ಎಲ್​ಐಸಿ ಸಂಸ್ಥೆಗೆ 84 ಕೋಟಿ ರೂ ದಂಡ ವಿಧಿಸಿ ಆದಾಯ ತೆರಿಗೆ ಇಲಾಖೆಯಿಂದ ನೋಟೀಸ್; ಮೇಲ್ಮನವಿ ಸಲ್ಲಿಸಲು ವಿಮಾ ನಿಗಮ ನಿರ್ಧಾರ

IT Notice to LIC: ಎಲ್​ಐಸಿ ಸಂಸ್ಥೆ 290 ಕೋಟಿ ರೂ ಪಾವತಿಸಬೇಕೆಂದು ಜಿಎಸ್​ಟಿ ನೋಟೀಸ್ ಜಾರಿಯಾಗಿರುವ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ 84 ಕೋಟಿ ರೂಗೆ ಒತ್ತಾಯಿಸಿ ನೋಟೀಸ್ ಜಾರಿ ಮಾಡಿದೆ. ಸೆಪ್ಟೆಂಬರ್ 29ರಂದು ಎಲ್​ಐಸಿಗೆ ಐಟಿ ಇಲಾಖೆ ನೋಟೀಸ್ ಹೊರಡಿಸಿದೆ. ಮೂರು ವರ್ಷಗಳಲ್ಲಿ ಆದಾಯ ತೆರಿಗೆಯ ವಿವಿಧ ನಿಯಮಗಳನ್ನು ಎಲ್​ಐಸಿ ಉಲ್ಲಂಘಿಸಿದೆ ಎನ್ನುವ ಕಾರಣಕ್ಕೆ ದಂಡ ವಿಧಿಸಿ ನೋಟೀಸ್ ಕೊಡಲಾಗಿದೆ.

ಎಲ್​ಐಸಿ ಸಂಸ್ಥೆಗೆ 84 ಕೋಟಿ ರೂ ದಂಡ ವಿಧಿಸಿ ಆದಾಯ ತೆರಿಗೆ ಇಲಾಖೆಯಿಂದ ನೋಟೀಸ್; ಮೇಲ್ಮನವಿ ಸಲ್ಲಿಸಲು ವಿಮಾ ನಿಗಮ ನಿರ್ಧಾರ
ಭಾರತೀಯ ಜೀವ ವಿಮಾ ನಿಗಮ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 05, 2023 | 10:12 AM

ನವದೆಹಲಿ, ಅಕ್ಟೋಬರ್ 5: ಭಾರತೀಯ ಜೀವ ವಿಮಾ ನಿಗಮ (LIC) ಸಂಸ್ಥೆಗೆ 84 ಕೋಟಿ ರೂ ದಂಡ ವಿಧಿಸಿ ಆದಾಯ ತೆರಿಗೆ ಇಲಾಖೆ ನೋಟೀಸ್ ನೀಡಿರುವುದು ತಿಳಿದುಬಂದಿದೆ. ಇದು ಮೂರು ಅಸೆಸ್ಮೆಂಟ್ ವರ್ಷಗಳಲ್ಲಿ ಎಲ್​ಐಸಿ ಕಟ್ಟದೇ ಉಳಿದಿರುವ ತೆರಿಗೆ ಮೊತ್ತ ಎನ್ನಲಾಗಿದೆ. ಕಳೆದ ವಾರವೇ (ಸೆಪ್ಟೆಂಬರ್ 29) ಐಟಿ ನೋಟೀಸ್ ಜಾರಿಯಾಗಿದೆ. ಈ ಆದೇಶವನ್ನು ಪ್ರಶ್ನಿಸಿ ಎಲ್​ಐಸಿ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದೆ. ಈ ವಿಚಾರವನ್ನು ರೆಗ್ಯುಲೇಟರಿ ಫೈಲಿಂಗ್​ನಲ್ಲಿ ಎಲ್​ಐಸಿ ತಿಳಿಸಿದೆ.

2012-13, 2018-19 ಮತ್ತು 2019-20ರ ಅಸೆಸ್ಮೆಂಟ್ ವರ್ಷಗಳಲ್ಲಿ ಸರಿಯಾಗಿ ತೆರಿಗೆ ಪಾವತಿಸಿದೇ ಇರುವುದಕ್ಕೆ ಎಲ್​ಐಸಿಗೆ ದಂಡ ವಿಧಿಸಲಾಗಿದೆ. 2012-13ರ ಅಸೆಸ್ಮೆಂಟ್ ವರ್ಷ, ಎಂದರೆ 2011-12ರ ಹಣಕಾಸು ವರ್ಷದಲ್ಲಿ 12.61 ಕೋಟಿ ರೂ ದಂಡ ಹಾಕಲಾಗಿದೆ. 2018-19ರ ಅಸೆಸ್ಮೆಂಟ್ ವರ್ಷಕ್ಕೆ 33.82 ಕೋಟಿ ರೂ ಹಾಗೂ 2019-20ರ ಹಣಕಾಸು ವರ್ಷಕ್ಕೆ 37.58 ಕೋಟಿ ರೂ ದಂಡ ವಿಧಿಸಲಾಗಿದೆ.

1961ರ ಐಟಿ ಕಾಯ್ದೆಯ 271(1)(ಸಿ) ಮತ್ತು 270ಎ ಸೆಕ್ಷನ್​ಗಳ ನಿಯಮಗಳನ್ನು ಎಲ್​ಐಸಿ ಉಲ್ಲಂಘಿಸಿದ್ದು, ಅದಕ್ಕೆ ದಂಡ ವಿಧಿಸಲಾಗಿದೆ ಎಂದು ಸೆಪ್ಟೆಂಬರ್ 29ರಂದು ಸಲ್ಲಿಸಿದ ನೋಟೀಸ್​ನಲ್ಲಿ ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ರಾಷ್ಟ್ರೀಯ ಅರಿಶಿನ ಮಂಡಳಿ ಸ್ಥಾಪನೆಗೆ ಸರ್ಕಾರದಿಂದ ಅಧಿಸೂಚನೆ; ಈ ಮಂಡಳಿ ಯಾಕೆ ಮುಖ್ಯ? ಇಲ್ಲಿದೆ ಡೀಟೇಲ್ಸ್

ಕಳೆದ ತಿಂಗಳು 290 ಕೋಟಿ ರೂ ಮೊತ್ತ ಪಾವತಿಸಲು ಜಿಎಸ್​ಟಿ ನೋಟೀಸ್

ಕಳೆದ ಸೆಪ್ಟೆಂಬರ್ ತಿಂಗಳಲ್ಲೇ ಎಲ್​ಐಸಿ ಸಂಸ್ಥೆಗೆ ಜಿಎಸ್​ಟಿ ನೋಟೀಸ್ ನೀಡಲಾಗಿತ್ತು. ಒಟ್ಟು 290 ರೂ ಜಿಎಸ್​ಟಿ ಕಟ್ಟಬೇಕಿದೆ ಎಂಬುದಾಗಿತ್ತು ಆ ನೋಟೀಸ್. 166.8 ಕೋಟಿ ರೂ ಜಿಎಸ್​ಟಿ ಮೂಲ ಮೊತ್ತ, ಅದಕ್ಕೆ 107.1 ಕೋಟಿ ರೂ ಮೊತ್ತದ ತೆರಿಗೆ ಹಾಗೂ 16.7 ಕೋಟಿ ರೂ ಮೊತ್ತದ ದಂಡ ಒಟ್ಟು ಸೇರಿ 290 ಕೋಟಿ ರೂ ಹಣ ಕಟ್ಟಬೇಕಿದೆ ಎಂದು ತೆರಿಗೆ ಇಲಾಖೆ ಆಗ್ರಹಿಸಿತ್ತು. ಇನ್​ಪುಟ್ ಟ್ಯಾಕ್ಸ್ ಕ್ರೆಡಿಟ್ ದುರ್ಬಳಕೆ ಸೇರಿದಂತೆ ಎಲ್​ಐಸಿಯಿಂದ ವಿವಿಧ ನಿಯಮ ಉಲ್ಲಂಘನೆಗಳಾಗಿವೆ ಎಂಬ ಆರೋಪ ಇದೆ.

ಇದನ್ನೂ ಓದಿ: Mutual fund: 3 ವರ್ಷದಿಂದ ಶೇ. 44ರಷ್ಟು ವಾರ್ಷಿಕ ದರದಲ್ಲಿ ಲಾಭ ತಂದಿದೆ ಎಸ್​ಬಿಐನ ಈ ಮ್ಯುಚುವಲ್ ಫಂಡ್

ಅದಾದ ಬೆನ್ನಲ್ಲೇ ಎಲ್​ಐಸಿಯ ಷೇರುಗಳು ಹಿನ್ನಡೆ ಕಂಡಿದ್ದವು. ಸೆಪ್ಟೆಂಬರ್ 28ರಿಂದ ಅದರ ಷೇರುಬೆಲೆ ಸತತವಾಗಿ ಕುಸಿಯುತ್ತಾ ಬರುತ್ತಿದೆ. 650 ರೂ ಇದ್ದ ಅದರ ಷೇರುಬೆಲೆ ಇದೀಗ 639 ರೂಗೆ ಇಳಿದಿದೆ.

ಭಾರತದ ನಂಬರ್ ಒನ್ ವಿಮಾ ಸಂಸ್ಥೆಯಾಗಿರುವ ಎಲ್​ಐಸಿ 2022ರ ಮೇ ತಿಂಗಳಲ್ಲಿ ಷೇರುಪೇಟೆಯಲ್ಲಿ ಲಿಸ್ಟ್ ಆಗಿತ್ತು. 826 ರೂ ಇದ್ದ ಷೇರಿನ ಆರಂಭಿಕ ಬೆಲೆ ಇದೀಗ 186 ರೂಗೂ ಹೆಚ್ಚು ಮೊತ್ತದಷ್ಟು ಕುಸಿತ ಕಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?