Credit Score: ಉಚಿತವಾಗಿ ಕ್ರೆಡಿಟ್ ಸ್ಕೋರ್ ಪರಿಶೀಲನೆ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ಕ್ರೆಡಿಟ್ ಸ್ಕೋರ್ ಅನ್ನು ಉಚಿತವಾಗಿ ಪರಿಶೀಲನೆ ಮಾಡುವುದು ಹೇಗೆ? ಇದನ್ನು ಯಾವುದಕ್ಕಾಗಿ ಬಳಸಲಾಗುತ್ತದೆ? ಇಲ್ಲಿದೆ ಹಂತ ಹಂತವಾದ ಮಾಹಿತಿ.
ಸಾಲಕ್ಕಾಗಿ ಅಥವಾ ಕ್ರೆಡಿಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವಾಗ ಕ್ರೆಡಿಟ್ ಸ್ಕೋರ್ ಬಹಳ ಪ್ರಮುಖವಾದ ಅಂಶವಾಗಿದೆ. ಕಡಿಮೆ ಬಡ್ಡಿ ದರದಲ್ಲಿ ಹೆಚ್ಚು ಸಾಲ ಪಡೆಯಲು ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಸುಲಭವಾಗಿ ಪಡೆಯಲು ಅರ್ಜಿದಾರರು ಯೋಗ್ಯವಾದ ಕ್ರೆಡಿಟ್ ಸ್ಕೋರ್ ಹೊಂದಿರಬೇಕು, ಅಂದರೆ 720 ಅಥವಾ 730ಕ್ಕಿಂತ ಹೆಚ್ಚಿನ ಅಂಕ ಇರಬೇಕು. ಯಾರದಾದರೂ ಕ್ರೆಡಿಟ್ ಅರ್ಹತೆ ಮತ್ತು ಸ್ಥಾನವನ್ನು ಅರ್ಥ ಮಾಡಿಕೊಳ್ಳುವ ಅತ್ಯುತ್ತಮ ವಿಧಾನವೆಂದರೆ ಕ್ರೆಡಿಟ್ ವರದಿ (ರಿಪೋರ್ಟ್) ಮತ್ತು ಕ್ರೆಡಿಟ್ ಸ್ಕೋರ್ ಅನ್ನು ಆಗಾಗ ಪರಿಶೀಲಿಸುವುದು. ಭಾರತದಲ್ಲಿ ಈ ಡೊಮೇನ್‌ನಲ್ಲಿ ಮುಖ್ಯವಾಗಿ ಮೂರು ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ- CIBIL, Experian ಮತ್ತು Equifax. ಪ್ರತಿ ವರ್ಷಕ್ಕೊಮ್ಮೆ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸಬಹುದು. ಆದರೆ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸುವುದರಿಂದ ಸ್ವಲ್ಪ ಮಟ್ಟಿಗೆ ವೆಚ್ಚ ಆಗುತ್ತದೆ. ಆದರೆ ಒಂದು ಪ್ರಮುಖ ಫಿನ್‌ಟೆಕ್ ಕಂಪೆನಿಯು ಈ ಸೌಲಭ್ಯವನ್ನು ತನ್ನ ಗ್ರಾಹಕರಿಗೆ ಉಚಿತವಾಗಿ ವಿಸ್ತರಿಸಿದೆ. ಯಾರು ಬೇಕಾದರೂ ಈ ಆ್ಯಪ್ ಮೂಲಕ ಸ್ಕೋರ್ ಅನ್ನು ಸಂಪೂರ್ಣ ಉಚಿತವಾಗಿ ಪರಿಶೀಲಿಸಬಹುದು.
ಉಚಿತ ಕ್ರೆಡಿಟ್ ಸ್ಕೋರ್ ಅತಿದೊಡ್ಡ ಫಿನ್‌ಟೆಕ್ ಕಂಪೆನಿ ಪೇಟಿಎಂ ಈ ಕೊಡುಗೆಯನ್ನು ತನ್ನ ಚಂದಾದಾರರಿಗೆ ವಿಸ್ತರಿಸಿದೆ. ಸ್ಕೋರ್ ಪರೀಕ್ಷಿಸಲು ಪೇಟಿಎಂ ಆ್ಯಪ್‌ಗೆ ಲಾಗ್ಇನ್ ಆಗಬೇಕು ಮತ್ತು ‘ಮೈ ಪೇಟಿಎಂ’ ಅನ್ನು ಟ್ಯಾಪ್ ಮಾಡಬೇಕು. ಅಲ್ಲಿ ‘ಎಲ್ಲ ಸೇವೆಗಳನ್ನು’ ಕಾಣಬಹುದು. ‘ಎಲ್ಲ ಸೇವೆಗಳು’ ವಿಭಾಗವನ್ನು ನಮೂದಿಸಿದಾಗ, ‘ಸಾಲ ಮತ್ತು ಕ್ರೆಡಿಟ್ ಕಾರ್ಡ್’ ಎಂಬ ವಿಭಾಗವಿದೆ. ಅಲ್ಲಿ ‘ಉಚಿತ ಕ್ರೆಡಿಟ್ ಸ್ಕೋರ್ ಪರಿಶೀಲಿಸಿ’ (Free credit score) ಆಯ್ಕೆಯನ್ನು ಕಾಣಬಹುದು. ಈ ವಿಭಾಗದಲ್ಲಿ ‘ಉಚಿತ ಕ್ರೆಡಿಟ್ ಸ್ಕೋರ್’ ಅನ್ನು ಆಯ್ಕೆ ಮಾಡಿ ಮತ್ತು ಪ್ಯಾನ್ (ಲಿಂಕ್ ಮಾಡದಿದ್ದರೆ) ಮತ್ತು ನಿಮ್ಮ ಹೆಸರು ಮತ್ತು ಹುಟ್ಟಿದ ದಿನಾಂಕವನ್ನು (ಅಗತ್ಯವಿದ್ದರೆ) ಹಾಕಬೇಕು. ಹೊಸ ಬಳಕೆದಾರರಾಗಿದ್ದರೆ ಪ್ರೊಫೈಲ್ ಪರಿಶೀಲನೆಗಾಗಿ OTP ಸ್ವೀಕರಿಸುತ್ತೀರಿ. ಇಲ್ಲದಿದ್ದರೆ ಕ್ರೆಡಿಟ್ ಸ್ಕೋರ್ ಅನ್ನು ಒಂದೆರಡು ಸೆಕೆಂಡ್ಗಳಲ್ಲಿ ಪಡೆಯುತ್ತೀರಿ. ಎಲ್ಲ ಸಾಲ ಖಾತೆ ಮತ್ತು ಕ್ರೆಡಿಟ್ ಕಾರ್ಡ್‌ನ ಸದ್ಯದ ಸ್ಥಿತಿಯನ್ನು ಸಹ ಪರಿಶೀಲಿಸಬಹುದು. ಪೇಟಿಎಂ ಈ ವೈಶಿಷ್ಟ್ಯವನ್ನು ಕ್ರೆಡಿಟ್ ಏಜೆನ್ಸಿ ಇಕ್ವಿಫ್ಯಾಕ್ಸ್ ಸಹಾಯದಿಂದ ವಿಸ್ತರಿಸಿದೆ.
ಕ್ರೆಡಿಟ್ ಸ್ಕೋರ್ ಡಿಕೋಡ್ ಕ್ರೆಡಿಟ್ ಸ್ಕೋರ್ ಎನ್ನುವುದು ವ್ಯಕ್ತಿಯ ಸಾಲದ ಮೊತ್ತವನ್ನು ಮರುಪಾವತಿಸುವ ಸಾಮರ್ಥ್ಯದ ಅಳತೆಗೋಲಾಗಿದೆ. ಇದು ಅವರ ಸಾಲದ ಅರ್ಹತೆಯನ್ನು ಸಂಖ್ಯೆಯ ಮೂಲಕ ನಿರೂಪಿಸುವಂಥದ್ದಾಗಿದೆ. ಕ್ರೆಡಿಟ್ ಸ್ಕೋರ್ ಮೂರು ಅಂಕಿಯ ಸಂಖ್ಯೆಯಾಗಿದ್ದು, ಅದು 300 (ಕಡಿಮೆ) ಮತ್ತು 900ರ (ಅತ್ಯಧಿಕ) ಮಧ್ಯದ ವ್ಯಾಪ್ತಿಯಲ್ಲಿ ಬರುತ್ತದೆ. ಕ್ರೆಡಿಟ್ ಸ್ಕೋರ್ ಅನ್ನು ಲೆಕ್ಕಾಚಾರ ಮಾಡುವಾಗ ಕ್ರೆಡಿಟ್ ಇತಿಹಾಸ, ಮರುಪಾವತಿ ದಾಖಲೆಗಳು, ಕ್ರೆಡಿಟ್ ವಿಚಾರಣೆ ಇತ್ಯಾದಿ ಹಲವು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. 620-630ಕ್ಕಿಂತ ಹೆಚ್ಚಿನ ಅಂಕ ಇದ್ದಲ್ಲಿ ಪರವಾಗಿಲ್ಲ. ಆದರೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ತ್ವರಿತವಾಗಿ ಮಂಜೂರು ಮಾಡಲು ಅಥವಾ ಕ್ರೆಡಿಟ್ ಕಾರ್ಡ್ ಅನ್ನು ತ್ವರಿತವಾಗಿ ಪಡೆಯಲು ಸ್ಕೋರ್ 720ರಿಂದ 900ರ ನಡುವೆ ಇರಬೇಕು.
ಅದನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ? ಸಾಮಾನ್ಯವಾಗಿ ಕ್ರೆಡಿಟ್ ಏಜೆನ್ಸಿಗಳು ಅರ್ಜಿದಾರರ ವಿವಿಧ ಮಾನದಂಡಗಳನ್ನು ಅವಲಂಬಿಸಿ ಸ್ಕೋರ್ ಅನ್ನು ಲೆಕ್ಕ ಹಾಕುತ್ತವೆ. ಕ್ರೆಡಿಟ್ ಸ್ಕೋರ್ ಅನ್ನು ಲೆಕ್ಕಾಚಾರ ಮಾಡುವಾಗ ಐದು ಪ್ರಮುಖ ಅಂಶಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಅವುಗಳೆಂದರೆ- ಪಾವತಿ ಇತಿಹಾಸ, ಬಾಕಿ ಇರುವ ಒಟ್ಟು ಮೊತ್ತ, ಕ್ರೆಡಿಟ್ ಇತಿಹಾಸದ ಅವಧಿ ಮತ್ತು ಸಾಲದ ವಿಧಗಳು ಮತ್ತು ಹೊಸ ಕ್ರೆಡಿಟ್ ವಿತರಣೆ ಇವಿಷ್ಟು ಮುಖ್ಯವಾಗುತ್ತವೆ. ಪಾವತಿ ಇತಿಹಾಸವು ಕ್ರೆಡಿಟ್ ಸ್ಕೋರ್ಗೆ ಶೇ 35ರಷ್ಟು ಕೊಡುಗೆ ನೀಡುತ್ತದೆ ಮತ್ತು ಒಬ್ಬ ವ್ಯಕ್ತಿಯು ಸಮಯಕ್ಕೆ ಮರುಪಾವತಿ ಬಾಧ್ಯತೆಗಳನ್ನು ಪೂರೈಸುತ್ತಾರೆಯೇ ಎಂಬುದನ್ನು ತೋರಿಸುತ್ತದೆ. ಒಟ್ಟು ಮೊತ್ತವನ್ನು ಶೇ 30ಕ್ಕೆ ಎಣಿಕೆ ಮಾಡಲಾಗುತ್ತದೆ ಮತ್ತು ಸ್ಕೋರ್ ಅನ್ನು ಲೆಕ್ಕ ಹಾಕಲು ಕ್ರೆಡಿಟ್ ಇತಿಹಾಸದ ಎಷ್ಟು ದೀರ್ಘವಾಗಿದೆ ಎಂಬುದು ಶೇ 15ರಷ್ಟು ಕೊಡುಗೆಯನ್ನು ನೀಡುತ್ತದೆ. ವ್ಯಕ್ತಿಯ ಒಟ್ಟು ಸ್ಕೋರ್ ಲೆಕ್ಕಾಚಾರ ಮಾಡಲು ಕೊನೆಯ ಎರಡು ಅಂಶಗಳು ತಲಾ ಶೇ 10ರಷ್ಟು ತೂಕವನ್ನು ಹೊಂದಿವೆ.
ಇದನ್ನೂ ಓದಿ: Credit Card: ಕ್ರೆಡಿಟ್ ಕಾರ್ಡ್ ಮಿತಿ ಜಾಸ್ತಿ ಇರುವುದರಿಂದ ಆಗುವ ಲಾಭಗಳೇನು? ಇಲ್ಲಿದೆ ಮಾಹಿತಿ