Jet Airways: ಮತ್ತೆ ಹಾರಾಟ ನಡೆಸಲು ರೆಕ್ಕೆ ಬಿಚ್ಚುವುದಕ್ಕೆ ಸಜ್ಜಾಗಿದೆ ಜೆಟ್​ ಏರ್​ವೇಸ್

ಜೆಟ್​ ಏರ್​ವೇಸ್​ ವಿಮಾನ ಯಾನ ಸಂಸ್ಥೆಯು ಮತ್ತೆ ಹಾರಾಟಕ್ಕೆ ಸಿದ್ಧತೆ ನಡೆಸಿದೆ. 2019ರಲ್ಲಿ ಕಾರ್ಯಾಚರಣೆ ನಿಲ್ಲಿಸಿದ ಮೇಲೆ ಮತ್ತೆ ಆರಂಭ ಮಾಡಲಾಗುತ್ತಿದೆ.

Jet Airways: ಮತ್ತೆ ಹಾರಾಟ ನಡೆಸಲು ರೆಕ್ಕೆ ಬಿಚ್ಚುವುದಕ್ಕೆ ಸಜ್ಜಾಗಿದೆ ಜೆಟ್​ ಏರ್​ವೇಸ್
ಸಾಂದರ್ಭಿಕ ಚಿತ್ರ
Updated By: Srinivas Mata

Updated on: Apr 20, 2022 | 1:47 PM

2019ರಲ್ಲಿ ಕಾರ್ಯಾಚರಣೆ ನಿಲ್ಲಿಸಿದ್ದ ಜೆಟ್​ ಏರ್​ವೇಸ್ (Jet Airways) ವಿಮಾನ ಯಾನ ಸಂಸ್ಥೆ ಮತ್ತೆ ಹಾರಾಟ ನಡೆಸುವತ್ತ ಮುಂದಡಿ ಇಟ್ಟಿದೆ. ಸಿಎಕ್ಸ್​ಒ ಹಂತದ ಸಿಬ್ಬಂದಿ ನೇಮಕಾತಿಯನ್ನು ಈಗಾಗಲೇ ಆರಂಭಿಸಲಾಗಿದೆ. ಶೀಘ್ರದಲ್ಲೇ ವಾಯು ಯಾನ ಕಾರ್ಯಾಚರಣೆ ಪರವಾನಗಿ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಲಾಗಿದೆ. ಏರ್​ಲೈನ್​ ಸಿಇಒ ಸಂಜೀವ್​ ಕಪೂರ್ ಅವರು ಹೈಬ್ರಿಡ್ ಮಾಡೆಲ್ ಬಗ್ಗೆ ಮಾತನಾಡಿದ್ದು, ವಿಮಾನ ಯಾನ ವಲಯ ನಿಧಾನಗತಿ ಆಗಿತ್ತು. ಸದ್ಯದ ಸನ್ನಿವೇಶದಲ್ಲಿ ಭಾರತೀಯ ವಿಮಾನ ಯಾನ ವಲಯವು ಕಡಿಮೆ ಪ್ರಯಾಣ ವೆಚ್ಚದ ಸಂಸ್ಥೆಗಳು ಪಾರಮ್ಯ ಸಾಧಿಸಿವೆ. 2019ನೇ ಇಸವಿಯಲ್ಲಿ, ಯಾವಾಗ ಜೆಟ್​ ಏರ್​ವೇಸ್ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿತೋ ಆಗ ಶೇ 87ರಷ್ಟು ಸಂಪೂರ್ಣ ದೇಶೀಯ ವಾಯು ಸಂಚಾರವನ್ನು ಕಡಿಮೆ ದರದ ಸಂಸ್ಥೆಗಳು ನೋಡಿಕೊಳ್ಳುತ್ತಿದ್ದವು. ಹೈಬ್ರಿಡ್ ಮಾಡೆಲ್ ಹೆಚ್ಚಾಗಿ ಕಂಡುಬರುತ್ತದೆ. ಇದರಲ್ಲಿ ಪ್ರಯಾಣ ವೆಚ್ಚ ಕಡಿಮೆ. ಆದರೆ ಪ್ರಯಾಣಿಕರು ಆಹಾರ ಮತ್ತಿತರ ವಸ್ತುಗಳನ್ನು ಖರೀದಿ ಮಾಡಬೇಕಾಗುತ್ತದೆ.

ಇನ್ನು, ಟಾಟಾ ಹಾಗೂ ಸಿಂಗಾಪೂರ್ ಏರ್​ಲೈನ್ಸ್​ ಸಹಯೋಗದ ವಿಸ್ತಾರದಿಂದ ಅದ್ಭುತ ಸೇವೆ ಒದಗಿಸುವ ಭರವಸೆ ನೀಡಲಾಗಿದೆ. ವಿಸ್ತಾರಾ 2015ರಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ಪ್ರೀಮಿಯಂ ಸಂಚಾರಕ್ಕೆ ಬೇಡಿಕೆ ಇರುವುದಾಗಿ ಸಮೀಕ್ಷೆ ತೋರಿಸುತ್ತಿದೆ ಎಂದು ಹೇಳಿಕೊಂಡಿದ್ದರೂ ಇವತ್ತಿಗೆ ಸಹ ಈ ಸಂಸ್ಥೆ ಲಾಭದಾಯಕವಾಗಿ ಇಲ್ಲ.

ಏರ್​ಲೈನ್ಸ್​ನಿಂದ ಹಲವು ಸಲ ಬದಲಾವಣೆಗಳನ್ನು ಮಾಡಲಾಯಿತು. ಕಾನ್ಫಿಗರೇಷನ್ ಎರಡು ಬಾರಿ ಬದಲಾಯಿಸಲಾಯಿತು. ಸಂಪೂರ್ಣ ಎಕಾನಮಿಯ ವಿಮಾನಗಳನ್ನು ತರಲಾಯಿತು. ಎರಡು ವರ್ಗದ ವಿಮಾನ ಸೇರ್ಪಡೆ ಮಾಡಲಾಯಿತು (ಹೆಚ್ಚುವರಿ ಸಾಮರ್ಥ್ಯಕ್ಕೆ ಜೋಡಣೆ ಆಗುವಂತೆ ಸ್ಲಾಟ್​ಗಳು ಲಭ್ಯವಾಗಲು).

ಇದನ್ನೂ ಓದಿ: Schengen Visa: ಶೆಂಜೆನ್ ವೀಸಾ ಇಲ್ಲದ ಭಾರತೀಯರು ಯುರೋಪಿಯನ್ ಒಕ್ಕೂಟದ ಏರ್‌ಲೈನ್ಸ್‌ನಲ್ಲಿ ಯುಕೆಗೆ ತೆರಳಲು ಸಾಧ್ಯವಿಲ್ಲ