ಐಡಿಬಿಐ ಬ್ಯಾಂಕ್​ನಿಂದ MSME, ಕೃಷಿ ವಲಯದ ಉತ್ಪನ್ನಗಳಿಗೆ ಆಟೋಮೆಟೆಡ್ ಸಾಲ ಪ್ರಕ್ರಿಯೆ ವ್ಯವಸ್ಥೆ

ಐಡಿಬಿಐ ಬ್ಯಾಂಕ್​ನಿಂದ MSME (ಕಿರು, ಸಣ್ಣ ಮತ್ತು ಮಧ್ಯಮ ಸಂಸ್ಥೆಗಳು), ಕೃಷಿ ವಲಯದ ಉತ್ಪನ್ನಗಳಿಗೆ ಆಟೋಮೆಟೆಡ್ ಸಾಲ ಪ್ರಕ್ರಿಯೆ ವ್ಯವಸ್ಥೆಯನ್ನು ಆರಂಭಿಸಲಾಗಿದೆ.

ಐಡಿಬಿಐ ಬ್ಯಾಂಕ್​ನಿಂದ MSME, ಕೃಷಿ ವಲಯದ ಉತ್ಪನ್ನಗಳಿಗೆ ಆಟೋಮೆಟೆಡ್ ಸಾಲ ಪ್ರಕ್ರಿಯೆ ವ್ಯವಸ್ಥೆ
ಐಡಿಬಿಐ ಬ್ಯಾಂಕ್ ಇದಕ್ಕೆ ಕನಿಷ್ಠ ಖಾತೆಯ ಸರಾಸರಿ ಬ್ಯಾಲೆನ್ಸ್ ಕೇವಲ ರೂ. 500 ಅಗತ್ಯ. ಪ್ರತಿ ತಿಂಗಳು ಅದನ್ನು ನಿರ್ವಹಿಸಲು ಸಾಧ್ಯವಾಗದಿದ್ದರೆ ಯಾವುದೇ ದಂಡ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಆದರೂ ಬ್ಯಾಂಕ್​ನಿಂದ ಎಟಿಎಂ ನಿಯಮ ಅನುಸಾರ ಡೆಬಿಟ್ ಕಾರ್ಡ್‌ನೊಂದಿಗೆ ದಿನಕ್ಕೆ 2000 ರೂಪಾಯಿ ವಿಥ್​ಡ್ರಾ ಮಿತಿಯನ್ನು ನಿಗದಿಪಡಿಸಿದೆ. ಐಡಿಬಿಐ ಬ್ಯಾಂಕ್ ಪವರ್ ಕಿಡ್ಸ್ ಖಾತೆಯಿಂದ ಉಚಿತ ಮಾಸಿಕ ಇಮೇಲ್ ಸ್ಟೇಟ್‌ಮೆಂಟ್‌ಗಳು, ಉಚಿತ ಪಾಸ್‌ಬುಕ್ ಮತ್ತು ವಯಕ್ತಿಕ ಚೆಕ್ ಪುಸ್ತಕವನ್ನು ಸಹ ನೀಡಲಾಗುತ್ತದೆ. ನಿಮ್ಮ ಮಗು ಪ್ರೌಢಶಾಲೆ ಅಥವಾ ಕಾಲೇಜಿನಲ್ಲಿ ಭಾರತ ಅಥವಾ ವಿದೇಶದಲ್ಲಿ ಅಧ್ಯಯನ ಮಾಡಲು ನಿರ್ಧರಿಸಿದರೆ ಮಗುವಿಗೆ ಕಡಿಮೆ ಬಡ್ಡಿದರದಲ್ಲಿ ಶಿಕ್ಷಣ ಸಾಲ ಪಡೆಯಬಹುದು.
Follow us
Srinivas Mata
|

Updated on: May 19, 2021 | 2:19 PM

ಐಡಿಬಿಐ ಬ್ಯಾಂಕ್ ಲಿಮಿಟೆಡ್​ನಿಂದ ಪೂರ್ತಿಯಾಗಿ ಡಿಜಿಟೈಸ್ ಆದ, ಮೊದಲಿಂದ ಕೊನೆಯ ತನಕದ, ಸಾಲ ಪ್ರಕ್ರಿಯೆ ವ್ಯವಸ್ಥೆ (LPS) ಆರಂಭಿಸಲಾಗಿದೆ. ಎಂಎಸ್​ಎಂಇ (ಕಿರು, ಸಣ್ಣ, ಮಧ್ಯಮ ಸಂಸ್ಥೆಗಳು) ಹಾಗೂ ಕೃಷಿ ಪ್ರಾಡಕ್ಟ್​ಗಳಿಗೆ ಇದು ಅನ್ವಯ ಆಗುತ್ತದೆ ಎಂದು ಮಾಹಿತಿ ನೀಡಲಾಗಿದೆ. ಈ ಹೊಸ ಸಾಲ ಪ್ರಕ್ರಿಯೆ ವ್ಯವಸ್ಥೆಯು ಯಾವುದೇ ಸಮಸ್ಯೆ ಆಗದಂತೆ ಹಲವು ಅಂಶಗಳನ್ನು ಒಗ್ಗೂಡಿಸುತ್ತದೆ. ಡೇಟಾ ಫೈನಾನ್ಷಿಯಲ್ ಟೆಕ್​ಗಳು, ಬ್ಯೂರೋ ವ್ಯಾಲಿಡೇಷನ್, ದಾಖಲಾತಿಗಳ ಸಂಗ್ರಹ/ರಿಟ್ರೀವಲ್, ಖಾತೆ ತೆರೆಯುವುದು/ನಿರ್ವಹಣೆ, ಗ್ರಾಹಕರಿಗೆ ನೋಟಿಫಿಕೇಷನ್​ಗಳು ಮತ್ತು ಪೋರ್ಟ್​ಫೋಲಿಯೋ ಮ್ಯಾನೇಜ್​ಮೆಂಟ್ ಸಾಮರ್ಥ್ಯದ ಜತೆಗೆ ನಿಯಮಾವಳಿಗಳು/ಅರ್ಹತಾ ಮಾನದಂಡಗಳನ್ನು ಸಹ ಗಮನಿಸುತ್ತದೆ.

ಪೂರ್ಣ ಡಿಜಿಟೈಸ್ಡ್ ಮತ್ತು ಆಟೋಮೆಟೆಡ್ ಸಾಲ ಪ್ರಕ್ರಿಯೆ ವ್ಯವಸ್ಥೆಯು ಎಂಎಸ್​ಎಂಇ ಮತ್ತು ಕೃಷಿಗೆ ಸಂಬಂಧಿಸಿದ ಗ್ರಾಹಕರಿಗೆ ಉತ್ಕೃಷ್ಟ ಮಟ್ಟದ ತಂತ್ರಜ್ಞಾನ ಆಧಾರಿತ ಅನುಭವ ನೀಡುವ ಗುರಿಯನ್ನು ಹೊಂದಿದೆ. ಈ ಪ್ಲಾಟ್​ಫಾರ್ಮ್​ ಅನ್ನು ಹೇಗೆ ರೂಪಿಸಲಾಗಿದೆ ಅಂದರೆ, ಉತ್ಕೃಷ್ಟ ಮಟ್ಟದಲ್ಲಿ ಅಂಡರ್​ರೈಟಿಂಗ್ ಗುಣಮಟ್ಟದ ಸಾಲ ಮೀತಿಯ ಅರ್ಹತೆಗಳನ್ನು ಮತ್ತು ಮಾನದಂಡಗಳನ್ನು ಪರಿಶೀಲಿಸುವಂತಿರಬೇಕು ಹಾಗೆ ಇದೆ.

ಐಡಿಬಿಐ ಬ್ಯಾಂಕ್​ನ ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್ ಸುರೇಶ್ ಖತನ್ಹಾರ್ ಮಾತನಾಡಿ, ಎಲ್​ಪಿಎಸ್ ಒಟ್ಟು 50ಕ್ಕೂ ಹೆಚ್ಚು ಪ್ರಾಡಕ್ಟ್​ಗಳನ್ನು ನಿರ್ವಹಣೆ ಮಾಡುತ್ತದೆ. 35ಕ್ಕೂ ಹೆಚ್ಚು ಇಂಟರ್​ಫೇಸ್ ಟಚ್ ಪಾಯಿಂಟ್​ ಜತೆಗೆ ಹಲವು ಸ್ಯಾಟಲೈಟ್ ವ್ಯವಸ್ಥೆಗೆ ಯಾವುದೇ ಸಮಸ್ಯೆ ಇಲ್ಲದಂತೆ ಸಾಲ ದೊರೆಯುವಂತೆ ಮಾಡುತ್ತದೆ. ಎಲ್​ಪಿಎಸ್​ ಅನ್ನು ಈಗಿರುವ ಮುಖ್ಯ ಡೇಟಾಬೇಸ್, ಮಾನವ ಸಂಪನ್ಮೂಲ ನಿರ್ವಹಣೆ ವ್ಯವಸ್ಥೆ, ಬ್ಯಾಂಕ್​ನ ಇತರ ಅಪ್ಲಿಕೇಷನ್​ಗಳ ಜತೆಗೆ ಒಗ್ಗೂಡಿಸಲಾಗುತ್ತದೆ. ಇದರಿಂದ ಗ್ರಾಹಕರಿಗೆ ಬಹಳ ವೇಗವಾದ ಸೇವೆ ದೊರೆಯುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಸ್ವಾಮ್ಯದ ಮತ್ತೊಂದು ಸಂಸ್ಥೆ ಮಾರಾಟಕ್ಕೆ!

(IDBI launches end to end digitised loan process system for MSME’s and agriculture products)