AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tata Chemicals: ಟಾಟಾ ಕೆಮಿಕಲ್ಸ್​​ಗೆ ಚಂದ್ರಶೇಖರನ್ ರಾಜೀನಾಮೆ; ನೂತನ ಛೇರ್ಮನ್ ಆಗಿ ಪದ್ಮನಾಭನ್

N Chandrashekaran to be replace by S Padmanabhan as Tata Chemicals Chairman: ಟಾಟಾ ಗ್ರೂಪ್​​ನ ಒಡೆಯ ಎನ್ ಚಂದ್ರಶೇಖರನ್ ಅವರು ಟಾಟಾ ಕೆಮಿಕಲ್ಸ್ ನಿರ್ದೇಶಕರ ಮಂಡಳಿಯಿಂದ ಹೊರಬರಲು ನಿರ್ಧರಿಸಿದ್ದಾರೆ. ತಮ್ಮ ಸ್ಥಾನಕ್ಕೆ ಇಂದು (ಮೇ 28) ಅವರು ರಾಜೀನಾಮೆ ನೀಡಿದ್ದಾರೆ. ಟಾಟಾ ಕೆಮಿಕಲ್ಸ್ ಮಂಡಳಿಯ ನಿರ್ದೇಶಕರಲ್ಲಿ ಒಬ್ಬರಾಗಿರುವ ಎಸ್ ಪದ್ಮನಾಭನ್ ಅವರು ಮೇ 30ರಂದು ನೂತನ ಛೇರ್ಮನ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

Tata Chemicals: ಟಾಟಾ ಕೆಮಿಕಲ್ಸ್​​ಗೆ ಚಂದ್ರಶೇಖರನ್ ರಾಜೀನಾಮೆ; ನೂತನ ಛೇರ್ಮನ್ ಆಗಿ ಪದ್ಮನಾಭನ್
ಎನ್ ಚಂದ್ರಶೇಖರನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 28, 2025 | 6:40 PM

Share

ನವದೆಹಲಿ, ಮೇ 28: ಟಾಟಾ ಸನ್ಸ್ ಛೇರ್ಮನ್ ಎನ್ ಚಂದ್ರಶೇಖರನ್ ಅವರು ಟಾಟಾ ಕೆಮಿಕಲ್ಸ್ ಸಂಸ್ಥೆಯ ನಿರ್ದೇಶಕ ಮತ್ತು ಛೇರ್ಮನ್ (Tata Chemicals board) ಸ್ಥಾನದಿಂದ ಕೆಳಗಿಳಿದಿದ್ದಾರೆ. ಮೇ 29ಕ್ಕೆ ಅವರು ಆ ಸ್ಥಾನದಿಂದ ಹೊರಬರಲಿದ್ದಾರೆ. ತಮ್ಮ ಇತರ ಜವಾಬ್ದಾರಿಗಳನ್ನು ಉಲ್ಲೇಖಿಸಿ ಚಂದ್ರಶೇಖರನ್ (N Chandrasekaran) ಅವರು ಟಾಟಾ ಕೆಮಿಕಲ್ಸ್​​ನ ಅತ್ಯುನ್ನತ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಕಂಪನಿಯ ನಿರ್ದೇಶಕರ ಮಂಡಳಿಯು ಇವರು ರಾಜೀನಾಮೆ ನೀಡಿರುವುದನ್ನು ಖಚಿತಪಡಿಸಿದೆ.

‘ನನ್ನ ಈಗಿನ ಮತ್ತು ಭವಿಷ್ಯದ ಜವಾಬ್ದಾರಿಗಳನ್ನು ಗಮನದಲ್ಲಿಟ್ಟುಕೊಂಡು ಬೋರ್ಡ್​​ನಿಂದ ಹೊರಬರಲು ನಿರ್ಧರಿಸಿದ್ದೇನೆ. ಟಾಟಾ ಕೆಮಿಕಲ್ಸ್ ಮಂಡಳಿಯ ಅಧ್ಯಕ್ಷ ಸ್ಥಾನ ಸಿಕ್ಕಿದ್ದು ನನ್ನ ಭಾಗ್ಯ. ನನ್ನ ಅವಧಿಯಲ್ಲಿ ನನಗೆ ಸಿಕ್ಕ ಬೆಂಬಲ ಮತ್ತು ಸಹಭಾಗಿತ್ವವನ್ನು ತುಂಬು ಹೃದಯದಿಂದ ಮೆಚ್ಚಿಕೊಳ್ಳುತ್ತಿದ್ದೇನೆ’ ಎಂದು ಎನ್ ಚಂದ್ರಶೇಖರನ್ ಅವರು ಇಂದು (ಮೇ 28) ಬೋರ್ಡ್​​ಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ಏಪ್ರಿಲ್​​ನಲ್ಲಿ ಐಐಪಿ ಶೇ. 2.7 ಹೆಚ್ಚಳ; ನಿರೀಕ್ಷೆಗಿಂತಲೂ ಹೆಚ್ಚು ಏರಿಕೆ ಕಂಡ ಔದ್ಯಮಿಕ ಉತ್ಪಾದನೆ

ಎಸ್ ಪದ್ಮನಾಭನ್ ಟಾಟಾ ಕೆಮಿಕಲ್ಸ್​​ಗೆ ಹೊಸ ಛೇರ್ಮನ್

ಎನ್ ಚಂದ್ರಶೇಖರನ್ ನಿರ್ಗಮನವಾಗುತ್ತಿರುವಂತೆಯೇ, ಟಾಟಾ ಕೆಮಿಕಲ್ಸ್ ಸಂಸ್ಥೆಯ ನೂತನ ಛೇರ್ಮನ್ ಆಗಿ ಎಸ್ ಪದ್ಮನಾಭನ್ ಅವರನ್ನು ನೇಮಕ ಮಾಡಲಾಗಿದೆ. ಮೇ 29 ಚಂದ್ರಶೇಖರನ್ ಅವರ ಕೊನೆಯ ಕಾರ್ಯದಿನವಾಗಿರುತ್ತದೆ. ಮೇ 30ರಿಂದ ನೂತನ ಛೇರ್ಮನ್ ಆಗಿ ಎಸ್ ಪದ್ಮನಾಭನ್ ಅಧಿಕಾರ ಪಡೆಯಲಿದ್ದಾರೆ.

ಸದ್ಯ ಟಾಟಾ ಕೆಮಿಕಲ್ಸ್ ನಿರ್ದೇಶಕರ ಮಂಡಳಿಯಲ್ಲಿ ಸದಸ್ಯರಾಗಿರುವ ಎಸ್ ಪದ್ಮನಾಭನ್ ಅವರು ಮೇ 30ರಂದು ಬೋರ್ಡ್ ಮುಖ್ಯಸ್ಥರಾಗಲಿದ್ದಾರೆ. ಟಾಟಾ ಕೆಮಿಕಲ್ಸ್ ಸಂಸ್ಥೆಯ ಛೇರ್ಮನ್ ಆಗಲಿದ್ದಾರೆ.

ಮೋದನ್ ಸಹಾ ಎಂಬುವವರನ್ನು ಮೇ 28ರಂದು ಚಾಲನೆಗೆ ಬರುವಂತೆ ಹೆಚ್ಚುವರಿ ನಿರ್ದೇಶಕರಾಗಿ ನೇಮಕ ಮಾಡಿಕೊಳ್ಳಲು ಕಂಪನಿ ಅನುಮೋದನೆ ನೀಡಿದೆ.

ಇದನ್ನೂ ಓದಿ: ಭಾರತಕ್ಕೆ ಎಷ್ಟು ಮಹತ್ವದ್ದು ಕಾವೇರಿ ಜೆಟ್ ಎಂಜಿನ್? ಚೀನಾಗೂ ಕಷ್ಟವಾಗಿರುವ ಈ ಸಿದ್ಧಿ ಪಡೆಯಲು ಸಫಲವಾಗುತ್ತಾ ಭಾರತ?

ಟಾಟಾ ಕೆಮಿಕಲ್ಸ್ ಮಂಡಳಿ ತೊರೆಯುತ್ತಿರುವ ಎನ್ ಚಂದ್ರಶೇಖರನ್ ಹಲವು ಕಾರಣಗಳಿಗೆ ಇತಿಹಾಸ ಸೃಷ್ಟಿಸಿದವರು. ಟಾಟಾ ಸನ್ಸ್​​ನ ಛೇರ್ಮನ್ ಆಗಿ ಹೊಸ ಅಧ್ಯಾಯವನ್ನೇ ಆರಂಭಿಸಿದರು. ಟಾಟಾ ಕುಟುಂಬದ ಹೊರಗಿನ ವ್ಯಕ್ತಿಯೊಬ್ಬರು ಟಾಟಾ ಸನ್ಸ್ ಛೇರ್ಮನ್ ಆಗಿದ್ದು ಅದೇ ಮೊದಲು.

ಟಾಟಾ ಸನ್ಸ್ ಎಂಬುದು ಬಹಳ ವ್ಯಾಪಕ ಉದ್ಯಮಗಳಿರುವ ಟಾಟಾ ಗ್ರೂಪ್​ ಅನ್ನು ನಿಯಂತ್ರಿಸುವ ಸಂಸ್ಥೆ. ಅಂದರೆ ಎನ್ ಚಂದ್ರಶೇಖರನ್ ಅವರು ಇಡೀ ಟಾಟಾ ಗ್ರೂಪ್ ಕಂಪನಿಗಳನ್ನು ನಿರ್ವಹಿಸುವ ಸ್ಥಾನದಲ್ಲಿದ್ದಾರೆ. 2017ರಿಂದಲೂ ಅವರು ಆ ಮಹತ್ವದ ಸ್ಥಾನದಲ್ಲಿರುವುದು ನಿಜಕ್ಕೂ ಗಮನಾರ್ಹ ಸಂಗತಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ