IDBI Bank: ಐಡಿಬಿಐ ಬ್ಯಾಂಕ್ ಎಂಡಿ- ಸಿಇಒ ವೇತನದಲ್ಲಿ 10 ಪಟ್ಟು ಹೆಚ್ಚಳಕ್ಕೆ ಷೇರುದಾರರ ಒಪ್ಪಿಗೆಗೆ ಕೋರಿಕೆ
ಐಡಿಬಿಐ ಬ್ಯಾಂಕ್‌ನ ಎಂಡಿ- ಸಿಇಒ ವೇತನವನ್ನು ಹತ್ತು ಪಟ್ಟು ಹೆಚ್ಚಿಸುವ ಸಲುವಾಗಿ ಷೇರುದಾರರ ಅನುಮತಿಯನ್ನು ಕೇಳಲಾಗಿದೆ.
ಖಾಸಗಿ ಬ್ಯಾಂಕ್ ಆದ ಐಡಿಬಿಐ ಬ್ಯಾಂಕ್ ತನ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಾಕೇಶ್ ಶರ್ಮಾ ಅವರ ವೇತನವನ್ನು ಸುಮಾರು 10 ಪಟ್ಟು ಹೆಚ್ಚಳ ಮಾಡುವುದಕ್ಕೆ ಪ್ರಸ್ತಾಪಿಸಿದ್ದು, ಅವರು ಬ್ಯಾಂಕ್ ಅನ್ನು ಆರ್‌ಬಿಐನ (RBI) ನಿರ್ಬಂಧಿತ ಪ್ರಾಂಪ್ಟ್ ಕರೆಕ್ಟಿವ್ ಆಕ್ಷನ್ (ಪಿಸಿಎ) ಚೌಕಟ್ಟಿನಿಂದ ಹೊರತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಾಮಾನ್ಯ ನಿರ್ಣಯವೂ ಸೇರಿ ಇತರ ವಿಚಾರಗಳಿಗೆ ಅಂಚೆ ಮತಪತ್ರದ ಮೂಲಕ ತನ್ನ ಷೇರುದಾರರ ಅನುಮೋದನೆಯನ್ನು ಪಡೆಯಲು ಬ್ಯಾಂಕ್ ಏಪ್ರಿಲ್ 6ರಂದು ಪ್ರಾರಂಭಿಸಿದೆ ಮತ್ತು ಮೇ 5, 2022ರಂದು ಕೊನೆಗೊಳ್ಳಲಿದೆ. ಐಡಿಬಿಐ ಬ್ಯಾಂಕ್‌ನಲ್ಲಿ ಎಲ್ಐಸಿಯು ಬಹುಪಾಲು ಷೇರನ್ನು ಹೊಂದಿದ್ದು, ಮೇ 7, 2022ರಂದು ಅಥವಾ ಅದಕ್ಕೂ ಮೊದಲು ಅಂಚೆ ಮತಪತ್ರದ ಫಲಿತಾಂಶಗಳನ್ನು ಘೋಷಿಸಲಾಗುವುದು. ಮಾರ್ಚ್ 19, 2022 ರಿಂದ ಜಾರಿಗೆ ಬರುವಂತೆ ಶರ್ಮಾ ಅವರನ್ನು ಇನ್ನೂ ಮೂರು ವರ್ಷಗಳವರೆಗೆ ಎಂ.ಡಿ. ಮತ್ತು ಸಿಇಒ ಆಗಿ ಮರು ನೇಮಕ ಮಾಡಲು ಸದಸ್ಯರ ಅನುಮತಿಯನ್ನು ಕೋರಲಾಗಿದೆ.
ಎಲೆಕ್ಟ್ರಾನಿಕ್ ವಿಧಾನದಲ್ಲಿ ಮತದಾನವನ್ನು ಅಂಚೆ ಮತಪತ್ರದ ಮೂಲಕ ವಿಶೇಷ ವ್ಯವಹಾರ ನಡೆಸಲು ಸದಸ್ಯರ ಅನುಮೋದನೆಯನ್ನು ಬ್ಯಾಂಕ್ ಪ್ರಸ್ತಾಪಿಸಿದ್ದು, ಪರಿಗಣಿಸಲು ಮತ್ತು ಸೂಕ್ತವಾದರೆ ರಾಕೇಶ್ ಶರ್ಮಾ ಅವರನ್ನು ನಾನ್- ರೊಟೇಷನಲ್ ನಿರ್ದೇಶಕರಾಗಿ ಮರು ನೇಮಕ ಮಾಡಲು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (MD&CEO) ಆಗಿ ಮೂರು ವರ್ಷಗಳ ಅವಧಿಗೆ ಮಾರ್ಚ್ 19, 2022ರಿಂದ ಜಾರಿಗೆ ಬರುವಂತೆ ಸಾಮಾನ್ಯ ನಿರ್ಣಯವನ್ನು ಅಂಗೀಕರಿಸಲಾಗುತ್ತದೆ ಬ್ಯಾಂಕ್ನಿಂದ ನಿಯಂತ್ರಕರ ಫೈಲಿಂಗ್‌ನಲ್ಲಿ ತಿಳಿಸಲಾಗಿದೆ. ಫೆಬ್ರವರಿ ಮಧ್ಯದಲ್ಲಿ ಶರ್ಮಾ ಅವರ ಮರು ನೇಮಕಾತಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅನುಮೋದಿಸಿತು.
“…ಎನ್‌ಆರ್‌ಸಿ ಮತ್ತು ಬ್ಯಾಂಕ್ ನಿರ್ದೇಶಕರ ಮಂಡಳಿಯ ಶಿಫಾರಸಿನ ಮೇರೆಗೆ, ಬ್ಯಾಂಕ್ ಸದಸ್ಯರ ಅನುಮೋದನೆಗೆ ಅನುಗುಣವಾಗಿ ರಾಕೇಶ್ ಶರ್ಮಾ ಅವರಿಗೆ ಸಂಬಳ, ಭತ್ಯೆಗಳು ಮತ್ತು ಸವಲತ್ತುಗಳು ಈ ಮೂಲಕ ಸಂಭಾವನೆಯನ್ನು ನೀಡಲಾಗುತ್ತದೆ. ಮಾರ್ಚ್ 19, 2022ರಿಂದ ಜಾರಿಗೆ ಬರುವಂತೆ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಆಗಿದೆ ಹಣಕಾಸು ವರ್ಷ 2022-23ಕ್ಕೆ ಸರಿಸುಮಾರು ರೂ. 2,40,00,000ವರೆಗೆ ಆರ್‌ಬಿಐನಿಂದ ಅನುಮೋದಿಸಲಾಗುವುದು,” ಎಂದು ಐಡಿಬಿಐ ಬ್ಯಾಂಕ್ ಫೈಲಿಂಗ್‌ನಲ್ಲಿ ತಿಳಿಸಿದೆ.
ಸವಲತ್ತಿನ ಅಡಿಯಲ್ಲಿ ಸೆಮಿ ಫರ್ನಿಷ್ಡ್ ವಸತಿ ಸೌಲಭ್ಯ, ಕ್ಲಬ್ ಸದಸ್ಯತ್ವ, ಅಧಿಕೃತ ಉದ್ದೇಶಕ್ಕಾಗಿ ಕಾರು, ಮನರಂಜನಾ ವೆಚ್ಚಗಳು, ಅನುಮತಿಯ ಮಟ್ಟಿಗೆ ಬ್ಯಾಂಕ್ನಿಂದ ಆದಾಯ ತೆರಿಗೆ ಪಾವತಿ, ವೈದ್ಯಕೀಯ ಮರುಪಾವತಿ, ರಜೆ ಮತ್ತು ರಜೆ ಶುಲ್ಕ ರಿಯಾಯಿತಿ, ಗ್ರಾಚ್ಯುಟಿ, ನಿವೃತ್ತಿ ಪ್ರಯೋಜನಗಳು ಮತ್ತಿತರ ಪ್ರಯೋಜನಗಳಿವೆ. ಯಾವುದೇ ಪರಿಷ್ಕರಣೆ, ವೇತನ ಮತ್ತು ಸವಲತ್ತುಗಳನ್ನು ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿ (ಎನ್‌ಆರ್‌ಸಿ) ಮತ್ತು ಮಂಡಳಿಯು ಶಿಫಾರಸು ಮಾಡುತ್ತದೆ ಹಾಗೂ ಆರ್‌ಬಿಐ ಅನುಮೋದನೆಗೆ ಒಳಪಟ್ಟಿರುತ್ತದೆ ಎಂದು ಬ್ಯಾಂಕ್ ಹೇಳಿದೆ.
ಶರ್ಮಾ ತಿಂಗಳಿಗೆ 2.64 ಲಕ್ಷ ರೂಪಾಯಿ ವೇತನವನ್ನು ಪಡೆಯುತ್ತಾರೆ, ಆದರೆ ಬ್ಯಾಂಕ್ ತಿಂಗಳಿಗೆ ಸುಮಾರು 20 ಲಕ್ಷ ರೂಪಾಯಿಗಳಿಗೆ ವೇತನವನ್ನು ಹೆಚ್ಚಿಸಲು ಪ್ರಸ್ತಾಪಿಸಿದೆ. ಆರ್‌ಬಿಐ ಅನುಮೋದನೆಯ ನಂತರ, ಐಡಿಬಿಐ ಬ್ಯಾಂಕ್ ಫೆಬ್ರವರಿ 24, 2022ರಂದು ನಡೆದ ಸಭೆಯಲ್ಲಿ ಮಾರ್ಚ್ 19, 2022ರಿಂದ ಜಾರಿಗೆ ಬರುವಂತೆ ಮೂರು ವರ್ಷಗಳ ಅವಧಿಗೆ ಶರ್ಮಾ ಅವರ ಮರು-ನೇಮಕವನ್ನು ಮಾಡಿದ್ದು, ಇದು ಬ್ಯಾಂಕ್‌ನ ಸದಸ್ಯರ ಅನುಮೋದನೆಗೆ ಒಳಪಟ್ಟಿದೆ. ಶರ್ಮಾ ಅವರ ಸಂಬಳದಲ್ಲಿ ಹೆಚ್ಚಳವನ್ನು ಕೋರುವುದರ ಹಿಂದಿನ ತರ್ಕವನ್ನು ವಿವರಿಸಿದ ಐಡಿಬಿಐ ಬ್ಯಾಂಕ್, ರಾಕೇಶ್ ಶರ್ಮಾ ಅವರು ಬ್ಯಾಂಕ್ ಅನ್ನು ಪಿಸಿಎಯಿಂದ ಹೊರತರುವಲ್ಲಿ ಮತ್ತು ಅವರ ಅಧಿಕಾರಾವಧಿಯಲ್ಲಿ ಬ್ಯಾಂಕ್‌ನ ಒಟ್ಟಾರೆ ಕಾರ್ಯಕ್ಷಮತೆಯನ್ನು ಸುಧಾರಿಸುವಲ್ಲಿ ಶ್ಲಾಘನೀಯ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ. ಬ್ಯಾಂಕಿನಲ್ಲಿ ಪರಿವರ್ತನೆಯ ಬದಲಾವಣೆಗಳನ್ನು ತರಲು ಸಮರ್ಥರಾಗಿರುವುದರಿಂದ ಬ್ಯಾಂಕ್‌ನ ಪ್ರವರ್ತಕರು ಮತ್ತು ಮಧ್ಯಸ್ಥಗಾರರು ಸಹ ಅವರಲ್ಲಿ ವಿಶ್ವಾಸವನ್ನು ತೋರಿಸಿದ್ದಾರೆ ಎಂದು ಹೇಳಲಾಗಿದೆ.
“ರಾಕೇಶ್ ಶರ್ಮಾ ಅವರು ಆರ್‌ಬಿಐ ನೀಡಿದ ಸೂಕ್ತ ಮತ್ತು ಸರಿಯಾದ ಮಾನದಂಡಗಳಿಗೆ ಅನುಸಾರವಾಗಿ ಎಂಡಿ ಮತ್ತು ಸಿಇಒ ಆಗಿ ಮರು ನೇಮಕಗೊಳ್ಳಲು ಸಮರ್ಥರು ಮತ್ತು ಸರಿಯಾಗಿದ್ದಾರೆ,” ಎಂದು ಅದು ಸೇರಿಸಿದೆ. ಮರುನೇಮಕ ಆಗಲು ಶರ್ಮಾ ಅವರು ಒಪ್ಪಿಗೆ ನೀಡಿದ್ದಾರೆ ಮತ್ತು ಬ್ಯಾಂಕ್‌ನ ಮಂಡಳಿಯಲ್ಲಿ ನಿರ್ದೇಶಕರಾಗಿ ನೇಮಕಗೊಳ್ಳಲು ಅನರ್ಹವಾಗಿಲ್ಲ ಎಂದು ಐಡಿಬಿಐ ತಿಳಿಸಿದೆ. ಶರ್ಮಾ ಅವರು ಈ ಹುದ್ದೆಗೆ ಅಗತ್ಯವಾದ ಅರ್ಹತೆಗಳು, ಕೌಶಲಗಳು, ಅನುಭವ ಮತ್ತು ವಿಶೇಷ ಜ್ಞಾನವನ್ನು ಹೊಂದಿದ್ದಾರೆ. ಶರ್ಮಾ ಅವರ ಅಧಿಕಾರಾವಧಿಯಲ್ಲಿ ಪಾವತಿಸಬೇಕಾದ ವಾರ್ಷಿಕ ಸಂಭಾವನೆಯು ಆರ್‌ಬಿಐನ ಅನುಮೋದನೆಗೆ ಒಳಪಟ್ಟಿರುತ್ತದೆ ಎಂದು ಅದು ಸೇರಿಸಿದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ 40 ವರ್ಷಗಳಿಂದ ಇರುವ ಅನುಭವಿ ಬ್ಯಾಂಕರ್ ಶರ್ಮಾ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಭಾರತ ಹಾಗೂ ವಿದೇಶಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಅವರು ಎಸ್‌ಬಿಐನಲ್ಲಿ ಮುಖ್ಯ ಜನರಲ್ ಮ್ಯಾನೇಜರ್ ಹುದ್ದೆಯಿಂದ ಲಕ್ಷ್ಮಿ ವಿಲಾಸ್ ಬ್ಯಾಂಕ್‌ಗೆ ಎಂಡಿ ಮತ್ತು ಸಿಇಒ ಆಗಿ ತೆರಳಿದರು ಮತ್ತು ಮಾರ್ಚ್ 7, 2014ರಿಂದ ಸೆಪ್ಟೆಂಬರ್ 9, 2015ರವರೆಗೆ ಅಲ್ಲಿ ಸೇವೆ ಸಲ್ಲಿಸಿದರು. ಆ ನಂತರ ಅವರು ಸೆಪ್ಟೆಂಬರ್ 11, 2015ರಂದು ಕೆನರಾ ಬ್ಯಾಂಕ್‌ಗೆ ಎಂಡಿ ಮತ್ತು ಸಿಇಒ ಆಗಿ ಸೇರಿಕೊಂಡರು. ಜುಲೈ 31, 2018 ರವರೆಗೆ ಮೂರು ವರ್ಷಗಳ ಅವಧಿಗೆ ಸೇವೆ ಸಲ್ಲಿಸಿದರು. ಕೆನರಾ ಬ್ಯಾಂಕಿನಲ್ಲಿದ್ದಾಗ ಕೆನರಾ ಬ್ಯಾಂಕ್ ಸಮೂಹ ಸಂಸ್ಥೆಗಳಲ್ಲಿ ಅಧ್ಯಕ್ಷ ಸ್ಥಾನವನ್ನೂ ಅಲಂಕರಿಸಿದ್ದರು. ಆ ನಂತರ ಅವರು ಅಕ್ಟೋಬರ್ 10, 2018ರಿಂದ ಜಾರಿಗೆ ಬರುವಂತೆ ಐಡಿಬಿಐ ಬ್ಯಾಂಕ್‌ಗೆ ಎಂ.ಡಿ. ಮತ್ತು ಸಿಇಒ ಆಗಿ ಸೇರಿಕೊಂಡರು ಮತ್ತು ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ.
2021ರ ಮಾರ್ಚ್ನಲ್ಲಿ ಆರ್‌ಬಿಐ ತನ್ನ ಸುಧಾರಿತ ಹಣಕಾಸು ಕಾರ್ಯಕ್ಷಮತೆಯ ಮೇಲೆ ಸುಮಾರು ನಾಲ್ಕು ವರ್ಷಗಳ ಅಂತರದ ನಂತರ ಐಡಿಬಿಐ ಬ್ಯಾಂಕ್ ಅನ್ನು ತನ್ನ ವರ್ಧಿತ ನಿಯಂತ್ರಣ ಮೇಲ್ವಿಚಾರಣೆ ಅಥವಾ ಪ್ರಾಂಪ್ಟ್ ಕರೆಕ್ಟಿವ್ ಆಕ್ಷನ್ (ಪಿಸಿಎ) ಚೌಕಟ್ಟಿನಿಂದ ತೆಗೆದುಹಾಕಿತು. ಬಂಡವಾಳ ಸಮರ್ಪಕತೆ, ಆಸ್ತಿ ಗುಣಮಟ್ಟ (ಮಾರ್ಚ್ 2017 ರಲ್ಲಿ ನಿವ್ವಳ ಎನ್ಪಿಎಗಳು ಶೇ 13ಕ್ಕಿಂತ ಹೆಚ್ಚಿತ್ತು), ಸ್ವತ್ತುಗಳ ಮೇಲಿನ ಆದಾಯ ಮತ್ತು ಹತೋಟಿ ಅನುಪಾತದ ಮಿತಿಗಳನ್ನು ಉಲ್ಲಂಘಿಸಿದ ನಂತರ ಆರ್‌ಬಿಐ 2017ರ ಮೇ ತಿಂಗಳಲ್ಲಿ ಐಡಿಬಿಐ ಬ್ಯಾಂಕ್ ಅನ್ನು ಪಿಸಿಎ ಚೌಕಟ್ಟಿನ ಅಡಿಯಲ್ಲಿ ಇರಿಸಿತ್ತು. ಈ ಹಿಂದೆ ಸಾರ್ವಜನಿಕ ವಲಯದ ಬ್ಯಾಂಕ್ ಎಂದು ವರ್ಗೀಕರಿಸಲಾದ ಐಡಿಬಿಐ ಬ್ಯಾಂಕ್ ಅನ್ನು ಈಗ ಎಲ್ಐಸಿಯಿಂದ ನಿಯಂತ್ರಿಸುವ ಖಾಸಗಿ ವಲಯದ ಬ್ಯಾಂಕ್ ಎಂದು ಕರೆಯಲಾಗುತ್ತದೆ. ಮಾರ್ಚ್ 31, 2022ರಂತೆ ಬ್ಯಾಂಕಿನ ಷೇರುದಾರರ ಮಾದರಿಯ ಪ್ರಕಾರ, ಎಲ್ಐಸಿಯು ಬ್ಯಾಂಕ್‌ನಲ್ಲಿ ಶೇ 49.24 ಪಾಲನ್ನು ಹೊಂದಿದೆ ಮತ್ತು ಸರ್ಕಾರದ ಹೋಲ್ಡಿಂಗ್ ಶೇಕಡಾ 45.48ರಷ್ಟಿದ್ದು, ಇದು ಅದರ ಸಂಯೋಜಿತ ಈಕ್ವಿಟಿಯನ್ನು ಶೇಕಡಾ 94.71ಕ್ಕೆ ಒಯ್ಯುತ್ತದೆ.
ಇದನ್ನೂ ಓದಿ: ಐಡಿಬಿಐ ಬ್ಯಾಂಕ್ನಿಂದ MSME, ಕೃಷಿ ವಲಯದ ಉತ್ಪನ್ನಗಳಿಗೆ ಆಟೋಮೆಟೆಡ್ ಸಾಲ ಪ್ರಕ್ರಿಯೆ ವ್ಯವಸ್ಥೆ