Video: ಸೊಯುಜ್ ರಾಕೆಟ್ ಮೇಲಿದ್ದ ಭಾರತದ ಧ್ವಜವೊಂದನ್ನು ಹಾಗೇ ಬಿಟ್ಟು, ಉಳಿದ ಯುಎಸ್, ಯುಕೆ ಧ್ವಜ ತೆಗೆದು ಹಾಕಿದ ರಷ್ಯಾ
ಸೊಯುಜ್ ರಾಕೆಟ್ ಎಂಬುದು ರಷ್ಯಾದ ಬಾಹ್ಯಾಕಾಶ ನೌಕೆ. ನಾಳೆ ಇದು ಬೈಕೊನೂರ್ನಿಂದ ಉಡಾವಣೆಗೊಳ್ಳಬೇಕಿತ್ತು. ಇದು ವಿವಿಧ ದೇಶಗಳ ಒಟ್ಟು 36 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯಲಿದೆ. ಒನ್ವೆಬ್ ಯೋಜನೆಯಡಿ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸಂಪರ್ಕ ಕಲ್ಪಿಸುವ ಉಪಗ್ರಹಗಳು ಇವು.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಬಾಹ್ಯಾಕಾಶ ಕ್ಷೇತ್ರದ ಮೇಲೆ ಕೂಡ ಪ್ರಭಾವ ಬೀರಿದೆ. ಉಕ್ರೇನ್ ಮೇಲೆ ಆಕ್ರಮಣ ಮಾಡಿದ್ದಕ್ಕಾಗಿ ರಷ್ಯಾದ ಮೇಲೆ ಯುಎಸ್ಎ, ಯುಕೆ ಸೇರಿ ವಿವಿಧ ಯುರೋಪಿಯನ್ ದೇಶಗಳು ವಿವಿಧ ನಿರ್ಬಂಧ ವಿಧಿಸಿವೆ. ಅದಕ್ಕೆ ಪ್ರತಿಯಾಗಿ ರಷ್ಯಾ ಕೂಡ ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ಶುಕ್ರವಾರ ರಷ್ಯಾ ಉಡಾವಣೆ ಮಾಡಲು ನಿರ್ಧರಿಸಿದ್ದ ಒನ್ವೆಬ್ ರಾಕೆಟ್ ಮೇಲಿರುವ ಯುಎಸ್ಎ, ಜಪಾನ್ ಮತ್ತು ಯುಕೆಗಳ ಧ್ವಜಗಳನ್ನು ತೆಗೆಯಲಾಗಿದ್ದು, ಅಲ್ಲಿ ರಷ್ಯಾ ಧ್ವಜದೊಂದಿಗೆ ಭಾರತದ ಧ್ವಜವನ್ನು ಮಾತ್ರ ಉಳಿಸಲಾಗಿದೆ. ಹೀಗೆ ಯುಎಸ್, ಯುಕೆ ಮತ್ತು ಜಪಾನ್ ದೇಶಗಳ ಧ್ವಜಗಳನ್ನು ರಾಕೆಟ್ ಮೇಲಿಂದ ತೆಗೆದು, ಆ ಜಾಗದಲ್ಲಿ ಬಿಳಿ ಬಣ್ಣ ಹಚ್ಚಿ, ಭಾರತದ ಧ್ವಜವನ್ನು ಹಾಗೇ ಉಳಿಸಿಕೊಂಡ ವಿಡಿಯೋವನ್ನು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರಾಸ್ಕೋಸ್ಮೋಸ್ ಮುಖ್ಯಸ್ಥ ಡಿಮಿಟ್ರಿ ರೋಗೋಜಿನ್ ಶೇರ್ ಮಾಡಿಕೊಂಡಿದ್ದಾರೆ.
ರಷ್ಯಾದ ಬಾಹ್ಯಾಕಾಶ ನಿಲ್ದಾಣ (ರಾಕೆಟ್, ಉಪಗ್ರಹಗಳ ಉಡಾವಣಾ ನೆಲೆ)ವಾದ ಬೈಕೊನೂರ್ನಲ್ಲಿ ಅಲ್ಲಿನ ಸಿಬ್ಬಂದಿ ಒನ್ ವೆಬ್ ರಾಕೆಟ್ ಮೇಲಿನ ಉಳಿದ ದೇಶಗಳ ಬಾವುಟಗಳನ್ನು ತೆಗೆಯುವುದನ್ನು ವಿಡಿಯೋದಲ್ಲಿ ಕಾಣಬಹುದು. ವಿಡಿಯೋ ಶೇರ್ ಮಾಡಿಕೊಂಡ ಡಿಮಿಟ್ರಿ ರೋಗೋಜಿನ್, ಕೆಲವು ದೇಶಗಳ ಧ್ವಜಗಳು ಇಲ್ಲದೆ ಹೋದರೇ ನಮ್ಮ ಸೊಯುಜ್ ರಾಕೆಟ್ ತುಂಬ ಸುಂದರವಾಗಿ ಕಾಣುತ್ತದೆ. ಹಾಗಾಗಿಯೇ ಇಲ್ಲಿನ ಲಾಂಚರ್ಗಳು ಅದನ್ನು ತೆಗೆದಿದ್ದಾರೆ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
Стартовики на Байконуре решили, что без флагов некоторых стран наша ракета будет краше выглядеть. pic.twitter.com/jG1ohimNuX
— РОГОЗИН (@Rogozin) March 2, 2022
ಸೊಯುಜ್ ರಾಕೆಟ್ ಎಂಬುದು ರಷ್ಯಾದ ಬಾಹ್ಯಾಕಾಶ ನೌಕೆ. ನಾಳೆ ಇದು ಬೈಕೊನೂರ್ನಿಂದ ಉಡಾವಣೆಗೊಳ್ಳಬೇಕಿತ್ತು. ಇದು ವಿವಿಧ ದೇಶಗಳ ಒಟ್ಟು 36 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯಲಿದೆ. ಒನ್ವೆಬ್ ಯೋಜನೆಯಡಿ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸಂಪರ್ಕ ಕಲ್ಪಿಸುವ ಉಪಗ್ರಹಗಳು ಇವು. ಈ ಒನ್ವೆಬ್ ಯೋಜನೆ ಒಟ್ಟು 648 ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಬೃಹತ್ ಯೋಜನೆಯಾಗಿದ್ದು, ಈಗಾಗಲೇ 428 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ದಿದೆ. ಅವೆಲ್ಲಕ್ಕೂ ಸೊಯುಜ್ ಉಡ್ಡಯನ ವಾಹನವನ್ನೇ ಬಳಕೆ ಮಾಡಲಾಗಿದೆ. ಭಾರತಿ ಏರ್ಟೆಲ್ ಮತ್ತು ಯುಕೆ ಸರ್ಕಾರ ಒನ್ವೆಬ್ನ ಮಾಲೀಕತ್ವ ಹೊಂದಿದೆ. ಆದರೆ ಇದೀಗ ರಷ್ಯಾ, ಉಕ್ರೇನ್ ಮೇಲೆ ಆಕ್ರಮಣ ಮಾಡಿದ್ದರಿಂದ ಯುಕೆ ಸರ್ಕಾರ ತನ್ನ ಶೇರನ್ನು ವಾಪಸ್ ಪಡೆದಿದೆ ಎಂದೂ ಹೇಳಲಾಗಿದೆ. ಇನ್ನೊಂದೆಡೆರಷ್ಯಾ ಕೂಡ, ತನ್ನ ಮೇಲೆ ನಿರ್ಬಂಧ ಹೇರಿರುವ ರಾಷ್ಟ್ರಗಳ ಉಪಗ್ರಹ ಉಡಾವಣೆಗೆ ನಿರಾಕರಿಸಿದೆ.
ಇದನ್ನೂ ಓದಿ: ಉಕ್ರೇನ್ನಿಂದ ಭಾರತೀಯರ ಸ್ಥಳಾಂತರಕ್ಕೆ ಪಾಕಿಸ್ತಾನ ವಾಯುಮಾರ್ಗ ಬಳಕೆ ಮಾಡಿಕೊಳ್ಳದ ವಾಯುಸೇನೆ