ಗಮನ ಸೆಳೆಯುತ್ತಿದೆ ಕರ್ನಾಟಕದ ಐಟಿ, ಸ್ಪೇಸ್​ಟೆಕ್, ಸ್ಟಾರ್ಟಪ್ ನೀತಿಗಳು; ಬೆಂಗಳೂರಿನಲ್ಲಿ ದಟ್ಟಣೆ ತಪ್ಪಿಸಲೂ ಕ್ರಮ

Karnataka's new policies on IT, SpaceTech and startups: ಕರ್ನಾಟಕ ಸರ್ಕಾರ ಬೆಂಗಳೂರು ಟೆಕ್ ಸಮಿಟ್​ನಲ್ಲಿ ಮೂರು ಪ್ರಮುಖ ನೀತಿಗಳನ್ನು ಅನಾವರಣಗೊಳಿಸಿದೆ. ಹೊಸ ಐಟಿ ನೀತಿ, ಸ್ಪೇಸ್​ಟೆಕ್ ನೀತಿ ಮತ್ತು ಸ್ಟಾರ್ಟಪ್ ನೀತಿಗಳನ್ನು ಜಾರಿಗೆ ತರಲು ಹೊರಟಿದೆ. ಈ ಮೂರೂ ಕ್ಷೇತ್ರಗಳಲ್ಲಿ ತನ್ನ ಮುಂಚಣಿ ಸ್ಥಾನ ಉಳಿಸಿಕೊಂಡು ಮುಂದುವರಿಯಲು ಈ ನೀತಿ ಸಹಾಯಕವಾಗುವ ನಿರೀಕ್ಷೆ ಇದೆ.

ಗಮನ ಸೆಳೆಯುತ್ತಿದೆ ಕರ್ನಾಟಕದ ಐಟಿ, ಸ್ಪೇಸ್​ಟೆಕ್, ಸ್ಟಾರ್ಟಪ್ ನೀತಿಗಳು; ಬೆಂಗಳೂರಿನಲ್ಲಿ ದಟ್ಟಣೆ ತಪ್ಪಿಸಲೂ ಕ್ರಮ
ಕರ್ನಾಟಕ

Updated on: Nov 21, 2025 | 5:55 PM

ಬೆಂಗಳೂರು, ನವೆಂಬರ್ 21: ಜನಸಂಖ್ಯೆ, ವಾಹನ ಮತ್ತು ಉದ್ಯಮಗಳ ದಟ್ಟಣೆಯಿಂದ ಬಳಲುತ್ತಿರುವ ಬೆಂಗಳೂರಿಗೆ ಒತ್ತಡ ಕಡಿಮೆ ಮಾಡಲು ರಾಜ್ಯ ಸರ್ಕಾರ ಗಂಭೀರ ಪ್ರಯತ್ನಗಳನ್ನು ಮಾಡುತ್ತಿದೆ. ಬೆಂಗಳೂರಿನಿಂದ ಹೊರಗೆ, ಕರ್ನಾಟಕದ (Karnataka) ಇತರ ಭಾಗಗಳಿಗೆ ಸ್ಟಾರ್ಟಪ್​ಗಳನ್ನು (startups) ನೆಲೆಗೊಳಿಸುವ ದೃಷ್ಟಿಯಲ್ಲಿ ನೀತಿಗಳನ್ನು ರೂಪಿಸಿದೆ. ಬೆಂಗಳೂರು ಹೊರಗೆ ಸ್ಥಾಪನೆಯಾಗುವ ಸ್ಟಾರ್ಟಪ್​ಗಳಿಗೆ ನಾನಾ ರೀತಿಯ ಉತ್ತೇಜನಗಳನ್ನು ಸರ್ಕಾರ ಒದಗಿಸಲು ಸಿದ್ಧವಿದೆ. ಬೆಂಗಳೂರಿನಿಂದ ಹೊರಗೆ ಉದ್ಯೋಗ ಮಾಡಲು ವರ್ಗಾವಣೆ ಆಗುವ ವ್ಯಕ್ತಿಗೂ 50,000 ರೂ ನೀಡಲು ಸರ್ಕಾರ ಸಿದ್ಧವಾಗಿದೆ.

ಬೆಂಗಳೂರು ಟೆಕ್ ಸಮಿಟ್​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಮೂರು ಪ್ರಮುಖ ನೀತಿಗಳನ್ನು ಬಿಡುಗಡೆ ಮಾಡಿದ್ದಾರೆ. 2025-30ರ ಕರ್ನಾಟಕದ ಐಟಿ ನೀತಿ, ಬಾಹ್ಯಾಕಾಶ ತಂತ್ರಜ್ಞಾನ ನೀತಿ, ಮತ್ತು ಸ್ಟಾರ್ಟಪ್ ನೀತಿಗಳನ್ನು ಸರ್ಕಾರ ಅನಾವರಣಗೊಳಿಸಿದೆ. ಐಟಿ, ಸ್ಪೇಸ್ ಮತ್ತು ಸ್ಟಾರ್ಟಪ್ ಸೆಕ್ಟರ್​ಗಳಲ್ಲಿ ರಾಜ್ಯದ ನಾಯಕತ್ವ ಸ್ಥಾನವನ್ನು ಉಳಿಸಿಕೊಂಡು ಹೋಗಲು ಈ ನೀತಿಗಳು ಸಹಕಾರಿಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಕಾರ್ಮಿಕ ಕ್ಷೇತ್ರದಲ್ಲಿ ದೊಡ್ಡ ಸುಧಾರಣೆ; ಹಳೆಯ 29 ಕಾನೂನುಗಳ ಬದಲು ಹೊಸ 4 ಕಾನೂನು ಸಂಹಿತೆ ಜಾರಿಗೆ

ಸ್ಟಾರ್ಟಪ್​ಗಳಿಗೆ ಉತ್ತೇಜನ ನೀಡುವ ನೀತಿ…

ಬೆಂಗಳೂರಲ್ಲಿ ಮಾತ್ರವಲ್ಲದೆ ರಾಜ್ಯದ ಇತರ ನಗರಗಳಲ್ಲಿ ಸ್ಟಾರ್ಟಪ್​ಗಳನ್ನು ಬೆಳೆಸುವ ಗುರಿ ಇಡಲಾಗಿದೆ. ಮೈಸೂರು, ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ ಧಾರವಾಡ, ಕಲಬುರ್ಗಿಯಂತಹ ನಗರಗಳಲ್ಲಿ ಸ್ಟಾರ್ಟಪ್ ಝೋನ್​ಗಳು, ಇನ್ನೋವೇಶನ್ ಕ್ಲಸ್ಟರ್​ಗಳು ಇತ್ಯಾದಿಯನ್ನು ನಿರ್ಮಿಸುವ ಪ್ಲಾನ್ ಮಾಡಲಾಗಿದೆ.

2030ರೊಳಗೆ 30,000 ಸ್ಟಾರ್ಟಪ್​ಗಳನ್ನು ಕರ್ನಾಟಕದಲ್ಲಿ ಸ್ಥಾಪಿಸುವ ಗುರಿ ಇದೆ. ಇದರಲ್ಲಿ 5,000 ಸ್ಟಾರ್ಟಪ್​ಗಳು ಕೆಳ ಸ್ತರದ ನಗರಗಳಲ್ಲಿ ನಿರ್ಮಾಣವಾಗಬೇಕೆಂಬ ಆಶಯ ಇದೆ.

ಹೊಸ ಸ್ಟಾರ್ಟಪ್​ಗಳಿಗೆ ಆಫೀಸ್ ರೆಂಟ್​ನಲ್ಲಿ ಶೇ. 50ರಷ್ಟು ರೀಂಬರ್ಸ್ಮೆಂಟ್, ಪ್ರಾಪರ್ಟಿ ಟ್ಯಾಕ್ಸ್​ನಲ್ಲಿ ಶೇ. 30 ವಿನಾಯಿತಿ ಸಿಗುತ್ತದೆ (ಸೀಮಿತ ಅವಧಿಗೆ).

ಬೆಂಗಳೂರಿನಿಂದ ಹೊರಗೆ ಶಿಫ್ಟ್ ಆಗುವ ಸ್ಟಾರ್ಟಪ್​ಗಳಿಗೆ ಐದು ವರ್ಷ ವಿದ್ಯುತ್ ಸುಂಕದಲ್ಲಿ ವಿನಾಯಿತಿ ಸಿಗುತ್ತದೆ. 12 ಲಕ್ಷ ರೂವರೆಗೆ ಫೋನ್ ಮತ್ತು ಇಂಟರ್ನೆಟ್ ಬಿಲ್​ನಲ್ಲಿ ರಿಯಾಯಿತಿ ಸಿಗುತ್ತದೆ. ಬೆಂಗಳೂರು ಹೊರಗೆ ವರ್ಗಾವಣೆಯಾಗುವ ಉದ್ಯೋಗಿಗೆ ಸರ್ಕಾರವು 50,000 ರೂ ಭತ್ಯೆ ಕೊಡುತ್ತದೆ.

ಇದನ್ನೂ ಓದಿ: ಪಿಎಫ್ ಅರ್ಹತೆಗೆ ವೇತನ ಮಿತಿ 15,000 ರೂನಿಂದ 25,000 ರೂಗೆ ಏರಿಸಲು ಸರ್ಕಾರದಿಂದ ಚಿಂತನೆ

ಇನ್ನೋವೇಶನ್ ಸೆಕ್ಟರ್​ನಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೂ ಸರ್ಕಾರ ಸಾಕಷ್ಟು ಉತ್ತೇಜನ ನೀಡುತ್ತದೆ. ಆರ್ ಅಂಡ್ ಡಿ ವೆಚ್ಚದಲ್ಲಿ ಶೇ. 40ರಷ್ಟನ್ನು ಸರ್ಕಾರ ಭರಿಸುತ್ತದೆ. ಎಐ, ಮೆಷಿನ್ ಲರ್ನಿಂಗ್, ಕ್ವಾಂಟಂ ಕಂಪ್ಯೂಟಿಂಗ್, ಬ್ಲಾಕ್​ಚೇನ್​ನಲ್ಲಿ ಕೆಲಸ ಮಾಡುವ ಸ್ಟಾರ್ಟಪ್​ಗಳಿಗೆ ಹೆಚ್ಚುವರಿ ಬಂಡವಾಳ ಉತ್ತೇಜನವನ್ನು ಸರ್ಕಾರ ನೀಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ