Karnataka GST ತೆರಿಗೆಯಲ್ಲಿ ಕರ್ನಾಟಕ ಮೇಲುಗೈ; ಕಳೆದ 6 ತಿಂಗಳ ಜಿಎಸ್​ಟಿ ಕಲೆಕ್ಷನ್ಸ್ ಹೇಗಿದೆ? ಯುಪಿ, ಹರ್ಯಾಣದಲ್ಲಿ ಅಧಿಕ ತೆರಿಗೆ ಸಂಗ್ರಹದ ಸೀಕ್ರೆಟ್ ಏನು?

|

Updated on: May 02, 2023 | 11:10 AM

GST Collection Month Wise: ಭಾರತದಲ್ಲಿ ಉತ್ತಮ ಆರ್ಥಿಕತೆ ಇರುವ ರಾಜ್ಯಗಳಲ್ಲಿ ಕರ್ನಾಟಕ ಪ್ರಧಾನವಾಗಿ ಕಾಣುತ್ತದೆ. ಜಿಎಸ್​ಟಿ ಸಂಗ್ರಹದಲ್ಲಿ ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕದಲ್ಲೇ ಅತಿ ಹೆಚ್ಚು. ಕಳೆದ 7 ತಿಂಗಳಿಂದ ಕರ್ನಾಟಕ 10,000 ಕೋಟಿ ರೂಗೂ ಹೆಚ್ಚು ಜಿಎಸ್​ಟಿ ಕಲೆಕ್ಷನ್ಸ್ ಕಾಣುತ್ತಿದೆ. ಈ ಬಗ್ಗೆ ಒಂದು ವರದಿ.

Karnataka GST ತೆರಿಗೆಯಲ್ಲಿ ಕರ್ನಾಟಕ ಮೇಲುಗೈ; ಕಳೆದ 6 ತಿಂಗಳ ಜಿಎಸ್​ಟಿ ಕಲೆಕ್ಷನ್ಸ್ ಹೇಗಿದೆ? ಯುಪಿ, ಹರ್ಯಾಣದಲ್ಲಿ ಅಧಿಕ ತೆರಿಗೆ ಸಂಗ್ರಹದ ಸೀಕ್ರೆಟ್ ಏನು?
ಜಿಎಸ್​ಟಿ
Follow us on

ಬೆಂಗಳೂರು: ಸರ್ಕಾರದ ಪ್ರಮುಖ ಆದಾಯ ಮೂಲಗಳಲ್ಲೊಂದಾಗಿರುವ ಜಿಎಸ್​ಟಿ 2023ರ ಏಪ್ರಿಲ್ ತಿಂಗಳಲ್ಲಿ ಭರಪೂರ ಕಲೆಕ್ಷನ್ಸ್ ಕಂಡಿದೆ. 1.87 ಲಕ್ಷ ಕೋಟಿ ರೂನಷ್ಟು ಜಿಎಸ್​ಟಿ ತೆರಿಗೆ (GST) ಏಪ್ರಿಲ್​ನಲ್ಲಿ ಸಂಗ್ರಹವಾಗಿದೆ. ಇದು ಯಾವುದೇ ವರ್ಷದ ಯಾವುದೇ ತಿಂಗಳಲ್ಲಿ ಭಾರತದಲ್ಲಿ ಶೇಖರಣೆಯಾದ ಅತಿಹೆಚ್ಚು ಜಿಎಸ್​ಟಿ ತೆರಿಗೆಯಾಗಿದೆ. ದೇಶದ ತೆರಿಗೆ ಪಾಲಿನಲ್ಲಿ ಕರ್ನಾಟಕದ್ದೂ ಬಹಳಷ್ಟು ಇದೆ. 2023 ಏಪ್ರಿಲ್​ನಲ್ಲಿ ಕರ್ನಾಟಕ ಕೂಡ ಅತಿಹೆಚ್ಚು ಜಿಎಸ್​ಟಿ ಕಲೆಕ್ಷನ್ಸ್ ಮಾಡಿದೆ. ಕರ್ನಾಟಕದಿಂದ 14,593 ಕೋಟಿ ಜಿಎಸ್​ಟಿ ಸಂಗ್ರಹವಾಗಿದೆ. ಈ ಏಪ್ರಿಲ್​ನಲ್ಲಿ ಆರು ರಾಜ್ಯಗಳು 10,000 ಕೋಟಿ ರೂಗಿಂತ ಹೆಚ್ಚು ಜಿಎಸ್​ಟಿ ಸಂಗ್ರಹ ಮಾಡಿವೆ. ಇದು ದಾಖಲೆಯೇ. ಮಹಾರಾಷ್ಟ್ರ ಮತ್ತು ಕರ್ನಾಟಕ ಬಿಟ್ಟರೆ ಬೇರೆ ಯಾವುದೇ ರಾಜ್ಯ ಜಿಎಸ್​ಟಿ ಕಲೆಕ್ಷನ್​ನಲ್ಲಿ 10,000 ಕೋಟಿ ರೂ ಗಡಿ ದಾಟಿದ್ದು ಅದೇ ಮೊದಲು. ಮಹಾರಾಷ್ಟ್ರ, ಕರ್ನಾಟಕ, ಗುಜರಾತ್, ತಮಿಳುನಾಡು, ಉತ್ತರಪ್ರದೇಶ ಮತ್ತು ಹರ್ಯಾಣ ರಾಜ್ಯಗಳು ಏಪ್ರಿಲ್ ತಿಂಗಳಲ್ಲಿ 10,000ಕ್ಕೂ ಹೆಚ್ಚು ಜಿಎಸ್​ಟಿ ಕಲೆಕ್ಷನ್ಸ್ ಮಾಡಿವೆ.

ಜಿಎಸ್​ಟಿ ತೆರಿಗೆಯಲ್ಲಿ ಮಹಾರಾಷ್ಟ್ರವೇ ಯಾವಾಗಲೂ ನಂಬರ್ ಒನ್. ವಾಣಿಜ್ಯ ನಗರಿ ಮುಂಬೈನಿಂದಾಗಿ ಮಹಾರಾಷ್ಟ್ರ ಅತಿಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯವಾಗಿದೆ. ಕರ್ನಾಟಕ ಬಹುತೇಕ ಯಾವಾಗಲೂ ಜಿಎಸ್​ಟಿ ಕಲೆಕ್ಷನ್​ನಲ್ಲಿ ಎರಡನೇ ಸ್ಥಾನದಲ್ಲಿರುವ ರಾಜ್ಯ. ಕಳೆದ 7 ತಿಂಗಳಿಂದಲೂ, ಅಂದರೆ 2022 ಅಕ್ಟೋಬರ್ ತಿಂಗಳಿಂದಲೂ ಕರ್ನಾಟಕ 10,000 ಕೋಟಿ ರೂಪಾಯಿಗೂ ಹೆಚ್ಚು ಜಿಎಸ್​ಟಿ ಸಂಗ್ರಹ ಮಾಡುತ್ತಿದೆ. ತಮಿಳುನಾಡು, ಗುಜರಾತ್, ಉತ್ತರಪ್ರದೇಶ ಮತ್ತು ಹರ್ಯಾಣ ರಾಜ್ಯಗಳೂ ಹೆಚ್ಚು ಜಿಎಸ್​ಟಿ ಸಂಗ್ರಹಿಸುತ್ತವೆ.

ಇದನ್ನೂ ಓದಿGST Record: ಏಪ್ರಿಲ್ ಒಂದೇ ತಿಂಗಳಲ್ಲಿ 1.87 ಲಕ್ಷ ಕೋಟಿ ರೂ ಜಿಎಸ್​​ಟಿ ಕಲೆಕ್ಷನ್; ಸಾರ್ವಕಾಲಿಕ ದಾಖಲೆ, ಕರ್ನಾಟಕ ನಂ. 2

ಕರ್ನಾಟಕದ ಆರೇಳು ತಿಂಗಳ ಹಿಂದಿನ ಜಿಎಸ್​ಟಿ ಸಂಗ್ರಹ

  • 2023ರ ಏಪ್ರಿಲ್: 14,593 ಕೋಟಿ ರೂ
  • 2023ರ ಮಾರ್ಚ್: 10,360 ಕೋಟಿ ರೂ
  • 2023ರ ಫೆಬ್ರುವರಿ: 10,809 ಕೋಟಿ ರೂ
  • 2023ರ ಜನವರಿ: 11,317 ಕೋಟಿ ರೂ
  • 2022ರ ಡಿಸೆಂಬರ್: 10,061 ಕೋಟಿ ರೂ
  • 2022ರ ನವೆಂಬರ್: 10,238 ಕೋಟಿ ರೂ
  • 2022ರ ಅಕ್ಟೋಬರ್: 10,996 ಕೋಟಿ ರೂ

ಇದನ್ನೂ ಓದಿATM Frauds: ಎಟಿಎಂ ಕಾರ್ಡ್ ಖದೀಮರಿದ್ದಾರೆ ಹುಷಾರ್; ನೋಡನೋಡುತ್ತಿದ್ದಂತೆಯೇ ಹಣ ಮಾಯ; ವಂಚಕರ ತಂತ್ರಗಳೇನು ತಿಳಿದಿರಿ

ಉತ್ತರಪ್ರದೇಶ ಮತ್ತು ಹರ್ಯಾಣದಲ್ಲಿ ಜಿಎಸ್​ಟಿ ಕಲೆಕ್ಷನ್ಸ್ ಹೆಚ್ಚು ಹೇಗಿದೆ?

ಜಿಎಸ್​ಟಿ ಸಂಗ್ರಹದಲ್ಲಿ ದೇಶದ ಟಾಪ್ ರಾಜ್ಯಗಳ ಪಟ್ಟಿಯಲ್ಲಿ ಉತ್ತರಪ್ರದೇಶ ಮತ್ತು ಹರ್ಯಾಣ ಇರುವುದನ್ನು ನೀವು ಗಮನಿಸಿರಬಹುದು. ಇವೆರಡು ರಾಜ್ಯಗಳ ಹೆಸರು ಕಂಡು ಯಾರಿಗಾದರೂ ಅಚ್ಚರಿ ಎನಿಸಬಹುದು. ಉತ್ತರಪ್ರದೇಶ ದೇಶದ ಅತಿದೊಡ್ಡ ರಾಜ್ಯವಾದರೂ ಈಗಲೂ ತುಸು ಹಿಂದುಳಿದಿರುವ ಸ್ಥಿತಿಯಲ್ಲಿರುವ ಪ್ರದೇಶವೇ. ಉತ್ತರಪ್ರದೇಶ ಮತ್ತು ಹರ್ಯಾಣ ರಾಜ್ಯಗಳ ಜಿಎಸ್​ಟಿ ಕಲೆಕ್ಷನ್ಸ್ ಮೇಲ್ಮಟ್ಟದಲ್ಲಿರುವ ಕಾರಣವಾಗಿರುವುದು ನವದೆಹಲಿ.

ಬೆಂಗಳೂರಿನ ಸಮೀಪದಲ್ಲಿರುವ ಹೊಸೂರು ಹೇಗೆ ದೊಡ್ಡ ಕೈಗಾರಿಕಾ ಪ್ರದೇಶವಾಗಿ ಬೆಳೆದು ತಮಿಳುನಾಡಿನ ಆರ್ಥಿಕತೆಗೆ ಪುಷ್ಟಿ ಕೊಡುತ್ತಿದೆಯೋ ಅದೇ ರೀತಿ ರಾಷ್ಟ್ರ ರಾಜಧಾನಿ ಸಮೀಪ ನೆಲಸಿರುವ ಹಲವು ಉದ್ಯಮಗಳು, ಕೈಗಾರಿಕೆಗಳು ಉತ್ತರಪ್ರದೇಶ ಮತ್ತು ಹರಿಯಾಣದ ವ್ಯಾಪ್ತಿಗೆ ಬರುತ್ತವೆ. ನೋಯ್ಡಾ, ಘಾಜಿಯಾಬಾದ್ ಪ್ರದೇಶಗಳು ಯುಪಿಗೆ ಸೇರುತ್ತವೆ. ಗುರುಗ್ರಾಮ್ ನಗರ ಹರ್ಯಾಣಕ್ಕೆ ಸೇರುತ್ತವೆ. ನವದೆಹಲಿ ನಗರಕ್ಕೆ ಸಮೀಪ ಎಂಬ ಕಾರಣಕ್ಕೆ ಸುತ್ತಮುತ್ತಲ ಪ್ರದೇಶಗಳಲ್ಲಿ ಕೈಗಾರಿಕೆಗಳು ವಿಸ್ತರಿಸಿವೆ.

ಇನ್ನಷ್ಟು ವಾಣಿಜ್ಯ ಮತ್ತು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ