ಪ್ರತಿ ಶೇ 1ರಷ್ಟು ಹಣದುಬ್ಬರ ಹೆಚ್ಚಳದಿಂದ ಚಿನ್ನದ ಬೇಡಿಕೆ ಶೇ 2.6ರಷ್ಟು ಹೆಚ್ಚಳ: ವಿಶ್ವ ಚಿನ್ನ ಮಂಡಳಿ ವರದಿ

ಪ್ರತಿ ಶೇ 1ರಷ್ಟು ಹಣದುಬ್ಬರ ಹೆಚ್ಚಳದಿಂದ ಚಿನ್ನದ ಬೇಡಿಕೆ ಶೇ 2.6ರಷ್ಟು ಹೆಚ್ಚಳ: ವಿಶ್ವ ಚಿನ್ನ ಮಂಡಳಿ ವರದಿ
ಸಾಂದರ್ಭಿಕ ಚಿತ್ರ

ಹಣದುಬ್ಬರ ದರವು ಚಿನ್ನದ ಬೆಲೆ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ಭಾರತದಲ್ಲಿನ ಚಿನ್ನದ ಟ್ರೆಂಡ್​ ಬಗ್ಗೆ ವಿಶ್ವ ಚಿನ್ನ ಮಂಡಳಿ ತನ್ನ ವರದಿಯಲ್ಲಿ ತಿಳಿಸಿದೆ.

TV9kannada Web Team

| Edited By: Srinivas Mata

Oct 19, 2021 | 10:31 PM

ವಿಶ್ವ ಚಿನ್ನ ಮಂಡಳಿಯು ಭಾರತೀಯ ಚಿನ್ನ ಮಾರುಕಟ್ಟೆಯ ಆಳ-ವಿಸ್ತೃತ ವಿಶ್ಲೇಷಣೆಯ ಸರಣಿಯ ಮೊದಲ ಕಂತಾದ ‘ಭಾರತೀಯ ಚಿನ್ನ ಬೇಡಿಕೆಯ ಚಾಲಕರು’ ಎಂಬ ವರದಿಯನ್ನು ಮಂಗಳವಾರ (ಅಕ್ಟೋಬರ್ 19) ಬಿಡುಗಡೆಗೊಳಿಸಿದೆ. ಎಕೊನೋಮೆಟ್ರಿಕ್‌ ಮಾದರಿಯನ್ನು ಬಳಸಿ ತಯಾರಾಗಿರುವ ಈ ವರದಿ 1990ರಿಂದ 2020ರವರೆಗಿನ ಮೂರು ದಶಕಗಳ ವಾರ್ಷಿಕ ದತ್ತಾಂಶಗಳ ಮೇಲೆ ಬೆಳಕು ಚೆಲ್ಲಿದ್ದು, ಭಾರತದ ಚಿನ್ನದ ಬೇಡಿಕೆಯ ಮೇಲಿನ ಕೆಲ ಪ್ರಮುಖ ಪ್ರಬಾವಗಳ ಕುರಿತು ವಿಶ್ಲೇಷಿಸಿದೆ. ಈ ವರದಿಯು ಪ್ರಮಾಣ ಹಾಗೂ ಗುಣಮಟ್ಟ ಎರಡೂ ದೃಷ್ಟಿಕೋನದಿಂದ ಚಿನ್ನದ ಬೇಡಿಕೆಯನ್ನು ವಿಶ್ಲೇಷಿಸಿದೆ. ಭಾರತದಲ್ಲಿ ದೀರ್ಘಾವಧಿ ಹಾಗೂ ಅಲ್ಪಾವಧಿಯ ಚಿನ್ನದ ಬೇಡಿಕೆಯ ಸಮಗ್ರ ವಿಶ್ಲೇಷಣೆಯ ಜೊತೆಗೆ ಈ ಬೇಡಿಕೆಯನ್ನು ರೂಪಿಸುವ ಜನಸಂಖ್ಯಾಶಾಸ್ತ್ರ, ಸಾಮಾಜಿಕ-ಆರ್ಥಿಕ ಮತ್ತು ಸಂಬಂಧಿಸಿದ ಬೆಳವಣಿಗೆಗಳನ್ನು ಪರಿಶೀಲಿಸುತ್ತದೆ. ಇದು ಭವಿಷ್ಯದ ಬೇಡಿಕೆಯ ಏರುಪೇರಿನ ಮೇಲೆ ಕೂಡ ಬೆಳಕು ಚೆಲ್ಲುತ್ತದೆ.

ಆರ್ಥಿಕ ವಿಶ್ಲೇಷಣೆ ಹೇಳುವುದೇನೆಂದರೆ, ಆದಾಯದ ಹೆಚ್ಚಳವೇ ದೀರ್ಘಾವಧಿಯಲ್ಲಿ ಚಿನ್ನದ ಬೇಡಿಕೆಯ ಏರಿಕೆಗೆ ಕಾರಣ. ಇದಕ್ಕೆ ದೇಶದ ಸದೃಢ ಜನಸಂಖ್ಯಾಶಾಸ್ತ್ರದ ಆರ್ಥಿಕತೆ ಕೂಡ ಪೂರಕವಾಗಿದೆ. ಆದರೂ ಇಳಿಮುಖವಾಗುತ್ತಿರುವ ಕುಟುಂಬಗಳ ಉಳಿತಾಯ ಮತ್ತು ಕೃಷಿ ಆದಾಯದಿಂದ ಭಾರತದಲ್ಲಿ ಚಿನ್ನದ ಬೇಡಿಕೆ ಅಲ್ಪಾವಧಿಯ ಸವಾಲುಗಳನ್ನು ಎದುರಿಸುತ್ತಿದೆ. ಸದ್ಯಕ್ಕೆ ನೀತಿ ತಯಾರಕರು ಚಿನ್ನದ ಬೇಡಿಕೆಯನ್ನು ಆಮದುಗಳ ದೃಷ್ಟಿಕೋನದಿಂದ ಮೂಲಕ ಮಾತ್ರ ನೋಡುತ್ತಾರೆ. ಹೆಚ್ಚುವರಿಯಾಗಿ, ಜನರ ನಂಬಿಕೆ ಗಳಿಸಲು ಮತ್ತು ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಉದ್ಯಮದ ಪ್ರಯತ್ನಗಳು ಹೆಚ್ಚು ಒಗ್ಗಟ್ಟಾಗಿರಬೇಕು ಎಂದು ವರದಿಯು ಎತ್ತಿ ತೋರಿಸುತ್ತದೆ.

ವಿಶ್ವ ಚಿನ್ನ ಮಂಡಳಿಯ ಪ್ರಾದೇಶಿಕ ಸಿಇಒ ಸೋಮಸುಂದರಂ ಪಿ.ಆರ್, “ನಮ್ಮ ಇತ್ತೀಚಿನ ಸಂಶೋಧನೆ, ಭಾರತದಲ್ಲಿ ಚಿನ್ನದ ಬೇಡಿಕೆಯ ಚಾಲಕರು ಹಲವು ಮತ್ತು ವೈವಿಧ್ಯಮಯವಾಗಿದೆ ಎಂಬ ಅಂಶವನ್ನು ದೃಢಪಡಿಸುತ್ತದೆ. ಸಾಂಸ್ಕೃತಿಕ ಬಾಂಧವ್ಯ, ದೀರ್ಘಕಾಲದ ಸಂಪ್ರದಾಯ ಮತ್ತು ಹಬ್ಬಗಳಲ್ಲಿ ಉಡುಗೊರೆಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಇದು ಕಳೆದ ಮೂರು ದಶಕಗಳಲ್ಲಿ ಭಾರತದ ಚಿನ್ನದ ಬೇಡಿಕೆಯನ್ನು ಹೆಚ್ಚಿಸಿದೆ. ಭಾರತದ ಹೂಡಿಕೆದಾರರು ಮನೆಯ ಆದಾಯ, ಚಿನ್ನದ ಬೆಲೆ ಮತ್ತು ಹಣದುಬ್ಬರಗಳಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ವರದಿ ಇಂದು ಹಾಗೂ ಭವಿಷ್ಯದಲ್ಲಿ ಚಿನ್ನದ ಬೇಡಿಕೆಯನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ,” ಎಂದಿದ್ದಾರೆ.

ವರದಿಯ ಪ್ರಮುಖಾಂಶಗಳು: ಚಿನ್ನದ ದೀರ್ಘಾವಧಿಯ ಗ್ರಾಹಕರ ಬೇಡಿಕೆಗಳ ಮೇಲೆ ಮೂರು ಪ್ರಮುಖ ಅಂಶಗಳು ಪ್ರಭಾವ ಬೀರುತ್ತವೆ. 1) ಆದಾಯ: ಶೇಕಡಾ 1ರಷ್ಟು ರಾಷ್ಟ್ರೀಯ ತಲಾದಾಯ ಹೆಚ್ಚಳವಾದಲ್ಲಿ ಚಿನ್ನದ ಬೇಡಿಕೆ ಶೇ 0.9ರಷ್ಟು ಏರಿಕೆಯಾಗುತ್ತದೆ. 2) ಚಿನ್ನದ ದರ: ಚಿನ್ನದ ರೂಪಾಯಿ ಆದಾರಿತ ಬೆಲೆಯಲ್ಲಿ ಶೇಕಡಾ 1ರಷ್ಟು ಏರಿಕೆಯಾದಾಗ ಬೇಡಿಕೆ ಶೇ.0.4ರಷ್ಟು ಕಡಿಮೆಯಾಗುತ್ತದೆ. 3) ಸರ್ಕಾರಿ ಸುಂಕಗಳು: ಆಮದು ಸುಂಕ ಮತ್ತು ಇತರ ತೆರಿಗೆಗಳು ದೀರ್ಘಾವಧಿಯ ಬೇಡಿಕೆಯ ಮೇಲೆ ಪರಿಣಾಮ ಬೀರುತ್ತವೆ. ಆದರೆ ಅದು ಚಿನ್ನವನ್ನು ಆಭರಣಗಳು ಅಥವಾ ಬಾರ್‌ಗಳು ಮತ್ತು ಕಾಯಿನ್‌ ಹೀಗೆ ಅದರ ಖರೀದಿಯ ಪ್ರಕಾರವನ್ನು ಆಧರಿಸಿರುತ್ತದೆ.

ಚಿನ್ನದ ಅಲ್ಪಾವಧಿ ಬೇಡಿಕೆಯ ಮೇಲೆ ಪ್ರಭಾವ ಬೀರುವ ಅಂಶಗಳಿವು 1) ಹಣದುಬ್ಬರ: ಪ್ರಪಂಚದಾದ್ಯಂತದ ಹೂಡಿಕೆದಾರಂತೆಯೇ ಭಾರತೀಯ ಉಳಿತಾಯಗಾರರು ಚಿನ್ನವನ್ನು ಹಣದುಬ್ಬರಕ್ಕೆ ತಡೆ ಎಂದು ಪರಿಗಣಿಸುತ್ತಾರೆ. ಹಣದುಬ್ಬರದಲ್ಲಿ ಪ್ರತಿ ಶೇಕಡಾ 1ರಷ್ಟು ಹೆಚ್ಚಳಕ್ಕೆ ಚಿನ್ನದ ಬೇಡಿಕೆ ಶೇಕಡಾ 2.6ರಷ್ಟು ಹೆಚ್ಚಾಗುತ್ತದೆ. 2) ಚಿನ್ನದ ಬೆಲೆಯಲ್ಲಿ ಬದಲಾವಣೆ: ನಿರಂತರ ದರದ ಹೆಚ್ಚಳ ಮತ್ತು ಕಡಿತ ದೀರ್ಘಾವಧಿಯ ಬೇಡಿಕೆಯ ಮೇಲೆ ಪರಿಣಾಮ ಬೀರುತ್ತದೆ. ಶೀಘ್ರ ದರದ ಬದಲಾವಣೆ ಅಲ್ಪಾವಧಿ ಬೇಡಿಕೆಯ ಮೇಲೆ ಪರಿಣಾಮ ಬೀರುತ್ತದೆ. ಪ್ರತಿ ಶೇಕಡಾ 1ರಷ್ಟು ಚಿನ್ನದ ಬೆಲೆ ಕಡಿತದಿಂದ ಬೇಡಿಕೆ ಶೇಕಡಾ 1.2ರಷ್ಟು ಹೆಚ್ಚಾಗುತ್ತದೆ. 3) ತೆರಿಗೆ ಅವಧಿ: 2012ರಿಂದ ಆಮದು ಸುಂಕದ ದರದ ಹೆಚ್ಚಳದಿಂದ ಪ್ರತಿ ವರ್ಷ ಚಿನ್ನದ ಬೇಡಿಕೆ ಶೇ 1.2ರಷ್ಟು ಕಡಿಮೆಯಾಗಿದೆ. 4) ಹೆಚ್ಚುವರಿ ಮಳೆ: ಮುಂಗಾರು ಕೂಡ ಗ್ರಾಹಕರ ವರ್ತನೆಯ ಮೇಲೆ ಪ್ರಭಾವ ಬೀರುತ್ತದೆ. ಶೇಕಡಾ 1ರಷ್ಟು ಮಳೆಯ ಹೆಚ್ಚಳದಿಂದ ಶೇ 0.2ರಷ್ಟು ಚಿನ್ನದ ಬೇಡಿಕೆ ಹೆಚ್ಚಾಗುತ್ತದೆ.

ಭಾರತದಲ್ಲಿ ಭವಿಷ್ಯದ ಚಿನ್ನದ ಬೇಡಿಕೆಯ ಬಾಹ್ಯನೋಟ 1. ಈ ವರ್ಷ ಕೊವಿಡ್-19 ಸಾಂಕ್ರಾಮಿಕದ ಸುದೀರ್ಘ ಹೋರಾಟದಿಂದ ದೇಶದಲ್ಲಿ ಚಿನ್ನದ ಬೇಡಿಕೆ ನಿಯಂತ್ರಣದಲ್ಲಿತ್ತು. 2. ದೇಶಾದ್ಯಂತ ನಿರ್ಬಂಧಗಳು ನಿಧಾನವಾಗಿ ಸಡಿಲಗೊಳ್ಳುತ್ತಿರುವುದರಿಂದ ಆಮದು ಸದೃಢಗೊಳ್ಳುವ ಮತ್ತು ಚಿಲ್ಲರೆ ಮಾರಾಟದ ಬೇಡಿಕೆ ಏರಿಕೆಯ ನಿರೀಕ್ಷೆಯಿದೆ. 3. 2022ರಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಬಂಗಾರದ ಬೇಡಿಕೆಯ ಪ್ರಭಾವ ಬಲಗೊಳ್ಳುವ ಸಾಧ್ಯತೆಯಿದೆ. ಆದರೂ ಯಾವುದೇ ಭವಿಷ್ಯದ ಕೊರೊನಾ ಸೋಂಕು ಏಕಾಏಕಿ ಮತ್ತಷ್ಟು ಅನಿಶ್ಚಿತತೆಗಳನ್ನು ಸೃಷ್ಟಿಸಬಹುದು. 4. ಉದ್ಯಮವು ಹೆಚ್ಚು ಪಾರದರ್ಶಕ, ಹೆಚ್ಚು ಪ್ರಮಾಣಿತ ಮತ್ತು ಜಾಗತಿಕ ಅನುಕೂಲಕ್ಕೆ ಅನುಗುಣವಾಗಿ ಕ್ರಮಗಳನ್ನು ತೆಗೆದುಕೊಂಡರೆ ಭಾರತದ ಚಿನ್ನದ ಮಾರುಕಟ್ಟೆಯು ಪ್ರಯೋಜನ ಪಡೆಯುತ್ತದೆ.

ಚಿನ್ನವನ್ನು ಭಾರತದ ಉದ್ದಗಲಕ್ಕೂ ಮೌಲ್ಯಯುತ ಆಸ್ತಿಯಾಗಿ ಉಳಿಸಿಕೊಳ್ಳಲು ಅನುವು ಮಾಡಿಕೊಡುವ 3 ಕ್ಷೇತ್ರಗಳು 1. ನಂಬಿಕೆ: ಕಡ್ಡಾಯ ಹಾಲ್‌ಮಾರ್ಕ್, ಚಿನ್ನದ ಬಾರ್‌ಗಳಿಗೆ ಉತ್ತಮ ವಿತರಣಾ ಮಾನದಂಡಗಳು ಮತ್ತು ಗೋಲ್ಡ್ ಸ್ಪಾಟ್ ಎಕ್ಸ್‌ಚೇಂಜ್ ಭಾರತೀಯ ಚಿನ್ನದ ಮಾರುಕಟ್ಟೆಯಲ್ಲಿ ಸಾಕಷ್ಟು ಬದಲಾವಣೆ ತರಲಿವೆ. ಜೊತೆಗೆ ಗ್ರಾಹಕರು ಮತ್ತು ಹೂಡಿಕೆದಾರರಲ್ಲಿ ವಿಶ್ವಾಸವನ್ನು ಹೆಚ್ಚಿಸುತ್ತದೆ 2. ಶಿಕ್ಷಣ ಮತ್ತು ಜಾಗೃತಿ: ಚಿನ್ನವನ್ನು ಹೇಗೆ ಖರೀದಿಸಬೇಕು ಎಂಬುದನ್ನು ವಿವರಿಸುವ ಒಂದು ಸಂಘಟಿತ ಅಭಿಯಾನವು ಅನೇಕ ಸಂಭಾವ್ಯ ಚಿನ್ನದ ಹೂಡಿಕೆದಾರರಿಗೆ ಸ್ಫೂರ್ತಿ ನೀಡಬಹುದು, ವಿಶೇಷವಾಗಿ ಇದರಲ್ಲಿ ಹೆಚ್ಚುತ್ತಿರುವ ಸಣ್ಣ ಹೂಡಿಕೆಗಳಿಗೆ ಅವಕಾಶವಿರುವ ಉತ್ಪನ್ನಗಳು ಸೇರಿದ್ದರೆ. ಉದಾಹರಣೆಗೆ, ಟಿವಿಗಳಲ್ಲಿ ಚಿನ್ನದ ಬೆಲೆಯ ಏರಿಳಿತಗಳನ್ನು ವಿವರಿಸುವುದು. 3. ನಾವೀನ್ಯತೆ: ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು, ರೋಬೋ-ಅಡ್ವೈಸರ್‌ಗಳು, ಮೊಬೈಲ್ ಅಪ್ಲಿಕೇಷನ್‌ಗಳು ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಂತಹ ಡಿಜಿಟಲ್ ಪರಿಕರಗಳು ಚಿನ್ನದ ಲಭ್ಯತೆಯನ್ನು ಹೆಚ್ಚಿಸುತ್ತದೆ.

ಪ್ರಾದೇಶಿಕ ಆದ್ಯತೆಗಳು, ಜನಸಂಖ್ಯೆಯ ಬದಲಾವಣೆಗಳು ಮತ್ತು ಚಿನ್ನ 1. ಸಾಮಾನ್ಯವಾಗಿ ಆಭರಣದ ಬೇಡಿಕೆಯು ದೀರ್ಘಾವಧಿಯ ಅಂಶಗಳಿಂದ ಹೆಚ್ಚು ಪ್ರಭಾವಿತವಾಗಿರುತ್ತದೆ. ಆದರೆ ಚಿನ್ನದ ಬಾರ್‌ಗಳು ಮತ್ತು ನಾಣ್ಯಗಳ ಬೇಡಿಕೆಯು ಹಣದುಬ್ಬರ ಅಥವಾ ತೆರಿಗೆಯಂತಹ ಅಲ್ಪಾವಧಿಯ ಅಂಶಗಳಿಗೆ ಹೆಚ್ಚು ತೀವ್ರವಾಗಿ ಸ್ಪಂದಿಸುತ್ತದೆ. 2. ಗ್ರಾಮೀಣ ಮತ್ತು ನಗರ ಗ್ರಾಹಕರ ನಡುವೆ ಬಳಕೆ ಮಾದರಿಗಳು ಸಹ ಭಿನ್ನವಾಗಿರುತ್ತವೆ. ಆಭರಣಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಹೂಡಿಕೆ ಮತ್ತು ಅಲಂಕಾರ ಎಂದು ಪರಿಗಣಿಸಲಾಗುತ್ತದೆ. ನಗರ ನಿವಾಸಿಗಳು ಬಾರ್ ಮತ್ತು ನಾಣ್ಯಗಳನ್ನು ತಮ್ಮ ಆದ್ಯತೆಯ ಹೂಡಿಕೆ ರೂಪಗಳೆಂದು ಪರಿಗಣಿಸುತ್ತಾರೆ.

ಇದನ್ನೂ ಓದಿ: Taxation On Gold Investments: ಚಿನ್ನದ ಮೇಲಿನ ಹೂಡಿಕೆಗೆ ತೆರಿಗೆ ಲೆಕ್ಕಾಚಾರ ಹೇಗೆ?

Follow us on

Related Stories

Most Read Stories

Click on your DTH Provider to Add TV9 Kannada