Sunfeast Allrounder: ಬಾಂಗ್ಲಾದೇಶ್​ನ ಪ್ರಾಣ್​ ಆಲೂ ಬಿಸ್ಕೆಟ್​ಗೆ ಟಕ್ಕರ್ ನೀಡಲು ಐಟಿಸಿ ಸನ್​ಫೀಸ್ಟ್​ನ ಚಟ್​ಪಟ ಮಸಾಲ

| Updated By: Srinivas Mata

Updated on: Jun 30, 2021 | 12:33 AM

ಇತ್ತೀಚೆಗೆ ಭಾರತದಲ್ಲಿ ಬಹಳ ಜನಪ್ರಿಯ ಆಗಿರುವ ಬಾಂಗ್ಲಾದೇಶ್​ನ ಪ್ರಾಣ್ ಬ್ರ್ಯಾಂಡ್​ನ ಆಲೂ ಬಿಸ್ಕೆಟ್​ಗೆ ಸ್ಪರ್ಧೆ ನೀಡುವುದಕ್ಕೆ ಐಟಿಸಿ ಸನ್​ಫೀಸ್ಟ್​ನಿಂದ ಹೊಸ ಚಟ್​ಪಟ ಮಸಾಲ ತರಲಾಗಿದೆ.

Sunfeast Allrounder: ಬಾಂಗ್ಲಾದೇಶ್​ನ ಪ್ರಾಣ್​ ಆಲೂ ಬಿಸ್ಕೆಟ್​ಗೆ ಟಕ್ಕರ್ ನೀಡಲು ಐಟಿಸಿ ಸನ್​ಫೀಸ್ಟ್​ನ ಚಟ್​ಪಟ ಮಸಾಲ
ಪ್ರಾಣ್ ಬಿಸ್ಕೆಟ್ಸ್​
Follow us on

ಬಾಂಗ್ಲಾದೇಶ್ ಮೂಲದ ಪ್ರಾಣ್ (PRAN) ಬ್ರ್ಯಾಂಡ್​ನ ಆಲೂಗಡ್ಡೆ ಬಿಸ್ಕೆಟ್ ಭಾರತದಲ್ಲಿ ಈಗ ಬಹಳ ಜನಪ್ರಿಯ ಆಗಿದೆ. ಅಮೆಜಾನ್​.ಕಾಮ್​ನಲ್ಲಿ ಈ ಬಗೆಗಿನ ಗ್ರಾಹಕರ ಅಭಿಪ್ರಾಯಗಳನ್ನು ನೋಡಿದರೆ ಅಚ್ಚರಿಯೇ ಆಗುತ್ತದೆ. ಅಷ್ಟರ ಮಟ್ಟಿಗೆ ಹಾಡಿ, ಹೊಗಳಲಾಗಿದೆ. ಇದೀಗ ಭಾರತದಲ್ಲಿ ಆ ಬ್ರ್ಯಾಂಡ್​ಗೆ ಟಕ್ಕರ್​ ನೀಡಲು ಐಟಿಸಿ ಲಿಮಿಟೆಡ್​ನ ಸನ್​ಫೀಸ್ಟ್​ ಬಿಸ್ಕೆಟ್​ ಬ್ರ್ಯಾಂಡ್​ ಮುಂದಾಗಿದೆ. ಸನ್​ಫೀಸ್ಟ್​ನ ಆಲ್​ರೌಂಡರ್​ ಚಟ್​ಪಟ ಮಸಾಲ ಆಲೂಗಡ್ಡೆ ಬಿಸ್ಕೆಟ್ ಅನ್ನು ತಂದಿದೆ. ಅಂದ ಹಾಗೆ ಮೊದಲಿಗೆ ಹೇಳಿದಂತೆ, ಅಮೆಜಾನ್​ ಮೂಲಕ ಭಾರತದಲ್ಲಿ ಬಾಂಗ್ಲಾದೇಶ್ ಮೂಲದ ಪ್ರಾಣ್​ ಬ್ರ್ಯಾಂಡ್​ನ ಆಲೂಗಡ್ಡೆ ಬಿಸ್ಕೆಟ್ ದೊರೆಯುತ್ತದೆ. ಇತ್ತ ಸನ್​ಫೀಸ್ಟ್ ಆಲೂಗಟ್ಟೆ ಬಿಸ್ಕೆಟ್​ ಐಟಿಸಿ ಆನ್​ಲೈನ್​ ಸ್ಟೋರ್, ಸಾಮಾನ್ಯ ಮಳಿಗೆಗಳು ಹಾಗೂ ಆಧುನಿಕ ಮಾರಾಟ ಮಳಿಗೆಗಳಲ್ಲೂ ಮಾರುತ್ತಿದೆ. “ಸನ್‌ಫೀಸ್ಟ್ ಆಲ್ ರೌಂಡರ್​ನಿಂದ ಗ್ರಾಹಕರಿಗೆ ವಿಭಿನ್ನ ಪ್ರೀಮಿಯಂ ಕೊಡುಗೆಯನ್ನು ಕ್ರ್ಯಾಕರ್ ಸ್ವರೂಪದಲ್ಲಿ ನೀಡಲು ಉದ್ದೇಶಿಸಿದೆ,” ಎಂದು ಐಟಿಸಿಯ ಬಿಸ್ಕೆಟ್ ಮತ್ತು ಕೇಕ್ ಕ್ಲಸ್ಟರ್‌ನ ಆಹಾರ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಲಿ ಹ್ಯಾರಿಸ್ ಶೆರೆ ತಿಳಿಸಿದ್ದಾರೆ.

“ಇದು ಬಿಸ್ಕೆಟ್‌ಗಿಂತ ಹೆಚ್ಚು,” ಎಂದು ಹೇಳಿಕೊಳ್ಳುವ ಐಟಿಸಿಯ ವೆಬ್‌ಸೈಟ್, ಹಗುರ, ತೆಳುವಾದ ಮತ್ತು ಕುರುಕುಲಾದ ಆಲೂಗೆಡ್ಡೆ ಬಿಸ್ಕೆಟ್​ಗಳಿವು ಎಂದು ಪಟ್ಟಿ ಮಾಡಿದೆ. ಮತ್ತು ಚಟ್‌ಪಟ ಮಸಾಲೆಗಳೊಂದಿಗೆ ಚುಮುಕಿಸಲಾಗುತ್ತದೆ. ಇದು ಅದರ ಪ್ರಮುಖ ಲಕ್ಷಣಗಳಾಗಿವೆ ಎಂದಿದೆ. “ಬಿಸ್ಕೆಟ್​ಗಳ ವಿಭಾಗದಲ್ಲಿ ಕ್ರ್ಯಾಕರ್‌ಗಳು ದೊಡ್ಡ ಭಾಗವನ್ನು ಹೊಂದಿದ್ದು, ನಮ್ಮ ಪೋರ್ಟ್​ ಫೋಲಿಯೋವನ್ನು ಮತ್ತಷ್ಟು ಬಲಪಡಿಸಲು ಮತ್ತು ಗ್ರಾಹಕರಿಗೆ ಟ್ರೆಂಡ್‌ಸೆಟ್ಟಿಂಗ್ ಮತ್ತು ಸಂತೋಷಕರ ಕೊಡುಗೆಗಳನ್ನು ಒದಗಿಸಲು ಇದು ಸೂಕ್ತ ಸಮಯ ಎಂದು ನಾವು ನಂಬುತ್ತೇವೆ. ಸನ್‌ಫೀಸ್ಟ್ ಆಲ್ ರೌಂಡರ್ ಅನ್ನು ಪ್ರಾರಂಭಿಸುವುದರೊಂದಿಗೆ ನಾವು ಗ್ರಾಹಕರ ಅನುಭವವನ್ನು, ಅದರಲ್ಲೂ ಬಿಸ್ಕೆಟ್​ಗಳಲ್ಲಿ ಮತ್ತು ವಿಶೇಷವಾಗಿ ಕ್ರ್ಯಾಕರ್ ವಿಭಾಗದಲ್ಲಿ ಮರುವ್ಯಾಖ್ಯಾನಿಸಲು ಬಯಸುತ್ತೇವೆ, ಎಂದು ಅವರು ಹೇಳಿದ್ದಾರೆ.

ಐಟಿಸಿಯ ಪ್ರಕಾರ, ಬಿಂಗೋ ಚಿಪ್ಸ್ ಮತ್ತು ಯಿಪ್ಪೀ ನೂಡಲ್ಸ್ ಇವುಗಳಿಗೆ ಗೃಹಿಣಿಯರು ಮತ್ತು ಒಂದು ವರ್ಗದ ಗ್ರಾಹಕರು ರುಚಿಗೆ ಬಹಳ ಇಷ್ಟಪಟ್ಟಿದ್ದಾರೆ. ಈ ವಿಭಾಗದ ಅಡಿಯಲ್ಲಿ ಬರುವ ಗ್ರಾಹಕರಲ್ಲಿ ಬಿಸ್ಕೆಟ್ ಜನಪ್ರಿಯ ಆಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಮೊದಲಿಗೆ ಸನ್​ಫೀಸ್ಟ್​ ಬಿಸ್ಕೆಟ್​ಗಳು ದಕ್ಷಿಣದ ರಾಜ್ಯಗಳು, ಪಶ್ಚಿಮ ಬಂಗಾಲ ಮತ್ತು ಈಶಾನ್ಯ ರಾಜ್ಯಗಳಲ್ಲಿ ದೊರೆಯಲಿವೆ.

ಇದನ್ನೂ ಓದಿ: Stake sale by govt: ಆಕ್ಸಿಸ್ ಬ್ಯಾಂಕ್​ನಲ್ಲಿದ್ದ ಷೇರು ಮಾರಾಟ ಮಾಡಿ 3994 ಕೋಟಿ ರೂಪಾಯಿ ಸಂಗ್ರಹಿಸಿದ ಕೇಂದ್ರ ಸರ್ಕಾರ

(ITC Sunfeast’s new potato biscuits rolled out to compete with Bangladeshi biscuit brand Pran)

Published On - 12:31 am, Wed, 30 June 21