ಪರಿಣತರ ಪ್ರಕಾರ, ಆದಾಯ ತೆರಿಗೆ ಇಲಾಖೆಯು ಈ ವೆಬ್ಸೈಟ್ ಅನ್ನು ಐಟಿಆರ್ ಫೈಲಿಂಗ್ ಮತ್ತು ಪ್ರಶ್ನೆಗಳಿಗೆ ಉತ್ತರಿಸುವುದಕ್ಕೆ, ಅಸೆಸ್ಮೆಂಟ್ಗಳಿವೆ, ಮನವಿಗೆ, ದಂಡದಿಂದ ವಿನಾಯಿತಿಗೆ ಬಳಸಲಾಗುತ್ತದೆ. ಇಷ್ಟು ಮಾತ್ರವಲ್ಲದೆ, ಹೊಸ ಇ- ಫೈಲಿಂಗ್ ಪೋರ್ಟಲ್ನಿಂದ ಈ ಕೆಳಕಂಡ ಅನುಕೂಲಗಳಿವೆ.
ಶೀಘ್ರ ರೀಫಂಡ್
ತಕ್ಷಣ ಪ್ರೊಸೆಸ್ ಆಗುವಂತೆ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ (ಐಟಿಆರ್) ಜತೆಗೆ ಹೊಸ ಇ- ಫೈಲಿಂಗ್ ಪೋರ್ಟಲ್ ಅನ್ನು ಇಂಟಿಗ್ರೇಟ್ ಮಾಡಲಾಗಿದೆ. ಇದರಿಂದಾಗಿ ತೆರಿಗೆಪಾವತಿದಾರರಿಗೆ ಶೀಘ್ರವಾಗಿ ರೀಫಂಡ್ ದೊರೆಯುತ್ತದೆ.
ಮೊಬೈಲ್ ಅಪ್ಲಿಕೇಷನ್
ಇ- ಪೋರ್ಟಲ್ ಆರಂಭವಾದ ಮೇಲೆ ಮೊಬೈಲ್ ಅಪ್ಲಿಕೇಷನ್ ಶುರುವಾಗಲಿದೆ. ಈ ಮೂಲಕ ಪೋರ್ಟಲ್ನಲ್ಲಿ ಸಿಗುವಂಥ ಎಲ್ಲ ಕಾರ್ಯ ನಿರ್ವಹಣೆಯು ಮೊಬೈಲ್ ಆ್ಯಪ್ನಲ್ಲೂ ದೊರೆಯುತ್ತದೆ. ಸದ್ಯಕ್ಕೆ ಯಾವುದೇ ಮೊಬೈಲ್ ಆ್ಯಪ್ ಇಲ್ಲ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.
ಹೊಸ ಡ್ಯಾಶ್ ಬೋರ್ಡ್
ಹೊಸ ಇ- ಪೋರ್ಟಲ್ ಒಂದು ಹೊಸ ಸಿಂಗಲ್ ಡ್ಯಾಶ್ ಬೋರ್ಡ್ ಒದಗಿಸುತ್ತದೆ. ಎಲ್ಲ ಇಂಟರಾಕ್ಷನ್, ಅಪ್ಲೋಡ್ಗಳು ಅಥವಾ ಬಾಕಿ ಕಾರ್ಯಗಳನ್ನು ತೆರಿಗೆ ಪಾವತಿದಾರರಿಗೆ ಅದು ತೋರಿಸುತ್ತದೆ.
ಇಂಟರಾಕ್ಟಿವ್ ಐಟಿಆರ್ ಸಿದ್ಧತೆ ಸಾಫ್ಟ್ವೇರ್
ಐಟಿಆರ್ ಸಿದ್ಧತೆ ಸಾಫ್ಟ್ವೇರ್ ಅನ್ನು ಆಫ್ಲೈನ್ ಹಾಗೂ ಆನ್ಲೈನ್ ಎರಡಕ್ಕೂ ಉಚಿತವಾಗಿ ತೆರಿಗೆದಾರರಿಗೆ ಒದಗಿಸಲಾಗುತ್ತದೆ. ತೆರಿಗೆದಾರ ಸ್ನೇಹಿ ಸಾಫ್ಟ್ವೇರ್ ಆದ ಇದರಲ್ಲಿ ಇಂಟರ್ ಆಕ್ಟಿವ್ ಪ್ರಶ್ನೆಗಳಿದ್ದು, ಇದರಿಂದ ಅನುಕೂಲ ಆಗಲಿದೆ. ತೆರಿಗೆ ಬಗ್ಗೆ ಯಾವುದೇ ಜ್ಞಾನ ಇಲ್ಲದಿದ್ದರೂ ಈ ಪೋರ್ಟಲ್ ಅನ್ನು ರಿಟರ್ನ್ಸ್ ಪ್ರೀ- ಫಿಲ್ಲಿಂಗ್ಗೆ ಬಳಸಬಹುದು. ಆ ಮೂಲಕ ಐಟಿಆರ್ನಲ್ಲಿ ಹೆಚ್ಚು ಭರ್ತಿ ಮಾಡಬೇಕು ಅಂತೇನೂ ಇರಲ್ಲ.
ತೆರಿಗೆದಾರರ ಪ್ರಶ್ನೆಗಳಿಗೆ ಉತ್ತರಿಸುವುದು ಸಲೀಸು
ಟ್ಯುಟೋರಿಯರಲ್ಗಳು, ವಿಡಿಯೋಗಳು, ಕಾಲ್ಸೆಂಟರ್, ಚಾಟ್ಬಾಟ್ ಅಥವಾ ಲೈವ್ ಏಜೆಂಟ್ಗಳು ಈ ಸೈಟ್ನಲ್ಲಿ ಇದ್ದು, ತೆರಿಗೆ ಪಾವತಿದಾರರ ಎಲ್ಲ ಪ್ರಶ್ನೆಗಳಿಗೂ ಉತ್ತರ ದೊರೆಯುತ್ತದೆ. ಹೊಸ ಕಾಲ್ಸೆಂಟರ್ ಫ್ರೀಕ್ವೆಂಟ್ಲಿ ಆಸ್ಕಡ್ ಕ್ವೆಶ್ಚನ್ಸ್ (FAQs) ಮೂಲಕ ತೆರಿಗೆದಾರರಿಗೆ ನೆರವಾಗುತ್ತದೆ.
ಹೊಸ ಆನ್ಲೈನ್ ತೆರಿಗೆ ಪಾವತಿ ಪದ್ಧತಿ
ಬಹಳ ಸುಲಭವಾಗಿ ಪಾವತಿಯನ್ನು ಖಾತರಿ ಮಾಡಬೇಕು ಅನ್ನೋ ಕಾರಣಕ್ಕೆ ಹೊಸ ಐಟಿಆರ್ ವೆಬ್ಸೈಟ್ ತೆರಿಗೆ ಸಂದಾಯ ಮಾಡಲು ಆನ್ಲೈನ್ ಪಾವತಿ ವ್ಯವಸ್ಥೆಯನ್ನು ಸಹ ಹೊಂದಿದೆ. ನೆಟ್ ಬ್ಯಾಂಕಿಂಗ್, ಯುಪಿಐ, ಕ್ರೆಡಿಟ್ ಕಾರ್ಡ್, ಆರ್ಟಿಜಿಎಸ್ ಅಥವಾ ಎನ್ಇಎಫ್ಟಿ ಹೀಗೆ ತೆರಿಗೆದಾರರ ಯಾವುದೇ ಖಾತೆಯಿಂದ ಮತ್ತು ಯಾವುದೇ ಬ್ಯಾಂಕ್ನಿಂದ ತೆರಿಗೆ ಪಾವತಿಸಬಹುದು. ಈಗಿನ ವ್ಯವಸ್ಥೆಯಲ್ಲಿ ಯುಪಿಐ, ಕ್ರೆಡಿಟ್ ಕಾರ್ಡ್ ಮಾತ್ರ ಇತ್ತು.
ಇದನ್ನೂ ಓದಿ: ಜೂನ್ 7ಕ್ಕೆ ಆದಾಯ ತೆರಿಗೆ ಇಲಾಖೆ ಇ- ಪೋರ್ಟಲ್ ಶುರು; ಜೂನ್ 1ರಿಂದ 6ರ ತನಕ ಈಗಿನ ಪೋರ್ಟಲ್ ಮಾಡಲ್ಲ ಕೆಲಸ
(ITR filing new e portal will be launched by Income Tax department. Here is the features of portal)