ಬಲು ದುಬಾರಿಯಾಗಲಿದೆ ವಿಮಾನ ಪ್ರಯಾಣ; ಜೆಟ್ ಫುಯಲ್ ಬೆಲೆ ಶೇ. 14ರಷ್ಟು ಹೆಚ್ಚಳ; ಕಿಮೀಗೆ 1.12 ಲಕ್ಷ ರೂ ಬೆಲೆ

|

Updated on: Sep 01, 2023 | 4:53 PM

ATF Price Hiked: ವಿಮಾನ ಪ್ರಯಾಣ ಇನ್ಮುಂದೆ ಇನ್ನಷ್ಟು ದುಬಾರಿಯಾಗಲಿದೆ. ಏವಿಯೇಶನ್ ಟರ್ಬೈನ್ ಫುಯೆಲ್ ಬೆಲೆ ಸತತ ಮೂರನೇ ಬಾರಿ ಹೆಚ್ಚಳಗೊಂಡಿದೆ. ತೈಲ ಕಂಪನಿಗಳು ಸೆಪ್ಟೆಂಬರ್ 1ರಂದು ಎಟಿಎಫ್ ಇಂಧನದ ಬೆಲೆಯನ್ನು ಶೇ. 14ರಷ್ಟು ಹೆಚ್ಚಿಸಿವೆ. ಇದರೊಂದಿಗೆ ನವದೆಹಲಿಯಲ್ಲಿ ಜೆಟ್ ಇಂಧನದ ಬೆಲೆ 1.12 ಲಕ್ಷ ರೂಗೆ ಹೆಚ್ಚಾಗಿದೆ. ಜುಲೈ ಮತ್ತು ಆಗಸ್ಟ್​ನಲ್ಲೂ ಜೆಟ್ ಇಂಧನದ ಬೆಲೆ ಕ್ರಮವಾಗಿ ಶೇ. 1.65 ಮತ್ತು ಶೇ. 8.5ರಷ್ಟು ಏರಿಕೆಯಾಗಿತ್ತು.

ಬಲು ದುಬಾರಿಯಾಗಲಿದೆ ವಿಮಾನ ಪ್ರಯಾಣ; ಜೆಟ್ ಫುಯಲ್ ಬೆಲೆ ಶೇ. 14ರಷ್ಟು ಹೆಚ್ಚಳ; ಕಿಮೀಗೆ 1.12 ಲಕ್ಷ ರೂ ಬೆಲೆ
ಜೆಟ್ ಇಂಧನ
Follow us on

ನವದೆಹಲಿ, ಸೆಪ್ಟೆಂಬರ್ 1: ಗೃಹಬಳಕೆ ಮತ್ತು ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್​ಗಳ ಬೆಲೆ ಇಳಿಕೆಯ ಭಾಗ್ಯ ಪಡೆದಿದ್ದ ಜನಸಾಮಾನ್ಯರಿಗೆ ವಿಮಾನ ಹಾರಾಟ (Flight Travel) ದುಬಾರಿಯಾಗಲಿದೆ. ವಿಮಾನಕ್ಕೆ ಬಳಸುವ ಏವಿಯೇಷನ್ ಟರ್ಬೈನ್ ಫುಯೆಲ್ (ATF) ಅಥವಾ ಜೆಟ್ ಇಂಧನದ (Jet Fuel) ಬೆಲೆಯನ್ನು ಸತತ ಮೂರನೇ ಬಾರಿಗೆ ಏರಿಕೆ ಮಾಡಲಾಗಿದೆ. ಅದೂ ಶೇ. 14ರಷ್ಟು ಬೆಲೆ ಹೆಚ್ಚಳ ಮಾಡಲಾಗಿದೆ. ಇದು ಭಾರತದ ವೈಮಾನಿಕ ಇತಿಹಾಸದಲ್ಲಿ ಇದೂವರೆಗೆ ಜೆಟ್ ಫುಯೆಲ್ ದರಕ್ಕೆ ಆಗಿರುವ ಗರಿಷ್ಠ ಬೆಲೆ ಏರಿಕೆಯಾಗಿದೆ. ಎಟಿಎಫ್ ಬೆಲೆಯನ್ನು ಕಿಲೋಮೀಟರ್​ಗೆ 13,911.07 ರೂನಷ್ಟು ಬೆಲೆ ಹೆಚ್ಚಿಸಲಾಗಿದೆ. ಇದರೊಂದಿಗೆ, ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಒಂದು ಕಿಲೋಮೀಟರ್​ಗೆ ಜೆಟ್ ಇಂಧನದ ಬೆಲೆ 1,12,419.33 ರೂ ಆಗಿದೆ.

ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲೂ ಎಟಿಫ್ ಬೆಲೆಗಳನ್ನು ಏರಿಸಲಾಗಿತ್ತು. ಅಗಸ್ಟ್ 1ರಂದು 7,728.38 ರೂ (ಶೇ. 8.5) ಮತ್ತು ಜುಲೈ 1ರಂದು 1,476.79 ರೂನಷ್ಟು (ಶೇ. 1.65) ಜೆಟ್ ಇಂಧನ ದುಬಾರಿಯಾಗಿತ್ತು. ಸತತ ಮೂರು ಬಾರಿ ಬೆಲೆ ಏರಿಕೆಯಲ್ಲಿ ಎಟಿಎಫ್ ಬೆಲೆ 23,116.24 ರೂನಷ್ಟು ದುಬಾರಿಯಾಗಿದೆ.

ಮೂರು ವರ್ಷಗಳ ಹಿಂದೆ (2020 ಜೂನ್ 24) ನವದೆಹಲಿಯಲ್ಲಿ ಜೆಟ್ ಇಂಧನದ ಬೆಲೆ ಪ್ರತೀ ಕಿಲೋಮೀಟರ್​ಗೆ 39,069.87 ರೂ ಇತ್ತು. ಕಳೆದ ಮೂರು ವರ್ಷದಲ್ಲಿ 70,000ಕ್ಕೂ ಹೆಚ್ಚು ರೂಗಳಷ್ಟು ಬೆಲೆ ಹೆಚ್ಚಾದಂತಾಗಿದೆ.

ಇದನ್ನೂ ಓದಿ: ಬಿಲ್ ಪಡೆದು ಅಪ್​ಲೋಡ್ ಮಾಡಿ, ಬಹುಮಾನ ಗೆಲ್ಲಿ; ಮೇರಾ ಬಿಲ್ ಮೇರಾ ಅಧಿಕಾರ್ ಸ್ಕೀಮ್ ಇವತ್ತಿನಿಂದ

ಜೆಟ್ ಇಂಧನದ ಬೆಲೆ ಕಿಲೋಮೀಟರ್ ಲೆಕ್ಕದಲ್ಲಿ ಹೇಗೆ?

ಈಗ ಒಂದು ಕಿಲೋಮೀಟರ್​ಗೆ ಜೆಟ್ ಇಂಧನದ ಬೆಲೆ 1,12,419.33 ರೂ ಆಗಿದೆ. ವಿಮಾನ ಒಂದು ಕಿಲೋಮೀಟರ್ ಸಾಗಲು ಆಗುವ ಇಂಧನ ವೆಚ್ಚ ಇದು. ಆದರೆ, ಸರಳವಾಗಿ ಲೀಟರ್ ಲೆಕ್ಕದಲ್ಲಿ ಹೇಳುವುದಾದರೆ ಒಂದು ಲೀಟರ್​ಗೆ 112 ರೂ ಬೆಲೆ ಆಗುತ್ತದೆ.

ಒಂದು ವಿಮಾನಕ್ಕೆ ಎಷ್ಟು ಇಂಧನ ಬೇಕಾಗುತ್ತದೆ?

ಬಸ್ಸು, ಕಾರು ಇತ್ಯಾದಿ ವಾಹನಗಳು ವಿಭಿನ್ನ ಮೈಲೇಜ್ ಕೊಡುವಂತೆ ವಿಮಾನಗಳ ಇಂಧನ ಬಳಕೆಯಲ್ಲೂ ವ್ಯತ್ಯಯಗಳಾಗುತ್ತವೆ. ಏರ್​ಬಸ್ ಕೊಡುವ ಮೈಲೇಜ್ ಬೇರೆ ಇರುತ್ತದೆ, ಬೋಯಿಂಗ್ ಕಂಪನಿಯ ವಿಮಾನಗಳು ನೀಡುವ ಮೈಲೇಜ್ ಬೇರೆ ಇರುತ್ತದೆ. ವಿಮಾನದಲ್ಲಿರುವ ಪ್ರಯಾಣಿಕ ಸಂಖ್ಯೆಯೂ ಮೈಲೇಜ್ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: ಹೊಸ ಇನ್ಕಮ್ ಟ್ಯಾಕ್ಸ್ ಪೋರ್ಟಲ್; 5 ಹೊಸ ಫೀಚರ್ಸ್; ಇನ್ನಷ್ಟು ಸರಳ, ಸುಂದರ, ಬಳಕೆಸ್ನೇಹಿ

ಉದಾಹರಣೆಗೆ ಬೆಂಗಳೂರಿನಿಂದ ಮುಂಬೈ ಮಧ್ಯೆ 850 ಕಿಮೀ ಇದೆ. ವಿಮಾನ ಸಾಗಲು ಸುಮಾರು ಒಂದೂಮುಕ್ಕಾಲು ಗಂಟೆ ಬೇಕಾಗುತ್ತದೆ. ಅದೇ ಮುಂಬೈನಿಂದ ದೆಹಲಿಗೆ 1,200 ಕಿಮೀ ದೂರವನ್ನು ತಲುಪಲು 2 ಗಂಟೆ ಬೇಕಾಗಬಹುದು ಎಂದು ಭಾವಿಸೋಣ. ಗಂಟೆಗೆ 600 ಕಿಮೀ ವೇಗದಲ್ಲಿ ವಿಮಾನ ಓಡುತ್ತದೆ ಎಂದಿಟ್ಟುಕೊಂಡರೆ, ನಿಮಿಷಕ್ಕೆ 10 ಕಿಮೀ ಆಗುತ್ತದೆ.

ಏರ್​ಬಸ್​ನ ಒಂದು ಮಧ್ಯಮಗಾತ್ರದ ವಿಮಾನವು 192 ಸೀಟುಗಳನ್ನು ಹೊಂದಿದ್ದು ಭರ್ತಯಾಗಿ ಸಾಗಿದರೆ ಒಂದು ಕಿಲೋಮೀಟರ್​ಗೆ 4.18 ಲೀಟರ್​ಗಳಷ್ಟು ಇಂಧನವನ್ನು ಬಳಸುತ್ತದೆ. ಒಂದು ಗಂಟೆಗೆ 2,508 ಲೀಟರ್ ಇಂಧನ ವ್ಯಯವಾಗುತ್ತದೆ.

ಇನ್ನು, ಬೋಯಿಂಗ್ 747 ವಿಮಾನದ ವಿಚಾರಕ್ಕೆ ಬಂದರೆ ಇದು ಗಂಟೆಗೆ 14,400 ಲೀಟರ್ ಇಂಧನ ಬಳಸುತ್ತದೆ. ಒಂದು ಕಿಲೋಮೀಟರ್​ಗೆ ಇದು 12 ಲೀಟರ್ ಎಟಿಎಫ್ ಬಳಸುತ್ತದೆ. ಅಂದರೆ ಏರ್​ಬಸ್​ಗಿಂತ ಹೆಚ್ಚೂಕಡಿಮೆ ಮೂರು ಪಟ್ಟು ಹೆಚ್ಚು ಇಂಧನ ಬಳಸುತ್ತದೆ. ಆದರೆ, ಪ್ರಯಾಣಿಕರ ಸಂಖ್ಯೆ 568ರವರೆಗೂ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ