AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

iPhone 18 Pro: ಬಹುನಿರೀಕ್ಷಿತ ಐಫೋನ್ 18 ಪ್ರೊ, 18 ಪ್ರೊ ಮ್ಯಾಕ್ಸ್ ಬಿಡುಗಡೆ; ಯಾವಾಗ ಖರೀದಿಸಬಹುದು?

ಆ್ಯಪಲ್ ಹೊಸ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಅನ್ನು ಬಿಡುಗಡೆ ಮಾಡಿದೆ. ಹೊಸ A20 Pro ಚಿಪ್, ಅಪ್‌ಗ್ರೇಡ್ ಮಾಡಿದ ಕ್ಯಾಮೆರಾ ವ್ಯವಸ್ಥೆ, ಸುಧಾರಿತ ಬ್ಯಾಟರಿ ಮತ್ತು ಹೊಸ C2 ಮೋಡೆಮ್ ಸೇರಿದಂತೆ ಹಲವು ಫೀಚರ್‌ಗಳನ್ನು ನೀಡಲಾಗಿದೆ. ಭಾರತದಲ್ಲಿ ಈ ಫೋನ್‌ಗಳ ಬೆಲೆ ಎಷ್ಟು? ಪ್ರಮುಖ ವಿಶೇಷತೆಗಳೇನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

iPhone 18 Pro: ಬಹುನಿರೀಕ್ಷಿತ ಐಫೋನ್ 18 ಪ್ರೊ, 18 ಪ್ರೊ ಮ್ಯಾಕ್ಸ್ ಬಿಡುಗಡೆ; ಯಾವಾಗ ಖರೀದಿಸಬಹುದು?
Apple Iphone 18 Pro
ಮಾಲಾಶ್ರೀ ಅಂಚನ್​
| Edited By: |

Updated on: Sep 10, 2026 | 7:14 AM

Share

ಮುಖ್ಯಾಂಶಗಳು

  • ಐಫೋನ್ 18 ಪ್ರೊ, 18 ಪ್ರೊ ಮ್ಯಾಕ್ಸ್ ಬಿಡುಗಡೆ
  • ಹೊಸ A20 Pro ಚಿಪ್, 48MP ಕ್ಯಾಮೆರಾ; ಐಫೋನ್ 18 ಪ್ರೊ ಸರಣಿಯಲ್ಲಿ ಏನೆಲ್ಲಾ ಹೊಸತು?
  • ಐಫೋನ್ 18 ಪ್ರೊ ಮ್ಯಾಕ್ಸ್ ಬೆಲೆ ₹1.79 ಲಕ್ಷದಿಂದ

ಆ್ಯಪಲ್ (Apple) ತನ್ನ ‘Surprise and Shine’ ಕಾರ್ಯಕ್ರಮದಲ್ಲಿ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಕಳೆದ ವರ್ಷದ ಐಫೋನ್ 17 ಪ್ರೊ ಸರಣಿಗೆ ಹೋಲಿಸಿದರೆ ಹೊಸ ಮಾದರಿಗಳಲ್ಲಿ ಪ್ರೊಸೆಸರ್, ಕ್ಯಾಮೆರಾ, ಮೋಡೆಮ್ ಮತ್ತು ಬ್ಯಾಟರಿ ಸೇರಿದಂತೆ ಹಲವು ಅಪ್‌ಗ್ರೇಡ್‌ಗಳನ್ನು ನೀಡಲಾಗಿದೆ. ಎರಡೂ ಫೋನ್‌ಗಳು ಆ್ಯಪಲ್‌ನ ಹೊಸ A20 Pro ಚಿಪ್‌ಸೆಟ್ ಮತ್ತು ಕಂಪನಿಯದೇ C2 ಮೋಡೆಮ್ ಹೊಂದಿವೆ.

ಭಾರತದಲ್ಲಿ ಬೆಲೆ ಎಷ್ಟು?

ಭಾರತದಲ್ಲಿ ಐಫೋನ್ 18 ಪ್ರೊ ಬೆಲೆ 256GB ಸ್ಟೋರೇಜ್ ಮಾದರಿಗೆ ರೂ. 1,64,900 ರಿಂದ ಆರಂಭವಾಗುತ್ತದೆ. ಇದೇ 256GB ಸ್ಟೋರೇಜ್‌ನ ಐಫೋನ್ 18 ಪ್ರೊ ಮ್ಯಾಕ್ಸ್ ಬೆಲೆ ರೂ. 1,79,900 ರಿಂದ ಆರಂಭವಾಗುತ್ತದೆ. ಎರಡೂ ಫೋನ್‌ಗಳು 512GB, 1TB ಮತ್ತು 2TB ಸ್ಟೋರೇಜ್ ಆಯ್ಕೆಗಳಲ್ಲೂ ಲಭ್ಯವಿವೆ.

ಬ್ಲ್ಯಾಕ್, ಸಿಲ್ವರ್, ಗ್ಲೇಶಿಯರ್ ಮತ್ತು ಹೊಸ ಬರ್ಗಂಡಿ ಬಣ್ಣಗಳಲ್ಲಿ ಫೋನ್‌ಗಳು ಬಿಡುಗಡೆಯಾಗಿವೆ. ಸೆಪ್ಟೆಂಬರ್ 12ರಿಂದ ಪ್ರೀ-ಆರ್ಡರ್ ಆರಂಭವಾಗಲಿದ್ದು, ಸೆಪ್ಟೆಂಬರ್ 18ರಿಂದ ಮಾರಾಟ ಪ್ರಾರಂಭವಾಗಲಿದೆ.

ಡಿಸ್‌ಪ್ಲೇ ಹೇಗಿದೆ?

ಐಫೋನ್ 18 ಪ್ರೊನಲ್ಲಿ 6.3 ಇಂಚಿನ ಡಿಸ್‌ಪ್ಲೇ ಇದ್ದರೆ, 18 ಪ್ರೊ ಮ್ಯಾಕ್ಸ್‌ನಲ್ಲಿ ದೊಡ್ಡದಾದ 6.9 ಇಂಚಿನ ಡಿಸ್‌ಪ್ಲೇ ನೀಡಲಾಗಿದೆ. ಎರಡೂ ಫೋನ್‌ಗಳಲ್ಲಿ Super Retina XDR OLED ಸ್ಕ್ರೀನ್, ProMotion ತಂತ್ರಜ್ಞಾನ ಮತ್ತು Always-On Display ಸೌಲಭ್ಯಗಳಿವೆ. ಎರಡೂ ಮಾದರಿಗಳು ಅಲ್ಯೂಮಿನಿಯಂ ಯುನಿಬಾಡಿ ವಿನ್ಯಾಸ ಹೊಂದಿವೆ. ಹಿಂದಿನ ಮಾದರಿಗಳಲ್ಲಿದ್ದ ಆಕ್ಷನ್ ಬಟನ್ ಮತ್ತು ಕ್ಯಾಮೆರಾ ಕಂಟ್ರೋಲ್ ಕೂಡ ಮುಂದುವರಿಸಲಾಗಿದೆ.

A20 Pro ಚಿಪ್‌ನ ವಿಶೇಷತೆ ಏನು?

ಹೊಸ ಐಫೋನ್‌ಗಳಿಗೆ ಆ್ಯಪಲ್‌ನ A20 Pro ಚಿಪ್‌ಸೆಟ್ ಶಕ್ತಿ ನೀಡುತ್ತದೆ. ಇದು 2nm ತಂತ್ರಜ್ಞಾನ ಆಧಾರಿತ ಚಿಪ್ ಆಗಿದ್ದು, 6-ಕೋರ್ CPU, 7-ಕೋರ್ GPU ಮತ್ತು 16-ಕೋರ್ Neural Engine ಹೊಂದಿದೆ. A19 Proಗೆ ಹೋಲಿಸಿದರೆ ಮೆಮೊರಿ ಬ್ಯಾಂಡ್‌ವಿಡ್ತ್ ಶೇ.50ರಷ್ಟು ಹೆಚ್ಚಾಗಿದೆ ಎಂದು ಆ್ಯಪಲ್ ಹೇಳಿದೆ. GPU ಕಾರ್ಯಕ್ಷಮತೆ ಶೇ.40ರವರೆಗೆ ಹೆಚ್ಚಿದ್ದು, AI ಪ್ರೊಸೆಸಿಂಗ್ ಸಾಮರ್ಥ್ಯ ಎರಡು ಪಟ್ಟು ಹೆಚ್ಚಾಗಿದೆ ಎಂದು ಕಂಪನಿ ತಿಳಿಸಿದೆ.

ಎರಡೂ ಫೋನ್‌ಗಳು iOS 27ನಲ್ಲಿ ಕಾರ್ಯನಿರ್ವಹಿಸುತ್ತವೆ. ಹೊಸ ಆಪಲ್ ಇಂಟೆಲಿಜೆನ್ಸ್ ಫೀಚರ್‌ಗಳು ಮತ್ತು Siri AI ಸೌಲಭ್ಯಗಳನ್ನೂ ನೀಡಲಾಗಿದೆ.

ಸ್ಮಾರ್ಟ್‌ಫೋನ್‌ಗಳಿಗೂ ಇರುತ್ತೆ ‘ಎಕ್ಸ್‌ಪೈರಿ ಡೇಟ್’: ನಿಮ್ಮ ಮೊಬೈಲ್ ಹಳೆಯದಾಗಿದೆಯೇ ಎಂದು ಪರಿಶೀಲಿಸುವುದು ಹೇಗೆ?

ಕ್ಯಾಮೆರಾದಲ್ಲಿ ದೊಡ್ಡ ಬದಲಾವಣೆ

ಐಫೋನ್ 18 ಪ್ರೊ ಮತ್ತು 18 ಪ್ರೊ ಮ್ಯಾಕ್ಸ್‌ನ ಹಿಂಭಾಗದಲ್ಲಿ ಮೂರು 48MP ಕ್ಯಾಮೆರಾಗಳ ಸೆಟಪ್ ಇದೆ. ಮುಖ್ಯ ಕ್ಯಾಮೆರಾ 48MP Fusion ಸೆನ್ಸರ್ ಆಗಿದ್ದು, ಮೊದಲ ಬಾರಿಗೆ ಐಫೋನ್‌ನಲ್ಲಿ ವೇರಿಯೆಬ್ ಅಪಾರ್ಚರ್ ಸೌಲಭ್ಯ ನೀಡಲಾಗಿದೆ. ಇದರಿಂದ ಬೆಳಕಿನ ಪ್ರಮಾಣವನ್ನು ನಿಯಂತ್ರಿಸುವ ಮೂಲಕ ವಿಭಿನ್ನ ಪರಿಸ್ಥಿತಿಗಳಲ್ಲಿ ಫೋಟೊ ಗುಣಮಟ್ಟ ಸುಧಾರಿಸಲು ಸಾಧ್ಯವಾಗಲಿದೆ.

ಇದರೊಂದಿಗೆ 48MP ಆಲ್ಟ್ರಾ ವೈಡ್ ಮತ್ತು 48MP ಟೆಲಿಫೋಟೊ ಕ್ಯಾಮೆರಾಗಳಿವೆ. ಮುಂಭಾಗದಲ್ಲಿ 18MP ಕ್ಯಾಮೆರಾ ಇದ್ದು, ಅಟೋ ಫೋಕಸ್ ಮತ್ತು Centre Stage ಸೌಲಭ್ಯಗಳನ್ನು ನೀಡಲಾಗಿದೆ. ಕ್ಯಾಮೆರಾ ಅಪ್ಲಿಕೇಶನ್‌ನಲ್ಲಿ ಪ್ರೊ ಕಂಟ್ರೊಲ್ಸ್ ಮೂಲಕ ಅಪಾರ್ಚರ್, ಶಟ್ಟರ್ ಸ್ಪೀಡ್ ಮತ್ತು ವೈಟ್ ಬಾಲೆನ್ಸ್ ಮುಂತಾದ ಸೆಟ್ಟಿಂಗ್‌ಗಳನ್ನು ಬಳಕೆದಾರರು ಸ್ವತಃ ನಿಯಂತ್ರಿಸಬಹುದು.

ಬ್ಯಾಟರಿ ಮತ್ತು ಚಾರ್ಜಿಂಗ್

ಬ್ಯಾಟರಿ ವಿಚಾರದಲ್ಲೂ ಹೊಸ ಐಫೋನ್‌ಗಳಲ್ಲಿ ಸುಧಾರಣೆ ಮಾಡಲಾಗಿದೆ. ಐಫೋನ್ 18 ಪ್ರೊ ಒಂದು ಚಾರ್ಜ್‌ನಲ್ಲಿ 24 ಗಂಟೆಗಳವರೆಗೆ ಬಳಕೆಯನ್ನು ನೀಡುತ್ತದೆ ಎಂದು ಆ್ಯಪಲ್ ಹೇಳಿದೆ. 18 ಪ್ರೊ ಮ್ಯಾಕ್ಸ್‌ನಲ್ಲಿ ಈ ಅವಧಿ 30 ಗಂಟೆಗಳವರೆಗೆ ಇರಲಿದೆ. ವಿಡಿಯೋ ಪ್ಲೇಬ್ಯಾಕ್‌ನಲ್ಲಿ 18 ಪ್ರೊ 36 ಗಂಟೆಗಳವರೆಗೆ ಮತ್ತು 18 ಪ್ರೊ ಮ್ಯಾಕ್ಸ್ 45 ಗಂಟೆಗಳವರೆಗೆ ನೀಡುತ್ತದೆ ಎಂದು ಕಂಪನಿ ಹೇಳಿದೆ. 18 ಪ್ರೊ ಅನ್ನು ವೈರ್ಡ್ ಚಾರ್ಜಿಂಗ್ ಮೂಲಕ ಸುಮಾರು 15 ನಿಮಿಷಗಳಲ್ಲಿ ಶೇ.50ರಷ್ಟು ಚಾರ್ಜ್ ಮಾಡಬಹುದು.

ಹೊಸ C2 ಮೋಡೆಮ್

ಐಫೋನ್ 18 ಪ್ರೊ ಸರಣಿಯಲ್ಲಿ ಆ್ಯಪಲ್ ತನ್ನದೇ C2 ಮೋಡೆಮ್ ಬಳಸಿದೆ. ಇದು ಹಿಂದಿನ C1X ಮೋಡೆಮ್‌ಗಿಂತ ವೇಗವಾದ ಅಪ್‌ಲೋಡ್‌ಗಳನ್ನು ನೀಡುವುದರ ಜೊತೆಗೆ ಶೇ.15ರಷ್ಟು ಕಡಿಮೆ ವಿದ್ಯುತ್ ಬಳಕೆ ಮಾಡುತ್ತದೆ ಎಂದು ಆ್ಯಪಲ್ ಹೇಳಿದೆ. ಫೋನ್‌ನ ತಾಪಮಾನ ನಿಯಂತ್ರಣಕ್ಕಾಗಿ ಹಿಂದಿನ ತಲೆಮಾರಿಗೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಿನ ಮೇಲ್ಮೈ ಪ್ರದೇಶ ಹೊಂದಿರುವ ಹೊಸ Vapor Chamber ವ್ಯವಸ್ಥೆಯನ್ನೂ ನೀಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಬಿಜೆಪಿಎಂಎಲ್​ಎಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಬಿಜೆಪಿಎಂಎಲ್​ಎಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ