ITR Filing Last Date 2025: ಐಟಿ ರಿಟರ್ನ್ ಸಲ್ಲಿಸಲು ಡೆಡ್​ಲೈನ್ ಮತ್ತೆ ವಿಸ್ತರಣೆಯಾಗುತ್ತಾ?

ITR filing last date to be extended further: ಐಟಿ ರಿಟರ್ನ್ಸ್ ಸಲ್ಲಿಸಲು ಸೆಪ್ಟೆಂಬರ್ 15ಕ್ಕೆ ಇರುವ ಗಡುವನ್ನು ವಿಸ್ತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಐಟಿಆರ್ ಫಾರ್ಮ್​ಗಳನ್ನು ಅಪ್​ಡೇಟ್ ಮಾಡಲಾಗುತ್ತಿದ್ದುದ್ದರಿಂದ ಸರ್ಕಾರವು ಜುಲೈ 31 ಬದಲು ಸೆಪ್ಟೆಂಬರ್ 15 ಅನ್ನು ಡೆಡ್​ಲೈನ್ ಆಗಿ ನಿಗದಿ ಮಾಡಿತ್ತು. ಈಗ ಕೆಲ ಫಾರ್ಮ್​ಗಳಿಗೆ ಯುಟಿಲಿಟಿಗಳನ್ನು ಬಿಡುಗಡೆ ಮಾಡದೇ ಇರುವುದರಿಂದ ಗಡುವು ವಿಸ್ತರಣೆ ಆಗಬಹುದು.

ITR Filing Last Date 2025: ಐಟಿ ರಿಟರ್ನ್ ಸಲ್ಲಿಸಲು ಡೆಡ್​ಲೈನ್ ಮತ್ತೆ ವಿಸ್ತರಣೆಯಾಗುತ್ತಾ?
ಆದಾಯ ತೆರಿಗೆ ರಿಟರ್ನ್ಸ್

Updated on: Jul 30, 2025 | 1:05 PM

ನವದೆಹಲಿ, ಜುಲೈ 30: ಆದಾಯ ತೆರಿಗೆ ರಿಟರ್ನ್ಸ್ (Income Tax Returns) ಸಲ್ಲಿಸಲು ಸಾಮಾನ್ಯವಾಗಿ ಜುಲೈ 31ಕ್ಕೆ ಡೆಡ್​ಲೈನ್ ಇರುತ್ತದೆ. ವಿವಿಧ ಫಾರ್ಮ್​ಗಳು ಇನ್ನೂ ಬಿಡುಗಡೆ ಆಗದೇ ಇರುವುದು ಮತ್ತಿತರ ಕಾರಣಗಳಿಗೆ ಐಟಿಆರ್ ಸಲ್ಲಿಕೆಗೆ ಡೆಡ್​ಲೈನ್ ಅನ್ನು ಜುಲೈ 31ರಿಂದ ಸೆಪ್ಟೆಂಬರ್ 15ಕ್ಕೆ ಏರಿಸಲಾಗಿದೆ. ಈ ಗಡುವಿಗೆ ಇನ್ನು 50 ದಿನವೂ ಉಳಿದಿಲ್ಲ. ಇದೇ ವೇಳೆ, ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕೇಂದ್ರ ಸರ್ಕಾರವು ಐಟಿಆರ್ ಸಲ್ಲಿಕೆ ಪ್ರಕ್ರಿಯೆ ಸರಳಗೊಳಿಸಲು ವಿವಿಧ ಐಟಿಆರ್ ಫಾರ್ಮ್​ಗಳ ಪರಿಷ್ಕರಣೆ ನಡೆಸಿತತು. ಈ ಬದಲಾವಣೆಗಳಿಗಾಗಿ ಸೆಪ್ಟೆಂಬರ್ 15ರವರೆಗೆ ಡೆಡ್​ಲೈನ್ ವಿಸ್ತರಿಸಲಾಗಿತ್ತು. ಈಗ ಕೆಲ ಐಟಿಆರ್ ಫಾರ್ಮ್​ಗಳಿಗೆ ಬೇಕಾದ ಸಂಪನ್ಮೂಲಗಳು ತೆರಿಗೆ ಪಾವತಿದಾರರ ಬಳಿ ಇಲ್ಲದಿರುವುದು ಗಮನಕ್ಕೆ ಬಂದಿದೆ. ಐಟಿಆರ್ ಫಾರ್ಮ್ 5, 6 ಮತ್ತು 7ಕ್ಕೆ ಆನ್​ಲೈನ್ ಮತ್ತು ಆಫ್​ಲೈನ್ ಯುಟಿಲಿಟಿಗಳನ್ನು ಐಟಿ ಇಲಾಖೆ ಇನ್ನೂ ಬಿಡುಗಡೆ ಮಾಡಿಲ್ಲ. ಈ ಕಾರಣಕ್ಕೆ ಸೆಪ್ಟೆಂಬರ್ 15ರಂದು ಇರುವ ಡೆಡ್​ಲೈನ್ ಅನ್ನು ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಇದೆ.

ಐಟಿ ಇಲಾಖೆಯಿಂದ ಇನ್ನೂ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಡೆಡ್​ಲೈನ್ ವಿಸ್ತರಣೆ ಆಗುವುದಿದ್ದರೆ ಕೇಂದ್ರೀಯ ನೇರ ತೆರಿಗೆ ಮಂಡಳಿ ಅಧಿಸೂಚನೆ ಹೊರಡಿಸುತ್ತದೆ. ಹಿಂದಿನ ಇಂಥ ಕೆಲ ಸಂದರ್ಭಗಳಲ್ಲಿ ಐಟಿಆರ್ ಸಲ್ಲಿಕೆಗೆ ಕಾಲಾವಕಾಶ ವಿಸ್ತರಿಸಲಾಗಿತ್ತು. ಹೀಗಾಗಿ, ಈ ಬಾರಿಯೂ ಈ ಸಾಧ್ಯತೆಯಂತೂ ಇದೆ.

ಇದನ್ನೂ ಓದಿ: Income Tax Bill 2025: ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ, ಆದಾಯ ತೆರಿಗೆ ಇಲಾಖೆ ಸ್ಪಷ್ಟನೆ

ಈ ಬಾರಿ ಸರ್ಕಾರದಿಂದಲೇ ಪದೇಪದೇ ವಿಳಂಬ…

ಈ ಬಾರಿ ಸರ್ಕಾರವು ಐಟಿಆರ್ ಸಲ್ಲಿಕೆಯ ತಾಂತ್ರಿಕ ಅಂಶಗಳನ್ನು ಅಪ್​ಡೇಟ್ ಮಾಡಲು ಹೋಗಿ ವಿಳಂಬ ಮಾಡಿದೆ. ಐಟಿಆರ್ ಫಾರ್ಮ್​ಗಳಿಗೆ ಯುಟಿಲಿಟಿಗಳನ್ನು ತಡವಾಗಿ ಬಿಡುಗಡೆ ಮಾಡಿದೆ. 5, 6 ಮತ್ತು 7 ಫಾರ್ಮ್​ಗಳಿಗೆ ಯುಟಿಲಿಟಿಗಳನ್ನು ರಿಲೀಸ್ ಮಾಡಲು ಮತ್ತಷ್ಟು ವಿಳಂಬ ಮಾಡಿದರೆ ಸೆಪ್ಟೆಂಬರ್ 15ಕ್ಕೆ ಇದ್ದ ಡೆಡ್​ಲೈನ್ ಮುಂದಕ್ಕೆ ಹೋಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ