IRCTC: ಐಆರ್​ಸಿಟಿಸಿ ಷೇರು ಒಂದೇ ದಿನದಲ್ಲಿ ತಲಾ 1000 ರೂಪಾಯಿಗೂ ಹೆಚ್ಚು ಇಳಿಕೆ

ಐಆರ್​ಸಿಟಿಸಿ ಷೇರು ಬೆಲೆ ಅಕ್ಟೋಬರ್​ 19, 2021ರಂದು ತಲಾ 1000 ರೂಪಾಯಿಗೂ ಹೆಚ್ಚು ಇಳಿಕೆ ಕಂಡಿದೆ. ಏಕೆ ಇಂಥ ಬೆಳವಣಿಗೆ ಆಗಿದೆ ಎಂಬುದರ ವಿವರ ಇಲ್ಲಿದೆ.

IRCTC: ಐಆರ್​ಸಿಟಿಸಿ ಷೇರು ಒಂದೇ ದಿನದಲ್ಲಿ ತಲಾ 1000 ರೂಪಾಯಿಗೂ ಹೆಚ್ಚು ಇಳಿಕೆ
ಸಾಂದರ್ಭಿಕ ಚಿತ್ರ
Follow us
| Updated By: Srinivas Mata

Updated on: Oct 19, 2021 | 5:33 PM

ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಡೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ) ಷೇರುಗಳು ಮಂಗಳವಾರದ (ಅಕ್ಟೋಬರ್ 19, 2021) ವಹಿವಾಟಿನಲ್ಲಿ ಪ್ರತಿ ಷೇರಿಗೆ 1,400 ರೂಪಾಯಿ ಅಥವಾ ಶೇ 15ರಷ್ಟು ಹಠಾತ್ ಕುಸಿತವನ್ನು ಕಂಡವು. ದಿನದ ಕೊನೆಗೆ ಈ ಷೇರಿನ ಬೆಲೆ ಶೇ 8ಕ್ಕಿಂತಲೂ ಕಡಿಮೆಯಾಗಿ, ತಲಾ 5,363 ರೂಪಾಯಿಗೆ ಕೊನೆಗೊಂಡಿತು. ಐಆರ್‌ಸಿಟಿಸಿ ಷೇರುಗಳು ಇಂದಿನ ವಹಿವಾಟಿನಲ್ಲಿ ದಾಖಲೆಯ ಗರಿಷ್ಠ ಮಟ್ಟವಾದ 6,393 ರೂಪಾಯಿಯನ್ನು ಮುಟ್ಟಿತು. ಆ ವೇಳೆ ಷೇರಿನ ದರವು ಶೇ 7ರಷ್ಟು ಹೆಚ್ಚಳವಾಗಿ, ಮಾರುಕಟ್ಟೆ ಬಂಡವಾಳ ಮೌಲ್ಯವು 1 ಟ್ರಿಲಿಯನ್ (ಲಕ್ಷ ಕೋಟಿ ರೂಪಾಯಿ) ದಾಟಿತ್ತು. ಮಾರ್ಕೆಟ್​ಗಳು ಕೂಡ ಇಂದು ಅಸ್ಥಿರವಾಗಿದ್ದವು. ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 62,000 ಪಾಯಿಂಟ್ಸ್​ ತಲುಪಿದ ನಂತರ 49 ಅಂಕಗಳ ಕುಸಿತ ಕಂಡಿದೆ. ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್​ನಲ್ಲಿ ಹೆಚ್ಚಿನ ಲಾಭದ ಬುಕಿಂಗ್ ಕಂಡುಬಂದಿದೆ.

“ಇಂದಿನ ವಹಿವಾಟಿನಲ್ಲಿ ವಿಶೇಷವಾಗಿ ಮಿಡ್‌ಕ್ಯಾಪ್‌ಗಳು ಮತ್ತು ಸ್ಮಾಲ್‌ಕ್ಯಾಪ್ಸ್ ಕೌಂಟರ್‌ಗಳಲ್ಲಿ ಚಲನೆಯು ಕಂಡುಬಂದ ನಂತರ ಹೂಡಿಕೆದಾರರು ಈ ಹಂತಗಳಲ್ಲಿ ಜಾಗರೂಕರಾಗಿರಬೇಕು. ಹೂಡಿಕೆದಾರರು ತಮ್ಮ ಕಟ್ಟುನಿಟ್ಟಾದ ಸ್ಟಾಪ್-ಲಾಸ್ ಇರಿಸಿಕೊಳ್ಳಲು ಸೂಚಿಸಲಾಗಿದೆ. ರೈಲ್ವೇಗೆ ನಿಯಂತ್ರಕರ ನೇಮಕಾತಿಯ ಸುದ್ದಿಯು ಹೊರಬಂದ ನಂತರ ಇಂದು ರೈಲ್ವೆ ಷೇರುಗಳಲ್ಲಿ ದಿನದ ಅಂತ್ಯದಲ್ಲಿ ಒತ್ತಡದಲ್ಲಿ ಕಂಡುಬಂದವು. ಐಆರ್‌ಸಿಟಿಸಿ ಶೇ 15ರಷ್ಟು ಕುಸಿದಿದೆ. ಪವರ್ ಸ್ಟಾಕ್‌ಗಳಲ್ಲಿ ಪ್ರಮುಖ ಪ್ರಾಫಿಟ್​-ಬುಕಿಂಗ್ ಕೂಡ ಕಂಡುಬಂದಿದೆ,” ಎಂದು ವಿಶ್ಲೇಷಕರು ಹೇಳಿದ್ದಾರೆ. “ಐಆರ್​ಸಿಟಿಸಿಗೆ ಮುಂದಿನ ಬೆಂಬಲ 4750 -4500 ರೂಪಾಯಿ ಮಟ್ಟಗಳಲ್ಲಿ ಇರಲಿದ್ದು, ಅಲ್ಲಿಂದ ಪುಟಿದೇಳುವ ನಿರೀಕ್ಷೆಯಿದೆ. ಆದ್ದರಿಂದ ಕುಸಿತದ ಸಂದರ್ಭದಲ್ಲಿ ದೀರ್ಘಾವಧಿ ಹೂಡಿಕೆದಾರರಿಗೆ ಮಾತ್ರ ಸೂಚಿಸಲಾಗುತ್ತದೆ. ಪ್ರಾಫಿಟ್​ ಬುಕಿಂಗ್ ಒತ್ತಡದಲ್ಲಿ ಇರುವುದರಿಂದ ಟ್ರೇಡರ್​ಗಳು ಸ್ಟಾಪ್ ಲಾಸ್​ ಇಟ್ಟುಕೊಳ್ಳುವುದು ಮುಖ್ಯ ಹಾಗೂ ಏರಿಳಿತಗಳು ಹಾಗೇ ಮುಂದುವರಿಯಲಿದೆ,” ಎಂದು ಅವರು ಹೇಳಿದ್ದಾರೆ.

“ಐಆರ್‌ಸಿಟಿಸಿಯ ಮೂಲಭೂತ ಅಂಶಗಳು ಈಗಲೂ ಪ್ರಬಲವಾಗಿವೆ. ಆದರೆ ಇಳಿಕೆ ಓಟದ ನಂತರ ಮೌಲ್ಯಮಾಪನದ ಬಗ್ಗೆ ಕಾಳಜಿ ಇದೆ. ಟ್ರೇಡರ್​ಗಳಿಗೆ ಪ್ರತಿ ದಿನ ಹಣ ಮಾಡುವುದು ಸುಲಭವಾಗಿದೆ. ಹಾಗಾಗಿ ನಾವು ತಾಂತ್ರಿಕ ಇಳಿಕೆಯನ್ನು (Technical Correction) ನೋಡುತ್ತಿದ್ದೇವೆ. ಅಲ್ಲಿ ಮಾನಸಿಕ ಮಟ್ಟವು ರೂ. 5000 ತಕ್ಷಣದ ಬೆಂಬಲವಾಗಿದೆ. ಆದರೆ ಇದು ಕೆಳಗಿಳಿಯುವ ಅಪಾಯವಿದೆ ಮತ್ತು 20-ಡಿಎಂಎ ಕಡೆಗೆ ಹೋಗಬಹುದು ಅದು ರೂ. 4500 ಮಟ್ಟಕ್ಕೆ ಹೊಂದಿಕೆಯಾಗಬಹುದು. ಆದರೆ ರೂ. 4000- ರೂ. 3800 ಹೊಸ ಖರೀದಿ ಸ್ಥಾನಗಳನ್ನು ತೆಗೆದುಕೊಳ್ಳಲು ನಿರ್ಣಾಯಕ ಬೇಡಿಕೆ ವಲಯವಾಗಿರುತ್ತದೆ,” ಎಂದಿದ್ದಾರೆ.

ಐಆರ್​ಸಿಟಿಸಿ ಅಕ್ಟೋಬರ್ 2019ರಲ್ಲಿ ಲಿಸ್ಟಿಂಗ್ ಆಗುವ ಮೂಲಕ ಪ್ರಾಥಮಿಕ ಮಾರುಕಟ್ಟೆಯನ್ನು ಪ್ರವೇಶಿಸಿತು. ಇದು ರೈಲ್ವೆ ಜಾಲದಲ್ಲಿ ಶೇ 100ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ರೈಲುಗಳಲ್ಲಿ ಕೇಟರಿಂಗ್ ಸೇವೆಗಳನ್ನು ಮತ್ತು ರೈಲು ನಿಲ್ದಾಣಗಳಲ್ಲಿನ ಪ್ರಮುಖ ಸೇವೆ ಒದಗಿಸುವ ಏಕೈಕ ಸಂಸ್ಥೆ ಇದು. ಭಾರತೀಯ ರೈಲ್ವೆಯ ಪಿಎಸ್‌ಯು ಸ್ಟಾಕ್ ತನ್ನ ಷೇರುದಾರರಿಗೆ ಅತ್ಯುತ್ತಮವಾದ ಲಾಭವನ್ನು ನೀಡುತ್ತಲೇ ಇದೆ. ಅಕ್ಟೋಬರ್ 2019ರಿಂದ ಐಆರ್‌ಸಿಟಿಸಿ ಷೇರು ಬೆಲೆ ಪ್ರತಿ ಷೇರಿಗೆ 320 ರೂಪಾಯಿಯಿಂದ ರೂ. 6,000ಕ್ಕೆ ಶೇ 1,700ರಷ್ಟು ಹೆಚ್ಚಾಗಿದೆ. ಈ ವರ್ಷದಲ್ಲಿ ಇಲ್ಲಿಯವರೆಗೆ ಮಲ್ಟಿಬ್ಯಾಗರ್ ಸ್ಟಾಕ್ ಸುಮಾರು ಶೇ 245ರಷ್ಟು ಹೆಚ್ಚಾಗಿದೆ. ಆದರೆ ಒಂದು ವರ್ಷದ ಅವಧಿಯಲ್ಲಿ ಶೇ 275ರಷ್ಟು ಒಟ್ಟುಗೂಡಿಸಿದೆ.

ಇದನ್ನೂ ಓದಿ: IRCTC: ಎರಡು ವರ್ಷದಲ್ಲಿ ಹತ್ತು ಪಟ್ಟಿಗೂ ಹೆಚ್ಚಿನ ರಿಟರ್ನ್ಸ್ ನೀಡಿದ ಸರ್ಕಾರಿ ಸ್ವಾಮ್ಯದ ಈ ಷೇರು

ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ
ಕಾಂಗ್ರೆಸ್​ ಕಾರ್ಯಕರ್ತರಿಂದ ಸಿಎಂ ಆಪ್ತ, ಮುಡಾ ಅಧ್ಯಕ್ಷನಿಗೆ ಘೇರಾವ್​
ಕಾಂಗ್ರೆಸ್​ ಕಾರ್ಯಕರ್ತರಿಂದ ಸಿಎಂ ಆಪ್ತ, ಮುಡಾ ಅಧ್ಯಕ್ಷನಿಗೆ ಘೇರಾವ್​
‘ಬಿಗ್ ಬಾಸ್​ಗೆ ಬರೋಕೆ ಅವಕಾಶ ಕೊಡಿ ಪ್ಲೀಸ್’; ಮನವಿ ಮಾಡಿದ ಹುಚ್ಚ ವೆಂಕಟ್
‘ಬಿಗ್ ಬಾಸ್​ಗೆ ಬರೋಕೆ ಅವಕಾಶ ಕೊಡಿ ಪ್ಲೀಸ್’; ಮನವಿ ಮಾಡಿದ ಹುಚ್ಚ ವೆಂಕಟ್
ಪುನೀತ್ ರಾಜ್​ಕುಮಾರ್​ಗಾಗಿ ದೇವಸ್ಥಾನ ಕಟ್ಟಿದ್ದೇಕೆ? ವಿವರಿಸಿದ ಅಭಿಮಾನಿ
ಪುನೀತ್ ರಾಜ್​ಕುಮಾರ್​ಗಾಗಿ ದೇವಸ್ಥಾನ ಕಟ್ಟಿದ್ದೇಕೆ? ವಿವರಿಸಿದ ಅಭಿಮಾನಿ
ಗರುಡ ಪುರಾಣ ಮನೆಯಲ್ಲಿ ಇಟ್ಟುಕೊಳ್ಳಬಹುದಾ? ಇಲ್ಲಿದೆ ಉತ್ತರ
ಗರುಡ ಪುರಾಣ ಮನೆಯಲ್ಲಿ ಇಟ್ಟುಕೊಳ್ಳಬಹುದಾ? ಇಲ್ಲಿದೆ ಉತ್ತರ
Nithya Bhavishya: ಶುಕ್ರವಾರದ ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶುಕ್ರವಾರದ ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ