದೇಶಗಳಲ್ಲಿ ಅದರ ಉತ್ಪನ್ನಗಳನ್ನು ಮಾರಲಾಗುತ್ತದೆ.

ಫೆಬ್ರವರಿ 16ನೇ ತಾರೀಕಿನ ಬುಧವಾರದಂದು ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ 145.37 ಪಾಯಿಂಟ್ಸ್ ಅಥವಾ ಶೇ 0.25ರಷ್ಟು ಇಳಿಕೆ ಕಂಡು, 57,996.68 ಪಾಯಿಂಟ್ಸ್​ನೊಂದಿಗೆ ದಿನಾಂತ್ಯ ಮುಗಿಸಿದೆ. ಇನ್ನು ನಿಫ್ಟಿ 30.25 ಪಾಯಿಂಟ್ಸ್ ಅಥವಾ ಶೇ 0.17ರಷ್ಟು ಇಳಿಕೆಯಾಗಿ, 17,322.20ರಲ್ಲಿ ವಹಿವಾಟು ಚುಕ್ತಾ ಮಾಡಿದ್ದು, ನಿಫ್ಟಿ ಬ್ಯಾಂಕ್ 30.25 ಪಾಯಿಂಟ್ಸ್ ಕುಸಿದಿದೆ.

ಇದನ್ನೂ ಓದಿ: Stock Market Investment Tips: ಷೇರು ಮಾರುಕಟ್ಟೆ ಹೂಡಿಕೆಯ ಆರಂಭ ಹಂತದಲ್ಲಿ ಇರುವವರಿಗೆ 5 ಟಿಪ್ಸ್

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ