Schengen Visa: ಶೆಂಜೆನ್ ವೀಸಾ ಇಲ್ಲದ ಭಾರತೀಯರು ಯುರೋಪಿಯನ್ ಒಕ್ಕೂಟದ ಏರ್‌ಲೈನ್ಸ್‌ನಲ್ಲಿ ಯುಕೆಗೆ ತೆರಳಲು ಸಾಧ್ಯವಿಲ್ಲ
ಯುರೋಪಿಯನ್ ಒಕ್ಕೂಟದ ವಿಮಾನಗಳಲ್ಲಿ ಯುನೈಟೆಡ್ ಕಿಂಗ್‌ಡಮ್‌ಗೆ ತೆರಳುವುದಕ್ಕೆ ಭಾರತೀಯರಿಗೆ ಟ್ರಾನ್ಸಿಟ್ ಅಥವಾ ಶೆಂಜೆನ್ ವೀಸಾ ಕಡ್ಡಾಯವಾಗಿದೆ.
ಭಾರತೀಯ ನಾಗರಿಕರು ಟ್ರಾನ್ಸಿಟ್ ಅಥವಾ ಸಾಮಾನ್ಯ ಶೆಂಜೆನ್ ವೀಸಾಗಳಿಲ್ಲದೆ ಲುಫ್ತಾನ್ಸಾ, ಕೆಎಲ್‌ಎಂ ಮತ್ತು ಏರ್ ಫ್ರಾನ್ಸ್‌ನಂತಹ ಯುರೋಪಿಯನ್ ಒಕ್ಕೂಟದ ಏರ್‌ಲೈನ್‌ಗಳ ಮೂಲಕ ಯು.ಕೆ.ಗೆ (UK) ತೆರಳಲು ಸಾಧ್ಯ ಆಗುವುದಿಲ್ಲ. ಏಕೆಂದರೆ ಅವರನ್ನು ಭಾರತದಲ್ಲಿಯೇ ಮೂಲ ವಿಮಾನ ನಿಲ್ದಾಣಗಳಲ್ಲಿ ನಿಲ್ಲಿಸಲಾಗುತ್ತದೆ. ಯು.ಕೆ. ಇನ್ನು ಮುಂದೆ ಯುರೋಪಿಯನ್ ಒಕ್ಕೂಟದ ಭಾಗವಾಗಿ ಇಲ್ಲದಿರುವುದರಿಂದ, ಬ್ರೆಕ್ಸಿಟ್‌ನ ನಂತರ ಅದರ ವಿಮಾನ ಯಾನ ಸಂಸ್ಥೆಗಳು ನಿರ್ವಹಿಸುವ ಸಾರಿಗೆ ವಿಮಾನಗಳಲ್ಲಿ ಯು.ಕೆ.ಗೆ ಹಾರಲು ಯುರೋಪಿಯನ್ ಒಕ್ಕೂಟಕ್ಕೆ ಸೇರಿಲ್ಲದ ನಾಗರಿಕರು ಟ್ರಾನ್ಸಿಟ್, ಶೆಂಜೆನ್ ವೀಸಾವನ್ನು ಪಡೆಯುವುದನ್ನು ಕಡ್ಡಾಯಗೊಳಿಸಿದೆ.
ಶೆಂಜೆನ್ ವೀಸಾವು ಅಲ್ಪಾವಧಿಯದಾಗಿದ್ದು, ಅದನ್ನು ಹೊಂದಿರುವವರು ಶೆಂಜೆನ್ ಪ್ರದೇಶದಾದ್ಯಂತ ಮುಕ್ತವಾಗಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಇದು ಯುರೋಪಿಯನ್ ಒಕ್ಕೂಟದ 26 ದೇಶಗಳು ಅಥವಾ “ಶೆಂಜೆನ್ ಸರ್ಕಾರಗಳ” ಮಧ್ಯೆ ಗಡಿ ನಿಯಂತ್ರಣಗಳಿಲ್ಲದೆ ಸಂಚರಿಸಬಹುದಾಗಿದೆ. ಕಳೆದ ವರ್ಷ ಜನವರಿ 1ರಂದು ಈ ಕ್ರಮ ಜಾರಿಗೆ ಬಂತು. ಯುರೋಪಿಯನ್ ಒಕ್ಕೂಟಕ್ಕೆ ಸೇರಿಲ್ಲದ ಅಲ್ಲದ ನಾಗರಿಕರು ಟ್ರಾನ್ಸಿಟ್ ಅಥವಾ ಸಾಮಾನ್ಯ ಶೆಂಜೆನ್ ವೀಸಾ ಇಲ್ಲದೆ ಯು.ಕೆ.ಗೆ ಕೇವಲ ತಡೆರಹಿತ ವಿಮಾನಗಳ ಮೂಲಕ ಅಥವಾ ಗಲ್ಫ್ ರಾಷ್ಟ್ರಗಳು ಅಥವಾ ಸ್ವಿಟ್ಜರ್ಲೆಂಡ್ ಮೂಲಕ ಒಂದು ಸ್ಟಾಪ್ ವಿಮಾನಗಳಲ್ಲಿ ಮಾತ್ರ ಹಾರಬಹುದು. ಯುರೋಪಿಯನ್ ಒಕ್ಕೂಟದ ನಿಯಮವು ಸ್ವಿಟ್ಜರ್ಲೆಂಡ್‌ಗೆ ಅನ್ವಯಿಸುವುದಿಲ್ಲ ಏಕೆಂದರೆ ಅದು ಒಕ್ಕೂಟದ ಸದಸ್ಯ ಅಲ್ಲ.
ಆದರೂ ಯುನೈಟೆಡ್ ಕಿಂಗ್‌ಡಮ್‌ಗೆ ನೇರವಾಗಿ ಹಾರುವ ಹಲವಾರು ಸೇವೆಗಳಿವೆ. ನಿಗದಿತ ಅಂತರಾಷ್ಟ್ರೀಯ ವಿಮಾನಗಳನ್ನು ಪುನರಾರಂಭಿಸಿದ ನಂತರ ವಿದೇಶಿ ವಿಮಾನಯಾನ ಸಂಸ್ಥೆಗಳು ಭಾರತ ಮತ್ತು ಪ್ರಪಂಚದ ಇತರ ಭಾಗಗಳ ಮಧ್ಯೆ ಒಂದು-ನಿಲುಗಡೆ (One Stop) ಸಂಪರ್ಕವನ್ನು ನೀಡಲು ಪ್ರಾರಂಭಿಸಿವೆ. ರಷ್ಯಾ-ಉಕ್ರೇನ್ ಸಂಘರ್ಷದ ನಂತರ ಈ ಏಕ-ನಿಲುಗಡೆ ವ್ಯವಹಾರವು ಗಮನಾರ್ಹವಾಗಿ ಹೆಚ್ಚಾಗಿದೆ. ಕಳೆದ ವರ್ಷ ಏರ್ ಇಂಡಿಯಾ ಭಾರತ ಮತ್ತು ಯು.ಕೆ. ನಡುವೆ ತಡೆರಹಿತ ವಿಮಾನಗಳನ್ನು ಘೋಷಿಸಿತ್ತು.
ಇದನ್ನೂ ಓದಿ: Passport power index 2022: 60 ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣ; ಪಾಸ್ಪೋರ್ಟ್ ಶ್ರೇಯಾಂಕದಲ್ಲಿ ಏಳು ಸ್ಥಾನ ಮೇಲೇರಿದ ಭಾರತ