AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಮಾರ್ಟ್‌ಫೋನ್‌ಗಳಿಗೂ ಇರುತ್ತೆ ‘ಎಕ್ಸ್‌ಪೈರಿ ಡೇಟ್’: ನಿಮ್ಮ ಮೊಬೈಲ್ ಹಳೆಯದಾಗಿದೆಯೇ ಎಂದು ಪರಿಶೀಲಿಸುವುದು ಹೇಗೆ?

ಆಹಾರ ವಸ್ತುಗಳಿಗೆ ಇರುವಂತೆ ಮೊಬೈಲ್ ಫೋನ್​ಗಳಿಗೂ ಎಕ್ಸ್ಪೈರಿ ಡೇಟ್ ಇರುತ್ತದೆ. ಇಲ್ಲಿ ಎಕ್ಸ್​ಪೈರಿ ಆದ ಫೋನ್​ಗಳೇನು ಬ್ಲಾಸ್ಟ್ ಆಗುವುದಿಲ್ಲ. ಆದರೆ, ಅಗತ್ಯ ಇರುವ ಕಾರ್ಯಗಳನ್ನು ಮಾಡಲು ಆಗುವುದಿಲ್ಲ. ಒಂದು ಸ್ಮಾರ್ಟ್​ಫೋನ್ ನಿರ್ದಿಷ್ಟ ಅವಧಿ ಬಳಿಕ ನಿರುಪಯುಕ್ತ ಎನಿಸುತ್ತದೆ. ಹೊಸ ಆ್ಯಪ್​ಗಳಿಗೆ ಅದರ ಸಾಫ್ಟ್​ವೇರ್ ಹೊಂದಿಕೆ ಆಗುವುದಿಲ್ಲ. ಅಪ್​ಡೇಟೆಡ್ ಸಾಫ್ಟ್​ವೇರ್ ಆ ಫೋನ್​ನ ಹಾರ್ಡ್​ವೇರ್​ಗೆ ಹೊಂದಿಕೆ ಆಗುವುದಿಲ್ಲ. ಹೀಗಾಗಿ, ಫೋನ್​ನ ಮುಖ್ಯ ಕೆಲಸ ಆಗುವುದಿಲ್ಲ.

ಸ್ಮಾರ್ಟ್‌ಫೋನ್‌ಗಳಿಗೂ ಇರುತ್ತೆ 'ಎಕ್ಸ್‌ಪೈರಿ ಡೇಟ್': ನಿಮ್ಮ ಮೊಬೈಲ್ ಹಳೆಯದಾಗಿದೆಯೇ ಎಂದು ಪರಿಶೀಲಿಸುವುದು ಹೇಗೆ?
ಮೊಬೈಲ್ ಫೋನ್ ಬಳಸುತ್ತಿರುವುದುImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 07, 2026 | 4:13 PM

Share

ಸಾಮಾನ್ಯವಾಗಿ ನಾವು ಆಹಾರ ಪದಾರ್ಥಗಳು ಅಥವಾ ಔಷಧಗಳಿಗೆ ‘ಎಕ್ಸ್‌ಪೈರಿ ಡೇಟ್’ (ಆಯುಷ್ಯದ ಮಿತಿ) ಇರುವುದನ್ನು ಕಾಣುತ್ತೇವೆ. ಆದರೆ, ನಾವು ದಿನನಿತ್ಯ ಬಳಸುವ ಸ್ಮಾರ್ಟ್​ಫೋನ್‌ಗಳಿಗೂ ಒಂದು ನಿರ್ದಿಷ್ಟ ಆಯುಷ್ಯ ಅಥವಾ ಎಕ್ಸ್‌ಪೈರಿ ಅವಧಿ ಇರುತ್ತದೆ ಎಂಬುದು ಹಲವರಿಗೆ ತಿಳಿದಿಲ್ಲ. ಸ್ಮಾರ್ಟ್‌ಫೋನ್ ಎಕ್ಸ್‌ಪೈರಿ ಎಂದರೆ ಮೊಬೈಲ್ ಸಂಪೂರ್ಣವಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವುದು ಎಂದರ್ಥವಲ್ಲ; ಬದಲಿಗೆ ಅದಕ್ಕೆ ಸಿಗುವ ಸಾಫ್ಟ್‌ವೇರ್ ಮತ್ತು ಸೆಕ್ಯೂರಿಟಿ ನವೀಕರಣಗಳು (Security Updates) ಸ್ಥಗಿತಗೊಳ್ಳುವುದಾಗಿದೆ.

ಸ್ಮಾರ್ಟ್‌ಫೋನ್ ಯಾವಾಗ ‘ಔಟ್‌ಡೇಟೆಡ್’ ಆಗುತ್ತದೆ?

ಆಪರೇಟಿಂಗ್ ಸಿಸ್ಟಮ್ (OS) ಮತ್ತು ಸೆಕ್ಯೂರಿಟಿ ಅಪ್‌ಡೇಟ್‌ಗಳನ್ನು ನೀಡುವುದನ್ನು ಕಂಪನಿಯು ಸ್ಥಗಿತಗೊಳಿಸಿದಾಗ, ಆ ಫೋನ್ ಅನ್ನು ‘ಔಟ್‌ಡೇಟೆಡ್’ ಅಥವಾ ಎಕ್ಸ್‌ಪೈರ್ಡ್ ಎಂದು ಪರಿಗಣಿಸಲಾಗುತ್ತದೆ.

ಹೊಸ ಸಾಫ್ಟ್‌ವೇರ್ ಬೆಂಬಲವಿಲ್ಲದೆ ಹೋದರೆ, ಕಾಲಕ್ರಮೇಣ ವಾಟ್ಸಾಪ್, ಗೂಗಲ್ ಪೇ, ಫೋನ್ ಪೇ ನಂತಹ ಬ್ಯಾಂಕಿಂಗ್ ಹಾಗೂ ಪ್ರಮುಖ ಅಪ್ಲಿಕೇಶನ್‌ಗಳು ಆ ಫೋನ್‌ನಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಹೀಗಾಗಿ, ಆ ಫೋನ್ ಔಟ್​ಡೇಟೆಡ್ ಆಗಿಹೋಗುತ್ತದೆ.

ಇದನ್ನೂ ಓದಿ: ಚಿಪ್ ಡಿಸೈನ್​ನಲ್ಲಿ ಕರ್ನಾಟಕ ಹಾಗೂ ದಕ್ಷಿಣ ರಾಜ್ಯಗಳೇ ಮುಂದು; ಸಿಲಿಕಾನ್ ಸಿಟಿ ಮಾತ್ರವಲ್ಲ, ಸೆಮಿಕಂಡಕ್ಟರ್ ಹಬ್ ಕೂಡ ಆದ ಬೆಂಗಳೂರು

ನಿಮ್ಮ ಫೋನ್‌ನ ಸೆಕ್ಯೂರಿಟಿ ಅಪ್‌ಡೇಟ್ ಸ್ಥಿತಿ ಪರಿಶೀಲಿಸುವುದು ಹೇಗೆ?

ಆಂಡ್ರಾಯ್ಡ್ ಫೋನ್​ನಲ್ಲಿ Settings ಓಪನ್ ಮಾಡಿ. ಅಲ್ಲಿ ಪಟ್ಟಿಯಲ್ಲಿ Device Care ಅಥವಾ Software Update ಅನ್ನು ಒತ್ತಿದರೆ ಸಾಫ್ಟ್​ವೇರ್ ಅಪ್​ಡೇಟ್ ಮಾಡಬೇಕಾ ಬೇಡವಾ ಎಂಬುದನ್ನು ತಿಳಿಯಬಹುದು. ಅಪ್​ಡೇಟ್ ಮಾಡಬೇಕಾಗಿದ್ದರೆ ಅದು ಕೇಳುತ್ತದೆ. ಅಥವಾ ಕೊನೆಯ ಬಾರಿ ಅಪ್​ಡೇಟ್ ಆದ ದಿನಾಂಕವನ್ನು ಗಮನಿಸಬಹುದು.

ಕಂಪನಿಯ ಅಧಿಕೃತ ವೆಬ್‌ಸೈಟ್​ನಲ್ಲಿ ಗಮನಿಸಿ

ಪ್ರತಿಯೊಂದು ಸ್ಮಾರ್ಟ್‌ಫೋನ್ ಬ್ರ್ಯಾಂಡ್ (ಸ್ಯಾಮ್‌ಸಂಗ್, ಗೂಗಲ್, ಶವೋಮಿ ಇತ್ಯಾದಿ) ತನ್ನ ಅಧಿಕೃತ ಪೋರ್ಟಲ್‌ನಲ್ಲಿ ಪ್ರತಿಯೊಂದು ಮಾಡೆಲ್‌ಗೆ ಎಷ್ಟು ವರ್ಷಗಳ ಕಾಲ OS ಮತ್ತು ಸೆಕ್ಯೂರಿಟಿ ಅಪ್‌ಡೇಟ್‌ಗಳನ್ನು ನೀಡಲಾಗುತ್ತದೆ ಎಂಬುದನ್ನು ಪ್ರಕಟಿಸುತ್ತದೆ. ನಿಮ್ಮ ಫೋನ್ ಮಾಡಲ್ ನಮೂದಿಸಿ, ಅದರ ಆಯುಷ್ಯವನ್ನು ತಿಳಿಯಿರಿ.

ಇದನ್ನೂ ಓದಿ: ಈ ದಾಖಲೆಗಳಿದ್ರೆ ಮೃತ ವ್ಯಕ್ತಿಯ ಆಧಾರ್ ಕಾರ್ಡ್ ನಿಷ್ಕ್ರಿಯಗೊಳಿಸುವುದು ಸುಲಭ

ಅಪ್‌ಡೇಟ್ ನಿಂತ ಫೋನ್ ಬಳಸುವುದರಿಂದಾಗುವ ಅಪಾಯಗಳು

ಸೈಬರ್ ದಾಳಿ ಅಪಾಯ: ಹಳೆಯ ಸೆಕ್ಯೂರಿಟಿ ಪ್ಯಾಚ್‌ಗಳಿರುವ ಫೋನ್‌ಗಳು ಸೈಬರ್ ಅಪರಾಧಿಗಳು ಹಾಗೂ ಹ್ಯಾಕರ್‌ಗಳಿಗೆ ಸುಲಭ ಟಾರ್ಗೆಟ್ ಆಗುತ್ತವೆ.

ಡೇಟಾ ಕಳವು: ಫೋನ್‌ನಲ್ಲಿರುವ ವೈಯಕ್ತಿಕ ಮಾಹಿತಿ, ಪಾಸ್‌ವರ್ಡ್‌ಗಳು ಮತ್ತು ಆನ್‌ಲೈನ್ ಬ್ಯಾಂಕಿಂಗ್ ವಿವರಗಳು ಸೋರಿಕೆಯಾಗುವ ಭಾರಿ ಅಪಾಯವಿರುತ್ತದೆ.

ಅಪ್‌ಡೇಟ್ ನಿಂತು 1 ವರ್ಷಕ್ಕೂ ಹೆಚ್ಚು ಅವಧಿಯಾಗಿದ್ದರೆ, ಅಂತಹ ಫೋನ್‌ಗಳಲ್ಲಿ ಬ್ಯಾಂಕಿಂಗ್ ವಹಿವಾಟು ನಡೆಸದಿರುವುದು ಹಾಗೂ ಹೊಸ ಮೊಬೈಲ್‌ಗೆ ಬದಲಾಯಿಸುವುದು ಸುರಕ್ಷತೆಯ ದೃಷ್ಟಿಯಿಂದ ಸೂಕ್ತ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಜಿಬಿಎಗೆ 2.77 ಕೋಟಿ ರೂ. ದಂಡ ವಿಧಿಸಿದ ಹೈಕೋರ್ಟ್!
ಜಿಬಿಎಗೆ 2.77 ಕೋಟಿ ರೂ. ದಂಡ ವಿಧಿಸಿದ ಹೈಕೋರ್ಟ್!
ಆರ್​ಆರ್ ನಗರದಲ್ಲಿ ವ್ಯಕ್ತಿಯ ಕೊಂದಿದ್ದ ಕಾಡಾನೆ ಕೊನೆಗೂ ಕಾಡಿಗೆ
ಆರ್​ಆರ್ ನಗರದಲ್ಲಿ ವ್ಯಕ್ತಿಯ ಕೊಂದಿದ್ದ ಕಾಡಾನೆ ಕೊನೆಗೂ ಕಾಡಿಗೆ
ಧಾರಾಕಾರ ಮಳೆಗೆ ವೈಟ್​ಫಿಲ್ಡ್, ಮಾರತ್ತಹಳ್ಳಿ, ಔಟರ್ ರಿಂಗ್ ರಸ್ತೆ ಜಲಾವೃತ
ಧಾರಾಕಾರ ಮಳೆಗೆ ವೈಟ್​ಫಿಲ್ಡ್, ಮಾರತ್ತಹಳ್ಳಿ, ಔಟರ್ ರಿಂಗ್ ರಸ್ತೆ ಜಲಾವೃತ
ಅಸಹ್ಯದಲ್ಲೇ ಅಸಹ್ಯ, ಅದಕ್ಕೆ ನಾಮಿನೇಟ್ ಮಾಡಿದೆ; ಕಿರಣ್​​ ನಾಮಿನೇಟ್
ಅಸಹ್ಯದಲ್ಲೇ ಅಸಹ್ಯ, ಅದಕ್ಕೆ ನಾಮಿನೇಟ್ ಮಾಡಿದೆ; ಕಿರಣ್​​ ನಾಮಿನೇಟ್
ರಾತ್ರಿಯಿಡೀ ಮಳೆ ಅಬ್ಬರ: ಮಲ್ಲೇಶ್ವರಂನಲ್ಲಿ ಮರಬಿದ್ದು 2 ಕಾರುಗಳು ಜಖಂ
ರಾತ್ರಿಯಿಡೀ ಮಳೆ ಅಬ್ಬರ: ಮಲ್ಲೇಶ್ವರಂನಲ್ಲಿ ಮರಬಿದ್ದು 2 ಕಾರುಗಳು ಜಖಂ
ಇಂದು ಸಂಕಷ್ಟ ಚತುರ್ಥಿ; ಗಜಗೌರಿ ವ್ರತ ಮಾಡುವವರಿಗೆ ಮಹತ್ವದ ದಿನ
ಇಂದು ಸಂಕಷ್ಟ ಚತುರ್ಥಿ; ಗಜಗೌರಿ ವ್ರತ ಮಾಡುವವರಿಗೆ ಮಹತ್ವದ ದಿನ
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್