ಎರಡು ವಾರದಲ್ಲಿ ಶೇ. 33ರಷ್ಟು ಕುಸಿತ ಕಂಡ ಜೆಟಿಎಲ್ ಷೇರು; ಇದನ್ನು ಖರೀದಿಸಲು ಸಕಾಲವಾ? ತಜ್ಞರ ಸಲಹೆ ಇದು

|

Updated on: Mar 12, 2024 | 1:01 PM

JTL Industries Shares: ಸ್ಟೀಲ್ ಮತ್ತು ಐರನ್ ಉದ್ಯಮ ವಲಯಕ್ಕೆ ಸೇರಿದ ಜೆಟಿಎಲ್ ಇಂಡಸ್ಟ್ರೀಸ್​ನ ಷೇರು ಬೆಲೆ ಕಳೆದ ಕೆಲ ದಿನಗಳಿಂದ ಸತತವಾಗಿ ಇಳಿಯುತ್ತಿದೆ. 278 ರೂನ ಗರಿಷ್ಠ ಮಟ್ಟದಿಂದ ಇದೀಗ 170 ರೂಗೆ ಕುಸಿತ ಕಂಡಿದೆ. ಜೆಟಿಎಲ್ ಇಂಡಸ್ಟ್ರೀಸ್​ನ ಇತ್ತೀಚಿನ ತ್ರೈಮಾಸಿಕ ವರದಿಯಲ್ಲಿ ಅದರ ಮಾರಾಟ ಮತ್ತು ನಿವ್ವಳ ಲಾಭದಲ್ಲಿ ಗಣನೀಯ ಹೆಚ್ಚಳವಾಗಿದೆ. ಆದರೂ ಕೂಡ ಷೇರುಬಲೆ ಕುಸಿಯುತ್ತಿರುವುದು ಅಚ್ಚರಿ ಮೂಡಿಸಿದೆ. ಈ ಕುಸಿತದ ನಡುವೆ ಜೆಟಿಎಲ್ ತಿರುಗಿ ನಿಲ್ಲಬಲ್ಲುದಾ?

ಎರಡು ವಾರದಲ್ಲಿ ಶೇ. 33ರಷ್ಟು ಕುಸಿತ ಕಂಡ ಜೆಟಿಎಲ್ ಷೇರು; ಇದನ್ನು ಖರೀದಿಸಲು ಸಕಾಲವಾ? ತಜ್ಞರ ಸಲಹೆ ಇದು
ಜೆಟಿಎಲ್ ಇಂಡಸ್ಟ್ರೀಸ್
Follow us on

ನವದೆಹಲಿ, ಮಾರ್ಚ್ 12: ಕಬ್ಬಿಣ ಮತ್ತು ಉಕ್ಕು ಕ್ಷೇತ್ರದ ಪ್ರಮುಖ ಕಂಪನಿಯಾದ ಜೆಟಿಎಲ್ ಇಂಡಸ್ಟ್ರೀಸ್​ನ ಷೇರುಬೆಲೆ (JTL Industries share price) ಕಳೆದ 12 ದಿನಗಳಿಂದ ಸಾಕಷ್ಟು ಇಳಿಕೆ ಕಾಣುತ್ತಿದೆ. ಮಾರ್ಚ್ 1ರಿಂದೀಚೆ ಶೇ. 30ಕ್ಕೂ ಹೆಚ್ಚು ಕುಸಿತ ಕಂಡಿದೆ. ಅಂದು 259 ರೂ ಇದ್ದ ಅದರ ಬೆಲೆ ಇದೀಗ 170 ರೂಗೆ ಬಂದು ಇಳಿದಿದೆ. ಕಳೆದ ತಿಂಗಳು ಇದರ ಬೆಲೆ 278 ರೂಗೆ ಏರಿತ್ತು. ಆದರೆ, ಸತತವಾಗಿ ಇದರ ಬೆಲೆ ಇಳಿಮುಖವಾಗುತ್ತಿದೆ. ಇತ್ತಿಚಿನ ಕೆಲ ದಿನಗಳಲ್ಲಿ ಬಿಎಸ್​ಇ ಸ್ಮಾಲ್ ಕ್ಯಾಪ್ ಇಂಡೆಕ್ಸ್ ಒಟ್ಟಾರೆಯಾಗಿ ಕುಸಿತ ಕಂಡಿತ್ತು. ಇದರ ಭಾಗವಾಗಿ ಜೆಟಿಎಲ್ ಇಂಡಸ್ಟ್ರೀಸ್​ನ ಷೇರು ಕೂಡ ಕುಸಿತ ಕಂಡಿರಬಹುದು ಎಂಬ ಒಂದು ಕಾರಣ ನೀಡಲಾಗುತ್ತಿದೆ. ಆದರೆ, ಸತತವಾಗಿ ಬೆಲೆ ಇಳಿಮುಖವಾಗುತ್ತಿರುವುದು ಆತಂಕದ ಸಂಗತಿ ಎಂದೂ ಹಲವು ತಜ್ಞರು ಎಚ್ಚರಿಸಿದ್ದಾರೆ.

ಜೆಟಿಎಲ್ ಇಂಡಸ್ಟ್ರೀಸ್ ಸಂಸ್ಥೆ ಸ್ಟೀಲ್ ಟ್ಯೂಬ್, ಪೈಪ್ ಇತ್ಯಾದಿ ಉತ್ಪನ್ನಗಳನ್ನು ತಯಾರಿಸುತ್ತದೆ. ಸದ್ಯ ವರ್ಷಕ್ಕೆ 5.9 ಲಕ್ಷ ಮೆಟ್ರಿಕ್ ಟನ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. 2025ರಲ್ಲಿ ಇದನ್ನು 10 ಲಕ್ಷಕ್ಕೆ ಹೆಚ್ಚಿಸುವ ಗುರಿ ಹೊಂದಿದೆ.

ಇತ್ತೀಚೆಗೆ ಕಂಪನಿ ತನ್ನ ಎಲ್ಲಾ ಸಾಲವನ್ನೂ ತೀರಿಸಿ ಸಾಲಮುಕ್ತವಾಗಿದೆ. ಮುಂದಿನ ದಿನಗಳಲ್ಲಿ ಡಿಎಫ್​ಟಿ ತಂತ್ರಜ್ಞಾನದ ಯಂತ್ರಗಳನ್ನು ಪಡೆಯಲಿದ್ದು, ಹೊಸ ಉತ್ಪನ್ನಗಳನ್ನು ತಯಾರಿಸಲು ಅನುಕೂಲವಾಗಲಿದೆ. ಡಿಸೆಂಬರ್ ಅಂತ್ಯದ ಕ್ವಾರ್ಟರ್​ನಲ್ಲಿ ಅದರ ಮಾರಾಟ ಪ್ರಮಾಣ ಶೇ. 76ರಷ್ಟು ಏರಿದೆ. ಅದರ ತ್ರೈಮಾಸಿಕ ನಿವ್ವಳ ಲಾಭ ಶೇ. 47ರಷ್ಟು ಹೆಚ್ಚಾಗಿದೆ ಎನ್ನುವಂತಹ ಸಕಾರಾತ್ಮಕ ವರದಿಗಳಿವೆ.

ಇದನ್ನೂ ಓದಿ: ಬಿಟ್​ಕಾಯಿನ್ 72,000 ಡಾಲರ್ ಮೈಲಿಗಲ್ಲು; ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಕ್ರಿಪ್ಟೋ; ಯಾಕಿಷ್ಟು ಏರಿಕೆ ಆಗುತ್ತಿದೆ? ಇಲ್ಲಿದೆ ಕಾರಣ

ಇಷ್ಟಾದರೂ ಜೆಟಿಎಲ್ ಇಂಡಸ್ಟ್ರೀಸ್​ನ ಷೇರುಬೆಲೆ ಸತತವಾಗಿ ಇಳಿಕೆ ಕಾಣುತ್ತಿರುವುದು ಗಮನಾರ್ಹ ಸಂಗತಿ. ಈ ಕುಸಿತ ತಾತ್ಕಾಲಿಕ ಮಾತ್ರ. ಷೇರು ಮತ್ತೆ ಬೇಡಿಕೆ ಕುದುರಿಸಿಕೊಳ್ಳಲಿದೆ ಎಂದು ಕೆಲ ತಜ್ಞರು ಸಕಾರಾತ್ಮಕವಾಗಿ ಹೇಳುತ್ತಿದ್ದಾರೆ.

ಆದರೆ, ಜೆಟಿಎಲ್ ಇಂಡಸ್ಟ್ರೀಸ್ ಷೇರು ಹೀಗೆ ಕುಸಿಯುತ್ತಿರುವುದು ಒಳ್ಳೆಯ ಲಕ್ಷಣವಲ್ಲ. ಇದು ಇನ್ನಷ್ಟು ಕುಸಿತ ಕಾಣಬಹುದು. ಉಕ್ಕು ಉತ್ಪನ್ನಗಳ ಕ್ಷೇತ್ರದಲ್ಲಿ ಬೇರೆ ಕಂಪನಿಗಳಿಗೆ ಹೋಲಿಸಿದರೆ ಇದು ಗಳಿಸುತ್ತಿರುವ ಲಾಭ ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಈ ಕಾರಣಕ್ಕೆ ಬೇರೆ ಉಕ್ಕು ಕಂಪನಿಗಳ ಷೇರುಗಳತ್ತ ಹೂಡಿಕೆದಾರರು ವಾಲುತ್ತಿರಬಹುದು.

ಇದನ್ನೂ ಓದಿ: ವಹಿವಾಟಿನಲ್ಲಿ ಸ್ಥಳೀಯ ಕರೆನ್ಸಿ ಬಳಕೆಗೆ ಉತ್ತೇಜಿಸಲು ಭಾರತ, ಇಂಡೋನೇಷ್ಯಾ ಸೆಂಟ್ರಲ್ ಬ್ಯಾಂಕುಗಳ ಒಪ್ಪಂದ

ಸದ್ಯ ಜೆಟಿಎಲ್ ಇಂಡಸ್ಟ್ರೀಸ್ ಷೇರು ಬೆಲೆ 200 ರೂ ಒಳಗಿದೆ. ರಿಸ್ಕ್ ತೆಗೆದುಕೊಂಡು ಇದರ ಮೇಲೆ ಹೂಡಿಕೆ ಮಾಡಬಹುದು ಎಂದು ಮೇಲ್ನೋಟಕ್ಕೆ ತೋರುತ್ತದೆ. ಆದರೆ, ಇದರ ಮೇಲೆ ಹೂಡಿಕೆ ಮಾಡುವ ಮುನ್ನ ತಜ್ಞರೊಬ್ಬರನ್ನು ಸಂಪರ್ಕಿಸಿ ಹೆಚ್ಚಿನ ಅವಲೋಕನ ಮಾಡುವುದು ಸರಿಯಾದ ಕ್ರಮ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ