Paytm Loan To Merchants: ಪೇಟಿಎಂನಿಂದ ವ್ಯಾಪಾರಿಗಳಿಗೆ 5 ಲಕ್ಷ ರೂಪಾಯಿ ತನಕ ಸಾಲ; ಅಪ್ಲೈ ಮಾಡುವುದು ಹೇಗೆ

ಪೇಟಿಎಂನಿಂದ ವ್ಯಾಪಾರಿಗಳಿಗೆ 5 ಲಕ್ಷ ರೂಪಾಯಿ ತನಕ ವ್ಯಾಪಾರ ಸಾಲ ನೀಡಲಾಗುತ್ತದೆ. ಅದಕ್ಕೆ ಅಪ್ಲೈ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

Paytm Loan To Merchants: ಪೇಟಿಎಂನಿಂದ ವ್ಯಾಪಾರಿಗಳಿಗೆ 5 ಲಕ್ಷ ರೂಪಾಯಿ ತನಕ ಸಾಲ; ಅಪ್ಲೈ ಮಾಡುವುದು ಹೇಗೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Feb 16, 2022 | 9:24 PM

ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್‌ಗಳು ಮತ್ತು ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳೊಂದಿಗೆ ಪೇಟಿಎಂ (Paytm) ಸಹಭಾಗಿತ್ವ ಹೊಂದಿದ್ದು, 5,00,000 ರೂಪಾಯಿ ತನಕ ಆಧಾರಮುಕ್ತ ತ್ವರಿತ ಸಾಲಗಳನ್ನು ಕಡಿಮೆ ಬಡ್ಡಿ ದರದಲ್ಲಿ ನೀಡುತ್ತದೆ ಮತ್ತು ಸಣ್ಣ ವ್ಯಾಪಾರಿಗಳಿಗೆ ಕಸ್ಟಮೈಸ್ ಆದ ವಿಶಿಷ್ಟ ದೈನಂದಿನ ಇಎಂಐ ಪ್ರಾಡಕ್ಟ್ ಸಹ ನೀಡುತ್ತದೆ. ವ್ಯಾಪಾರಕ್ಕಾಗಿ ಪೇಟಿಎಂ ಅಪ್ಲಿಕೇಷನ್‌ನಲ್ಲಿ ಇರುವ ‘ಮರ್ಚೆಂಟ್ ಲೆಂಡಿಂಗ್ ಪ್ರೋಗ್ರಾಂ’ನಿಂದ ಸಾಲಗಳನ್ನು ಪಡೆಯಬಹುದು. ದೈನಂದಿನ ವಹಿವಾಟುಗಳ ಆಧಾರದ ಮೇಲೆ ವ್ಯಾಪಾರಿಯ ಕ್ರೆಡಿಟ್ ಅರ್ಹತೆಯನ್ನು ಅಲ್ಗಾರಿದಮ್ ನಿರ್ಧರಿಸುತ್ತದೆ ಮತ್ತು ಪ್ರೀ-ಕ್ವಾಲಿಫೈಡ್ ಸಾಲದ ಆಫರ್​ ನಿರ್ಧರಿಸುತ್ತದೆ. ಸಂಪೂರ್ಣ ಡಿಜಿಟಲ್ ಲೋನ್ ಅಪ್ಲಿಕೇಷನ್ ಪ್ರಕ್ರಿಯೆಯೊಂದಿಗೆ ಯಾವುದೇ ಹೆಚ್ಚುವರಿ ದಾಖಲೆಗಳ ಅಗತ್ಯವಿಲ್ಲ. ಸಾಲ ಮರುಪಾವತಿಯನ್ನು ಪ್ರಾಥಮಿಕವಾಗಿ ಪೇಟಿಎಂನೊಂದಿಗೆ ವ್ಯಾಪಾರಿಗಳ ದೈನಂದಿನ ವಿಲೇವಾರಿಗಳಿಂದ ಸಂಗ್ರಹಿಸಲಾಗುತ್ತದೆ ಮತ್ತು ಈ ಸಾಲಗಳ ಮೇಲೆ ಯಾವುದೇ ಪೂರ್ವ-ಪಾವತಿ ಶುಲ್ಕಗಳಿಲ್ಲ.

ಪೇಟಿಎಂ ಮೂಲಕ 5 ಸರಳ ಹಂತಗಳಲ್ಲಿ ಸಾಲ ಪಡೆಯುವುದು ಹೇಗೆ ಎಂಬುದು ಇಲ್ಲಿದೆ:

1. ವ್ಯಾಪಾರಕ್ಕಾಗಿ ಇರುವ ಪೇಟಿಎಂ ಆ್ಯಪ್ ಹೋಮ್​ ಪೇಜ್​ನಲ್ಲಿ “ಬಿಜಿನೆಸ್ ಲೋನ್” ಐಕಾನ್ ಮೇಲೆ ಒತ್ತಿ ಮತ್ತು ನಿಮಗಾಗಿ ಲಭ್ಯ ಇರುವ ಆಫರ್ ಪರಿಶೀಲಿಸಿ. ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಸಾಲದ ಮೊತ್ತವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.

2. ಒಮ್ಮೆ ನೀವು ಮೊತ್ತವನ್ನು ಆಯ್ಕೆ ಮಾಡಿದರೆ ಸಾಲದ ಮೊತ್ತ, ವಿತರಿಸಬೇಕಾದ ಮೊತ್ತ, ಒಟ್ಟು ಪಾವತಿಸಬೇಕಾದ, ದೈನಂದಿನ ಕಂತು, ಅವಧಿ ಮತ್ತು ಹೆಚ್ಚಿನ ವಿವರಗಳನ್ನು ನೋಡಲು ಸಾಧ್ಯವಾಗುತ್ತದೆ

3. ನಿಮ್ಮ ವಿವರಗಳನ್ನು ದೃಢೀಕರಿಸಿ, ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು ಮುಂದುವರೆಯಲು “Get Started” ಮೇಲೆ ಒತ್ತಿ. ನಿಮ್ಮ ಲೋನ್ ಅರ್ಜಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು CKYCಯಿಂದ ನಿಮ್ಮ KYC ವಿವರಗಳನ್ನು ಪಡೆಯಲು ನಿಮ್ಮ ಒಪ್ಪಿಗೆಯನ್ನು ಸಹ ನೀಡಬಹುದು.

4. ಮುಂದಿನ ಸ್ಕ್ರೀನ್​ನಲ್ಲಿ ನಿಮ್ಮ PAN ಕಾರ್ಡ್ ಡೇಟಾ, ಹುಟ್ಟಿದ ದಿನಾಂಕ ಮತ್ತು ಇಮೇಲ್ ವಿಳಾಸದಂತಹ ವಿವರಗಳನ್ನು ಖಚಿತಪಡಿಸಬಹುದು ಅಥವಾ ಭರ್ತಿ ಮಾಡಬಹುದು. ಒಮ್ಮೆ ಮಾಡಿದ ನಂತರ, ನೀವು ಆಫರ್ ದೃಢೀಕರಣದೊಂದಿಗೆ ಮುಂದುವರಿಯಬಹುದು. ಪ್ಯಾನ್ ವಿವರಗಳನ್ನು ಪರಿಶೀಲಿಸಿದ ನಂತರ ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ಕೆವೈಸಿ ವಿವರಗಳನ್ನು ಪರಿಶೀಲಿಸಲಾಗುತ್ತದೆ.

5. ನಿಮ್ಮ ಸಾಲದ ಅರ್ಜಿಯನ್ನು ಸಲ್ಲಿಸಿದ ನಂತರ ಬ್ಯಾಂಕ್ ಖಾತೆಯಲ್ಲಿ ಸಾಲದ ಮೊತ್ತವನ್ನು ವಿತರಿಸಲಾಗುತ್ತದೆ. ಅಂತಿಮ ಸಲ್ಲಿಕೆಗೆ ಮೊದಲು ಎಲ್ಲ ವಿವರಗಳು ಸರಿಯಾಗಿವೆಯೇ ಎಂದು ಖಚಿತಪಡಿಸಿಕೊಳ್ಳಿ.

ಕಂಪೆನಿಯು ತನ್ನ FY22ರ ಮೂರನೇ ತ್ರೈಮಾಸಿಕದ ವರದಿಯಲ್ಲಿ ಪ್ಲಾಟ್‌ಫಾರ್ಮ್‌ನಲ್ಲಿ ವಿತರಿಸಲಾದ ವ್ಯಾಪಾರಿ ಸಾಲಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಶೇ 38ರಷ್ಟು ಹೆಚ್ಚಿಸಿದೆ ಎಂದು ಹಂಚಿಕೊಂಡಿದ್ದು, ಆದರೆ ವ್ಯಾಪಾರಿ ಸಾಲಗಳ ಮೌಲ್ಯವು ವರ್ಷದಿಂದ ವರ್ಷಕ್ಕೆ ಶೇ 128ರಷ್ಟು ಬೆಳವಣಿಗೆಯಾಗಿದೆ. ಶೇ 25ಕ್ಕಿಂತ ಹೆಚ್ಚು ಸಾಲಗಳನ್ನು ಹೊಸ ಸಾಲಗಾರರಿಗೆ ವಿತರಿಸಲಾಗಿದೆ. ಈಗ ರೂ. 120,000ದಿಂದ ರೂ. 140,000 ಮತ್ತು ಸರಾಸರಿ 12ರಿಂದ 14 ತಿಂಗಳ ಅವಧಿಯೊಂದಿಗೆ ಸರಾಸರಿ ಟಿಕೆಟ್ ಗಾತ್ರವು ಅಳತೆಯೊಂದಿಗೆ ಹೆಚ್ಚುತ್ತಲೇ ಇದೆ. ಶೇ 25ರಷ್ಟು ವ್ಯಾಪಾರಿಗಳು ಒಂದಕ್ಕಿಂತ ಹೆಚ್ಚು ಬಾರಿ ಸಾಲವನ್ನು ತೆಗೆದುಕೊಂಡಿರುವ ಮೂಲಕ ಪುನರಾವರ್ತಿತ ಸಾಲಗಳು ಆರೋಗ್ಯಕರವಾಗಿ ಹೆಚ್ಚಳವನ್ನು ಕಂಡಿವೆ.

ಇದನ್ನೂ ಓದಿ: ಇಂಟರ್​ನೆಟ್ ಇಲ್ಲದೆ ಗೂಗಲ್ ಪೇ, ಫೋನ್​ಪೇ, ಪೇಟಿಎಂ, ಯುಪಿಐ ಮನಿ ಬಳಸಿ ವಹಿವಾಟು ಹೇಗೆ?

Published On - 9:23 pm, Wed, 16 February 22

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು