Sign In

By signing in or creating an account, you agree with Associated Broadcasting Company's Terms & Conditions and Privacy Policy.

Sri Lanka Financial Crisis: ಶ್ರೀಲಂಕಾದಲ್ಲಿ ಈಗ ತೈಲಕ್ಕೂ ಪಡಿತರ ವ್ಯವಸ್ಥೆ; ದಿನದಿನಕ್ಕೂ ದ್ವೀಪರಾಷ್ಟ್ರದ ಸಮಸ್ಯೆ ಉಲ್ಬಣ

ಆರ್ಥಿಕ ಬಿಕ್ಕಟ್ಟಿನಲ್ಲಿ ನಲುಗಿ ಹೋಗಿರುವ ಶ್ರೀಲಂಕಾದಲ್ಲಿ ಏಪ್ರಿಲ್ 15ನೇ ತಾರೀಕಿನ ಶುಕ್ರವಾರದಿಂದ ತೈಲ ಪಡಿತರ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

Sri Lanka Financial Crisis: ಶ್ರೀಲಂಕಾದಲ್ಲಿ ಈಗ ತೈಲಕ್ಕೂ ಪಡಿತರ ವ್ಯವಸ್ಥೆ; ದಿನದಿನಕ್ಕೂ ದ್ವೀಪರಾಷ್ಟ್ರದ ಸಮಸ್ಯೆ ಉಲ್ಬಣ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Apr 15, 2022 | 6:58 PM

ಶ್ರೀಲಂಕಾದಲ್ಲಿ (Sri Lanka) ಶುಕ್ರವಾರದಿಂದ ಅನ್ವಯ ಆಗುವಂತೆ ಅಲ್ಲಿನ ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಾರ್ಪೊರೇಷನ್ ದೇಶದಲ್ಲಿ ವಾಹನಗಳಿಗೆ ತೈಲ ಪಡಿತರ ವ್ಯವಸ್ಥೆ ಆರಂಭಿಸಿದೆ. ದೇಶದಲ್ಲಿ ಈಗ ಐತಿಹಾಸಿಕ ಆರ್ಥಿಕ ಬಿಕ್ಕಟ್ಟು ತಲೆದೋರಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಆಗಿದೆ. ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ (CPC) ನೀಡಿರುವ ಹೇಳಿಕೆ ಪ್ರಕಾರ, ಒಮ್ಮೆ ಪೆಟ್ರೋಲ್​ ಪಂಪ್​ಗೆ ಭೇಟಿ ನೀಡಿದರೆ ಮೋಟಾರ್​ ಸೈಕಲ್​ಗಳು ಮತ್ತು ಇತರ ದ್ವಿಚಕ್ರ ವಾಹನಗಳು 1000 ರೂಪಾಯಿ (ಶ್ರೀಲಂಕಾ ರೂಪಾಯಿ) ಮೌಲ್ಯದ ತನಕ ತೈಲ ಖರೀದಿ ಮಾಡಬಹುದು. ಅದೇ ರೀತಿ ತ್ರಿಚಕ್ರ ವಾಹನಗಳು 1500 ರೂಪಾಯಿ ಮೌಲ್ಯದ ತೈಲ, ಕಾರು, ಜೀಪ್ ಮತ್ತು ವ್ಯಾನ್​ಗಳು 5000 ರೂಪಾಯಿ ಮೌಲ್ಯದಷ್ಟನ್ನು ಭರ್ತಿ ಮಾಡಿಕೊಳ್ಳಬಹುದು. ಬಸ್​ಗಳು, ಲಾರಿಗಳು ಮತ್ತು ವಾಣಿಜ್ಯ ವಾಹನಗಳಿಗೆ ಈ ವ್ಯವಸ್ಥೆಯಿಂದ ವಿನಾಯಿತಿ ನೀಡಲಾಗಿದೆ.

ಪೆಟ್ರೋಲ್- ಡೀಸೆಲ್ ಭರ್ತಿ ಮಾಡಿಸುವ ಸ್ಟೇಷನ್​ಗಳಲ್ಲಿ ಭಾರೀ ಉದ್ದದ ಸಾಲುಗಳಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಮನೆಗಳಲ್ಲಿ 12 ಗಂಟೆ ತನಕ ವಿದ್ಯುತ್ ಕಡಿತ ಅನುಭವಿಸುತ್ತಿದ್ದಾರೆ. ಶ್ರೀಲಂಕಾದ ರೂಪಾಯಿ ಮೌಲ್ಯ ಕುಸಿಯುತ್ತಿರುವುದರಿಂದ ಅಗತ್ಯ ವಸ್ತುಗಳಿಗೆ ಭಾರೀ ಕೊರತೆ ಕಂಡುಬಂದಿದೆ. ಈ ತನಕ ಕಂಡರಿಯದ ಆರ್ಥಿಕ ಬಿಕ್ಕಟ್ಟಿನಲ್ಲಿ ಶ್ರೀಲಂಕಾ ಸಿಲುಕಿಕೊಂಡಿದೆ. ಈ ದ್ವೀಪ ರಾಷ್ಟ್ರ ಸ್ವಾತಂತ್ರ್ಯ ಪಡೆದ ನಂತರದಲ್ಲಿ ಮೊದಲ ಬಾರಿಗೆ ವಿದೇಶೀ ಸಾಲವನ್ನು ಪಾವತಿಸಲು ಸಾಧ್ಯವಾಗಿಲ್ಲ. ಗಾಲೆಯಲ್ಲಿ ಪ್ರತಿಭಟನೆಗಳಾಗುತ್ತಿವೆ. ರಾಜಧಾನಿಯಲ್ಲಿ ಪ್ರತಿಭಟನೆ ಏಳನೇ ದಿನಕ್ಕೆ ಕಾಲಿಟ್ಟಿದೆ. ದಿನದಿನಕ್ಕೂ ಯುವಜನರು ಭಾಗವಹಿಸುವುದು ಹೆಚ್ಚಾಗಿದೆ. ಇಂಥ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ನಿರ್ವಹಿಸಲು ಸಾಧ್ಯವಾಗದ ಕಾರಣಕ್ಕೆ ಅಧ್ಯಕ್ಷರಾದ ಗೊಟಬಯ ತಮ್ಮ ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಲಾಗಿದೆ,

ಸಾಮಾಜಿಕ ಜಾಲ ತಾಣಗಳಲ್ಲಿ ಅಭಿಯಾನಗಳು ನಡೆಯುತ್ತಿವೆ. ಇಡೀ ದೇಶದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಸಿಪಿಸಿ ಅಧ್ಯಕ್ಷ ಸುಮಿತ್ ವಿಜೆ ಸಿಂಘೆ ಕಳೆದ ವಾರ ಮಾತನಾಡಿ, ಶ್ರೀಲಂಕಾದ ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿಯ ಹೆಚ್ಚಿನ ಬೆಲೆಯಿಂದಾಗಿ ನಿಗಮಕ್ಕೆ ಒಂದು ದಿನಕ್ಕೆ 80 ಕೋಟಿಯಿಂದ 100 ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಸಿಪಿಸಿಗೆ ಒಂದು ಲೀಟರ್​ ಡೀಸೆಲ್​ಗೆ 110 ರೂಪಾಯಿ ಮತ್ತು ಪೆಟ್ರೋಲ್​ ಒಂದು ಲೀಟರ್​ಗೆ 52 ರೂಪಾಯಿ ನಷ್ಟ ಆಗುತ್ತಿದೆ ಎಂದು ವಿಜೆಸಿಂಘೆ ಹೇಳಿದ್ದಾರೆ, ಇನ್ನೂ ಮುಂದುವರಿದು, ಮತ್ತೊಂದು ತೈಲ ಸಾಲದ ಲೈನ್​ಗಾಗಿ ನಾವು ಭಾರತವನ್ನು 500 ಮಿಲಿಯನ್ ಡಾಲರ್​ಗಾಗಿ ಚರ್ಚಿಸಿದ್ದೇವೆ. ಶ್ರೀಲಂಕಾ ತೈಲ ಖರೀದಿಸಲಿ ಎಂಬ ಕಾರಣಕ್ಕರ ಕಳೆದ ತಿಂಗಳು ಭಾರತ 500 ಮಿಲಿಯನ್ ಯುಎಸ್​ಡಿ ನೀಡಿತ್ತು.

ಇದನ್ನೂ ಓದಿ: ನೀವು ಪ್ರತಿಭಟಿಸುತ್ತಿದ್ದಂತೆ ನಾವು ಡಾಲರ್‌ಗಳನ್ನು ಕಳೆದುಕೊಳ್ಳುತ್ತಿರುತ್ತೇವೆ: ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದ ಶ್ರೀಲಂಕಾ ಪ್ರಧಾನಿ

ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ