Investor Success Story: 25 ವರ್ಷಕ್ಕೇ ಕೋಟ್ಯಧಿಪತಿಯಾದ ಈ ಯುವಕನ ಬಳಿ ಸ್ವಂತ ಕಾರಿಲ್ಲ; ಅರುಣ್ ಹೇಳಿದ ಹೂಡಿಕೆ ಸೂತ್ರ

ಬಂಗಾಲಿಗಳಿಗೆ ಚಿಕ್ಕ ವಯಸ್ಸಿನಲ್ಲೇ ಮನೆಗಳಲ್ಲಿ ಷೇರು ಮಾರ್ಕೆಟ್​ ಕಡೆಗೆ ತಲೆ ಹಾಕದಂತೆ ಎಚ್ಚರಿಸುತ್ತಾ ಬೆಳೆಸಲಾಗುತ್ತದೆ. ಆದರೆ ಈ ಅರುಣ್​ ಮುಖರ್ಜಿ ಡಿಫರೆಂಟ್. ಷೇರು ಮಾರುಕಟ್ಟೆಯಲ್ಲೇ ಲಾಭ ಮಾಡಿ, 25 ವರ್ಷ ವಯಸ್ಸಿನೊಳಗೇ ಕೋಟ್ಯಧಿಪತಿಯಾದ ಯುವಕನ ಯಶೋಗಾಥೆ ಇದು.

Investor Success Story: 25 ವರ್ಷಕ್ಕೇ ಕೋಟ್ಯಧಿಪತಿಯಾದ ಈ ಯುವಕನ ಬಳಿ ಸ್ವಂತ ಕಾರಿಲ್ಲ; ಅರುಣ್ ಹೇಳಿದ ಹೂಡಿಕೆ ಸೂತ್ರ
ಅರುಣ್ ಮುಖರ್ಜಿ
Follow us
TV9 Web
| Updated By: Srinivas Mata

Updated on:Jul 16, 2021 | 1:27 PM

“ಇಂಗ್ಲಿಷ್ ಹಾಗೂ ಗಣಿತದ ಮೇಲೆ ಗಮನ ಕೊಡು. ಯಾವುದೇ ಕಾರಣಕ್ಕೂ ಷೇರು ಮಾರ್ಕೆಟ್​ ಕಡೆ ತಲೆ ಕೂಡ ಹಾಕಬೇಡ,” – ಈ ಎರಡು ಸಲಹೆಗಳನ್ನು ಬಂಗಾಲಿಗಳು ತಮಗಿಂತ ಕಿರಿಯರಿಗೆ ನೀಡುತ್ತಾರೆ. ಮಕ್ಕಳು ಶಾಲೆಯಲ್ಲಿ ಇರುವಾಗಲೇ ಅವರನ್ನು ಹೀಗೆ ಬೆಳೆಸಲಾಗುತ್ತದೆ. ಈ ಕಾರಣಕ್ಕೆ ಷೇರು ಮಾರ್ಕೆಟ್​ ಅಂದರೆ ಬಂಗಾಲಿಗಳಲ್ಲಿ ಒಂದು ಭಯ ಹಾಗೇ ಉಳಿದುಹೋಗುತ್ತದೆ. ಆದರೆ 32 ವರ್ಷದ ಅರುಣ್ ಮುಖರ್ಜಿ ಮಾತ್ರ ಬೇರೆಯದೇ ದಾರಿಯನ್ನು ಆರಿಸಿಕೊಂಡು, ಇವತ್ತಿಗೆ ಯಶಸ್ವಿಯಾಗಿ ಕಣ್ಣೆದುರು ನಿಂತಿದ್ದಾರೆ. ತಮ್ಮ ಮಗನಿಗೆ ಒಳ್ಳೆ ಇಂಗ್ಲಿಷ್ ಕಲಿಸಬೇಕು ಅನ್ನೋ ಕಾರಣಕ್ಕೆ ಅರುಣ್ ಪೋಷಕರು ಪ್ರತಿ ನಿತ್ಯ ಇಂಗ್ಲಿಷ್ ಪತ್ರಿಕೆ ಓದಿಸುತ್ತಿದ್ದರು. ಈ ಮೂಲಕವೇ ಷೇರು ಮಾರುಕಟ್ಟೆಗೆ ಪರಿಚಯವಾದರು. ತಮಗೆ ಎಲ್ಲರೂ ಹೇಳುತ್ತಾ ಬಂದಿದ್ದ ಸಲಹೆಗಳನ್ನೆಲ್ಲ ಮೀರಿ ಆ ಕಡೆಗೆ ಆಕರ್ಷಿತರಾದರು.

“ಬೇರೆಲ್ಲರಂತೆ ನನ್ನ ತಂದೆ ಕೂಡ ತಮ್ಮ ಹಿರಿಯ ಮಗನಿಗೆ ಅಸ್ಖಲಿತ ಇಂಗ್ಲಿಷ್ ಬರುವಂತೆಯೇ ಯೋಚಿಸಿದವರು. ಮನೆಗೆ ತರಿಸುತ್ತಿದ್ದ ಬಿಜಿನೆಸ್ ನ್ಯೂಸ್ ಪೇಪರ್​ಗಳನ್ನು ಓದುವಂತೆ ಹೇಳುತ್ತಿದ್ದರು. ಒಂದು ದಿನ ದಿನಪತ್ರಿಕೆ ಓದುತ್ತಾ ಇದ್ದೆ. Excel sheetನಂಥದ್ದನ್ನು ನೋಡುವಾಗ ಅಲ್ಲಿ ನಿಂತುಬಿಟ್ಟೆ. ಅದೇನು ಅಂತ ಕೇಳಿದಾಗ, ಸ್ಟಾಕ್ ಬೆಲೆಗಳು ಅಂತ ಹೇಳಲಾಯಿತು,” ಎನ್ನುವುದನ್ನು ನೆನಪಿಸಿಕೊಳ್ಳುತ್ತಾರೆ ಮುಖರ್ಜಿ. ಆದರೆ ಅರುಣ್ ಅವರ ತಂದೆ ಸಲಹೆ ಏನಾಗಿತ್ತೆಂದರೆ, ಷೇರು ಮಾರ್ಕೆಟ್​ನಲ್ಲಿ ಶೇ 90ರಷ್ಟು ಹೂಡಿಕೆದಾರರು ಹಣ ಕಳೆದುಕೊಳ್ಳುತ್ತಾರೆ ಎನ್ನುವುದಾಗಿತ್ತು. “ನನ್ನಲ್ಲೊಂದು ಕ್ರಾಂತಿಕಾರಿ ಆಲೋಚನೆ ಇತ್ತು. ಬಹುತೇಕರು ದೊಡ್ಡ ಸಮಯವನ್ನು ಎಲ್ಲಿ ಕಳೆದುಕೊಳ್ಳುತ್ತಾರೋ ಅಲ್ಲಿ ಗೆಲುವು ಸಾಧಿಸಬೇಕು ಎಂಬುದೇ ನನ್ನ ಪಾಲಿಗೆ ಸ್ಫೂರ್ತಿಯಾಯಿತು,” ಎನ್ನುತ್ತಾರೆ ಅರುಣ್ ಮುಖರ್ಜಿ.

16ನೇ ವಯಸ್ಸಿಗೇ ಸಿದ್ಧತೆ ಇತರ ಗೆಳೆಯರು ಲವ್ ಅಂದುಕೊಂಡು ಹುಡುಗಿಯರ ಕಡೆಗೊಂದು ಬೆರಗಿನ ನೋಟ ಬೀರುತ್ತಾ ಇರುವಾಗಲೇ, ಅಂದರೆ 16 ವರ್ಷಗಳ ಹಿಂದೆ ಅರುಣ್ ಮುಖರ್ಜಿ ಮಾತ್ರ ಪ್ರತಿ ನಿತ್ಯ ವಾಣಿಜ್ಯ ನಿಯತಕಾಲಿಕೆಗಳನ್ನು ಓದುತ್ತಿದ್ದರು ಹಾಗೂ ಸ್ಟಾಕ್, ಷೇರು ಮಾರುಕಟ್ಟೆ ಹೇಗೆ ಕೆಲಸ ಮಾಡುತ್ತದೆ ಎಂದು ಕಲಿಯಲು ಆರಂಭಿಸಿದ್ದರು. ಈ ಪರಿಶ್ರಮದಿಂದಲೇ ಅರುಣ್​ಗೆ ಕ್ಯಾಪ್ಲಿನ್ ಪಾಯಿಂಟ್, ಅವಂತಿ ಫೀಡ್ಸ್, ಸಿಂಫೋನಿ, ಸೆರಾ ಸ್ಯಾನಿಟಿವೇರ್, ಮಿಂಡಾ ಇಂಡಸ್ಟ್ರೀಸ್ ಹಾಗೂ ಹೆಸ್ಟರ್ ಬಯೋದಂಥ ಸ್ಟಾಕ್​ಗಳನ್ನು ಗುರುತಿಸಲು ನೆರವಾಯಿತು ಮತ್ತು ಅರುಣ್​ಗೆ 25 ವರ್ಷದೊಳಗೆ ಕೋಟ್ಯಧಿಪತಿ ಆಗಲು ಕಾರಣವಾಯಿತು. ಸದ್ಯಕ್ಕೆ ಅವರು ಲಿಸ್ಟೆಡ್ ಕಂಪೆನಿಗಳು ಮತ್ತು ಸ್ಟಾರ್ಟ್​ ಅಪ್​ಗಳ ಕಂಪೆನಿಗಳಲ್ಲಿ ಹೂಡಿಕೆ ಮಾಡುತ್ತಾರೆ. ದೇಶದಾದ್ಯಂತ ಹಾಗೂ ಹೊರದೇಶಗಳಲ್ಲೂ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ.

ಹೂಡಿಕೆ ಮಾಡುವಾಗ ಅನುಸರಿಸುವ ಪದ್ಧತಿ ಏನು? ನಾನು ವಿಶ್ವದಾದ್ಯಂತ ಪ್ರಯಾಣ ಮಾಡ್ತೀನಿ, ಬುದ್ಧಿವಂತ ಜನರನ್ನು ಭೇಟಿ ಆಗ್ತೀನಿ. ಅವರೊಂದಿಗೆ ಚರ್ಚೆ ಮಾಡ್ತಿರ್ತೀನಿ. ನನ್ನ ಸಂಶೋಧನೆಯಲ್ಲಿ ಸೂಕ್ತ ಎಂದು ಕಂಡುಬರುತ್ತದೋ ಅದನ್ನು ಸೇರ್ಪಡೆ ಮಾಡುತ್ತೇನೆ. ಈ ರೀತಿಯ ವಿಚಾರ ವಿನಿಮಯ ನನ್ನ ಪಾಲಿಗೆ ಅದ್ಭುತಗಳನ್ನು ಮಾಡಿವೆ ಎನ್ನುತ್ತಾರೆ ಮುಖರ್ಜಿ. ಆದರೆ ಕೆಲವು ಮ್ಯಾನೇಜ್​ಮೆಂಟ್​ನವರು ಉತ್ಪ್ರೇಕ್ಷೆ ಮಾಡಿ ಹೇಳುವಂಥ ವಿಚಾರಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಸಹ ಸೇರಿಸುತ್ತಾರೆ.

ಮುಖರ್ಜಿ ತಮ್ಮದೇ ಸ್ವಂತದ್ದನ್ನು ಮಾಡಲು ಬಯಸುತ್ತಾರೆ. ಹೂಡಿಕೆದಾರರ ಮಧ್ಯೆ ಅರುಣ್​ಗೆ ಭಾರೀ ಫಾಲೋಯಿಂಗ್ ಇದೆ. ಟ್ವಿಟ್ಟರ್​ನಲ್ಲಿ 80 ಸಾವಿರಕ್ಕೂ ಹೆಚ್ಚು ಫಾಲೋವರ್ ಇದ್ದಾರೆ. ಈಗ ಬಂಗಾಲಿಗಳು, ಯಾರು ತಮ್ಮ ಕುಟುಂಬದವರಿಂದ ಉತ್ತೇಜನ ಸಿಕ್ಕಿರಲ್ಲವೋ ಅಂಥವರು ತಮ್ಮ ಪೋರ್ಟ್​ಫೋಲಿಯೋ ವಿಚಾರದಲ್ಲಿ ಗೊಂದಲಗಳಿದ್ದಲ್ಲಿ ಅರುಣ್ ಅವರ ಸಲಹೆ ಕೇಳುತ್ತಾರೆ.

ಅಮದಹಾಗೆ, ವಯಸ್ಸು ಮುಖರ್ಜಿ ಅವರ ಪರವಾಗಿದೆ. ಆದ್ದರಿಂದ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಹೆದರುವುದಿಲ್ಲ. ಉತ್ತಮ ತಂಡ ಹಾಗೂ ದೃಷ್ಟಿಕೋನ ಇರುವ ತಂಡ ಇರುವ ಸಂಸ್ಥೆಗಳ ಹುಡುಕಾಟ ನಡೆಸುತ್ತಾರೆ. ಸ್ಟಾರ್ಟ್ ಅಪ್ಸ್ ಮತ್ತು ಅನ್​ಲಿಸ್ಟೆಡ್ ಕಂಪೆನಿಗಳಲ್ಲಿ ಸಿಕ್ಕಾಪಟ್ಟೆ ಹೂಡಿಕೆ ಮಾಡುತ್ತಾರೆ. ಲಿಸ್ಟೆಡ್ ಕಂಪೆನಿಗಳಿಗಿಂತ ಹೆಚ್ಚಾಗಿ ಅನ್​ಲಿಸ್ಟೆಡ್​ನಲ್ಲೇ ಮುಖರ್ಜಿ ಅವರ ಹೂಡಿಕೆ ಹೆಚ್ಚಾಗಿದೆ. ಇನ್ನು ಅರುಣ್ ಹೇಳುವಂತೆ, ಆರಂಭದ ತಪ್ಪುಗಳಿಂದ ಪಾಠ ಕಲಿಯುತ್ತೇವೆ. ಅದನ್ನು ಪುನರಾವರ್ತನೆ ಮಾಡಬಹುದು, ಅಷ್ಟೇ ಎನ್ನುತ್ತಾರೆ. ಬುದ್ಧಿವಂತ ಹೂಡಿಕೆದಾರ ಯಾವಾಗಲೂ ಏರಿಕೆ ಆಗುವ ಆಸ್ತಿಗಳ ಮೇಲೆ ಹೂಡಿಕೆ ಮಾಡುತ್ತಾನೆ ಹೊರತು ಇಳಿಕೆ ಆಗುವುದರ ಮೇಲಲ್ಲ ಎನ್ನುತ್ತಾರೆ.

ಈಗಲೂ ಅರುಣ್ ಬಳಿ ಸ್ವಂತ ಕಾರಿಲ್ಲ ಆ ಕಾರಣಕ್ಕೆ ಇಂದಿಗೂ ನನ್ನ ಬಳಿ ಸ್ವಂತ ಕಾರಿಲ್ಲ. ಮನೆ ಎಂಬುದು ಅಗತ್ಯ. ನನ್ನ ಬಳಿ ಹೆಚ್ಚು ಮನೆಗಳಿವೆ. ಹೊಸ ಮನೆ ನನಗೆ ಹೆಚ್ಚು ಸ್ಥಳಾವಕಾಶ ಹಾಗೂ ವಿಶ್ರಾಂತಿ ನೀಡುತ್ತದೆ. ಆದ್ದರಿಂದ ನನ್ನ ಗುರಿಯು ಬೆಲೆ ಹೆಚ್ಚಳ ಆಗುವ ಆಸ್ತಿಗಳ ಕಡೆಗೆ ಇರುತ್ತದೆ ಎನ್ನುತ್ತಾರೆ.

ಆರಂಭದ ಹೂಡಿಕೆದಾರರಿಗೆ ಸಲಹೆ ಏನು? ಈಗಿನ ತಲೆಮಾರು ನೋಟು ನಿಷೇಧದ ನಂತರ ಬ್ಯಾಂಕಿನ ಎಫ್​ಡಿಯಲ್ಲಿ ಹಣ ಹಾಕುತ್ತಿಲ್ಲ. ಒಂದು ಕಂಪ್ಯೂಟರ್ ಇಟ್ಟುಕೊಂಡು ಮಾಡುವ ಬಿಜಿನೆಸ್​ ಕೂಡ ಆಕರ್ಷಕವಾಗಿದೆ. ಆ ಲಕ್ಷಣಗಳು ಕಾಣುತ್ತಿವೆ. ಯಾಕೆ ನಿವೃತ್ತಿ ಆಗುವುಕ್ಕೆ 60ರ ತನಕ ಕಾಯಬೇಕು, 40ನೇ ವಯಸ್ಸಿನಲ್ಲೇ ಆಗಬಹುದಲ್ಲಾ? ಶ್ರೀಮಂತರಾಗಿ ನಿವೃತ್ತರಾಗಲು ಈಕ್ಷಿಟಿ ಷೇರು ಸರಿಯಾದ ದಾರಿ, ಬೇಗ ರಿಟೈರ್ ಆಗಿ ಎನ್ನುವುದು ಅರುಣ್ ಮಾತು.

ಈಕ್ವಿಟಿಯೇ ಊಟ, ನಿದ್ರೆ ಎಲ್ಲವೂ “ದೀರ್ಘಾವಧಿಯ ಬಂಡವಾಳ ಲಾಭದ ಪ್ರಮಾಣ ಕೇವಲ ಶೇ 10ರಷ್ಟು ಮಾತ್ರ. 26 ಪರ್ಸೆಂಟ್​ನ ಕಾಂಪೌಂಡ್​ ಬೆಳವಣಿಗೆಯು ನಿಮ್ಮ ಸಂಪತ್ತನ್ನು 10 ವರ್ಷಗಳಲ್ಲಿ 10 ಪಟ್ಟು ಹೆಚ್ಚಿಸುತ್ತದೆ ಮತ್ತು ಇದು ಹಣದುಬ್ಬರವನ್ನು ಮೀರಿ ಬೆಳೆದಿರುತ್ತದೆ. ನೀವು ಸರಿಯಾಗಿ ಹೂಡಿಕೆ ಮಾಡಲು ಸಾಧ್ಯವಾದರೆ 30 ವರ್ಷಗಳಲ್ಲಿ 1000 ಪಟ್ಟು ಗಳಿಸುವುದೂ ದೊಡ್ಡ ವಿಷಯವಲ್ಲ. ವಿಶ್ವದ ಯಾವುದೇ ಆಸ್ತಿ ಕ್ಲಾಸ್ ಆ ಪ್ರಮಾಣದ ಸಂಪತ್ತನ್ನು ಸೃಷ್ಟಿಸಲು ಸಾಧ್ಯವಿಲ್ಲ. ನೀವು ಮಾಸಿಕ ಸ್ಟಾಕ್ ಎಸ್‌ಐಪಿ ಮಾಡುತ್ತೀರಿ ಅಥವಾ ಲಾಭಾಂಶವನ್ನು ಮತ್ತೆ ಹೂಡಿಕೆ ಮಾಡುತ್ತೀರಿ ಅಂತಾದರೆ ಇದೆಲ್ಲವೂ ನಿಮ್ಮ ಪೋರ್ಟ್​ ಫೋಲಿಯೊವನ್ನು ಅಂತಹ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಅದು ನೀವು ಸಹ ಅರಿಯಬಹುದು,” ಎಂದು ಅರುನ್ ಹೇಳುತ್ತಾರೆ.

ಅಂದಹಾಗೆ, ಈ ಲೆಕ್ಕಾಚಾರಗಳನ್ನೆಲ್ಲ ಬಾಲ್ಯದ ಗಣಿತಶಾಸ್ತ್ರದ ಪಾಠಗಳಲ್ಲಿ ಕಲಿತಿರುತ್ತೀರಿ ಎಂದು ಹೇಳುವುದನ್ನು ಅವರು ಮರೆಯುವುದಿಲ್ಲ.

(ಮೂಲ: ಮನಿ9.ಕಾಮ್)

ಇದನ್ನೂ ಓದಿ: Stock Market Expert Tips: ಷೇರು ಮಾರ್ಕೆಟ್​ನಲ್ಲಿ ಬದಲಾವಣೆ ಗುರುತಿಸಿ ಲಾಭ ಮಾಡೋದು ಹೇಗೆ ಅನ್ನೋದನ್ನು ನಿತಿನ್ ಹೇಳ್ತಾರೆ

(Arun Mukherjee, basically from Bengali famiy, successful stock market investor. Become crorepati before reaching age of 25. Here is the success story of him)

Published On - 1:24 pm, Fri, 16 July 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ